Friday, December 28, 2012

ಓ ನನ್ನ ಚೇತನ


ನನ್ನೊಳ ಜೀವದ ಹೊಸ
ಚೇತನಕ್ಕೆ
ಇನ್ನೋಳ ಪ್ರೇಮದ
ಭಾವದ ಸಿಂಚನವೆ
ಕಾರಣ

ಬಿಳಿ ಹಾಳೆಯಂತ
ಬದುಕಿಗೆ
ಬಣ್ಣಗಳ ತುಂಬುತ್ತ
ಬಂದೆ
ನಿನ್ನದೇ ಕೈಗಳಿಂದ
ಮಣ್ಣ ಕಲೆಸುತ್ತ
ಸುಂದರ ಹೈರಾಣಿ
ಮಾಡಿದೆ

ಇಂದು ನನ್ನ ಬದುಕ
ಮಡಿಕೆಗೆ
ಸುಂದರ
ಹೊರ ಚಿತ್ರಗಳಿಂದ
ಅಂದ ತುಂಬಿದೆ

ಇಂದು ಕಣ್ಣ ಮುಚ್ಚಿಯು
ಕೂಡ, ಸುಂದರ ಜಗತ್ತು
ಕಾಣುತ್ತಿರುವೆ

ಎಲ್ಲೋ ಅನಾಥಂತೆ
ಕಳೆದುಹೊದವನಿಗೆ
ಯಾವುದೊ ಹೊಸ
ಬಂಧ ದೊರೆತಂತೆ
ನೀ ಬಂದೆ

ಸಂಜು

ನನ್ನ ಮುದ್ದು ಕಂದ ಹರ್ಷು



ಬಾಳ ಧಾರಿಯಲ್ಲಿ
ಎಷ್ಟೋ ಅಮೂಲ್ಯ
ಮುತ್ತು ರತ್ನ ಕಂಡೆ
ಎಲ್ಲಕಿಂತ ಅಮುಲ್ಯವಾಗಿ
ನನ್ನ ಪುಟ್ಟ ಚಂದ್ರನಾಗಿ
ಮುದ್ದು ಮೊಗದ
ಬೆಣ್ಣೆ ಕ್ರಿಷ್ಣನಂತೆ
ನನ್ನ ಬದುಕಿಗೆ ಬಂದೆ
ಮಗುವಾಗಿ
ವರವಾಗಿ

ನಿನ್ನ ತುಂಟ ನೋಟ
ನಿನ್ನ ಚೇಷ್ಟೇ ಆಟ
ಅಂಬೆಗಾಲಿನ ಓಟ
ಮುದ್ದು ಮಾಡಿ
ಮೋದದಿ ನೋರು
ನೋವ ಮರೆತು
ನಿನ್ನೊಂದಿಗೆ
ನಾನು ಗೊಂಬೆ
ಆಟ

ಬಿದ್ದು ಬಿದ್ದು
ತೊದಲುತ್ತಲಿ
ಪಪ್ಪಾ ಎಂದು ಕರೆದೆ
ಹರ್ಷ ಗೊಂಡು
ಅಮಲಿನಲ್ಲಿ
ನಾ ಈ ಲೋಕ
ಮರೆತೇ

ನಿನ್ನ ನನಗೆ ಕೊಟ್ಟ
ನಿನ್ನ ಜೀವದ ಅಮ್ಮನಿಗೆ
ಶರಣು
ಅವಳ ಬಾಳ ಬೆಳಕಾದೆ
ನನ್ನ ಮನೆಯೇ
ನಗುವಾದೆ
ಆ ದೈವನ ಕೃಪೆಗೆ
ನಾ ಶರಣು

ನಿನಗೆ ನನ್ನ ಆಯಸ್ಸು
ಶ್ರೇಯಸ್ಸು ಆರೋಗ್ಯ
ವಿದ್ಯಾ ಬುದ್ದಿ ಸೌಬಾಗ್ಯ
ಎಲ್ಲ ದೊರೆತು
ಸುಖವಾಗಿರು
ನನ್ನ ಶಶಿಯಾಗಿರು
ನನ್ನ ಮುದ್ದು ಮಗುವೆ

ನಿನ್ನಗೆ ಹುಟ್ಟುಹಬ್ಬದ ಶುಭಾಶಯ
ಮುದ್ದು ಹರ್ಷು
ನಿನ್ನ ಪಪ್ಪ
ಸಂಜು

Wednesday, December 26, 2012

ಒಲವೆ ಒಲವೆ ......


ಒಲವೆ ಒಲವೆ ......
***********
ನೀನೊಂದು ಸುಂದರ
ಮುಂಜಾವು
ನಾ ಕಾಯುತಿದ್ದ
ಹಲವು ರಾತ್ರಿ
ಕಣ್ಣ ಬಿಟ್ಟು
ಬಂದೆನ್ನ ಕನಸ
ಸಿಂಗರಿಸು ಒಲವೆ
ಒಲವೆ ......

ನಿನ್ನ ಮೊದಲ
ಬೆಟಿಯಲ್ಲೇ ಅನಿಸಿತ್ತು
ನಿನನ್ನೇ ಹುಡುಕುತಿದ್ದ
ಒಂದು ಕನಸಿತ್ತು
ಎಲ್ಲೋ ಕಡಿದು ಹೋಗಿದ್ದ
ಸಬಂಧವೆನಿಸಿತ್ತು
ಮತ್ತೆ ಇಂದು
ನನ್ನ ಭಾಗ್ಯ ಕಂಡಿದೆ
ಹೊಳೆಪು ಒಲವೆ
ಒಲವೆ........

ನಿನ್ನದೇ ಹೃದಯದ
ಬಡಿತ ನನ್ನಲ್ಲಿ
ಎಲ್ಲೋ ಕಳೆದ
ನೆನಪುಗಳಂತೆ
ಮನದಲ್ಲಿ
ನಿನ್ನ ಪ್ರೇಮದ
ನೆರಳಾಗಿಸು
ಹೊಣ ಬಿಸಿಲಿನಂತೆ
ಒಣಗಿದೆ ಬದುಕು
ಒಲವೆ ಒಲವೆ......

ನೀನೊಂದು ಸಿಹಿ
ನೀರ ಜಲಪಾತ
ದಾಹಿ ನಾನು ಹಲವು
ಜನುಮಗಳಿಂದ
ಬರ ಪೀಡಿತ
ಬಂದು ನನ್ನ
ದಾಹ ನೀಗಿಸು
ಒಲವೆ ಒಲವೆ...

ಜೊತೆಇದ್ದು ದೂರವಾದ
ಸಾಂಗತ್ಯ
ಮನದಲ್ಲಿ ಇನ್ನು ಏಕೆ
ಭಯದ ಅವಶೇಷ
ಬಂದು ನನ್ನ ತೋಳ
ಬಂದಿಸು ಒಲವೆ
ಒಲವೆ....

ಸಂಜು

ನೀನಿಲ್ಲದೆ ಈ ಬದುಕಿಲ್ಲ


ನೀನಿಲ್ಲದೆ ಈ ಬದುಕಿಲ್ಲ
*************
ನಿನ್ನ ಮುಷ್ಟಿಯಲ್ಲಿ
ನನ್ನ ಕರಗಳಿಗೆ
ಸಿಕ್ಕಿದೆ ಜೀವನ
ನೀನಿಲ್ಲದೆ ನಾ
ಉಸಿರಾಡಲು
ಸಾಧ್ಯವಾಗುತ್ತಿಲ್ಲ

ಅನಿಸುತ್ತಿದೆ ನೀ
ನನಗೆ ಯಾವಗಲು
ಬೇಕಾಗಿದೆ
ಉಳಿದರ್ದಕ್ಕೆ
ಬದುಕಾಗಲು
ನಿನ್ನ ನೆರಳು ಬಿಟ್ಟು
ಸಾಗಲು
ಒಂದೇ ಒಂದು
ಹೆಜ್ಜೆಯೂ
ಸಾದ್ಯವಿಲ್ಲ

ನನ್ನನು ಬಚ್ಚಿಡು
ನಿನ್ನೊಳಗೆ
ಎಲ್ಲೋ
ಹೊರ ಜಗತ್ತಲ್ಲಿ
ನೀನಿಲ್ಲದೆ
ಬದುಕಲಾಗುತ್ತಿಲ್ಲ

ನನ್ನೀ ಕಣ್ಣುಗಳು
ಹೇಳುತ್ತಿವೆ
ನೀ ನನ್ನ ಮುಂದೆ
ಯಾವಗಲು
ನಿನ್ನ ಮೊಗವಿಲ್ಲದೆ
ಈ ಲೋಕ
ಈ ಬದುಕು
ಸಾದ್ಯವೇ ಇಲ್ಲ

ಪಡೆದರೆ ನಿನ್ನ
ನನ್ನೀ ಬದುಕಿಗೆ
ಪೂರ್ತಿಯಾದಹಾಗೆ
ನನ್ನೊಳಗಿನ
ಒಂದು ಕೊರತೆ
ನಿನ್ನ ಬಿಟ್ಟು ಇರಲು
ಕನಸಿನಲ್ಲೂ
ನನಗೆ ಬದುಕೇ ಇಲ್ಲ

ಸಂಜು
 

ಸುಮ್ಮನೆ


ಸುಮ್ಮನೆ ನನ್ನ ಹೃದಯಕ್ಕೆ
ನನ್ನ ನಿನ್ನ ಸಂಬಂಧವೇನು
ಎನಲ್ಲು

ನಿನ್ನೊಂದಿಗಿಂತ
ಅವಳೊಂದಿಗೆ ಸ್ವಲ್ಪ ಹೆಚ್ಚು
ಎನ್ನುವುದೇ !!!!!!

ಸಂಜು

ಹಾರು ನೀ ಪಾರಿವಾಳ


ಹಾರು ನೀ ಪಾರಿವಾಳ
ಆಗಸದಾಚೆ
ಮೋಡದ ಒಳಗೆ ಒಮ್ಮೆ
ಹೊರಗೆ
ಸುತ್ತು ಗಲ್ಲಿಯಲ್ಲಿ
ಸಂದಿಯಲ್ಲಿ
ಕಿಟಕಿಯ ಒಳಗೆ ಒಮ್ಮೆ
ಹೊರಗೆ
ನಿನ್ನಿಷ್ಟಬಂದಂತೆ ಹಾರು
ನಿಲ್ಲದಿರು
ನಿನ್ನೊಂದಿಗೆ ಹಾರದವರ
ಜೋತೆಗುಡು
ಜೋತೆಹಾರು
ವೇಗದಲ್ಲಿ
ನನ್ನೀ ಮನಸ್ಸಿನಂತೆ
ಉತ್ಸಾಹದಿ ಚಿಮ್ಮಿ ಹಾರು
ನನ್ನೀ ಕನಸುಗಳಂತೆ

ಸಂಜು

ಕವಿ ಹೃದಯದೋಳ್ ಒಂದು ಜಗವಿತ್ತು


ಕವಿ ಹೃದಯದೋಳ್ ಒಂದು ಜಗವಿತ್ತು
ಅಭಿಮಾನಿ ಸುರಿದ ತೈಲದೋಳ್ ಬೆಳಗಿತ್ತು
ಬೆಳಕು ಮಾಡಯ್ಯ ನನ್ನೀ ಹೃದಯ
ನಿನ್ನದೇ ಭಾವದೋಳ್ ಅದು ಮೆರೆದಿತ್ತು
ನೀನಿತ್ತ ಮೆಚ್ಚುಗೆಗೆ ಒಂದು ಪುಳಕ
ನಿನ್ನ ವಿಮರ್ಶೆಗೆ ಹೊಸವಿಶಯ
ಕಲಿತಷ್ಟೇ ಸುಖಃ
ಪರಿಪೂರ್ಣ ಮಾಡಯ್ಯ ನೀ
ಓದುಗ
ನೀನಿಲ್ಲದೆ ನನ್ನ ಬರವಣೆಗೆಗೆ
ಎಲ್ಲಿ ಬೆಲೆ ಕಂಡಿತು

ಸಂಜು

ಬರೆದೆ ನೀನು


ಬರೆದೆ ನೀನು
***********
ಬರೆದೆ ನೀನು ನಿನ್ನ ಪ್ರೀತಿ
ನನ್ನ ಬಾಳಿಗೆ
ಪ್ರೀತಿ ಕಮಲ ಹುಟ್ಟಿಸಿ
ಬೆಳಧಿಂಗಳಾದೆ
ನನ್ನ ಇರುಳಿಗೆ
ಬರದ ನೆಲದಮೇಲೆ
ಬಿಳು ಬಿಟ್ಟ ಪಾಡು
ನನ್ನದು. ಪ್ರೀತಿ ವರ್ಷ
ತಂದೆ ನನ್ನೇದೆಯ
ನೆಲದಲ್ಲಿ
ನೀನಿಲ್ಲದೆ ಯೋಚಿಸುವ
ಲೋಖವಿಲ್ಲ ನನಗೆ
ಸದಾ ನಿನ್ನ ಎದೆಯ
ಪುಷ್ಪವಾಗುವಾಸೆ
ಮನದಲ್ಲಿ
ನಿನ್ನ ಒಡನಾಟದ
ಸುಖ
ನಿನ್ನೊಂದಿಗಿನ ಕೆಲ ನಿಮಿಷದ
ಸ್ವರ್ಗ ನೀ ತಂದೆ ಬಾಗ್ಯ
ನನ್ನ ಬಾಳಿನಲ್ಲಿ
ಎತೆತ್ತ ನೋಡಲು ಅಲೆಲ್ಲ
ನಿನ್ನದೇ ರೂಪ
ನಾ ಕಾಣುವ ಲೋಖವೆಲ್ಲ
ನಿನೇನ
ನನ್ನ ಕಣ್ಣು ಮನ ಹೃದಯ
ತುಂಬಿರುವ
ಸೊಗಸು ನಿನೇನ
ಇಂತ ಮಾಯಾ ಮೋಡಿ
ನನ್ನಲ್ಲಿ ಹೇಗೆ ನುಸುಳಿತು
ತಿಳಿಯಲಿಲ್ಲ

ಸಂಜು

ವೇಧನೆ


ವೇಧನೆ
******
ಕಣ್ಣ ಹನಿ ನೀಗಿತು
ಸಂತಸದ ಛಾಯೀ ಇದ್ದರು
ಮೋಡ ವಿನ್ನು ಕರಿ ಛಾಯೆ
ತೆರೆದಿಲ್ಲ
ಮನಕಿನ್ನು ಹೊಸ ಬೆಳಕು
ಬಂದಿಲ್ಲ
ಕೊಂಚ ಮನ ಹಿಗ್ಗಿಸಿ ತುಸು ಹುಚ್ಚಾಗಿ
ಕಿರುಚಿದರು ಬೆನ್ನ ಹಿಂದಿನ
ಚುಚ್ಚಿದ ಗಾಯ ಮಾಸಿಲ್ಲ
ಎದೆ ಬಡಿತದ ಏರಿಳಿತ
ಸ್ವಲ್ಪ ನಡುಕ ಸ್ವಲ್ಪ ಪುಳಕ
ಎಲ್ಲೋ ದೊರದಲ್ಲಿ ಚಂದ್ರ
ಸಣ್ಣ ಚುಕ್ಕೆಯಾಗಿದೆ ಕುಶಿ
ಕೊಡುತ್ತಿಲ್ಲ
ಬಾ ಹತ್ತಿರ ಇನ್ನು ಹತ್ತಿರ
ಬೆಳಧಿಂಗಳ ಆಗು ಎನ್ನಲ್ಲು
ಬೆಳಕು ಹೆಚ್ಚಾದಂತೆ
ಭಯದ ಎಚ್ಚರ
ಬಿಡುತ್ತಿಲ್ಲ
ಸುಖ ಪಡುವ ಆಸೆ ನೂರು
ಮನದಾಸೆ ಹಿಗ್ಗಿಸಲು
ಬೆನ್ನಿಗಂಟಿದ ಕರಿ
ನೇರಳೆ ಬೃಹದಾಕಾರ
ತಿರುಗಿ ನೋಡಲು ಮನಸ್ಸಿಲ್ಲ
ನೋಡದೆ ಮನ ಬಿಡುತ್ತಿಲ್ಲ

ಸಂಜು
 

ವರ್ಷ ಉರುಳಿತು 21.12.2012


ವರ್ಷ ಉರುಳಿತು
21.12.2012
ಅದೇಕೋ ಕಾಣೆ
ಪ್ರಳಯವಾಗಲಿಲ್ಲ

ಹೆದರಿಕೆ ನೀಗಿತು
ಹೊಸ ತನ ಮೂಡಿತು
ಭಯ ಮತ್ತೊಮ್ಮೆ
ಕಾಡಿತು ಮತ್ತೆ
ಬದುಕೇ
ಅದೇಕೋ ಕಾಣೆ
ಪ್ರಳಯವಾಗಲಿಲ್ಲ

ಎಲ್ಲ ಕಳೆಯಿತು
ಮತ್ತೆ ಹೊಸ
ಪ್ರಪಂಚ ಹೊಸ
ಲೋಕ ಹೊಸ ತನ
ಎಂಬ ಆಸೆಯಲ್ಲಿ ಮನ
ಅದೇಕೋ ಕಾಣೆ
ಪ್ರಳಯವಾಗಲಿಲ್ಲ

ಹೊಸ ವರುಷಕ್ಕೆ ಮತ್ತೊಮ್ಮೆ
ಹರುಷ
ಬದುಕಬೇಕೆಂಬ ಆಸೆ
ಆದರೆ ಬದುಕೇ ಯಾಂತ್ರಿಕ
ಕಳೆಯಲಾಗುತ್ತಿಲ್ಲ
ಅದೇಕೋ ಕಾಣೆ
ಪ್ರಳಯವಾಗಲಿಲ್ಲ

ಮತ್ತೆ ಅದೇ ಬಿಡುವಿಲ್ಲದ
ಕೆಲಸ ಮತ್ತೆ ಅದೇ
ಸಂಸಾರ ಜಂಜಾಟ
ಸಾಲ ಸುಲಗಳ ಮದ್ಯ
ಬದುಕು
ಸಾಗುತ್ತಿಲ್ಲ
ಅದೇಕೋ ಕಾಣೆ
ಪ್ರಳಯವಾಗಲಿಲ್ಲ

ಮನುಜನಾಗಿಹನು
ರಕ್ಕಸ
ಮನುಷ್ಯತ್ವವನ್ನು ತೊರೆದು
ತುಂಬುತ್ತ ತನ್ನ ಬೊಕ್ಕಸ
ಇವೆಲ್ಲ ನೋಡುತ್ತಾ ಇನ್ನು
ಸಹಿಸಿದೆ ಭೂಮಿ
ನಿಸ್ಸಹಾಯಕ
ಅದೇಕೋ ಕಾಣೆ
ಪ್ರಳಯವಾಗಲಿಲ್ಲ

ಸಂಜು
 

ಹೃದಯದಾಸೆ ಕಣ್ಣಿರಾಗಿ ಸುರಿದಿದೆ


ಹೃದಯದಾಸೆ ಕಣ್ಣಿರಾಗಿ
ಸುರಿದಿದೆ
*************
ಹೃದಯದಾಸೆ ಕಣ್ಣಿರಾಗಿ
ಹರಿಯಿತು
ಬದುಕು ತಾನಾಗೆ ಸರಪಳಿಯಲ್ಲಿ
ಬಂದಿಸಿತು
ನನ್ನೆದೆಗೆ ನಾನಿತ್ತ ಬಾಷೆ
ತಾನಾಗೆ ಮುರಿಯಿತು
ಹೃದಯದಾಸೆ ಕಣ್ಣಿರಾಗಿ
ಹರಿಯಿತು

ನಾ ಬದುಕಿರುವೆ ಯಾವುದೇ
ಆಸೆ ಇಲ್ಲದೆ
ಕಂಡ ಕನಸೆಲ್ಲ ರಾಶಿಯಾಗಿ
ಸುಟ್ಟಿದೆ
ಹೃದಯದಾಸೆ ಕಣ್ಣಿರಾಗಿ
ಹರಿದಿದೆ

ಮನದ ವ್ಯಾಕುಲತೆ ನಾ
ಯಾರಿಗೆ ಹೇಳಲಿ
ಅರಿಯುವ ಹೃದಯ
ತನ್ನದೇ ಬಾಳಲ್ಲಿ
ಬಿಡುವಿಲ್ಲದೆ ಮರೆತಿದೆ
ಹೃದಯದಾಸೆ ಕಣ್ಣಿರಾಗಿ
ಸುರಿದಿದೆ

ಸಂಜು
 

ನಿನ್ನಾರಸುವ ದುಂಬಿ ಅಳಲು


ನಿನ್ನಾರಸುವ ದುಂಬಿ ಅಳಲು
****************
ನಿನ್ನ ಅಕ್ಕಪಕ್ಕದ
ಮುಳ್ಳು ಎಲೆಗಳಿಗೆಂತು
ಅದೃಷ್ಟ ದಿನವು ನಿನ್ನೊಂದಿಗೆ
ಆಟವಾಡಿ ನಿನ್ನ ಸಾಂಗತ್ಯದಲ್ಲಿ
ಸಂತಸ ಪಡೆವೆವು ಸುಮವೇ
ನಾ ದುಂಬಿ ಹಾಗೊಮ್ಮೆ
ಹೀಗೊಮ್ಮೆ ಹಾರಿಬರುವೆ
ನಿನ್ನ ನೋಡಲೇ.... ಇಲ್ಲ
ಪ್ರೀತಿ ಮಾಡಲೇ
ಅವಸರದಲ್ಲಿ ನನ್ನೇ ನಾ
ಬಿಟ್ಟು ಹಾರುವೆ
ನಿನ್ನ ಪಕ್ಕದ ಎಲೆಯಾಗುವ ಆಸೆ
ನಿನ್ನ ಹಿಡಿದಿರುವ ದಂಟಾಗುವ ಆಸೆ
ಕೊನೆಪಕ್ಷ ನಿನ್ನ ರಕ್ಷಿಸುವ
ಮುಳ್ಳಾಗುವ ಆಸೆ
ನಿನ್ನಾರಸುವ ದುಂಬಿಯಾಗಿ
ಹುಟ್ಟಿದು ನನ್ನ ತಪ್ಪೇ ಹೂವೆ

ಸಂಜು

Wednesday, December 5, 2012

ಇನಿಯನಲ್ಲ ನಾನು


ಇನಿಯನಲ್ಲ ನಾನು

ಇನಿಯನಲ್ಲ ನಾನು
ನಿನ್ನ ಮುಗ್ದ ಮುದ್ದು ಮುಖಃ
ನೀನು ನಗುವಾಗ ನಗುವೇ
ನೀನು ಅಳುವಾಗ ಅಳುವೇ
ನಿನ್ನ ನೋಟಕ್ಕೆ ಕಣ್ಣಾಗುವೆ
ನಿನ್ನ ಮುಗುಳುನಗೆಗೆ
ಮಂಧಹಾಸವಾಗುವೆ
ನಿನ್ನ ಕೋಪಕ್ಕೆ ಸಹಿಸುವೆ
ನಿನ್ನ ದುಃಖಕ್ಕೆ ಕಣ್ಣಿರಾಗುವೆ
ನಿನ್ನ ಒರೆ ನೋಟಕ್ಕೆ
ಮೆರುಗಾಗುವೆ
ನಿನ್ನ ನಾಚಿಕೆಗೆ ಪ್ರೀತಿಯಾಗುವೆ
ನಿನ್ನ ತುಟಿಗೆ ಮುತ್ತಾಗುವೆ
ನಿನ್ನ ಸೌಂದರತೆಗೆ
ಸುಂಧರನಾಗುವೆ
ಇನಿಯನಲ್ಲ ನಾನು
ನಿನ್ನ ಮುಗ್ದ ಮುದ್ದು ಮುಖಃ
ನಿನ್ನೆಲ್ಲ ಮುಖಭಾವಗಳ ಬಿಂದು
ಸಂಜು
 

ರಾಧ ಮೋಹನ ಪ್ರೇಮ ವಿಲಾಸ


ರಾಧ ಮೋಹನ ಪ್ರೇಮ ವಿಲಾಸ


ರಾಧ ಮೋಹನ
ಪ್ರಣಯ ವಿಲಾಸ
ತುಂಬಿದ ಬೆಳಧಿಂಗಳ
ಪ್ರೇಮ ನಿವಾಸ

ಕಂಗಲೆರೆಡು ಒಬ್ಬರೊಳಗೆ
ಒಬ್ಬರ ಮಿಲನ
ಪ್ರೇಮ ಪ್ರವಾಹದ
ಉತ್ಸಂಗ ಸಮ್ಮಿಲನ

ರಾಧೆಯ ಪ್ರೀತಿಗೆ
ರಾಧೆಯೇ ಸಾಟಿ
ಕೃಷ್ಣನ ಮೋಹದ ರೀತಿಗೆ
ಕೊಳಲ ಮೋಹನ
ರಾಗವೇ ಸಾಕ್ಷಿ

ಜಗದೊಳಗೆ ಪ್ರೇಮಕ್ಕೆ
ಪಾಠವಾದ ಈ ಪ್ರೀತಿ
ಬದುಕಿಗೆ ನಮ್ಮೊಳಗೇ
ರಾಧಾ ಮೋಹನರ
ಶ್ರುಷ್ಠಿಸಿದ ಈ ರೀತಿ

ಸಂಜು

Tuesday, December 4, 2012

ಮೂಕ ಮನಸ್ಸಿನ ಮೌನ ರಾಗ


    ಮೂಕ ಮನಸ್ಸಿನ ಮೌನ ರಾಗ

ನಿಲ್ಲಿಸಲಾಗದ ನೆನಪುಗಳು ತೆರೆ
ಹಠ ಬಿಡದ ಹೃದಯ ಒಂದು ಕಡೆ
ಉಸಿರಾಟಕ್ಕೆನು ನಿಂತೇ ಬಿಡಬಹುದು
ನಿನ್ನ ಮರೆಯುವ ಒಂದು ಕ್ಷಣಕ್ಕೆ
ಬದುಕುವುದಕ್ಕೆನು ಆಸೆ ಇಲ್ಲ
ಉಳಿದಿರುವೆ ಇನ್ನು ನಿನ್ನ ಬಿಟ್ಟು
ಹೋಗುವ ಒಂದೇ ಭಯಕ್ಕೆ
ನಿನ್ನ ಮರೆಯುವುದೇ ಒಂದು ಸಾವು
ಇದಕಿಂತ ಇನ್ನೊಂದು ಸಾವು ಬೇಕೇ
ಎಂಥ ಲೋಕ ಎಂಥ ಭೂಮಿ
ಎಂಥ ಬದುಕು ಎಲ್ಲೂ
ನೀನೆ ಇಲ್ಲದ ಮೇಲೆ

ಆ ದೇವರೆಂತವನು
ಇಷ್ಟು ಸುಂಧರ ಶ್ರುಷ್ಠಿ ಯಲ್ಲಿ
ಇಷ್ಟೊಂದು ನೋವು ಕೊಡುವ
ಪ್ರಿತಿಯಂತ ವಿಷವನೇಕೆ
ಬಿತ್ತಿದ ಹೃದಯದಲ್ಲಿ
ನಾನು ನೀನು ನೀನು ನಾನು
ಏಕೆ ಬಂತು
ನಾನು ನಾನೇ ನೀನು ನೀನೆ
ಯಕಾಗಬಾರದಿತ್ತು
ಹೂವು ಹಣ್ಣು ಬಳ್ಳಿ ಕಾಡು
ತೊರೆ, ಬೆಟ್ಟ ಗುಡ್ಡಗಾಡು
ಎಷ್ಟು ಸುಂದರ
ನೋಡಲೆಂದು ಹೋದರೆ
ಕಣ್ಣ ಮುಚ್ಚಿ ಕಣ್ಣ ಬಿಡಲು
ಎಲೆಲ್ಲು ನಿನ್ನದೇ ಚಿತ್ತಾರ

ಸಂಜು

ಮಳೆಗಾಲ ನನ್ನ ಬಾಳಿಗೆ


ಮಳೆಗಾಲ ನನ್ನ ಬಾಳಿಗೆ
ಕಣ್ಣ ಮುಚ್ಚಿದಾಗಲೆಲ್ಲ
ನಿನ್ನೆ ಕಾಣುವೆ ನೈಧಿಲೆ
ಒಬ್ಬೊಂಟಿಯಾಗಿ
ನಾ ಮಾತನಾಡುತು
ಸಂತೋಷ ಪಡುವೆ ಕೋಮಲೆ

ಇಂತಹ ಒಂದು ಮಳೆಗಾಲ
ನನ್ನ ಬಾಳಿಗೆ ತಂದೆ ಮೇಘವೇ
ನನ್ನ ನವಿಲೇ, ನನ್ನ ಹಂಸವೇ
ನಿನ್ನ ಮುಗ್ದ ಕಣ್ಣ ಕಂಡೆ ನೆ
ಆ ಕಣ್ಣಿನಲ್ಲೇ ನನ್ನ ಬಿಂಬ ಕಂಡೆನೆ
ನಾ ಸೋತು ಹೋದೆನೆ

ಪದಗಳ ಸಾಗರ ಕರಗಿ
ಹನಿಯಾಗುವುದು ನಿನ್ನ
ಮಾತಿನಲ್ಲಿ
ಮೌನದಲ್ಲೇ ನೀ ಹಾಡದೆ
ಹೇಳಿದ ಮಾತುಗಳೆಲ್ಲ
ನನ್ನ ಎದೆ ಕಡಲ ತುಂಬಿದೆ
ಪ್ರೀತಿಯಲ್ಲಿ

ನಿನಗಾಗೆ ತುಡಿಯುವ ನನ್ನ ಮನಸ್ಸಿನ
ನಡಿಗೆಯು ವೇಗದಿ ನಿನ್ನೆಡೆಗೆ
ತಾನಾಗೆ ಓಡುತಿದೆ
ದೂರ ಸಮಯ ಕಾಲ ಎಲ್ಲ
ದಣಿವು ಹಸಿವು ಬಯರಿಕೆಯೆಲ್ಲ
ನಿನ್ನ ಒಮ್ಮೆ ನೋಡಲು
ಕ್ಷಿಣಿಸಿ ಮಾಯವಾಗುವುದೇ

ನಿನ್ನ ಪ್ರೀತಿಯಲ್ಲಿ ಏನಾದರು
ಈ ಹೃದಯ ತೇಲುತ್ತಿದೆ
ಆ ಮೋಡದಲ್ಲಿ ನಡೆಯುತ್ತಿದೆ
ನಿನ್ನ ಬಿಟ್ಟು ಬೇರೇನು ಯೋಚಿಸದೆ
ನಿನ್ನೊಂದಿಗೆ ಬಾಳುತಿಹೆ
ಈ ಭೂಮಿ ಬಾನು ನನ್ನ
ಒಬ್ಬನೇ ಬಿಟ್ಟು ಸುತುತ್ತಿದೆ

ಸಂಜು

ನನ್ನೀ ಪ್ರೇಮ


ನನ್ನೀ ಪ್ರೇಮ

ನಿನನ್ನೇ ಮನದಲ್ಲಿ
ನೆಲಸಿ ಪೂಜಿಸುತ್ತಿರುವಾಗ
ಎಲ್ಲೆಂದರಲ್ಲಿ
ನಿನ್ನೀ ವಿರಸ ತರವೇ
ತಿಳಿದು ತಿಳಿಯದಂತೆ
ನಿನ್ನ ಅಜ್ಞಾನ ತರವೇ
ಎಲೆಲ್ಲು ನಿನ್ನದೇ ಧ್ಯಾನ
ಎಲ್ಲವನ್ನು ಮರೆತು
ನಿನ್ನ ನೆನಪುಗಳೇ
ಪ್ರತಿ ನಿತ್ಯ ಅಭ್ಯಂಜನ
ನಿನ್ನ ಮಾತುಗಳನ್ನೇ
ದಿನ ನಿತ್ಯದ ನಾ ತಿನ್ನುವ
ಮೃಷ್ಟಾನ್ನ
ನಿನ್ನ ಹಾವ ಭಾವಗಳನ್ನೇ
ನನ್ನ ಜೋಗಳ ವಾಗಿಸಿ
ಮಲಗುವ ಸೋಪಾನ
ನಿನ್ನಲ್ಲೇ ಲೀನ ನಾನು
ನೀನಿಲ್ಲದೆ ಏನಿಲ್ಲ ನಾನು
ಹೇಗೆ ತಡೆಯಲಿ ನನ್ನ
ಪ್ರವಾಹದಂತೆ ಕಟ್ಟೆ
ಹೊಡೆದು ಮುನ್ನುಗುವ
ನನ್ನೀ ಪ್ರೇಮ
ನಿನ್ನ ಸೇರದಿದ್ದರು
ನಿನ್ನ ಸ್ಪರ್ಶಿಸುವ
ಒಂದು ಹನಿಯಾಗುವ ಆಸೆ
ಅದೇಕೋ ನನ್ನೊಳಗೆ
ನಾನೇ ಇಲ್ಲ
ಎಲ್ಲವನ್ನು ನಿನಗೆ
ಧಾರೆ ಎರೆದು
ಸುಮ್ಮನೆ ಬರಿ ದೇಹ
ನಾನಿಲ್ಲಿ
ಹೇಗೆ ಬಿಚ್ಚಿಡಲಿ
ನನ್ನೆಲ್ಲ ಭಾವ
ಹೇಗೆ ಅರ್ಥೈಸಲಿ ನಿನಗೆ
ನನ್ನೀ ಸ್ತಿತಿ
ಅರೆ ಘಳಿಗೆ ನಿಲ್ಲದೆ
ಮೋಡದಲ್ಲಿ ಮಾಯವಗುವೆ
ನೀನು
ನಿನ್ನೀ ಚಂಚಲೆತೆಯ
ಸೆಣ ಸೇನು
ನಾ ಭುಮಿಯಾಗಿದ್ದರೆ
ತಿರುಗದೆ ನಿನನ್ನೇ
ನೋಡುತ್ತಾ ಕುಳಿತು
ಬಿಡುತಿದ್ದೆ ಚಂದಿರೆ

ಸಂಜು