Tuesday, January 31, 2012

ಪ್ರಿತಿಸದಿರಲು

ನಿನ್ನ ನೆನಪನ್ನು ಮಾಡದೆ ಬೇರೇನೂ ಮಾಡಲಿ

ನಿನ್ನ ಮರೆಯಲು ಸೋತು ಹೋದಮೇಲೆ

ನಾನು ನಿನ್ನ ಪ್ರಿತಿಸದಿರಲು ಎರಡೇ ಕರಣವಿರುತಿತ್ತು

ಒಂದು ನೀನು ಹುಟ್ಟದೆ ಇರಬೇಕಿತ್ತು ಇನೊಂದು

ನನ್ನ ಹೃದಯ ಇರಬಾರದಿತ್ತು

~ಸಂಜು ~

ರಾಜಕೀಯ

ಯಾರದ್ರು ಒಳೆದು ಮಾಡ್ತಾರೆ ಅಂದ್ರೆ ಆಳಿಗೊಂದು ಕಲ್ಲು ತುರೋ ಕಾಲ ಆಗ್ಬಿಟ್ಟಿದೆ
ಇಂಥಹ ರಾಜಕಾರಣಿಗಳನ ಇನ್ನು ನಮ್ಮ ರಾಜ್ಯದ ಜನತೆ ಸಹಿಸಿಕೊಂಡಿರೋದು ನಮ್ಮ ದಡ್ಡತನ
ನಮ್ಮಗೆ ಮೊದಲು ಬುದ್ದಿ ಇಲ್ಲ
ಎಲ್ಲ ರಾಜಕಾರಣಿಗಳು ಭ್ರಷ್ಟರೇ ಯಾರು ಕಮ್ಮಿ ಇಲ್ಲ
ಇವರೆನ್ನೆಲ್ಲ ಕಸ ಗುಡಿಸಿದ ಹಗೆ ಗುಡಿಸಿ ಹಾಕ ಬೇಕು
... ಒಂದು ಹೊಸ ಕರ್ನಾಟಕ ಶುರ್ಷ್ಟಿ ಆಗಬೇಕು
ಎವುದೇ ಸ್ವಾರ್ಥ ಇಲ್ಲದೆ , ದೇಶದ ಮತ್ತು ರಾಜ್ಯದ ಪ್ರಗತಿಗಾಗಿ ಹೊರಡೋ
ನವ ಯುವಕರು ಯುವತಿಯರು ಶ್ರಮಜೀವಿಗಳು ಮುಂದೆ ಬರಬೇಕು
ಯಾರಿದ್ದೀರಿ ಸುಮ್ನೆ like ಅಂತ ಹೊತ್ತಿ ಸುಮನೆ ಅಗಬೇಡಿ
ಏನಾದ್ರು ಯೋಚನೆ ಮಾಡಿ ಮುಂದೆ ನಮ್ಮ ಪೀಳಿಗೆ ಇಂತಹ
ಬ್ರಷ್ಟ ರಾಜ್ಯ ನೋಡೋದು ಬೇಡ ಅಂದ್ರೆ
ನಮ್ಮ ಮನೆಯನ್ನು ನಾವು ಸ್ವಚ್ಹ ಮಾಡೋಣ
ಎಲೆಲ್ಲಿ ಬ್ರಷ್ಟ ಅದಿಕಾರಿ, ಬ್ರಷ್ಟ ಸರ್ಕಾರೀ ನೌಕರ, ಬ್ರಷ್ಟ ರಾಜಕಾರಣಿ, ಬ್ರಷ್ಟ ಆರಕ್ಷಕ,
೧. ಅವರಿಗೆಲ್ಲ ನಾವು ಲಂಚವನ್ನು ಕೊಡದೆ ಬುದ್ದಿ ಕಲಿಸೋಣ
೨. ಬೇಕು ಎಂದು ಪಿಡಿಸುವಾರನ್ನು ಬಿದಿಲಿ ನಿಲ್ಲಿಸಿ ಚಿಮಾರಿ ಹಾಕೋಣ
೩. ಅಂಥವರು ಹಕ್ಕ ಪಕ್ಕದಲ್ಲಿ ನೆರೆಹೊರೆಯಲ್ಲಿ ಇದ್ದರೆ ಅವರಿಗೆ
ಅಸ್ಪ್ರುಷ್ಯರಂತೆ ನೋಡಿ ಅವರಿಂದ ದೊರ ಸರಿಯಿರು
೪. ಅವರಿಗೆ ಯಾರೂ ಸಹಾಯ ಮಾಡಬಾರದು
೫. ಅವರ ಸಾವು ನೋವಿಗೆ ಸ್ಪಂದಿಸಬಾರದು
೬. ಅವರ ಮಕ್ಕಳಿಂದ ನಮ್ಮ ಮಕಳನ್ನು ದೊರ ಇಡಿ
೭. ಅವರ ಸಂಬಂದ ಯಾರೂ ಮಾಡಬಾರದು
೮. ಅವರನ್ನು ಯಾವುದೇ ಸಂತೋಷ ಸಮರಂಬಗಳಿಗೆ ಆಹ್ವಾನಿಸಬಾರದು
೯. ಅವರನ್ನು ಕುಷ್ಟ ರೋಗಿಯಂತೆ ಸಮಾಜದಿಂದ ದೂರ ಇಡಿ

ಮೊದಲು ಇವೆರೆನ್ನೆಲ್ಲ ಹಣಕ್ಕಾಗಿ ನ್ಯಾಯಲದಿಂದ ಹೊರಗೆ ತರುವ
ವಕೀಲರಿಗೆ ಇವೆನ್ನೆಲ್ಲ ಮಾಡಿ ಹೊರಗೆ ಹಾಕಿ
ಬನ್ನಿ ಒಂದು ಸುಂದರ ಸುವರ್ಣ ಕರ್ನಾಟಕ ನಿರ್ಮಾಣದ ಹೊಣೆ ಹೊತ್ತು
ಇಂದೇ ಈ ಕಾರ್ಯಗಳನ್ನು ನಮ್ಮ ಸಮಿಪದವರಿಂದಲೇ ಶುರು ಮಾಡೋಣ
ಬ್ರಷ್ಟ ನಿರ್ಮೂಲನೆ ಮಾಡುವ ಒಂದು ಕಿರು ಪ್ರಯತ್ನ ನವೆ ಒಬ್ಬಬರು
ಮಾಡೋಣ

ಪ್ರೀತಿ ಆಗುವುದಕ್ಕೂ ಮುಂಚೆ

ಕಣ್ಣಲ್ಲಿ ನಿರು ತುಂಬುವುದು ಆಳುವುದಕ್ಕು ಮುಂಚೆ
ಕನಸುಗಳು ಒಡೆಯುವುವು ಮಲಗುವದಕ್ಕು ಮುಂಚೆ
ಕೆಲವರು ಹೇಳುತಾರೆ ಪ್ರೀತಿ ಮಾಡುವುದೇ ಒಂದು ಶಿಕ್ಷೆ
ಎರಾದರು ತಡಿಯಬಾರದೆ ಪ್ರೀತಿ ಆಗುವುದಕ್ಕೂ ಮುಂಚೆ

ಅಸೆ

ಎದೆಯ ಗೂಡಲಿ ಬಚಿಟ್ಟು ಕೊಳಬೇಕೆಂಬ ಅಸೆ

ನೀನಿರುವ ಹೃದಯದಲ್ಲಿ ಕಿಂಚಿತ್ತು ಕೊಳಕು
ಇಡದೇ ಸ್ವಚ್ಚವಾಗಿ ಸೋಪಾನ ಹಾಸುವೆ
ಭಾ ಗೆಳತಿ ಅಲಂಕರಿಸು
... ಸುರಿಸು ನಿ ಸುಖದ ಸಂಬ್ರಮವ
ನಿನಗಾಗೆ ಚೆಲ್ಲಿದೆ ಮಲ್ಲಿಗೆಯಾ ಘಮವು
ನ ಅರಿಯೆನೆ ನಿನ್ ಅಂತರಾಳವ
ನಿ ಬರುವೆ ಬಂದೆ ಬರುವೆಯಂದು ಮನ
ಸಾವಿರ ಸಾವಿರ ಸಾರಿ ಸಾರಿದರು
ಹೃದಯದ ರಂದ್ರದಿಂದ ಸೋರಿಹೊಗುತಿದೆ
ನಾ ಕಟ್ಟಿಟ್ಟ ಆಶಾಗೋಪುರ

ಬೆಳಗಾವಿ

ಕನ್ನಡದ ಮಕ್ಕಳೆಲ್ಲ ಕನ್ನಡದ ಆಸ್ತಿ
ಇದಕ್ಕೆ ತಾಯಿ ಕಾವೇರಿಯೇ ಸಾಕ್ಷಿ
ಕಾವೇರಿ ತಾಯಿ ಬೆರತಿಹಳು ನಮ್ಮ
ನಮ್ಮ ರಕ್ತ ಕಣ್ಣ ಕಣ್ಣ ದಲ್ಲಿ
ಕನ್ನಡದ ತಾಯಿ ಭುವೆನಶ್ವರಿಯಾ ಹಾಣೆ
... ರಕ್ತ ಕೊಡಿ ಹರಿವುದು ಕನ್ನಡಕ್ಕೆ ದಕ್ಕೆ ತಂದರೆ
ಕಿತ್ತೊರಿನ ರೋಷ ಒಬ್ಬವ್ವನ್ನ ಒನಕೆ
ಇನ್ನು ಯಾರ ಅ ರೋಶವೆಶವನ್ನು ಬಿಟ್ಟಿಲ್ಲ
ಇಂದಿಗೂ ಕನ್ನಡಿಗರನ್ನು ಕೆಣಕಿದರೆ ಸಾಕು
ಚೆಂಡು ಆಗುವವು ರುಂಡಗಳು
ಬೆಳಗಾವಿ ಅಲ್ಲ ಒಂದು ಇಡಿ ಮಣ್ಣು ಕೊಡಲಾರೆವು

ಬದುಕೇ ಇಲ್ಲ

ದಿನೇ ದಿನೇ ಮನುಷ್ಯ ಜೀವನದಮೇಲೆ ಆಸಕ್ತಿ ಕಳೆದುಕೊಳುತಿದ್ದಾನೆ
ಮೊದಲೆಲ್ಲ ೫೦೦೦ ಸಂಬಳದಲ್ಲಿ ಸುಖಿ ಆಗಿದ್ದ ಮನುಷ್ಯ
ಇವತ್ತು ೫೦,೦೦೦ ಸಂಬಳದಲ್ಲಿ ದುಖದಲಿ ಮುಳುಗಿದ್ದಾನೆ
ಸಂಬಂದಗಳು ಇದ್ದು ಇಲ್ಲದಂತೆ ಆಗಿದೆ
ಸ್ನೇಹಿತರು ಇದ್ದರು ಸಮಯ ಇಲ್ಲ
... ಬಂದುಗಳು ಇದ್ದರು ಬಂದವ್ಯ ಇಲ್ಲ
ಜಿಗುಪ್ಸೆ, ತಿರಸ್ಕರ, ಅವಮಾನ, ಬೇಸೆತ್ತ ಮನಸ್ಸು
ತಾಂತ್ರಿಕತೆ ಬೆಳೆಯಿತು, ಎಲ್ಲವು ಸುಲಬವಾಯೇತು
ಬುದ್ದಿ ಉಪೋಯಗಕ್ಕೆ ಬರುತ್ತಿಲ್ಲ
ಅಂತರಾಷ್ಟ್ರೀಯ ಸಂಸ್ತೆ ಗಳಿಗೆ ನಮ್ಮ ಬುದ್ದಿ, ಜೀವನವನ್ನು ಮಾರಿ ಆಗಿದೆ
ಸುಖ ಇಲ್ಲ ಸಂತೋಷ ಇಲ್ಲ ನೆಮ್ಮದಿ ಇಲ್ಲ
ಸಂಪೂರ್ಣವಾಗಿ ಬದುಕೇ ಇಲ್ಲ

ಜೀವನ

ಇದ್ದವರಿಗೆ ಇಲ್ಲದ ಚಿಂತೆ
ಇಲ್ಲದವರಿಗೆ ಜೀವನವೇ ಒಂದು ಚಿಂತೆ
ಬದುಕಿಗೆ ಅರ್ಥ ಕೊಡಬೇಕೆಂಬ ಚಿಂತೆ ಯಾರಲ್ಲೂ ಇಲ್ಲ
ಬದುಕು ನಡೆಸಿದರೆ ಸಾಕೆಂಬ ಘೋರ ಸತ್ಯ ಎಲ್ಲರನ್ನು ಕಾಡುತಿದೆ
ನಿಲ್ಲದ ಸಮಯ ಯಾರಿಗೂ ಇಲ್ಲ
... ಚಿಂತಿಸುವ ಸಂಯಮ ಯಾರಿಗೂ ಬೇಡ
ಸಂಪೋರ್ಣತೆ ಬೇಕಾಗಿಲ್ಲ
ಓಡಿದಷ್ಟೇ ದೂರ ಹಿಂತೊರುಗಿ ನೋಡುವ ಶಕ್ತಿ ಇಲ್ಲ
ಇಷ್ಟೆಲ್ಲಾ ಇಲ್ಲಗಳ ನಡುವೆ
ಅಸ್ತಿತ್ವಕ್ಕೆ ಸವಾಲಾಗಿ ಅಸ್ತಿಪಂಜರದಂತೆ
ನೊಂದು ಬೆಂದು ಬಡಕಲು ದೇಹ ಮಾತ್ರ

ಕಾಯುವುದು ಮತ್ತು ಪ್ರೀತಿ

ಸ್ಪೂರ್ತಿ ತುಂಬಿದ ಕಲ್ಪನೆ
ಪಕ್ವವಾಯಿತು ಭಾವನೆ
ಹುರಿದುಂಬಿ ಬಂತು ಕಾಮನೆ
ಹೀಗೆ ಬರೆದೆ ಸುಮ್ಮನೆ

... ಕಾಯುವುದು :
ಹರ್ಷಕ್ಕೆ ಆಯಿತು ದಾರಿ
ಪಾರ್ಶ್ವ ಸುಖವನ್ನೇರಿ
ಈಗ ಆಗ ಉಳಿದರ್ದದ ಗಣನೆ
ನಿಂತ ಕಾಲು ತುದಿಗೇರಿ ಇಳಿವ ಚಲನೆ

ಪ್ರೀತಿ :
ಪ್ರೀತಿ ಬಂತು ಸುಂದರ
ನಿಂತೆ ಕುಂತೆ ಸರ ಸರ
ಸ್ವಪ್ನ ಬಣ್ಣ ತರ ತರ
ಯಾರೋ ಹೇಳಿದ್ರು ಈತರ
ಗುಂಡಿಗೆ ಹೊಳಿದ್ರು ಇದು ಅಮರ

ಸಂಕ್ರಾಂತಿ ಹಬ್ಬದ ನೆನಪು

೧೯೯೯ ~೨೦೦೧ ರ ಆಸುಪಾಸಿನಲ್ಲಿ ನಾನು ತುಮುಕುರು ಸೋಮೇಶ್ವರ ಬಡಾವಣೆಯಲ್ಲಿ
ಇದ್ದಾಗ ಒಂದು ಸುಂಧರ ಸಂಕ್ರಾಂತಿ ಹೀಗಿತ್ತು
ಅದು ಅಗ್ರಹಾರದ ಬೀದಿ ತುಂಬಿ ತುಳುಕುವ ವಟಾರಗಳು
ಮುಂಜವೆನಲ್ಲೇ ಎಲ್ಲರ ಜಳಕ ಆಗಿ ಪೂಜೆಗೆ ಅತುರಾತುರದೆ ಹೊಡಾಟ,
ಮಾರಿಗಿ ಅತ್ತರಂತೆ ಸೇವಂತಿಗೆ ಕೊಡುವ ಹುವ್ವ ಮಾರುವವಳು
... ಎಲ್ಲೆಲ್ಲು ಸಾಂಬ್ರಾಣಿ, ಅಗರ ಬತ್ತಿಯ ಮತ್ತು ತುಪ್ಪದ ಘಮ,
ಹಿಂದಿನ ರಾತ್ರಿಯೇ ಟೈಲರ್ ಅಂಗಡಿಯೇಲ್ಲೇ ಕೂತು
ಅತುರಾತುರದೆ ಹೋಲಿಸಿದ ರೇಷ್ಮೆ ಹುಡುಗೆ ತೊಡುಗೆಗಳು,
ಚಿಗುರು ಮಾವಿನೆಲೆಯ ತೋರಣ , ಕಬ್ಬಿನ ಜಲ್ಲೆಯ ಆಕಡೆ ಈಕಡೆ ಜೋಡಿಸಿದ ವೈಭವ,
ಒಬ್ಬರಿಗಿಂತ ಒಬ್ಬರು ಪೈಪೋಟಿಮೇಲೆ ಬಣ್ಣ ಬಣ್ಣದ ಜ್ಯೋತೆ ಹೂವಿನ
ಅಲಂಕಾರದಲ್ಲಿ ಕಂಡ ಸುಂದರ ರಂಗೋಲಿ,
ಕೊಳೋವೆಯಲ್ಲಿ ಹೋಗುವ ಸೌದೆ ಹಂಡೆ ಒಲೆಯ ಹೋಗೆ
ಎಂಥಹ ಚಿತ್ರಣ ಇದನ್ನ ನಮ್ಮ ಮಕ್ಕಳು ಎಂದು ಕಾಣರು
ಸಂಜೆವೇಳೆ ಒಬ್ಬರಿಗಿಂತ ಒಬ್ಬರು ಪೈಪೋಟಿಮೇಲೆ ಅಲಂಕಾರ
ವಟಾರದ ಬೀದಿಯೇಲ್ಲಿ ಕಣ್ಣಿಗೆ ಹಬ್ಬಕೊಡುವ ಹೊಡಾಟ
ಗೆಜ್ಜೆ ಗೆಜ್ಜೆ ಕಲರದಲ್ಲೇ ಮೈಮರೆತು ನೋಡುವು ಸಂಬ್ರಮ ಹೇಳಾತಿರಾದು
ಹೇಳುತ್ತಾಹೋದರೆ ಎಷ್ಟು ವರ್ಣಿಸಿದರು ಸಾಲದು ಎಂಬಂತೆ ಇತ್ತು ಅ ಚಿತ್ರಣ

ವಿಭಕ್ತ

ನಿನ್ನ ಪರಿಚಯ ಆಗುವ ಮುನ್ನ
ನಾನು ಒಂಟಿ ಇದ್ದೆ ಆದರೆ
ಇಷ್ಟು ಒಂಟಿತನ ಕಾಡುತಿರಲಿಲ್ಲ

ನಿನ್ನ ಭಾವಚಿತ್ರದ ಮುಂದೆ
... ಆಗುತಿತ್ತು ದಿನ ನಿತ್ಯದ ಮಾತು
ನನ್ನ ಕೋಣೆಯಲ್ಲಿ ಕನ್ನಡಿ ಇರಲಿಲ್ಲ

ಸಾಗರದ ಮುಂದೆ ಇದ್ದರು ತುಂಬ
ಬಾಯಾರಿಕೆ ಆಗುತಿದೆ
ನಧಿಯ ದಡದಲ್ಲಿ ಇದ್ದಾಗ
ಬಾಯಾರಿಕೆ ತಿಳಿದಿರಲಿಲ್ಲ

ಸರಸ, ವಿರಸಗಲ್ಲಿ
ಮಾತಿನ ಜಟಾಪಟಿಯಲ್ಲಿ
ಸಣ್ಣ ಪುಟ್ಟ ಸಿಟ್ಟು ಕೊಪಗಳಲಿ
ಬೇರೆ ಆಗುತೇವೆ ಎಂದು ಅನಿಸಿರಲಿಲ್ಲ

ಮರುಳಿಸು

ನನ್ನ ಶ್ರೀಮಂತಿಕೆ ತೆಗೆದುಕೋ
ನನ್ನ ಆಡಂಬರವ ತೆಗೆದುಕೋ
ಆದರೆ ನನಗೆ ಮರುಳಿಸು
ನನ್ನ ಕಾಗದದ ದೋಣಿ
ಮತ್ತು ಮಳೆ ನಿರ ತುಂಬಿದ ಹೋಣಿ
...
ಒಂದು ಹಳೆಯ ಗೋಡೆ ಮೇಲೆ ಇದ್ದ ಒಂದು ಗುರುತು
ನಾವು ಆಡುತಿದ್ದವಿ ಅಲ್ಲಿ ಐಸ ಪೈಸ್ ಎಲ್ಲ ಮರೆತು
ಜಗುಲಿ ಮೇಲ ಇದಂತ ಚೌಕಬರದ ಚಿತ್ರ
ಮೋಸ ಮಾಡಿ ಹೊಡುತಿದ್ವಿ ನಮ್ಮ ಅಜ್ಜಿ ಅತ್ರ
ಮರುಳಿಸು ಅ ಕಾಗದದ ದೋಣಿ
ಮಾತು ಮಳೆ ನಿರು ತುಂಬಿದ ಹೋಣಿ

ಮನೆ ಮುಂದೆ ಒಂದು ದೊಡ ಆಲದ ಮರ
ಮರಕೊಂದು ಜೋಕಲ್ಲಿ ಕಟ್ಟಿದ್ವಿ ಅದರ
ಮೇಲಿ ಕೂತು ಆಡುವಾಗ ಬಿದ್ದಂತ ಅ ಗಯಾ
ಮರುಳಿಸು ನನಗೆ ಅ ತರಚಿದ ಗಯಾ
ಮರುಳಿಸು ಅ ಕಾಗದದ ದೋಣಿ
ಮಾತು ಮಳೆ ನಿರು ತುಂಬಿದ ಹೋಣಿ

ಪಡ್ಡೆ ಹುಡುಗರು

ಮನಸ್ಸಿಗೆ ಬೀಗ ಹಾಕೋಕೆ ಆಗೋದಿಲ್ಲ
ಬುದ್ದಿ ನನ್ಮಗಂದು ಮಾತೆ... ಕೇಳೋದೇ ಇಲ್ಲ

ತಲೆಗೆ ಏರ್ಬಿಟಿದೆ........... ಹೋಗೆ ತುಂಬ್ಕೊಂಡಿದೆ
ಉಳ ಕೊರಿತಿದೆ........... ಜಡ್ಡು ಇಡಿದು ಬಿಟ್ಟಿದೆ
...
ದಮ್ಮ್ ಹೊಡಿ............ ಹೆಣ್ಣೇ ಹೊಡಿ,
ಸೈಟ ಹೊಡಿ.............. ತಲೆ ತಿರುಗ್ತಾ ಇದೆ

ನಮ್ಮನ ತಡಿಯೋಕೆ ಯಾವ ನನ್ನ ಮಗಂಗೆ ಇದೆ ಮೀಟರ್
ಈ ಊರಿಗೆ ಈಗ ನಾವೇ ಹೊಸ ಕಲೆಕ್ಟರ್

ಮನ್ನಸಿಗೆ ಬೀಗ ಹಾಕೋಕೆ ಆಗೋದಿಲ್ಲ
ಬುದ್ದಿ ನನ್ಮಗಂದು ಮಾತೆ ಕೇಳೋದೇ ಇಲ್ಲ

ಪರೀಕ್ಷೆ ಪಾಸ್ ಮಾಡಬೇಕ , ಕಾಲೇಜಿನಲ್ಲಿ ಸೀಟ್ ಬೆಕ
ರೊಕ್ಕ ಕೊಟ್ಟು ಕೇಳು ಏನು ಬೇಕು

ಯಾವನ್ ಕಿರಿಕ್ ಮಾಡ್ತಾನೆ , ಕೈ ಕಾಲು ಮುರಿಬೇಕ
ರೊಕ್ಕ ಕೊಟ್ಟು ಕೇಳು ಏನು ಬೇಕು

ನಮ್ಮನ ತಡಿಯೋಕೆ ಯಾವ ನನ್ನ ಮಗಂಗೆ ಇದೆ ಮೀಟರ್
ಈ ಊರಿಗೆ ಈಗ ನಾವೇ ಹೊಸ ಕಲೆಕ್ಟರ್

ಮನ್ನಸಿಗೆ ಬೀಗ ಹಾಕೋಕೆ ಆಗೋದಿಲ್ಲ
ಬುದ್ದಿ ನನ್ಮಗಂದು ಮಾತೆ ಕೇಳೋದೇ ಇಲ್ಲ

ಹುಡುಗಿರು ಲವ್ ಮಾಡಕಿಲ್ವ , ರೆಗ್ಸಿ ಚೆಡಿಸ್ತಿರ
ಅಂಗೆನಾದ್ರು ಮಾಡಿ ನೋಡು, ನಿನ್ ಕೈ ಕಾಲನ್ನೇ ಎತುತ್ತಿವಿ

ಪಾಠ ಮಾಡೋವಾಗ ಪಾಠ ಕೇಳು , ಮಸ್ತಿ ಮಾಡೋವಾಗ ಮಸ್ತಿ ಮಾಡು
ಇಲದೆ ಹೋದ್ರೆ ನಾವು ಕ್ಲಾಸ್ ತಗೊತಿವಿವ್ ನೋಡು

ನಮ್ಮನ ತಡಿಯೋಕೆ ಯಾವ ನನ್ನ ಮಗಂಗೆ ಇದೆ ಮೀಟರ್
ಈ ಊರಿಗೆ ಈಗ ನಾವೇ ಹೊಸ ಕಲೆಕ್ಟರ್

ಮನ್ನಸಿಗೆ ಬೀಗ ಹಾಕೋಕೆ ಆಗೋದಿಲ್ಲ
ಬುದ್ದಿ ನನ್ಮಗಂದು ಮಾತೆ ಕೇಳೋದೇ ಇಲ್ಲ

ಬಹುಶ

ಬಹುಶ ನನಗೆ ಪ್ರೀತಿ ಮಾಡಲು ಬರಲಿಲ್ಲವೇನೋ
ಅದೇಕೋ ನನಗೆ ಕಣ್ಣ ನಿರು ಹರಿಸಲ್ಲೋ ಬರಲಿಲ್ಲವೇನೋ
ಕಂಡಿತ ಹೃದಯದ ಬಡಿತ ನಿನಗೆ ಕೇಳಿಸಲು ಆಗಲಿಲ್ಲವೇನೋ
ಇಲ್ಲವಾದರೆ ನನ್ನ ಹೃದಯವ ಚುಚ್ಚಿ ನೆತ್ತರ ಹರಿಸಿ
ನೀನು ಹೋಗುತಿರಲಿಲ್ಲವೇನೋ

~ಸಂಜು

ಕಣ್ಣ ನೀರು

ಕಣ್ಣ ನಿರಿಗೆ ಎಷ್ಟು ಹೇಳಿದರು ಕೇಳುವುದಿಲ್ಲ
ನನ್ನ ಒಂಟಿತನದಲ್ಲಿ ನನ್ನ ಜ್ಯೋತೆ ನೀಡು
ಎಲ್ಲರ ಮುಂದೆ ನನ್ನ ಮಾನ ಕಳೆಯಬೇಡ
ಅದಕ್ಕೆ ಕಣ್ಣ ನೀರು ತಟಕ್ಕನೆ ತೊಟ್ಟಿ ಕೊಟ್ಟ ಉತ್ತರ
ಈ ಜನ ಜಾತ್ರೆಯಲ್ಲೂ ನೀನು ಒಂಟಿಯೇ
... ನನದೇನು ತಪ್ಪಿದೆ ನಿನ್ನ ಹೃದಯದ ಭಾವಕ್ಕೆ
ಸ್ಪಂದಿಸಿದೆ ಅಷ್ಟೇ ನಾನು 
 
ಸಂಜು

 

ನಿನ್ನ ನೆನಪು

ನಾನು ನಿನಿಂದ ದೂರ ಸರಿದರೂ
ನಿನ್ನ ಆತ್ತಿರ ಬಾರದಿದ್ದರೂ
ನಿನ್ನ ನೆನಪಿನಲ್ಲೇ ನನ್ನ ಕಣ್ಣು ನೊಂದು ನೆಂದರು
ನಿನಗೇನೂ  ವೆತ್ಯಾಸ ಆಗುವುದಿಲ್ಲ


ನಿನ್ನ ಪ್ರೇಮದಲ್ಲಿ ನನ್ನನೆ ಮರೆತು ಹೋದರು
ನಿನ್ನ ವಿರಹದಲ್ಲೇ ಬೆಂದು ಬುದಿಯದರು
ನಿನ್ನ ಜಪಿಸುತ್ತ ನಿನ್ನ ಹೆಸರ ನನ್ನ ಎದೆಯಲ್ಲಿ
ಚುಚ್ಚಿ ನೆತ್ತರಾದಲ್ಲಿ ನಿನಗೆ ಅಂತಿಮ ಚರಣ ಬರೆದು
ಕಣ್ಣ ಮುಚಿದರೂ
ನಿನಗೇನೂ  ವೆತ್ಯಾಸ ಆಗುವುದಿಲ್ಲ
~ಸಂಜು~

ನನ್ನ ಅರ್ಧ

ಸಾಗುವಳ್ಳಿ ಗೆ ಹದ ಬೇಕು
ಮಳೆರಾಯ ಬಿಂಕ ತೋರಿಹನು
ಸದ್ದಿಲ್ಲದ ಘಟನೆಗಳು
ಬಿರುಗಾಳಿ ಹಾಗಿ
ನನ್ನ ತೋರಿವೆ


ಚಿಗುರೆಲೆಯ ಹೊಂಬಣ್ಣಕ್ಕೆ
ಸೂರ್ಯನ ಕಿರಣಕ್ಕೆ
ನಿನ್ನ  ತನು ಕಾಂತಿಯನು
ಕಣ್ಣ ಮುಚ್ಚಿಯು  ತಾಳಲಾರೆ


ಹರೆಯ ಹೊರೆಯಾಗಿ
ನಧಿಯಾಗಿ ಹರಿದದ್ದು
ಸಾಗರವ ಸೇರಲೆಂದಲ್ಲವೆ


ಅಲ ಅಲ್ಲಿ ಮುಚಿಟ್ಟ ಕನಸುಗಳ
ಹೆಕ್ಕಿ ಹೆಕ್ಕಿ ಜೋಡಿಸಿ ಸೇರಿಸಿ
ಸುಂದರ ಸ್ವಪ್ನ ನಗರವಾಗಿದೆ
ನಿನ್ನ ರಾಣಿ ಎನ್ನಾಗಿಸಿದೆ


ಹಾರಿ ಹಾರಿ ಬಹು ದೂರ ಹಾರಿ
ಕೊಕ್ಕಿನಲ್ಲಿ ಶೇಕರಿಸಿಟ್ಟ ಎಲ್ಲ ಕಾಳುಗಳು
ನಾನು ನೀನು ಹಂಚಿ ತಿನ್ನಲೆಂದಲವೇ


ಜೀವನದ ಪಗಡೆಯಲ್ಲಿ
ಸೋತು ಗೆದ್ದವಳು ನೀನು
ನ ಹೋಗುತಿರುವ ಧಾರಿ ಅರ್ಧ ಮಾತ್ರ
ಉಳಿದರ್ದದ ನಿನ್ನ ಧಾರಿ ಒಂಟಿಯಾಗಿಯೇ
ನನೊಂದಿಗೆ ಬರುತಿದೆ
ಅರ್ಧ ಮಾತ್ರ ನಾನು ಉಳಿದರ್ದೆವೆಲ್ಲ ನೀನು

ಮಲ್ಲಿಗೆಯಂತ ಮೊಗದವಳೇ

ಮಲ್ಲಿಗೆಯಂತ ಮೊಗದವಳೇ
 ಘಮ ಘಮಿಸೋ ಪರಿಮಳವೇ

 ಹಾಲಿನಂತ ಮನ್ನಸಿನವಳೇ
 ಕೆನೆ ಕೆನೆಯು ಮುದವಲ್ಲವೇ
...
ಹೊಂಬಣ್ಣದ ಮೈಯವಳೇ
 ಕಣ್ಣ ಕೋರೈಸುವ ಹೊಳಪಿನವಳೇ

 ರೇಷ್ಮೆಯ ಕೆಶದವಳೇ
 ನುಣುಪಿನಲ್ಲೇ ಜಾರುವವಳೇ

 ಬಳ್ಳಿಯಂತ ಬಳುಕ್ಕಿನವಳೇ
 ಮರವ ಅಪ್ಪಿ ಮುದ್ದಿಸಿದವಳೇ

 ಕೊಂಚ ಆಸರೆ ನೀಡಿದರೆ ಸಾಕೆ
 ಪ್ರೀತಿಯಲ್ಲೇ ಅಬ್ಯಂಜನ ಮಾಡಿಸುವವಳೇ
 ನಿನ್ನ ಪ್ರೀತಿಗೆ ಶರಣಾಗದೆ ಪ್ರಕೃತಿಯೇ ನಿಲ್ಲದು
  ನಾ ಮಣಿಯದಿದರೆ ನನ್ನ ಇರುವಿಕೆಯೇ ಸುಳ್ಳಾಗುವುದು
 ~ಸಂಜು~

ನನ್ನ ಕವಿತೆಯನ್ನು ಹಾಡಿ ನೋಡು

ನನ್ನ ಕವಿತೆಯನ್ನು ಹಾಡಿ ನೋಡು
 ಅದಕ್ಕೆ ಜೀವ ತುಂಬ ಬಹುದು
 ಶ್ರುತಿಯನೊಮ್ಮೆ ಮೀಟಿ ನೋಡು
 ಪದಗಳಿಗೆ ಭಾವ ತುಂಬ ಬಹುದು
 ಒಂದು ಹೆಜ್ಜೆ ಇಟ್ಟುನೋಡುವ
... ಲಯಕ್ಕೆ ನಾಟ್ಯ ಹೊಂದಬಹುದು

 ಹೃದಯದೊಂದಿಗೆ ಮಾತನಾಡು
 ನಿನ್ನ ಹೆಸರ ಹೇಳಬಹುದು
 ಕಣ್ಣ ನೆಟ್ಟ ನೇರ ನೋಡು
 ನಿನ್ನ ಬಿಂಬ ಕಾಣಬಹುದು
 ಉಸಿರೆಗೆ ಉಸಿರ ಬೆರಸಿ ನೋಡು
 ಆತ್ಮ ಮಿಲನವಾಗಬಹುದು

 ಕೈಯ ಹಿಡಿದು ಸ್ಪರ್ಶ ಮಾಡು
 ಮಿಡಿತದ ತುಡಿತ ಎಣಿಸಬಹುದು
 ಒಮ್ಮೆ ಹೃದಯ ಕೊಟ್ಟು ನೋಡು
 ಅದರ ಸತ್ಕಾರಕ್ಕೆ ಸಂಭ್ರಮಿಸುವುದು
 ಪ್ರಿತಿಯೆಂದ  ಸನ್ನೆ ಮಾಡು
 ಚ್ಚಂಗನೆ ಹೆಗರಿ ಬರುವೆ ನೋಡು

ಅಂತರಾಳ

ಕೇಳುತಿರುವೆ ಅಕಂಕ್ಷಿಯಂತೆ
 ಅರಿಯದ ಕಥೆಯೊಂದನ್ನು
 ಪೂರ್ತಿ ಗದ್ಯವೋ ......
 ಅಥವಾ ಎರಡು ಸಾಲ ಪಧ್ಯವೋ
 ತಿಳಿಯದಾಗಿದೆ
ಕನವರಿಸುತಿರುವೆ ಏಕಾಂಗಿಯಾಗಿ
 ಅನುವಾದವಿಲ್ಲದ ಭಾಷೆ ಒಂದನ್ನು
 ಅಂತರಂಗದಲ್ಲಿ ಅಡಗಿಸಿ ಇಟ್ಟೆದೆಲ್ಲ ಸುಳ್ಳೇ
 ಮೌನವಾಗಿ ಹೇಳಿದ್ದೆಲ್ಲ ಪೊಳ್ಳೆ
 ತಿಳಿಯದಾಗಿದೆ
 ಕಾಯುತಿರುವೆ ಬಕಪಕ್ಷಿಯಂತೆ
 ಕಾಣದ ದಾರಿ ಒಂದನ್ನು
 ನಿನ್ನ ಪರಿಮಳ ಬಿರಿ ಗಾಳಿ ಹಾಯಿತೆ
 ನನ್ನ ಗಮನಿಸದೆ ನಿನ್ನ ಬಂಡಿ ಹೋಯಿತೇ
 ತಿಳಿಯದಾಗಿದೆ

ಮಣ್ಣಿನಿಂದ ಮಾಡಿದ ಗೊಂಬೆ ನಾನು

ಮಣ್ಣಿನಿಂದ ಮಾಡಿದ  ಗೊಂಬೆ ನಾನು
 ಮಣ್ಣಿನಲ್ಲೇ ಕಲೆಸಿಹೋದೆ ನಾನು

 ವಿಧಿ ಬಿಡಿಸಿದ ಸುಂದರ ಚಿತ್ರ ನಾನು
 ಚಿತ್ರ ಹರಿದು ಬಣ್ಣ ಕರಗಿ ಹೋದೆ ನಾನು
... ...
 ಅಮ್ಮ ಇಟ್ಟ ಪುಟ್ಟ ಅಂಗಿ ನಾನು
 ಅಂಗಿ ಮಾಸಿದ ಮುಸುರೆ  ಬಟ್ಟೆ ನಾನು

 ಅಪ್ಪ ಕೊಟ್ಟ ಸಣ್ಣ ಬಳಪ ನಾನು
 ಬರೆದು ಮುರಿದು ಕರಗಿ ಹೋದೆ ನಾನು

 ಅಣ್ಣ ಕೊಟ್ಟ ರಾಟೆ ಗಾಳಿಪಟವು ನಾನು
 ಸೂತ್ರ ಹರಿದು ಬಳಗ  ಬಿಟ್ಟು ಹಾರಿ ಹೋದೆ ನಾನು

 ಅಕ್ಕ ಕಥೆಯ ಹೇಳಿ ಮಲಗಿಸಿದ ಮಗುವು ನಾನು
 ರಟ್ಟೆ ಬಲಿತರೋ  ಸಾರಾಂಶ ಅರಿಯದವನು ನಾನು

 ತಂಗಿ ಉಳಿಸಿ ತಂದು ಕೊಟ್ಟ ತಿಂಡಿ ನಾನು
 ತಿಂಡಿ ತಿಂದು ಲಂಗಕ್ಕೆ ಒರೆಸಿ  ಹೋದ ಮಂಗ ನಾನು
 ಮೇಸ್ಟ್ರು ಹೇಳಿಕೊಟ್ಟ ಪಾಠ ನಾನು
 ಪಾಠ ಮರೆತು ಸೊನ್ನೆ ತಂದ ಅಂಕಪಟ್ಟಿ ನಾನು

ಸಂಕ್ರಾತಿ ಹಬ್ಬ

ಸಂಕ್ರಾತಿ ಹಬ್ಬ
 ಹೆಂಗಳೆಯೇರ ಸಂಬ್ರಮದ ಹಬ್ಬ
 ಪಳ ಪಳ ರೇಷ್ಮೆ ಉಡುಗೆ ಉಟ್ಟು ಹಬ್ಬ
 ಗಲ ಗಲ ಗಾಜಿನ ಬಳೆಗಳ ತೊಟ್ಟು ಹಬ್ಬ
 ಘಲ್ ಘಲ್ ಕಾಲಿನ ಗೆಜ್ಜೆಯಾ ಹೊಡಾಟದ ಹಬ್ಬ
... ರಂಗು ರಂಗಿನ ರಂಗೋಲಿ ಇಟ್ಟ ಹಬ್ಬ
 ಎಳ್ಳು ಬೆಲ್ಲ ಸಕ್ಕರೆ ಪಾಕದ ಗೊಂಬೆಗಳ ತಟ್ಟೆಯಾ ಹಬ್ಬ
 ಕಬ್ಬು ಸಿಗಿದು ಜಿಗಿದು ಸಿಹಿ ರಸವ ಹೀರುವ ಹಬ್ಬ
 ಹೊಬ್ಬಟ್ಟಿನ ಹೂರಣ ಕದ್ದು ತಿನುವ ಹಬ್ಬ
 ಮನೆ ಮಂದಿಯೆಲ್ಲ ಸೇರಿ ಕೈಮುಗಿದು ಬೇಡುವ ಹಬ್ಬ
 ಎಳ್ಳು ಬೆಲ್ಲವ ಮನೆ ಮನೆಗೆ ಬಿರುವ ಹಬ್ಬ
 ಎತ್ತು ಹಸು ಆಡು ಮೇಕೆಗಳ ಬಣ್ಣ ಬಣ್ಣದಲ್ಲಿ ಸಿಂಗರಿಸೋ ಹಬ್ಬ
 ಬೆಂಕಿಯಲ್ಲಿ ಚಂಗನೆ ಎಗರಿಸಿ ಹರೋ ಹಬ್ಬ
 ಎಳ್ಳು ಬೆಲ್ಲವ ತಿಂದು ಒಳ್ಳೆ ಮಾತಾಡೋ ಹಬ್ಬ
~ಸಂಜು~

ನಾನು ನನ್ನ ಮಡದಿಯ ಗಂಡ

ನಾನು ನನ್ನ ಮಡದಿಯ ಗುಂಡ
 ಅವಳು ನನ್ನ  ನೆಚ್ಚಿನ ಗುಂಡಿ
 ಹುಡಿದೆವೆ ಬಾಳಿನ ಬಂಡಿ

 ಮೊದಲಬಾರಿ ನನ್ನ ಕಂಡು ತುಸು ಹೆದರಿದ್ದಳು
... ನನ್ನ ಸ್ನೇಹ ಕಂಡಮೇಲೆ ಬೆಸೆದಳು
 ನಾ ಕಂಡ ಮೊದಲ ಪಾರಿಜತಾ ಅವಳು

 ಮಧು  ಮಗಳಾಗಿ ನಿಂತರು ಇನ್ನು ತಿರದ ಸಂಶಯ
 ತಾಳಿ ಕಟ್ಟುವಾಗ ಕೂಡ ಕಣ್ಣಿನಲ್ಲೇ ಅ ಭಯ
 ಕಣ್ಣಿನಲ್ಲೇ ಹೇಳಿದೆ ನಮ್ಮದು ಜನ್ಮಾಂತರ ಪರಿಚಯ
 ಮನಸ್ಸಿನಲ್ಲೇ  ಅನಿಸಿದುಂಟು ಹೊಸದೇನಲ್ಲ   ನಿನ್ನ ನಂಟು
 ನಾ ಕಟ್ಟಿದ ಮೂರೂ ಗಂಟು ಲೋಕದ ಪರಿಪಾಟು
 ಹೃದಯ ಸ್ನೇಹ ಬೇಸದಿತು ಉಸಿರು ಎಂದೋ ಬೇರೆಸಿತು

 ಕೈಯ ಮೇಲೆ ಕೈಯ್ಯ ಇಟ್ಟು ಬರವಸೆ ಒಂದು ಕೊಟ್ಟು
 ಸಂಶಯ ಬೇಡ ನಿನಗೆ ಸತಿ ಹೃದಯದಲ್ಲೇ ನಿನಗೆ  ವಸತಿ
 ಪ್ರೀತಿ ಪ್ರೇಮದ  ಕೊರತೆ ಇಲ್ಲ ನಿನ್ನದೇ ನನ್ನದೇಲ್ಲ

 ಬಾಳಿನಲ್ಲಿ ಬರವು ಕಷ್ಟ ಸುಖಗಳೆಲ್ಲ
 ಕೂಡಿವೆ  ನ ಕಹಿ ಬೆವನೆಲ್ಲ
 ಕೊಡುವೆ ನಿನಗೆ ಸಿಹಿ ಸಕ್ಕರೆ ಬೆಲ್ಲ

 ಅರ್ದಂಗಿನಿಯಾ ಪಾತ್ರ ನಿನ್ನದು 
 ಉಳಿದ ಅರ್ದ ಮಾತ್ರ ನನ್ನದು
 ಸೇರಿ ಹಾಡೋಣ ಬಾಳ ಶ್ರುತಿ ಹಿಡಿದು
 ಸರ್ವ ತ್ಯಾಗ ಮಾಡಿ ನೀ ಸಹದರ್ಮಿಣಿ
 ನನಗೆ  ಸಿಕ್ಕ ಬಾಗ್ಯಕ್ಕೆ ಸದಾ ಋಣಿ
 ಸ್ವರ್ಗದರಾಸಿ ನನ್ನವರಿಸಿ ನಿ ಪತಿಶಿರೋಮಣಿ

ಬೇಸರ

ಬೇಸರ ...............ತಿಳಿಯದಾಗಿದೆ
 ಮನಸ್ಸಿನ  ಬೇಸರಕ್ಕೆ ಆಸರೆ ಬಾನ................ ಚಾಚಿದೆ
 ಕಳೆದುಕೊಂಡ ಹೃದಯದ ಭಾರದ ತುಂಡು ಸಾಗರದಾಚೆ ಇದೆ
 ದೃಷ್ಟಿ ಹಾಯಿಸಿದಷ್ಟು ಶೃಷ್ಟಿ ವಿಶಾಲ ಹುಡುಕಿದರೂ ಎಲ್ಲ ನಿಷ್ಪಲ
 ಭೂಮಿಯನ್ನು ಮುಟ್ಟಿದಂತೆ ಕಾಣುವ ಆಕಾಶ  ನೀನು ಎಷ್ಟು  ಸತ್ಯ
... ದೋಣಿ ಹರಿಗೋಲಿನ ಸಂಭಂದ ನಾವಿಕನೆ ಬಲ್ಲ
 ಮಳೆಗಾಳದಲ್ಲಿ ದೀಪಕ್ಕೆ ಮುತ್ತುವ ರೆಕ್ಕೆಹುಳು ಸಂಭಂದ ಬೆಳಕೇ ಬಲ್ಲ
 ನನ್ನ ಅಂತಾರಳದಲ್ಲಿ ಹುದುಗಿಹ ನೋವಿನಹಾಳ ಬಲ್ಲವರಿಗೂ ಅರಿವಿಲ್ಲ

ಗೆಳತಿಗೆ ಸಾಂತ್ವನ

ಒಮ್ಮೆ ಅವನ ಮರೆತು ನೋಡು , ಒಂದು ಸಾರಿ ನಕ್ಕು ಬಿಡು
 ನನ್ನ ಮೇಲೆ ಆಣೆ ಇಡು ಶಿಕ್ಷಿಸಬೇಡ ನಿನ್ನ ನಿನ್ನೊಳಗೂ

 ನಿನ್ನ ಕಣ್ಣ ಕಂಬನಿ ಧಾರೆ  ಗಳಿಸಿದ್ದೇನು ?
ಹೇಳುವುದು ಸುಲಭ ಸಹಿಸುವುದು ಕಷ್ಟ  ಅರಿತಿಹೆನು
... ಆದರು ನನ್ನ ಗೆಳತಿ ಒಮ್ಮೆ ಕೇಳು ನನ್ನ ಆಲಾಪ
 ತೊಳೆದು ಹಾಕು ನಿನ್ನ  ಮನದ ಕೊಳಕ

 ಮರೆತು ಬಿಡು ಅವನ ನೆನಪುಗಳನು
 ನಿನ್ನ ಭರವಸೆಗೆ ತಕ್ಕವನಲ್ಲ  ಅವನು
 ಅರಿಯೆದೇ  ತಿಳಿಯದೆ  ಹೃದಯ ಕೊಟ್ಟು ಬಿಟ್ಟೆ
 ಇನ್ನು ಮುಂದೆ ಹೃದಯಕ್ಕೆ ಒಂದು  ಕೋಟೆ ಕಟ್ಟೆ

 ನಿನ್ನ ಜೀವನ ನಿನ್ನದು ಬೇರೆ ಯಾರ ಅಸ್ತಿ ಅಲ್ಲ
 ಅಲೆ ಬಂದಾಗ ನಶಿಸುವ ಮಣ್ಣ ಗೂಡು ಅಲ್ಲ
 ಹತ್ತು ಬಾರಿ ಯೋಚಿಸು ಹೃದಯದಿಂದ ವ್ಯವಹರಿಸುವ ಮುನ್ನ
 ಅಳಿಸಿ ಹಾಕು ಎಲ್ಲವ,  ದುಃಖದ  ಛಾಯೆ  ಮುಳುಗಿಸುವ ಮುನ್ನ

ಅವಳು

ನೆನಪಿಲ್ಲ  ಯಾವ ಯಾವ ಹದಿ ದಾಟಿದೆ
 ಎಲ್ಲ ನಗರ ಮರೆತಂತಿದೆ
 ಅವಳ ಮನೆಯ ಹಾದಿ ತುಳಿದಮೇಲೆ
 ನನ್ನ ಮನೆಯ ಹಾದಿ ಮರೆತಂತಿದೆ
... ಪರದೆಶದಂತೆ  ಇದ್ದ ಅವಳ ನಗರ ನೋಡಿ
 ನಮ್ಮ ಮನೆಯ ಅಂಗಳ  ಮರೆತಂತಿದೆ
 ಆರಮನೆಯಂತ ಮಹಲ್ ನೋಡಿ
 ಮಣ್ಣಿನ ನನ್ನ ಮನೆ ಮರೆತಂತಿದೆ

 ನನ್ನ ಕೊಂದವರು ಯಾರೆಂದು
 ಅವಳಿಗೆ ಹೋಗಿ ಹೇಳಿ ಯಾರಾದರು
 ನನ್ನ ಶವದ ಪಕ್ಕದಲ್ಲೇ
 ಅವಳು ಕತ್ತಿ ಮರೆತಂತಿದೆ

ಅಮ್ಮನ ನೆನಪು

ಕೆಲಸ ಮಾಡುತ ಮಾಡುತ ನಿದ್ದೀ ತುಂಬಾ ಬರುತೆ
 ಅಮ್ಮ ಇದಿದ್ದರೆ ಒಂದು ಕಪ್ ಚಹಾ  ಕೆಳುತಿದ್ದೆ

 ಸಾಕಾಗಿದೆ ಹೊರಗಡೆಯ ಕೆಟ್ಟ ಉಟ ಮಾಡಿ ಮಾಡಿ
 ಅಮ್ಮ ಇದಿದ್ದರೆ ಮುದ್ದೆ ಬಸ್ಸಾರು ಮಾಡಿಕೊಡು ಅಂತಿದ್ದೆ
...
 ಸೆರೆ ಬಂಧನವಾಗಿದೆ ನಾಲ್ಕು ಗೋಡೆಯ ಈ  ಕೋಣೆ
 ಅಮ್ಮ ಇದಿದ್ದರೆ ಸ್ವಲ್ಪ ತಿರುಗಡಿಸಿಕೊಂಡು ಬರುತಿದ್ದಳು
 ಮನದಾಳದ ದುಖಃವನ್ನು ಮರೆಮಾಚಿ ನಮ್ಮ ನಗುವ ಪ್ರಯತ್ನ ಕಂಡು
 ಅಮ್ಮ ಇದಿದ್ದರೆ ಕಣ್ಣನೀರ  ತೋರಗೊಡದೆ ಆಗೇ  ಮುಗುಳ್ನಕ್ಕು ಸುಮ್ಮನಾಗುತಿದ್ಲು

 ತುಂಬಾ ನೋವು ಸಂಕಟ ಅನುಭವಿಸುತಿರುವೆ
 ನಿನಗೆ ಹೇಳಿದರೆ ನೀನು ಅತ್ತು ಬಿಡುವೆ

 ತುಂಬಾ ದೂರ ಬಂದುಬಿಟಿದೇನೆ ಅಮ್ಮ
 ನಿನ್ನ ಕನಸುಗಳ ಸಾಕಾರದ ಜವಾಬ್ದಾರಿ ಇಲ್ಲದಿದ್ದರೆ
 ಎಂದೋ ನಿನ್ನ ಬಳಿ ಬಂದು ಬಿಡುತಿದ್ದೆ ಅಮ್ಮ

 ಮನೆಯಿಂದ ಇಷ್ಟು ದೂರ ಬರುವುದಕ್ಕೆ ಒಂದೇ ಕಾರಣ
 ಎಲ್ಲ ಕಷ್ಟ ನೋವುಗಳನ್ನು ಸಹಿಸುವುದಕ್ಕೆ ಒಂದೇ ಕಾರಣ
 ಅಮ್ಮ
 ಪ್ರಪಂಚದ ಸುಖಾಃವನೆಲ್ಲ ನಿನ್ನ ಚರಣದ ಕೆಳಗೆ ಇಡಬೇಕೆಂದು

ನನ್ನ ನೆಚ್ಚಿನ ಮಡದಿ

ಮನೆಯಲ್ಲಿ  ಸೌದಾಮಿನಿ
 ಗೃಹ ಅಲಂಕೃತ ಗೃಹಶೋಬಿನಿ
 ಮನವನ್ನರಿತ ಮನ ಮೋಹಿನಿ
 ನನಗೆ ಅದೇ ನೀ ಸಹದರ್ಮಿಣಿ

... ಪ್ರೀತಿ ಹಂಚಿ ತಾನು ತಿಂದು
 ದುಖಃದಲ್ಲಿ  ನನೊಡನೆ ಬೆಂದು
 ಸುಖಃದ ಮಳೆಯ ನನಗೆ ತಂದು
 ನೀ ನನ್ನ ಮನೆಯ ಕೇಂದ್ರ ಬಿಂದು

 ಬಂಧು ಬಳಗ ಬಿಟ್ಟು ಬಂದೆ
 ಹುಟ್ಟಿದ ಮನೆಗೆ ಗರ್ವ ತಂದೆ
 ಕೊಟ್ಟ ಮನೆಗೆ ಸೌಬಾಗ್ಯ ತಂದೆ
 ಪತಿಯೇ ಪರ್ಮೆಶ್ವರನೆಂದೆ

 ಬಾಗಿಲ ಬಳಿ ನಿಂದೆ ಹೊಸಿಲ ಬಳಸಿ
 ನೀನು ನಕ್ಕೆ ನನ್ನ ನಗಿಸಿ
 ಒಳಗೆ ಕರೆದೆ ನನ್ನ ಸೊಂಟ ಬಳಸಿ
 ಇಂತ ಸ್ವರ್ಗ ಕೊಟ್ಟ ಸೊಗಸಿ

ಮನಸ್ಸು

ಬ್ರಮೆಯಂತೆ ಬಿದಿರು ಬೊಂಬಿನ ಆಟ
 ಬಣ್ಣ ಕಳಚಿದ ಮುಖಃವಾಡಗಳ ಕೂಟ
 ಬಂಡ ಬೂಟಾಟಿಕೆಗಳ ನರ್ತನ
 ನಂಬಿ ಕೆಟ್ಟೆ ಹೊಯೇತೆ ಜೀವನ
... ಜಿಂಕೆಯೆಂತೆ ಚಂಚಲ
 ಪಂಜಿನ ಬೆಳಕಿನಲ್ಲೇ ನಿಶ್ಚಲ
 ಕತ್ತಲಲ್ಲೇ  ಕರಗಿ ಹೋಗೋ ಜಿಜುಂಬೆ ಯೋ
 ನೆಟ್ಟ ದಿಟ್ಟ ನೋಟಕ್ಕೂ ನಿಲುಕದ ನಯನ 
 ಆಡ್ದ ಗೋಡೆಯ ಮಣ್ಣಿನ ದೀಪ
 ಅರ್ದ ಇತ್ತ ಅರ್ದ ಅತ್ತ ನೆರಳಿನಂತೆ ನೆಪ
 ಸುಟ್ಟ ಉಳುವಿನಂತೆ ವದ್ದಾಟ
 ತಿಳಿಯದಾಯಿತು ಮನದ ಆರ್ಭಟ

 ಒಲುಮೆಗೆ ಒಲಿದು ಗೆಳುಮೆಗೆ ನಲಿದು
 ಡೊಂಕ ಡೆಂಕನೆ ಕುಣಿದೆದ್ದ ಮನಸ್ಸು
 ಸುಖಾಃ ಪಾನಕ್ಕೆ ಅತುರ್ಯತೆ
 ಕ್ಷಣ ಕ್ಷಣಕ್ಕೂ ಕಾತುರತೆ
 ಎಂದು ಆಯಿತೋ ನಿನ್ನ ಜನ್ಮ
 ಬದುಕು ಮಾಸಿದರು ಅರಿಯದ ಮರ್ಮ
 ಕೊಂಚ ತಡಿ ಓಡಬೇಡ
 ತೆವಳುತಿದೆ ಬದುಕು ಬಂಡ
 ~ ಸಂಜು ~

ಪ್ರಾಕೃತಿಕ ಬದುಕು

ಸಮಯಾ ಕಳೆದಂತೆ
 ಬೇಸಿಗೆಯು ನಿಟ್ಟುಸಿರು ಬಿಡುವುದು

 ಮರದ ಕೊಂಬೆಯು ಬಾಗಿ
 ಹರಿಯುವ ನೀರಿನಲ್ಲಿ ತನ್ನದೇ  ಬಿಂಬವ ಕಾಣುತ್ತ
... ಬೆರಾಳಡಿಸುತ್ತ ಆಟವಾಡುವುದು

 ಚಂದಿರನ್ನು ತನ್ನ ಬೆಳಕ ಚೆಲ್ಲುವನು
 ಮಾಯಾನಗರಿ ಇಂದ
 ಕಣ್ಣು , ಹೃದಯ ಮಿಯುವುದು
 ಹೊಳೆಯುವ ಹೊಸ ದೃಷ್ಟಿ ಮನೋಹರದಿಂದ
 ಇಂತಹ ಪ್ರಶಾಂತತೆಯ ಜಾಗದಲ್ಲಿ
 ನಿನಿರುವಿಕೆ ಏಕೆ , ನಿನೆಲಿರುವೆ
 ನಮೊಳಗೆ ಆಡಗಿಹ ಸಾವಿರ ಪ್ರಶ್ನೆಗೆ
 ಉತ್ತರವಿಡಿದು ಪ್ರಕೃತಿ ನಿಂತಿದೆ

 ಮರದ ಬೇರಿನಂತೆ
 ನಾನು ನನ್ನ ಬೇರ ಬಿಡುವೆನು
 ಜೀವನದ ಸತ್ಯ ಸಾರಾಂಶ ಉಳ್ಳ
 ಪುಷ್ಟೀಕರಿಸಿದ  ಮಣ್ಣಿನಲ್ಲಿ
 ಸ್ವತಂತ್ರವಿದೆ  ಇಬ್ಬರಿಗೂ
 ಆಲಂಗಿಸಲು ಲೌಕಿಕ ಭಾವನೆಗಳ
 ನಮ್ಮ ಜೀವನದ ಪಯಣದ   ಸತ್ಯ ಹರಿವುದು
 ಶಾಂತಿಯ ಉತ್ಸಾಹದಿಂದ
 ~ಸಂಜು~

ಮನಸ್ಸಿನ ತಳಮಳ

ಭಾವನೆ :-
ರಾತ್ರಿ ಶಾಂತತೆಯ ನೀರವತೆ
ತಣನೆಯ ತಂಗಾಳಿ ಸ್ಫಟಿಕದಂತೆ ಸ್ಪಷ್ಟ
ಚಂದಿರನ ಸವರಿ ಹುಲ್ಲುಗಾವಲಿನಮೇಲೆ
ಸುತ್ತುವರೆದಿಹ ತಾರೆಗಳ ಹೊಳೆವ ಚುಕ್ಕಿ ಬೆಳಕು
 ನಧಿಯ ಚಾಚಿನಲ್ಲಿ  ಮೆದುವಾಗಿ ಮಿಯುತಿಹವು
ಬಾಗಿದ ಮರದ ರೆಂಬೆ ತೇಲುತಿದೆ ನಧಿಯ ರಭಸದೊಂದಿಗೆ
ತೆಳ್ಳಗಿನ ಪರದೆಯಂತ ಮಧುರ ಬೆಳಕಿನಲಿ
ಅಸ್ತಿತ್ವ :
ಚಾಟಿಎಂತೆ ಹಪ್ಪಳಿಸಿತು ವಾಸ್ತವತೆ
ಮರುಭೂಮಿಗೆ ಬಂದಂತೆ ಬದುಕಿನ ಅಂತರಾಳಕ್ಕೆ ಮರಳಿದಾಗ
ಎಲ್ಲವು ಮಾಯವಾದವು ಪವಾಡದಂತೆ
ಹುಮ್ಮಸ್ಸು :
ಆದರೆ ಎಲ್ಲವು ಸಾದ್ಯ ಅನಿಸುತ್ತದೆ
ಮನಸ್ಸು ಎಣಿಸಿದಂತೆ ಮಾರ್ಗ ಹವಣಿಸಿದೆ
ಹುಳಿ ದ್ರಾಕ್ಷಿ ಕೂಡ ಹಣ್ಣು ಆಗುವುದು
ಸುಗ್ಗಿಯ ಫಸಲು ಕೈಗೆ ಸೇರುವುದು
ಪಯಣ :
ನಡೆಯುತಿರುವೆ ಹುಣಿಮೇಯ ಬೆಳಕಿನ ನೆರಳಿನೊಂದಿಗೆ
ಮಿಂಚು ಹುಳುಗಳ ಫಳ ಫಳ ಪ್ರಣಯ ಪ್ರಸಂಗದೊಂದಿಗೆ
ಮಿಡಿತೆಯು ಬೆಚ್ಚನೆ ಅಡಗಿದೆ ತನ್ನ ಕಿರಿ ಕಿರಿ ಗಾನದೊಂದಿಗೆ
ಭಯ :
ನಡೆಯುತಿರುವೆ ಪ್ರೇತ ಪಿಸಾಚಿಗಳ ಹವೆಯಲ್ಲಿ
ಬೆಂಕಿ ಹುಂಡೆ ಕಿರು ನಾಲಿಗೆ ಚಾಚಿದೆ
ರಕ್ತ ಪಿಪಾಸಿ ನೆತ್ತರ ಹಿರಿದೆ
ಭಯಂಕರ ಮಾಯಾವಿ ರಾತ್ರಿ
ಯಾವ ಮಂತ್ರದಂಡವೋ ಬೇಸಿಗೆಯ ಒಣ ಹವೆಯನ್ನು
ಹೊಸ ಪ್ರಮಾಣದಲ್ಲಿ ವಿಸ್ತರಿಸಿದೆ
ಸಮತೋಲನೆ ಸಾದನೆ :
ಇಂತಹ ವಿಚಿತ್ರ ತಾಣದಲ್ಲಿ ನನ್ನ ಆತ್ಮ
ಹೊಸದಾಗಿ ಹುಟ್ಟಿದೆ ಹೊಸ ಚಂದ್ರನ ಬೆಳಕು
ಮುಲೆ ಮೂಲೆಗೂ ಚಾಚಿದಂತೆ
ಮರೆತಂತಾಗಿದೆ ನಿಜ ಸತ್ಯವು
ಗಾಳಿ ತಂಗಾಳಿಯಂತೆ ಸ್ವಚ್ಚ
ಹಿತವಾದ ಕನಸ್ಸನು ಹೇಳಿದೆ
ಹಾಗು ಸೂಕ್ಷ್ಮವಾಗಿ ಶೋದಿಸಿದೆ
ಹೊಸ ಪ್ರಕಾಶಮಾನದ ಹಗಲ ಬೆಳಕೊಂದನ್ನು
~ಸಂಜು~