Wednesday, February 29, 2012

ನಿನಗಾಗಿ ಕಾಯುವೆ,.


ನೀ ನನ್ನೋಳಗಿದ್ದೆ
ನೋವು ತಿಳಿಯದೆಹೋದೆ
ಕಣ್ಣು ತುಂಬಿಬರುವುದು
ನನ್ನ ಒಂಟಿತನದಲಿ
ಈ ಜೀವನ....... ಆ ಸಾವು
ನಿನ್ನೊಂದಿಗೆ ಇರಲಿ
ನಿನಗಾಗಿ ಕಾಯುವೆ,....
ಓ ನನ್ನ ಹೃದಯವೇ,,...
ಓ ನನ್ನ ಪ್ರೀತಿಯೇ....
ನೀನು ಇಲ್ಲದೆ ಬಾಳಿಲ್ಲ....
ನನ್ನ ಪ್ರೀತಿ ಹೇಗೆ ಅರಿಯಬಲ್ಲೆ
ನನ್ನೀ ಹೃದಯದ ಶಾಂತಿ
ಕದಡಿ ಹೋಗಿದೆ ನೀನಿಲ್ಲದೆ......
ನನ್ನ ಒಲವೆ ನೀ ಮಾಡಿದ್ದು ಸರಿಯೇ
ನನ್ನೀ ಕಣ್ಣು ಕ್ಷಮೆ ಕೇಳುತಿದೆ
ಮಾಡಿದ ಪ್ರೀತಿಗೆ...
ನಿನಗಾಗಿ ಕಾಯುವೆ..
ಓ ನನ್ನ ಹೃದಯವೇ.....
ಓ ನನ್ನ ಪ್ರೀತಿಯೇ..
ಹೃದಯದ ಹಾದಿ ಮಸಣದಂತೆ ಬರಿದಾಗಿದೆ ……
ಬಾಹುಗಳಲ್ಲಿ ನಿಶ್ಯಕ್ತಿ ತಾಂಡವವಾಡಿದೆ
ನನ್ನೀ ಉಸಿರು ನಿನ್ನ ಸುಗಂಧಕ್ಕೆ
ಆತೊರೆಯುತ್ತಿದೆ....
ಒಮ್ಮೆ ಬಂದು ಬಿಡು
ದುಃಖವನ್ನು ಹೊಡೆದು ಅಟ್ಟುವೆ
ನೀನಿಲ್ಲದೇ ದೂಡುವ ಶಕ್ತಿ ಎಲ್ಲಿದೆ ………….
ಮನಸ್ಸಿಗೆ ಶಾಂತಿ ಇಲ್ಲ
ನಿನಗಾಗಿ ಕಾಯುವೆ,.....
ಓ ನನ್ನ ಹೃದಯವೇ......
ಓ ನನ್ನ ಪ್ರೀತಿಯೇ

ನನ್ನೀ ನೈದಿಲೆ


ಎಲ್ಲಿಲ್ಲದ ಕೋಪ
ಸೂರ್ಯ ನಿನ್ನ ತಾಪ
ಮನ್ನಿಸಲಾರೆ ಚಳಿಯೇ
ನಿನ್ನ ಕೊರೆವ ತಂಗಾಳಿಗೆ
ನಿಮ್ಮಿಬ್ಬರ ಆರ್ಭಟಕ್ಕೆ
ನನ್ನೀ ನೈದಿಲೆಯ
ಮೃದು ಅದರ ಕೆಡುತಿಹುದು

~ಸಂಜು~
 

ದೂರದ ಬೆಟ್ಟ ನುಣ್ಣಗೆ..

ದೂರದ ಬೆಟ್ಟ ನುಣ್ಣಗೆ...
ಹತ್ತಿರ ... ಹೋದಂತೆ ಕಲ್ಲು ಮುಳ್ಳು ಕಾಲಿಗೆ ....

ದೂರದ ಸೂರ್ಯ...ಗುಂಡಗೆ..
ಹತ್ತಿರ ಹೋದಂತೆ ಕೆಂಡದದುಂಡಗೆ 

ದೂರದ ಸಾಗರ ಸೇರಿದಂತಿದೆ..
ಬಳಿಗೆ ಹೋದರೆ ಇಬ್ಬಾಗವಾಗಿದೆ

ದೂರದ ಪ್ರೀತಿ ಮನದಲ್ಲಿ ಸುಖಃ ಸ್ವಪ್ನವಾಗಿದೆ
ಹತ್ತಿರ ಹೋಗಲೇ ಬೇಡವೇ…… ಶಂಕೆಯಾಗಿದೆ

Thursday, February 23, 2012

ಮನಸ್ಸು ಗೆದ್ದವ ಮಹಾತ್ಮ


ಎದ್ದು ಬಂದೆಯ  ಮೋಡ
ಗೆದ್ದು ಬಂದೆಯ ಕೂಡ 
ಬೀಗು ಬಿಮ್ಮಾನ ಬೇಡ
ಹಿಂದೆ ಬಿದ್ದವರು ಇನ್ನು
ಓಡುತಿರುವರು ನೋಡ..

ಆಟ ಇನ್ನು ಮುಗಿದಿಲ್ಲ
ಗೆಲುವು ನಿನಗೆ ಒಬ್ಬನಿಗಲ್ಲ
ಮಂದಿ ಇನ್ನು ಹವಣಿಸುತಿರುವರು
ನಿನ್ನ ಸೋಲು ಖಚಿತ ಎನ್ನುತಿರುವರು  
ಗೆದ್ದು ಬರುವ  ಶಕ್ತಿ  ಅವರಲ್ಲೂ ಇದೆ
ನಿನ್ನ  ಸೋಲಿಸುವ ಆತ್ಮವಿಶ್ವಾಸ  ಅವರಲ್ಲೂ ಇದೆ

ಬೇಕು ಚದುರಂಗದ ಚಾಣಕ್ಷತೆ
ಸ್ವಲ್ಪಾ ಏಮಾರಿದರೆ  ಗದ್ದಿ ಕಸಿಯುತ್ತೆ
ನಿನ್ನ ಆಟ ನೀನು ನಡೆಸು  
ಎದುರಾಳಿಯ ನೆಟ್ಟ ನೋಟಕ್ಕೆ  ಸಂಧಿಸು
ಬುದ್ದಿ ತೀಕ್ಷ್ನವಾಗಿಸು

ಬದುಕು ಒಂದು ಕಡೆ
ಎದುರಾಳಿ ಒಂದು ಕಡೆ
ಚಲವಿರಲಿ ಮನಸ್ಸಿನಲ್ಲಿ
ಬಲವಿರಳು  ತೋಳಿನಲ್ಲಿ 
 ಮನಸ್ಸು ಗೆದ್ದವ ಮಹಾತ್ಮ
ಜೀವನವ  ಗೆದ್ದವ ಪರಮಾತ್ಮ

~ಸಂಜು~

Saturday, February 18, 2012

ಮುದ್ದು ಪುಟ್ಟ ಹುಡುಗಿ

ಆಟವ ಬಿಟ್ಟು ಬಂದೆ 
ಬುತ್ತಿ ಕೊಟ್ಟು ಬತ್ತಿನಿ ಎಂದೆ 
ಆಟಕ್ಕೆ ಉಫಿ ಎಂದೆ 
ಮೋಸ ಮಾಡಬೆಡಿ ಬಂದೆ ಬಂದೆ

ಅವ್ವ ಎಲ್ಲಿದ್ಯವ್ವ 
ಬುತ್ತಿ ತಂದೀವ್ನಿ ಬಾರವ್ವ 
ಅಪ್ಪೊ ಬಾರಪ್ಪೊ
ಉಂಡು ಗೈಮೆ ಮಾಡುವೆ ಬಾರಪ್ಪೊ 
ಬಿರ್ರಿನ್ ಬರ್ರಪ್ಪೊ ಆಟಕ್ಕೆ ಒತ್ತಾಯಿತು ಬರ್ರಪ್ಪೊ

ಯಾಕೆ ಮಾಗಿ ಇಸ್ಕೂಲ್ಗೆ ಹೊಗ್ಲಿಲ್ಲ್ವೆ 
ಇಲ್ಲ ಕಾಣಕ್ಕ ನಾ ವಲ್ಲೆ 
ಒಕಲುತಾನ ಕಲಿಬೆಕಂತಲ್ಲೆ 
ಅದ್ಕೆ ಕುಂಡ್ಸವರೆ ಮನ್ಯಲ್ಲೆ 


Friday, February 17, 2012

ರಾಮಣ್ಣನ ಟೀ ಅಂಗಡಿ


ರಾಮಣ್ಣನ ಟೀ ಅಂಗಡಿ
ಇತ್ತು ಒಂದು ಟೀ ಅಂಗಡಿ
ಕಾಲೆಜು ಕಂಪೌಂಡ್ ಮುಂದೆ
ದಿನ ದೂಡುತಿದ್ದ ಬಾಳ ಬಂಡಿ

ಸಿಗರೇಟ್ ಗುಟ್ಕ ಮಾರುತಿದ್ದ
ಸೇದಿ , ತಿಂದು ಹಾಳಾಗಬೇಡಿ
ಅಂತ ಬಾಯಿ ತುಂಬ ಬಡ್ಕೊಳತಿದ್ದ

 ದಪ್ಪ ಕನಡ್ಕಾ ಹಾಕುತಿದ್ದ
ಚಿಲ್ಲರೆ  ಲೆಕ್ಕ ಸರಿಯಾಗೆ ಕೊಡುತಿದ್ದ
ಸಾಲ ಕೇಳಿ ಸ್ನೇಹ ಕಳ್ಕೊ ಬೇಡಿ
ಅಂತ ಬೋರ್ಡು ಬೇರೆ  ಹಾಕಿದ್ದ

ರೇಡಿಯೊ ಜೋರಾಗೆ ಹಾಕೂತಿದ್ದ
ವಿವಿದಭಾರತೀ ಕೇಳುತಿದ್ದ...
ರಾಜಣ್ಣ ಹಾಡು ಬಂತು ಅಂದ್ರೆ
ತಕ್ಕಾ ದಿಮ್ಮಿ ಕುಣಿತಿದ್ದ

 ಬೆಳ್ ಬೆಳ್ಗೆ ಸ್ಪೆಷಲ್ ಕ್ಲಾಸು
ತಲೆಗೆ ಹೊಗಲ್ಲ ಪಾಠ
ಇಲ್ದೆ ಇದ್ರೆ ರಾಮಣ್ಣ ನ
ಸ್ಪೆಷಲ್ ಟೀ ಗ್ಲಾಸು

ಒಳ್ಳೆ ಹುಡುಗರಿಗೆ ಕರೆದು ಬುದ್ದಿ ಹೇಳುತಿದ್ದ.
ಕೆಟ್ಟ ಹುಡುಗರಿಗೆ ಶಾಪ ಹಾಕುತಿದ್ದ
ಹಸ್ಕೊಂಡು ಬಂದ್ರೆ ಟೀ, ಬನ್ನು ಕೊಡುತಿದ್ದ
ಚೆಂದಾಗಿ ಓದಿ ಬುದಿವಂತ್ರಾಗ್ರೊ ಅಂತ
ಹರಸುತಿದ್ದ

ಎಷ್ಟು ಹುಡುಗರು ಹೋದರು...
ಎಷ್ಟು ಹುಡುಗರು ಬಂದರು
ವರ್ಷದಮೆಲೆ ವರ್ಷ ಕಳಿತು
ಪೆಟ್ಟಿ ಅಂಗಡಿ ಮಾತ್ರ ಅಲ್ಲಾಡದಂಗೆ ಇತ್ತು

ನಾನು ಓದಿ ಮುಗ್ಸಿ ಕೆಲಸಕ್ಕೆ ಸೇರ್ಕೊಂಡು...
ಮದುವೆ ಮನೆ ಎಲ್ಲ ಮಾಡ್ಕೊಂಡು
ಕಾರ್ ನಲ್ಲಿ  ಹಾಗೆ ಹಾದು  ಹೋಗುವಾಗ
ನೆನಪು ಹಂಗೆ ಸುಳಿದಂಗೆ ಆಗಿ
ಅದೇ  ಅಂಗಡಿ ಅದೇ ಟೀ
ಅದೇ  ದಪ್ಪ ಕನಡ್ಕಾ
ಅದೇ ಚಿಲ್ರೆ ಕಾಸು
ಆದರೆ ರಾಮಣ್ಣ ಈಗ ರಾಮಜ್ಜಾ ಆಗಿದ್ದ
ನೆನಪೈತ ರಾಮಣ್ಣ ಅಂದೆ ,
ಯಾರು ಸ್ವಾಮಿ ನೀವು ಅಂದ ರಾಮಜ್ಜಾ
ಕಣ್ಣು ಹಾಗೆ ಒಂದು ಸಲೀ ನೆಂದು ಹೋಯಿತು...
ಮನಸೆಲ್ಲ ಹಾಗೆ ಒಂದು ಸಲೀ ಭಾರ ಆಯಿತು

~ ಸಂಜೀವ್ ಕುಮಾರ್‌ ~

Thursday, February 16, 2012

ಮದುವಣಗಿತ್ತಿ


ಕಳೆಯಿತೆ ನಿನ್ನ ಅಟ್ಟಹಾಸ
ಬರಿದು ಆಯಿತೇ ನಿನ್ನ ಬತ್ತಳಿಕೆ
ಮೆರೆದು ನಿಂತೇ ಕೊನೆಗೂ
ಮದುವಣಗಿತ್ತಿಯೆ ಮೆರುಗು

ಎಂಥ ಸಾಧನೆ ನಿನ್ನೊಡಲಿಗೆ
ಅಂಗಿ ಆರಿಶಿನದ ಕಲೆಗೆ
ಬಿಟ್ಟು ಕೊಟ್ಟೆ ನಿನ್ನ ಅರ್ಧ ಹಾಗೆ
ಗಿಟ್ಟಿಸಿ ಕೊಂಡ ಕನಸಿನಾಂಗೆ 

ಒಂದೊತ್ತಿನ ಊಟ ಸಾಕು ನನಗೆ
ಕಳಿಸಬೆಡೀ ದೊರದ ಊರಿಗೆ
ನಿನ್ನ ಈ ಆರ್ತನಾದ ಕೇಳಲಾಗದೆ 
ಕಂಬನಿಯ ಸಾಗರನಿಗೆ ಸೇರಿಸುತ್ತಿದ್ದೆ ನೇಸರ
ಕಾಣಲಾರನೆಂದು .....ಅವಿತಿದ್ದ ಚಂದಿರ

ತವರ ಮಣ್ಣ ಋಣ ತೀರಿತೆಂದು
ಬಂಡಿ ನಡೆದಿದೆ ದಾರಿ ನೂಕುತ  ಮುಂದು .....
ಮನದ ಅಳಲು ಕೂಗಿ ... ಕರೆದು
ಹಡೆದವರ ಕಣ್ಣ ಒರೆಸಿರಿ ಭಂದು
ನನ್ನ ಪ್ರೀತಿ ಋಣಾ ತೀರಿಸಿರಿ... ಎಂದು
 

           ~ಸಂಜು~

Wednesday, February 15, 2012

ಒಂದು ಸಣ್ಣ ನೆನಪು

ಒಂದು ಸಣ್ಣ ನೆನಪು:-
ಆಗ ಕಾಲೇಜ್ ಗೆ ಹೋಗುತಿದ್ದ ಸಮಯ , ಒಂದು ರಾತ್ರಿ ಒಳಗಡೆ  ಶೆಕೆ ಎಂದು ಹೊರಗಡೆ ಓದುತಿದ್ದೆ.
ಓದುವುದು ತುಂಬಾ ಇದಿದ್ದರಿಂದ ತಲೆ ಎತ್ತದೆ ಓದುತಿದ್ದೆ .ಒಮ್ಮೆಲೇ ಏನೋ ಒಂದು ತರಹ , ಏನೋ ಮಿಂಚು ಹೋದಹಾಗೆ ಆಯಿತು. ತಲೆ ಎತ್ತಿದೆ ಯಾರೋ ಕಾಣಲಿಲ್ಲ ಮತ್ತೆ ಓದುವುದರಲ್ಲಿ ಮಗ್ನನಾದೆ. ಸ್ವಲ್ಪ ಸಮಯದ    ನಂತರ ಮತ್ತೆ ಅದೇ ಅನುಭವಾ ಮತ್ತೆ ತಲೆ ಎತ್ತಿ ನೋಡಿದೆ ...............ಸುಂದರ ನೀಳ ಕೇಶರಾಶಿ ಸುಮ್ಮನೆ ಹಾಗೆ ಒಂದು ರಿಬ್ಬನ್ ನಲ್ಲಿ ಕಟ್ಟಿ ಹಾಗೆ ಇಳೆ ಬಿಟ್ಟಿತ್ತು . ಸೊಂಟದಲ್ಲಿ ಒಂದು ಬಿಂದಿಗೆ ಹೊತ್ತು ಹೋಗುತಿದ್ದಳು ಬೆಡಗಿ ,  ಅ ಬಳುಕಿನ ನಡೆ ...ಆ ಕಡೆ ಇಂದ ಈ ಕಡೆ
ಹೊರಳಾಡುವ ಅ ನೀಲ ಕೇಶ .... ಎಲ್ಲವನ್ನು ಹಾಗೆ ನೋಡುತ್ತಾ ..... ದೂರ ರಸ್ತೆ ಕೊನೆಯವರಿಗೂ......... . ನನ್ನ ಕಣ್ಣ ದೃಷ್ಟಿ ಹಾಯಿತು... ತಿರುವಿನಲ್ಲಿ ಮಾಯವಾದ ಮೇಲೆ.....  ಮತ್ತೆ ಓದಿನಲ್ಲಿ ಮಗ್ನನಾದೆ .... ಎಲ್ಲೋ ಒಳಗೆ ಮತ್ತೆ ಬರಬಹುದು
ಮುಖ ಕಾಣಬಹುದು ಎಂಬ ಆಸೆ ಇತ್ತು ಓದುವ ಗಮನ ಸ್ವಲ್ಪ ಚಂಚಲ ಆಯಿತು.  ಕಣ್ಣು ಮತ್ತೆ ಮತ್ತೆ ರಸ್ತೆ ಕೊನೆಯ ತಿರುವಿನತ್ತ ಹೋಗುತಿತ್ತು. ಅಂದು ಕೊನೆಯ ಸರದಿಯೋ.....  ಏನೋ ಮತ್ತೆ ಬರಲಿಲ್ಲ......  ಆದರೆ ಕಣ್ಣು ಮನಸ್ಸು ಇನ್ನು ಎರಡು   ತಾಸು ಕಾಯದೆ ಇರಲಿಲ್ಲ. 
ಮರುದಿನ ಅದೇ ವೇಳೆಗೆ ನಾನು ನನ್ನ ಪುಸ್ತಕದ ರಾಶಿ ಹೊತ್ತು ಅಲ್ಲೇ ಕುಂತೆ ಆದರೆ ಮನಸ್ಸು ಮಾತ್ರ ಓದುವುದರ ಕಡೆ  ಮನವಿಲ್ಲ  ಕಣ್ಣು ಹುಡುಕುತಿದ್ದವು.... ದೂರದ... ರಸ್ತೆ ತಿರುವಿನಲ್ಲಿ ಕಂಡಿತು ಹಸಿರು ಬಣ್ಣದ ರವಿಕೆ ಅದೇ ಬಣ್ಣದ ಲಂಗ ತೊಟ್ಟ ಒಂದು ಆಕೃತಿ ,  ಮನ ಮಿಡಿಯ ತೊಡಗಿತು ಆಕೃತಿ ಹತ್ತಿರವಾದಂತೆ....  ಎದೆ ಬಡಿತ ಜೋರಾಗ ತೊಡಗಿತು...
 ಹತ್ತಿರ ಬಂದಳು ಆ  ರಾಜಕುಮಾರಿ... ಆಹಾ !! ಎಂತಹ ಸೌಂದರ್ಯ , ಎಂತಹ ಲಾವಣ್ಯ ಬಟ್ಟಲ ಕಣ್ಣು , ಗುಂಡಾದ ಮುಖ..  ಬೈತಲೆಯ ಹಣೆ ,  ಕಣ್ಣಿನ ಆಕಡೆ ಇಕಡೆ ಸುರುಳಿಯ ಮುಂಗುರುಳು, ಚಿಕ್ಕ ಬಿಂದಿಗೆ , ಕಾಮನ ಬಿಲ್ಲನೆ ತಿದ್ದಿ ತಿಡಿದ ಹುಬ್ಬು ,
 ಮುಗ್ದತೆ , ಅಚ್ಚರಿ , ಚಂಚಲ , ಗಾಬರಿ ಅಂತಹ ನೋಟ, ಸೊಂಟದಲ್ಲಿ ಅದೇ ಬಿಂದಿಗೆ , ಕೈತುಂಬಾ ಹಸಿರು ಬಿಳಿ ಗಾಜಿನ ಬಳೆಗಳು , ಜಳಿರು ಜಳಿರಿನ ಕಾಲ ಗೆಜ್ಜೆ ,  ಹತ್ತು   ಕ್ಷಣ ಹೃದಯ ಮಿಡಿಯಲಿಲ್ಲ , ಉಸಿರು ಹೂರ ಬರಲಿಲ್ಲ , ಕಣ್ಣ ರೆಪ್ಪೆ ಮುಚ್ಚಲಿಲ್ಲ ಇಂಥ ಸೌಂದರ್ಯ ಕನ್ಯೆಗೆ ..ನನ್ನ ರೂಪ ಒಮ್ಮೆ ಮರುಗಿತು, ಅಂದಿನ ರಾತ್ರಿ ಏಕೆ ನಿಲ್ಲಲಿಲ್ಲ , ಅ ಕ್ಷಣ ಹಾಗೆ ಸ್ತಬ್ದವಾಗಬರದಿತ್ತೆ ,
ಕೊಂಚ ನಿಂತು ಹೋಗಬಾರದಿತ್ತೇ , ನೀರವತೆಯಾ ರಾತ್ರಿ...ತಣ್ಣನೆ ತಂಗಾಳಿ .. ಅವಳ ಮುಂಗುರುಳನ್ನು ಆಡಿಸಿ , ಆಡಿಸಿ ನಲಿಯುತಿತ್ತು , ಆ ಸೌಂದರ್ಯ    ನನ್ನ ಕಣ್ಣು ಮನದಲ್ಲಿ ಅಚ್ಚೆ ಮೂಡಿಸಿತ್ತು,  ಒಮ್ಮೆಯೂ ನೋಡಲಿಲ್ಲ ನನ್ನ ಇರುವಿಕೆ...
ಗಮನಿಸಲಿಲ್ಲ , ಕೊಂಚ ಬೇಸರ ಗೊಂಡಿತು ಮನ ನಮ್ಮ ಮನೆಯ ತುಸು ದೂರ ಇತ್ತು ಒಂದು ಬೀದಿ ನಲ್ಲಿ ,
ಜನ ಸರದಿಯೊಂದಿಗೆ ಕಾಯ್ದು ... ತುಂಬಿಸಿಕೊಳುವ ಕಾರ್ಯ ಬರದಿಂದ ಸಾಗಿತ್ತು ,  ನನಗೆ ಅನ್ನಿಸಿದ್ದು ಇಷ್ಟೇ ಇವಳ ಸರದಿ ಕೊಂಚ  ತಡೆದು ಬರಲಿ ಎಂದು, ನಾನು ಹಾಗೆ ಪುಸ್ತಕದ ಮೇಲೆ ಕಣ್ಣು ಆಡಿಸಿದಂತೆ  ಅವಳ ಒಂದೊಂದು ಹಾವಭಾವ  ನೋಡುತ್ತಾ ಮನಸ್ಸಿನಲ್ಲೇ ಸಿಹಿ ಹಣ್ಣು ತಿನುತಿದ್ದೆ ,  ಅವಳ ವೈಯಾರದ ನುಲಿತ , ಸುತ್ತ ಇದ್ದ ಕೆಸರೂ ಮಣ್ಣಿನ ಮೇಲೆ  ಕಾಲ್ಬೆರಳಲ್ಲಿ ಏನನ್ನೋ ಬರೆದು ಅಳಿಸುವ ರೀತಿ ಇವೆಲ್ಲ  ಕಣ್ಣಿಗೆ ಹಬ್ಬವನ್ನು ಉಂಟು ಮಾಡುತಿತ್ತು. ಇವಳ ದಿನ ರಾತ್ರಿ ಅದೇ ಸಮಯಕ್ಕೆ ಓಡಾಡುವ ಪರಿ ಸಾಗಿತ್ತು ಆದ್ರೆ ಆಶ್ಚರ್ಯ ಎಂಬಂತೆ  ....ಒಮ್ಮೆಯು ನನ್ನ ಕಡೆ ಗಮನ ಕೊಡಲೇ ಇಲ್ಲ , ಅವಳಿಗೆ ಇಹಲೋಕದ ಅರಿವೇ ಇಲ್ಲದಂತೆ
ತನ್ನ  ಸಣ್ಣ ದನಿಯ ಹಾಡೊಂದನ್ನು ಹಾಡುತ್ತ ಬಿಂದಿಗೆಯನ್ನು ಆಕಡೆ ಇಕಡೆ ಆಡಿಸುತ್ತ ಸರದಿ ನಡದೇ  ಇತ್ತು ಕೊನೆಗೊಮ್ಮೆ ನನ್ನ ತೀಕ್ಷಣ ದೃಷ್ಟಿ ಬಾಣ ನಾಟದೇ ಬಿಡಲಿಲ್ಲ ರೆಪ್ಪೆಯನ್ನು ಒಂದಕ್ಕೊಂದು ಸೇರಿಸಿ ನಯನ ಮಿಲನವಾಯಿತು .
ಆಗನಿಸಿರಬೇಕು ಇಷ್ಟು ದಿನ ನನ್ನ ಇವನು ಗಮನಿಸುತಿದ್ದ ಎಂದು ಕೊಂಚ ನಾಚಿ ಒಮ್ಮೆಗೆ ಹುಬ್ಬು ತೀಕ್ಷಣವಾಗಿ ಕಣ್ಣು ಕೋಪವನ್ನು ಇಂಚು ತೋರಿತು ಸ್ವಲ್ಪ, ನನ್ನ ಹೃದಯ ಗದ್ಗಿತವಾಗಿ ಆಮೇಲೆ ಸವರಿಸಿಕೊಂಡಿತು ಅಂದಿನಿಂದ ಕಣ್ಣ ಮುಚ್ಚಾಲೆ ಆಟ ನಡೆದೇ ಇತ್ತು…………………
ಸಂಜು....

Monday, February 13, 2012

ಗೆಳತಿಯೆ ನಿನ್ನ ನೊಡಲೆಂತು ಚಂದ

ಗೆಳತಿಯೆ ನಿನ್ನ ನೊಡಲೆಂತು ಚಂದ
ಬಣ್ಣಿಸಲಾಗದ ಆನಂದ
 
ನಿನ್ನ ಮಾತಿನ ಆಲಾಪ
ಲೋಕ ಮರೆತು ಕೇಳುವೆ ಕೊನೆ ತನಕ

ನಿನ್ನ ನಗುವು ನೋಡಿದಷ್ಟು ಮೋಡಿ
ಎಲ್ಲಾ ದುಃಖ ಮರೆಸುವಂತ ಕನ್ನಡಿ

 ನಿನ್ನ ಕಣ್ಣ ಸಾಗರದ ಆಳ
ಬಿಂಬವಾಗಿ ಕರಗಿ ಹೋಗಬೇಕೆಂಬ ಅಂಬಲ

ಸ್ಪಂದಿಸಿದಷ್ಟು ನೀ ಎನ್ನ ಮನಕ್ಕೆ ಔಷದಿ
ನೋವಿಗೆ ಎಡೆ ಇಲ್ಲ ಈಗ ನನ್ನ ಮನದಿ

 ನೀ ಕೊಟ್ಟ ಪ್ರೀತಿ ಎಷ್ಟು ಅಮರ
ಹೃದಯಕ್ಕೆ ಪುಳಕವು ನಿರಂತರ

 ನನ್ನ ಕಳೆದು ಕೊಳುವುಂತೆ ನಿನ್ನ ಭಯ
ಕಣ್ಣ ಬಾಷ್ಪ ಹರಿದು ಹೋಯಿತು ಆ ಸಮಯ

ಹೋಗಿ ಬರುವೆ ಮೂರು ದಿನ ನಾ ಸಿಗಲಾರೆ
ಹೋಗಿ ಬರುವೆ, ಹೋಗಿ ಬರುವೆ ಹೇಳಿದೆ ಸಾರಿ ಸಾರಿ
ಒಂದೊಂದು ಬಾರಿಯೂ ಅಡಗಿದ ನಿನ್ನ ಪ್ರೀತಿಗೆ
ಹೃದಯ ಪುಳಕಿತಗೊಂಡಿತು ಬಾರಿ ಬಾರಿ

~ ಸಂಜು~

Sunday, February 12, 2012

ಚಂದನದ ಗೊಂಬೆ


ಚಂದನದ ಗೊಂಬೆ, ಚಂಚಲತೆಯ ಈ ಸಂಜೆ ,
ಮೆಲ್ಲನೆಯ ನಿನ್ನ ಆ ನಗೆ ,
ಭ್ರಮಿತನಂತೆ ಭಾವ , ಈ ಸುಂದರ ಅನುಭವ ,
ಭ್ರಮೆ ಎಂತಹ ಸುಖಃ ಸೋಪಾನ
ಪ್ರಜ್ಞೆ ಬಯಸುತಿಲ್ಲ ಈ ಮನ.

ಸಾಗರದ ಆಳವ ತೋರುವ ಕಣ್ಣ ಕೊನೆ ಕಾಡಿಗೆ
ಉದಯ ಬಿಂದುವಾಗಿಹನು ಹಣೆಗೆ.
ಆಧರದಲ್ಲಿ , ಧುಮುಕುತಿರುವ ಕೆಂಡ ದುಂಡಗೆ
ನಿನ್ನ ನೆರಳು ಸೋಕಿದರೂ.. ಸಾಕು ನನಗೆ..
ಕುಲಗೆಟ್ಟು ಹೋಗುವುದು ನನ್ನ ಹೃದಯದ ಒಕ್ಕಲುತನ .

ಒಡಲು ಸುಂದರ.., ನಿನ್ನ ಮನವು ಸುಂದರ..
ಸುಂದರತೆಗೆ ಇಡಬೇಕು ನಿನ್ನ ಹೆಸರ .
ಅನ್ಯರಿಗೆ ನಿನ್ನ ಪ್ರೀತಿ ಮಾನ್ಯತೆ ಅರಿವಿಲ್ಲ
.
ಪ್ರಿತಿ ಭಿಕ್ಷುಕ ನಾನು ನಿನಗೆ ಕರುಣೆಇಲ್ಲ
ಹೃದಯವಾಗಲೇ ಆಗಿದೆ ಕಂಗಾಲು
ಇನ್ನು ಆಗಿಸಬೆಡ ಮಣ್ಣ ‌ಪಾಲು

ಸಂಜು ~

Love not at first sight

Love not at first sight
It lies not in our power to love or hate,
For will in us is overruled by fate.
When two are stripped, long ere the course begin,
We wish that one should love, the other win;
And one especially do we affect
Of two gold ingots, like in each respect:
The reason no man knows, let it suffice,
What we behold is censured by our eyes.
Where both deliberate, the love is slight:
Who ever loved, that loved not at first sight?

Wednesday, February 8, 2012

ಈ ಕೆಳಗಿನ ಚಿತ್ರಕ್ಕೆ ಕವನ ಬರೆಯೆರಿ

ಸಾಲು ಸಾಲು ಮಾಡಿ ಹೊರಟಿರೆಲ್ಲಿಗೆ???
ಸಾಲು ಕವನ ನೋಡಲು ಬನ್ನಿರಿಲ್ಲಿಗೆ..
ಕವಿಯ ಮನಕೆ ಹೊಕ್ಕಿ..
ಕವನವನ್ನು ಹೆಕ್ಕಿ ಹಾರಿ ನಿಮ್ಮ ಗೂಡಿಗೆ..
ಅಲ್ಲಿ ಕುಳಿತರೆ ನಿಮ್ಮ ಪಯಣ ಸಾವಿನೆಡೆಗೆ..
ಬನ್ನಿರಿಲ್ಲಿ ಭಾವುಕ ಲೋಕಕೆ..
ನನ್ನ ಕವನ ಕೇಳಿ.. ತಿರುಗಿ ಹೊರಡಿ ನಿಮ್ಮ ಗೂಡಿಗೆ..
ಅನಿತಾ ಗೌಡ..

ಒಂಟಿತನವ ಬಯಸುವೆ ಏಕೆ..
ಬೇಡವೇ ನಿನಗೆ ಸ್ನೇಹದ ಸಲಿಗೆ??
ನಿನಗೂ ಪ್ರೀತಿಯ ಭಾವನೆಯಿದೆಯೇ
ಅದರಲಿ ಸೋತು ಹೀಗಿರುವೆಯೇ??
ನಿಮ್ಮಲ್ಲೂ ಜಾತಿಯ ಬೇದವು ಇದೆಯೇ??
ನಿನ್ನನು ದೂರ ತಳ್ಳಿಹರೆ..
ವರ್ಣದ ಬೇದವು ನಿಮಗೂ ಬಂತೆ??
ಸ್ನೇಹಕೆ ಇದು ಅಡ್ಡಿ ತಂತೆ??
ಯಾಕೆ ಈ ಒಂಟಿತನ.. ಬಿಡು ಅಂತ ಸಂಗವನು..
ಹೋಗುವುದು ನಿನ್ನ ಎಲ್ಲ ಬೇಸರದ ದಿನ..
ಅನಿತಾ ಗೌಡ..
 
Onti kootha nanage indu hindu salu beke?? hindu salu kootha avake onti bege ariadeke?
Deepthi Rao..
 
ಬರೀ.. ತಮಾಷೆಗೆಗಾಗಿ.. ತಪ್ಪಾಗ್ ತಿಳಿಬೇಡೀ...:-) ಇಲ್ಲಾ... ಇವ್ರ್ಗೆಲ್ಲ... ಜೊತೆ ಸಿಕ್ತು ಅಂತ... ಜೊಥೆಲಿದ್ ನನ್ನೇ.. ದೂರ ಮಾಡಿದಾರಲ್ಲ.. ಇದ್ ಯಾವ್ ನ್ಯಾಯ... ಇಪ್ಪತ್ ಜನ ಇದ್ದೀರಾ... ನಿಮ್ ಜೋತೆಲೇ.. ನಾನ್ ಒಪ್ಪತ್ತಾದ್ರು.. ತಿನ್ಕೊಂಡ್ ಇರ್ತಿರ್ಲಿಲ್ವ...? ಅಲ್ಲ....ಇವ್ರ್ಗೆಲ್...ಲ.. ಜೊತೆ ಸಿಗೋವರ್ಗು.. ನಂಜೊತೆಲೇ... ಏ ದೋಸ್ತಿ... ಹಂ ನಹೀ.. ಚೋಡೇನ್ಗೆ... ಅಂತೆಲ್ಲ.. ಹಾಡೆಳ್ ಬಿಟ್ಟು... ನಂಗ್ ಜೊತೆಯಿಲ್ಲ.. ಅಂತ... ಈಗ.. ನಾನ್, ದೋಸ್ತು.. ದೋಸ್ತು.. ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ.. ಅಂತ. .. ಹಾಡೇಳೊಂಗೆ .. ಮಾಡಿದಾರಲ್ಲ.. ಸರೀನಾ... ಇವರ್ ಹೆಂಡ್ತಿ ಮಕ್ಳು.. ಉದ್ದಾರ... ಆಗ್ತಾರ...? ನಂಗು .. ಜೊತೆ ಸಿಗ್ಲಿ... ನನ್ನ lover ಜೊತೆ.. ಜೊತೆ-ಜೊತೆಯಲಿ.. ಪ್ರೀತಿ, ಜೊತೆಯಲಿ.. ಅಂತ ಹಾಡೇಲಿ... ನಿಮಗೆಲ್ಲ.. ಉರ್ಸ್ಲಿಲ್ಲ.. ಅಂದ್ರೆ...? ಬೇಡ.. ಯಾಕ್ ಸುಮ್ನೆ ಈಗ. ಅದೆಲ್ಲ....:-)
Chandre shekhar Kanakapura ..
 
ಅಂಟಿಕೊಂಡ ಒಂಟಿ ಹೃದಯ ತಂಟೆ
ತಗೆದು ಕೆದಕಿ ಕಾಡುತಿಹುದು....
ಸಂಗ ಮರೆತು ಸಾಂಗತ್ಯ ತೊರೆದು
ಇನ್ನಿಲ್ಲದಂತೆ ಬಿಕ್ಕಿ ಬಿಕ್ಕಿ ಅಳುತಿಹುವುದು..
ಕೈ ತುಂಬ ಇರುವಾಗ ಹಲ್ಲು ಗಿಂಜಿ
... ನಕ್ಕಿದ್ದು ನೀವೇ ನನ್ನೆದುರು ನಿಂದು...
ಬರಿದಾದ ಮನದಲಿ ನೋವುಗಳ ಸಂತೆಯಲಿ
ನಾನಿರುವಾಗ ದೂರ ತಳ್ಳಿ ಸಾಲಾಗಿ ಕುಂತರೆ ಇಂದು...
.................................................ಬಸು
Basu Prajwal
 
ಒಂದು ದಾರದಂತೆ ಕಾಣುವ ತಂತಿಯೇ,
ನೀ ಈ ಪಕ್ಷಿಗಲಿಗೆಲ್ಲ ಆಸರೆಯಂತೆ ಬೀಗುತ್ತಿರುವೆ,
ನಾ ನಿರುವೆನೆಂಬ ಭಾವ ನಿನಗಿದೆ .......

ಆದರೂ ನೀನು ಕಟುಕ ಯಮನ ಪಾಶವಿದೆ ನಿನ್ನಲ್ಲಿ ,
... ಪ್ರಾಣ ಹಾರಿ ಹೋಗುತ್ತದೆ ಎಂಬ ಭಯ ಇವಕ್ಕಿಲ್ಲ,
ಚಿಲಿಪಿಲಿಯ ಇಂಚರ ನಿವಿಲ್ಲದ ಬೆಳಗು ಬೆಳಗಲ್ಲ ನಮಗೆ...

ಓ ಪಕ್ಷಿಗಳೇ ಏಳಿ ಅಲ್ಲಿಂದ ಒಮ್ಮೆ ಹಾರಿಬಿಡಿ,
ಅದು ಸಾವಿನ ಮನೆ ಬನ್ನಿ ನಿಮ್ಮ ಸೇಚ್ಚೆ ಪ್ರಪಂಚಕ್ಕೆ,
ಹಾರಾಡಿ ನಿಮ್ಮ ಹಾಡನ್ನು ಕೇಳುವಾಸೆ ನಮಗೆ ....

ಸುಜಾತ

Tuesday, February 7, 2012

ಮರೆತು ಹೋಯಿತೇ ಗೆಳತಿ

ಕಣ್ಣ ಸೇರಿಸುವ ಮೊದಲೇ ಮನಸ್ಸು ಕೊಟ್ಟಿದೆ
ಮರೆತು ಹೋಯಿತೇ ಗೆಳತಿ
ನಿನಗರಿವಿಲ್ಲದೆ ನಿನ್ನ ಹೃದಯ ಆಲಂಕರಿಸಿದೆ
ತಿಳಿಯದೆ ಹೋಯಿತೇ ಗೆಳತಿ
ಕನಸ ನಿ ಕಾಣುವ ಮೊದಲೇ ನಿನ್ನ ಮನಸ್ಸು ಕಂಡೆ
ನಿನಗೆ ಕಾಣದೆ ಹೋಯಿತೇ ಗೆಳತಿ
ಮಾಯೆ ಅಲ್ಲ ನಿನ್ನ ಛಾಯೆ ನಾನು
ಎಲ್ಲೂ ಹುಡಕ ಬೇಡ ನನ್ನ
ಕಣ್ಣ ಮುಚ್ಚಿ ನೋಡು ನನ್ನ
ನೆರಳ ನೋಡಬೇಡ ಅದು ಕ್ಷಣಿಕ
ನಾನೇ ಇರುವೆ ನಿನ್ನ ಕೊನೆತನಕ
ನಗೆಯ ಕಾಡಬೇಡ ಒಳ ಮನಸ್ಸು ಆಳುತಿಹುದು
ನಿನ್ನ ಕಾಣಲೆಂದು
ಸಮಯದ ಅರಿವು ನನಗು ಇರಲಿಲ್ಲ
ಒಂದು ಕ್ಷಣ ನಿನ್ನ ಕಂಡ ನನ್ನ ಹೃದಯ ನಿನ್ನ ಒಳ ಹೊಕ್ಕಿತು
ಸಂಜು

ಬಾ ಬೆಳಕೇ ನನ್ನೊಳಗೂ

ಬಾ ಬೆಳಕೇ ನನ್ನೊಳಗೂ
ಅಂಧಕಾರ ತುಂಬಿಹುದು
ಹೊಸ ಬೆಳಕಾಗಿ ಬಾ
ಹೊಸ ಹುರುಪಾಗಿ ಬಾ

ಬಾ ಒಲವೇ ನನ್ನೊಳಗೂ
ಬರಡು ಜೀವನವಾಗಿಹುದು
ಹೊಸ ನೆನಪಾಗಿ ಬಾ
ಹೊಸ ಕನಸಾಗಿ ಬಾ

ಬಾ ಚೇತನ ನನ್ನೊಳಗೂ
ನಿಶಕ್ತಿ ತುಂಬಿಹುದು
ಹೊಸ ಜೀವಸತ್ವವಾಗಿ ಬಾ
ಹೊಸ ಲೋಹ ತುಂಬು ಬಾ

ಬಾ ಮಳೆಯೆ ಚಿಟಪಟಿಸು
ಬಿರುಕು ಬಿಟ್ಟಿದೆ ಮನಸ್ಸು
ಹೊಸ ನೀರಾಗಿ ಬಾ
ಹೊಸ ಮೊಳಕೆಯೊಂದನ್ನು ತಾ

ಬರೀ ಬ್ರಹ್ಮ ಹೊಸ ಹಣೆಬರಹವಾ
ಎಲ್ಲೋ ಮಸಿ ಅಚ್ಚಿ ಅಳಿಸಿರುವೆ
ಹೊಸ ಅಕ್ಷರವಾಗಿ ಬಾ
ಹೊಸ ಶೈಲಿಯಾಗಿ ಬಾ

ಬಾ ಸೂರ್ಯ ಉದಯಿಸು
ಇರುಳು ತುಂಬಾ ಸೋತಿಹುದು
ಹೊಸ ಕಿರಣವಾಗಿ ಬಾ
ಹೊಸ ಬದುಕನ್ನು ತಾ

ಬಾ ಸಾವೇ ಸಂಭವಿಸು
ಬದುಕು ಸುಟ್ಟು ಬೆಂದಿಹುದು
ಹೊಸ ಚಿತೆಯಾಗಿ ಬಾ
ಹೊಸ ಅಗ್ನಿಯನ್ನು ತಾ

~ ಸಂಜು ~

Saturday, February 4, 2012

ಗೌಡತಿ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ
ಹಿರಿಯರು ನಡೆಸಿದಂತೆ ನಡೆದೇ
ಚಿಕ್ಕ ಮಗುವಿನಂತ ಮನಸ್ಸು
ಕಾಣಲಿಲ್ಲ ದೂಡ ಕನಸು
ಸಸಿ ಬೆಳೆದು ಗಿಡವಾಯಿತು
ಮನಸ್ಸು ಮೊಳಕೆಯೆಲ್ಲೆ ಇತ್ತು
ಮದುವೆಯೆಂತೆ ಹಬ್ಬ ಬಂತು
ಎಲ್ಲರ ಸಡಗರ ನನ್ನೊಂದಿಗಿತ್ತು
ಎನೊ ದೊಡ್ಡ ಹಬ್ಬದಂತೆ
ಸಿಂಗರಿಸಿಕೊಂಡು ನಾನು  ನಿಂತೆ
ಮಂಚ ಹಂಚಿಕೊಂಡ ಮೆಲೆ
ತಿಳಿದದ್ದು ಇವನು ಗಂಡನೆಂದು
ಅಂತ ಮುಗ್ದ ಹೆಣ್ಣಿಗೆ ಇದು ತರವೇ
ಹೆಳು ದೇವರೇ
ಯಾರ ಕೇಳಲಿ ಎನು ಮಾಡಲಿ
ಒಂದು ತಿಳಿಯದಾಯಿತು ಮನದಲ್ಲಿ
ಇನ್ನು ಆಟ ಮುಗಿದೆಲ್ಲವೆಂದು
ಆಟದಂತೆ ಕಣ್ಣ ಮುಚ್ಚಿ ನಡೆದೇ ಮುಂದೆ
ವರ್ಷ ಕಳೆಯಲಿಲ್ಲ ಇನ್ನು
ನನ್ನ ಮಡಿಲಲ್ಲಿ ಒಂದು ಗೊಂಬೆ
ನನ್ನ ಮನಸ್ಸು ಕೇಳಲಿಲ್ಲ
ಪ್ರೀತಿ ಎಂತೊ ತಿಳಿಯಲಿಲ್ಲ
ನಾನು ಗೌಡತಿ ಹಾಗೆ ಹೋಗಿದ್ದೆ

Thursday, February 2, 2012

ನತದೃಷ್ಟ

ನನ್ನ ಒಳಗೆ ನೂರಾರು
ದ್ವಂದ್ವ ಯುದ್ದ ನಡೆದಿರಲು
ಪದಗಳಿಗೆ ಪದ ಹುಡುಕುತ್ತ
ತಪ್ಪುಗಳಿಗೆ ಸರಿ ಹುಡುಕುತ್ತ..

... ಗಣಿತಕ್ಕೆ ಮಿತಿ ಇಲ್ಲ
ಶುನ್ಯಕ್ಕೆ ಬೆಲೆ ಇಲ್ಲ..
ಕೂಡಿ ಕಳೆಯುವುದಕ್ಕೂ
ಮನದಲ್ಲಿ ಅಂಕಿಗಳಿಲ್ಲ

ಸಿರಿವಂತ ಭಾಷೆ ಇದು
ನನ್ನೊಳಗೂ ಅಣಕಿಸುವುದು
ಕಡೆದು ಒಡೆದು ನಿಂತಿಹುದು.
ಬುದ್ದಿ ಹೀನ ನಾನು ಪಂಡಿತನ ಪರಿ ನನಗೆ ಸಲ್ಲದು..

ಮಣ್ಣ ಹೊತ್ತು ಹಾಕಲಿಲ್ಲ
ಸಗಣಿ ಬೆರಣಿ ಆಗಲಿಲ್ಲ
ಕೊಡಲಿಗೆ ಸೀಳು ಕಾಣಲಿಲ್ಲ
ಸುತ್ತಿಗೆಯ ಹೊಡೆತಕ್ಕೆ
ಬಿರುಕು ಬಿಟ್ಟ ಮನ ಶಿಲೆ ಆಗಲಿಲ್ಲ

ಗುರು ಬೇಕು ಶಿಷ್ಯನಿಗೆ
ಪೆಟ್ಟು ಬೇಕು ಕೈ ಗಿಣ್ಣಿಗೆ
ಬುದ್ದಿ ಬೇಕು ದೀನನಿಗೆ
ಒಲಿವಳು ಆ ಕನ್ನಡಾಂಬೆ
ಶ್ರದ್ದೆ ಇಟ್ಟ ಬುದ್ದಿವಂತನಿಗೆ

ನತದೃಷ್ಟ
ಸಂಜು..

Wednesday, February 1, 2012

ಬರೆಯಬೇಕೆಂದಿದ್ದೆ

ಬರೆಯಬೇಕೆಂದಿದ್ದೆ ನಾನು ಬದುಕಿದ್ದೇನೆ ಅವಳಿಲ್ಲದೆ ಎಂದು ..
ಲೆಕನಿ ಎತ್ತುವು ಮೊದಲೇ ಕಣ್ಣ ಹನಿ ಜಾರಿ 
ಖಗದ ತೆವೆಗೊಂಡಿತು 

ನೆನಪುಗಳಿಗೆ ಎಂತಹ ಬೇದಭಾವ 
ಸ್ನೇಹಿತರು ಬಂದರೆ ನಗಿಸುವುದು
ಪ್ರೇಯಸಿ ಬಂದರೆ ಆಳಿಸುವುದು

ಅವಳು ನನ್ನ ಬಿಟ್ಟು ಹೋದಾಗ
ಒಡೆದ ಹೃದಯವು ದೈರ್ಯ ತಂದುಕೊಂಡಿತು
ಅಂದುಕೊಂಡೆ ನಾನು ನಿಬಹಿಸುವೆನೆಂದು
ಅಳಾದ್ ಕಣ್ಣು ಮರೆಮಾಚಲು ಬಿಡಲೇ ಇಲ್ಲ

sanju