Wednesday, June 27, 2012

ನೀನೇ ಸಾಕಿದ ಮರಿ ಗಿಳಿ


    ನೀನೇ ಸಾಕಿದ  ಮರಿ ಗಿಳಿ

 ಮನದಾಳದಲ್ಲಿ ಅವಿತಿದ್ದ ಸಾವಿರ ಭಾವ
ಒಮ್ಮೆಲೆ ಪುಷ್ಟಿಗೊಂಡಿತು
ರಮಿಸಿ ಪೊಶಿಸಿ ಬೆಳೆಸಿತು ನಿನ್ನ ಒಲವು
 
ಕಾಣೆ ನಾ ಬದುಕು ಬವಣೆ
ಎಲ್ಲ ಕ್ಷಣ ಮನ ಹಗುರ 
ಮರೆಸಿ ಮುದ್ದಿಸಿ  ಓಲೈಸಲು ನಿನ್ನ ಪ್ರೀತಿ ಮಧುರ

ಹೊಳಪಿಲ್ಲದೆ ಅವಿತಿದ್ದ ಮಣಿಯು ನಾ
ಸೀರಿದೆ ಇಂದು ಮುತ್ತಿನ ಮಣಿ ಹಾರ  
ತನ್ನ ಒಡವೆಯಂತೆ ಒರೆಸಿ ಅಲಂಕರಿಸಿದ ನಿನ್ನ ಪ್ರೇಮ ಅಪಾರ  

ಮನೆಯಂತೆ ಮನ ಸಿಂಗರಿಸಿ   
ಅಚ್ಚುಕಟ್ಟಾಗಿ ಸ್ವಚ್ಚದಿಂದ ಸುಂದರ ರಂಗೋಲಿ ಇಟ್ಟವಳು ನೀ
ಬುದ್ದಿ ಹೀನದಿ ಮತಿಬ್ರಮಣೆಯಿಂದ ಕೊಳಕು ಮಾಡಿದ
ನೀನೇ ಸಾಕಿದ ಮರಿ ಗಿಳಿಯು ನಾ 
ಕೊಂಚ ಕ್ಷಮೆ ತೋರು
ಎಲ್ಲಿ ಹೋಗಲಿ ನಿನ್ನ ಆಸರೆ ಇಲ್ಲದೆ
ಈ ಗಿಳಿ ಅನಾಥ ದೊಡದಿರು

~ ಸಂಜು ~

ಭೇಟಿ


    ಭೇಟಿ
    ಪ್ರೇಮಿಯ ನಾಲ್ಕು
    ದಿನದ ಭೇಟಿ
    ಶುರುವಾಯಿತು
    ನೆನಪುಗಳು ಕೋಟಿ
    ದಿನಕ್ಕೊಂದರಂತೆ
    ಎಣಿಸಿ ಕೂತರು
    ತಿಳಿಯಲೇ ಇಲ್ಲ ಈ
    ವರ್ಷಗಳ ಘತ ಉರುಳಿದ್ದು
 ~ ಸಂಜು ~

ಕುಡುಕ

  ಕುಡುಕ

ಇಲ್ಲೊಬ್ಬ ಕೊಂತವನೆ
ಹೆಂಡದ ಅಂಗಡಿ ಮುಂದೆ
ಮುಖ್ಯಮಂತ್ರಿ ಆಗ್ತಿನಿ
ಓಟು ಹಾಕ್ರಿ ಅಂತವನೆ
ಕೈನಾಗೆ ಸೀಸೆ ಹಿಡ್ಕೊಂಡೆ

ಇವ್ನಗೆ ಎನು ಬಂದೈತೆ
ನಿಸಾ ತಲಿಗೆ ಎರೈತೆ
ಆಡ್ಡಡ ತೊರಾಡ್ತ
ಆಗಾಗ್ಗೆ ತಲೆ ಒದುರ್ತ
ಆಶ್ವಾಸನೆ ಬೇರೆ ಕೊಡ್ತವನೆ
ಉಪ್ಪಿನಕಾಯಿ ಚಪ್ಪರಿಸಿಕೊಂಡೆ

ತೊದಲುತಾನೆ ಮಾತಾಡ್ತಾ
ಮೈಮೆಗೆ ಉಗ್ಗಕೊಳ್ತ
ನಾ ರೊಡು ಮಾಡಿಸಿತಿನಿ
ಬಿದಿ ದೀಪ ಹಾಕಿಸ್ತಿನಿ
ಚರಂಡಿ ಮಾಡಿಸ್ತಿನಿ
ಸರ್ಕಾರಿ ಕೊಳಯನಾಗೆ
ಮಾತ್ರ ಸರಾಯಿ ಬರೊ ಹಂಗೆ

ಮಾಡ್ತೀನಿ ಅಂತಾವ್ನೆ
ಮೋರಿನಾಗೆ ಬಿದ್ದಕೊಂಡೆ
ಪೊಲಿಸ್ನವರಿಗೆ ಒದಿತೀನಿ
ಲಂಚ ಕೇಳೊರಿಗೆ
ಮಾನ ಹಾರಜ್ ಹಾಕ್ತೀನಿ
ಇಸ್ಕೊಲ್ನಾಗೆ ಕನ್ನಡ
ಬೇಡ ಬೇಡ ಅಂದ್ರೆ

ಬಾಂಬ್ ಇಟ್ಟು ಉಡಾಯಿಸ್ತೀನಿ
ಇಂಗ್ಲೀಶ್ನಾಗೆ ಏನಾದರೂ
ಟಸ್ ಪುಸ್ಸು ಅಂದ್ರೆ
 ಕೈ ಕಾಲು ಮುರಿತಿನಿ
ನನ್ನ ಸಹವಾಸಕ್ಕೆ ಬಂದ್ರೆ
 

ಇಲ್ಲೊಬ್ಬ ಕೊಂತವನೆ
ಹೆಂಡದ ಅಂಗಡಿ ಮುಂದೆ
ಮುಖ್ಯಮಂತ್ರಿ ಆಗ್ತಿನಿ
ಓಟು ಹಾಕ್ರಿ ಅಂತವನೆ
ಕೈನಾಗೆ ಸೀಸೆ ಹಿಡ್ಕೊಂಡೆ

~ ಸಂಜು ~


ನಿನಗಿಂದು ಬೇಡವಾದೆನೆ ನಾನು


    ನಿನಗಿಂದು ಬೇಡವಾದೆನೆ ನಾನು

ಒಂದು ಎರೆಡು ಕವಿತೆಗಳ ಕವಿ ನಾನು
ಒಂದು ಎರೆಡು ದಿನದ ಬದುಕಿನವನು
ಒಂದು ಎರೆಡು ದಿನದ ಕಥೆ ನಾನು
ಪರದೆ ಸರಿದರು ಮುಗಿಯದ ಹಾಡು ನಾನು

ಸಂಬಂಧಗಳು ಕ್ಷಣದಲ್ಲಿ ಬದಲಾಗುತ್ತವೆ
ಈ ಜೀವಾ ಆ ಕ್ಷಣದಲ್ಲಿ ಸಾಯುವುದಿಲ್ಲ
 ಕಟ್ಟಿದ ಕನಸಿನ ನೆನಪುಗಳು ಸಾಯುವುದಿಲ್ಲ
ಒಂದು ಹೂವಿನ ಪ್ರತಿ ಹೊಸ ನಗು ನೀನು
ಆ ಹೂವಿನಲ್ಲಿ ನಿನ್ನ ಮೊಗವ ಹೇಗೆ ಮರೆಯಲಿ ನಾನು
ಪ್ರತಿ ಕ್ಷಣದ ಅ ನೆನಪು ಹೇಗೆ ಮರೆಯಲಿ ನಾನು

ನನ್ನ ಜೀವನದ ಪ್ರಾಣ ಪಕ್ಷೀ ನೀನು
ಅದನ್ನೆ ಹೊತ್ತೊಯಿದು ಹಾರಿದೆ ನೀನು
ನಿನ್ನ ಕೈ ಹಿಡಿದು ನಾ ಬಾಳಬೇಕು
ಇಲ್ಲವೆ ಅ ಕೈಯಿಂದಲೇ ವಿಷವನು ಕೊಡು
ನಿನ್ನ ಹೃದಯದಲಿ ನನಗೆ ಜಾಗ ಕೊಡು
ಇಲ್ಲವೆ ನನ್ನ ಬಡಿತವನ್ನು ನಿಲ್ಲಿಸಿಬಿಡು

ನನ್ನ ಉಸಿರಿನಲ್ಲಿ ಜೀವಾ ಕಣವಾಗು
ಇಲ್ಲವೆ ಒಂದೇ ಸರಿ ಉಸಿರಾ ನಿಲ್ಲಿಸಿಬಿಡು
ಒಮ್ಮೆ ಪ್ರೀತಿಯಂಬ ನನಗೆ ಜೀವಾ ಕೊಡು
ನಾನು ನಂಬಿಕೆಯಂಬ ಪ್ರಮಾಣ ಕೊಡುವೆ
ನನಗೆಂದು ಕೇಳಿದ ದೇವರ ವರವನ್ನು
ನಿನಗೆ ಧಾರೆ ಎರೆದು ಕೊಡುವೆನು ನಾನು

~ ಸಂಜು ~

ಪಾಪ ಪ್ರಜ್ಞೆ

    ಪಾಪ ಪ್ರಜ್ಞೆ

ನಿಜವಾದ ನೋವು
ಒಂಟಿ ಎನಿಸಿದ ಬಾಳು
ಪ್ರೀತಿ ಕಳೆದುಕೊಂಡು
ಸ್ನೇಹ ಕಳೆದುಕೊಂಡು
ಭಾವುಕನಿಗೆ ಘೋರ ಶಿಕ್ಷೆ
ಮಾಡಿದ ಪಾಪ ಸುಳ್ಳು
ಕಪಟ ನಾಟಕ
ಪ್ರತಿ ಕ್ಷಣವೂ ನಾಕ
ಬೇಡಿ ಕೊಳ್ಳುವ ಸಜೆ
ಕಾಡುವ ಪಾಪ ಪ್ರಜ್ಞೆ 
ಸಾವಿಗೊ ಮೀರಿದ ಶಿಕ್ಷೆ
ಪ್ರೀತಿ ಸ್ನೇಹ ಇಲ್ಲದ ಬದುಕು
ಪಶ್ಚಾತಾಪದಲ್ಲಿ ಬೆಂದು
ಕ್ಷಣ ಕ್ಷಣಕ್ಕು ಸಾವು
ಅಕ್ರಂಧನದ ಮೊರೆ ಕೇಳಲಿಲ್ಲ
ಅತ್ಮಹತ್ಯೆಗೆ ಧೈರ್ಯ ಸಾಲಲಿಲ್ಲ
ಕಾಯುತ್ತಿರುವೆ ಕ್ಷಮೆ ಕೋರಿ 
ನಿನ್ನ ಸೊಕುವ  ಧೂಳ್ ಆಗುವೆ
ಹಟ್ಟದಿರು ಒದರಿ ಕೊಡವಿ
ಪ್ರೀತಿ ಪ್ರೇಮಕ್ಕೆ ಕಳಂಕ ನಾನು
ಅದನ್ನೆ ಪಡೆಯಲು ಮಾಡಿದ
ಕರ್ಮದ ಪಾಪಿ ನಾನು
ಕ್ಷಮೆ ಸಿಗದ ಬದುಕು
ನಿಲ್ಲಿಸಿ ಬಿಡುವ ಆಸೆ ಸಾಕು
ಭೂಮಿ ಒಳಕರೆದಿಕೊ ನನ್ನ
ಗಾಳಿ ನಿಂತು ಬಿಡು
ನನ್ನೊಳ ಸೇರುವ ಮುನ್ನ
ಸಾಗರನೆ ನಿನ್ನ ರಬಸಕ್ಕೆ
ಅಪ್ಪಿಕೊ ನನ್ನ   
ಸಾವಿನ ಆಸೆ ಬುಗಿಲೆದಿದ್ದೆ
ಬದುಕು ನರಕ ಸಕಾಗಿದೆ
ತಿರಸ್ಕಾರದ ಬದುಕು ಕ್ಷಣ ಕ್ಷಣಕ್ಕು ಕೊಂದಿದೆ

~ ಸಂಜು ~

ದೂರವಾಣಿ


 ದೂರವಾಣಿ

ನೀ ದೂರ
ನಾ ದೂರ
ಎಣೆದಿದೆ ತಂತಿ ದಾರಾ
ಕೆಲವೊಮ್ಮೆ ಮೌನಗಳು
ಮಾತಾಡಿದರೆ
ಕೆಲವೊಮ್ಮೆ ಮಾತುಗಳಿಗೆ
ತಂತಿ ಬಾರ  
ಮಾತಿಗೆ ಮಾತು ಪೊಣಿಸುತ್ತ
ಘಂಟೆಗಳು ಉರುಳಿದರೂ
ಇನ್ನು ಇಳಿಯದ
ಮನಸ್ಸಿನ ಬಾರ
ಕರೆ ಇಟ್ಟ ಮೇಲೆ
ಎಲೆಲ್ಲು ಕೇಳಿದ
ಮಾತುಗಳು
ಒಮ್ಮೆಲೆ ನಿಂತು
ಬಿಕೋ ಎಂಬ ಭಾವ
ತರಂಗಾಂತರಗಳ
ವರ್ತಾಲಾಪ 
ಮುಗಿಯದ ಮಾತುಗಳ
ಸಮಯ ಅಭಾವದ ದಿಕ್ತಟ
ದೂರವಾಣಿ ನಿನಗೆ
ನಮೋ ನಮಃ

~ ಸಂಜು ~

ಕೂಸು ಬಡವಾಯಿತು (ಕಣ್ಣೀರು ಹನಿ )


  ಕೂಸು ಬಡವಾಯಿತು (ಕಣ್ಣೀರು ಹನಿ  )

ನಿ ಕೇಳು ನನ್ನ ಮಾತು
ಬೇಡ ನಮಗೆ ಈ
ಪ್ರೀತಿ ಪ್ರೇಮ
ನಿನ್ನ ಈ ಹಠದಿಂದ

ಕಳೆದುಕೊಂಡ ದುಃಖದಿಂದ
ನೀ ಪಡುವ ಪಾಡು
ನನಗೆ ಹುಚ್ಚು
ಮನಸ್ಸು ಚಿಂತೆಗೂಡು

ಒಲ್ಲೆ ನಾ ಒಲ್ಲೆ
ಸುಮ್ಮನಿರು ನೀ ಏನು ಬಲ್ಲೆ ?
ರಕ್ತ ಗಾಳಿಗೆನನ್ನ
ಜೀವದ ಇರುವಿಕೆಯ ಭಾವ
ಈ ಪ್ರೀತಿ ಪ್ರೇಮ

ಪ್ರತಿ ಬಾರಿ
ನಮ್ಮಿಬ್ಬರ ಜಗಳದಿಂದ
ನಮ್ಮ ಕುಸು ಅನಾಥ
ಕಣ್ಣೀರು ಹನಿ 


~ ಸಂಜು ~

ನೀನಿಲ್ಲದ


   ನೀನಿಲ್ಲದ

ನೀನಿಲ್ಲದ ಈ ಕ್ಷಣ ಬೇಡ
ನೀನಿಲ್ಲದೆ ನಾಳೆ ಹುಟ್ಟುವುದೆ ಬೇಡ
ನಿನ್ನ ಹೆಸರಿಲ್ಲದೆ ಈ ಉಸಿರು ಬೇಡ
ಆ ಉಸಿರಿನ ಎದೆ ಬಡಿತ ಬೇಡ
ನೀ ನೋಡದ ಈ ರೋಪ ಬೇಡ
ನೀನಿಲ್ಲದ ಅ ನೆನಪೇ ಬೇಡ
ನೀನಿಲ್ಲದ ಅ ಕನಸು ಬೇಡ
ನಿನ್ನ ಆಸರೆ ಇಲ್ಲದ ಈ ನೆರಳು ಬೇಡ
ನೀ ಜೊತೆಗಿರದ ಈ ಸಂಜೆ ಬೇಡ
ಕಾಡಿ ಕಾಡಿ  ಕೊಲಬೇಡ
ನೀನಿಲ್ಲದ ಈ ಬಾಳು ಬೇಡ 
ನೀನು ಅಳದ ಆ ಸಾವು ಬೇಡ
ನೀನಿರದ ಈ ಬದುಕು ಬೇಡ

~ ಸಂಜು ~

ಬ್ರಾಂತು


  ಬ್ರಾಂತು

ಮನಕೇಕೊ ಬ್ರಾಂತು
ನಿಷ್ಕಪಟವಾಗಿ ಮುಗ್ಧವಾಗಿ
ಶೋಧಕದೀಪ ಹಿಡಿದು
ಬೆದಕಾಟ ಒಳಿತು
ಹೊರ ಸ್ತರ ಮಾತ್ರ
ಪ್ರೀತಿ ಪ್ರೇಮ ಮುಸುಕು
ಒಳಗೆಲ್ಲ ಚೆಚ್ಚರಿಕೆಯ
ಕೌಶಲ ಬಲೆ
ಕಣ್ಣು ಕುರುಡು
ಮಾಯ ಮೋಹ
ಸುಟ್ಟು ಬೂಧಿ ಆದರೂ
ಹಾರಿ ಹಾರಿ
ಅವಳ ಮನೆಯ
ಕಸವಾಗುವ ಆಸೆ  

~ ಸಂಜು ~

ನಿನ್ನ ಒಲವ ಸಿರಿ


   ನಿನ್ನ ಒಲವ ಸಿರಿ

ನಿನ್ನ ಅಂದಕ್ಕೆ ಈ ಕಣ್ಣೆರೆಡು ಸಾಲದು
ಅ ಅಂದವ ಸವಿಯಲು
ಅ ಸೊಬಗ ಸೆರೆ ಹಿಡಿಯಲು   
ಶೃಂಗಾರದ ರಸ ಕಾವ್ಯ ಬಣ್ಣಿಸಲು  

ಕ್ಷಣ ಕ್ಷಣಕ್ಕೂ ಮಿಟುಕಿಸುವ ರಪ್ಪೆ ಎರೆಡು  
ತಡೆ ನಾ ನಿನ್ನ ನೋಡಲು 
ಅದರ ಆಳದಲ್ಲಿ ಮುಳುಗಲು 
ಅಮೃತ ಪಾನದ ನೆಶೆಯಲಿ ತೇಲಲು
 
ನಿನ್ನ ಒಲವ ಸಿರಿ
ಪಡೆದ ನಾನು ಧನ್ಯಾ ಸರಿ
ನಿನ್ನ ಎದೆಯ ಸಿರಿವಂತಿಕೆ  
ಬಿಕ್ಷು ನಾನು  ಕೋಟಿ ಬಾಗ್ಯ ಕೊಟ್ಟಿದೆ
ಇನ್ನೆಷ್ಟು ಕಾಯಲಿ ನಿನ್ನ ಸೇರಲು
ಮಂಧಾರ ಪುಷ್ಪದ ಸೌಂದರ್ಯ ಸವಿಯಲು 

ನಿನ್ನಲ್ಲಿ ಕಂಡೆ ಪ್ರೀತಿ ಪ್ರೇಮ ಔದಾರ್ಯ
ಕರುಣೆ ಸ್ನೇಹದ ಮೂರ್ತಿ ನೀನು
ಕೈ ಎರೆಡು ಜೋಡಿಸಿ ನಮಿಸುವೆನು
ನಿನ್ನ ಪಡೆದ ನನ್ನ ಈ ಜನ್ಮ ಧನ್ಯ 
ಹಾಡಿದಷ್ಟು ಸಾಲದು

ಮನದಾಳದ ಒಲುಮೆಯ ಭಾವ ಚಿಮ್ಮಿಸಾಲು
 

~ ಸಂಜು ~

ನನ್ನ ತಂದೆ


    ನನ್ನ ತಂದೆ

ನಮ್ಮ ಮನೆಯ ತಲೆ ಮನುಷ್ಯ
 ತಲೆ ಮಾರುಗಳಿಗೆ ಪುಣ್ಯ ಪುರುಷ
 ತಂದೆ ತಾಯಿ ಅವಿದ್ಯಾವಂಥರಾದರು
 ಬಿಡದೆ ಕಲಿತೆ ತನ್ನಂಬಿಕೆಯಿಂದ
 ಕಷ್ಟ ಪಟ್ಟು ಬೀದಿ ದೀಪಗಳಲ್ಲಿ
 ಓದಿ ಪಡೆದ ಪ್ರೌಡ ಶಿಕ್ಷಣ
 ತುಮಕೂರಿನ ಮಹದೇವ
 ಪುಸ್ತಕದ ಅಂಗಡಿಯಲ್ಲಿ
 ಅಂಗಲಾಚಿ ಕೇಳಿ ಪಡೆದು
 ಪುಸ್ತಕಗಳು, ಅವರಿಗೆ
 ಒಳನಮನ ಕೊಟ್ಟು
 ಪಡೆದ ಕಲೆ ಪದವಿ
 ನಿಷ್ಟಾವಂತ ಅಧಿಕಾರಿಯಾಗಿ
 ಬ್ರಷ್ಟರಿಗೆ ಸಿಂಹ ಸ್ವಪ್ನವಾಗಿ
 ವರ್ಗಾವಣೆಯಾಗದ ಊರಿಲ್ಲ
 ಅಂದು ಸಾಲ ಮಾಡಿ
 ಕಟ್ಟಿದ ಗೂಡು ಇಂದು
 ನಮಗೆ ಅಶ್ರಯ ಬೀಡು
 ವಿದ್ಯೆ ಕಲಿಸಲು ನೀ ಪಟ್ಟ ಪಾಡು
 ನಮಗೆಲ್ಲ ಶಿಸ್ತಿನ ಮೊದಲ ಗುರು
ಜೀವನದ
ಏರು ಪೆರಿಗೆ ಎಡೆ ಕೊಡದೆ
 ನೀನು ನಡೆಸಿಕೊಂಡು ಬಂದ
 ದಾರಿ ನಮ್ಮ ಬಾಳ ಬೆಳಕು ಇಂದು
 ಬಾಪುಜಿನಗರದಲ್ಲಿ ತನ್ನ
 ಲೆಖನಿಯ ಶಕ್ತಿಯಿಂದ
 ನೀರು ,ದಾರಿ ದೀಪ, ರಸ್ತೆ , ಒಳಚರಂಡಿ
 ಸರ್ಕಾರದಿಂದು ಮುಂಜುರು ಮಾಡಿಸಿ
 ಅಲ್ಲಿನ ಗಾಂದಿಯೆಂದೆ ಪ್ರಖ್ಯಾತಗೊಂಡು
ನಮಗೆ ಹೆಮ್ಮೆ ತಂದ ತಂದೆ ನೀನು
ನಿನಗೆ ನನ್ನ ನಮನ


ಸಂಜು ~

ವರವಾಯಿತು


   ವರವಾಯಿತು

ವ್ಯಥೆ ನೊರೊಂದು ಮನದಾಳದಲ್ಲಿ
ಕಥೆ ಮುಗಿದ ಹಾದಿ ಸಾಗಿದೆ
ಲೋಕ ಬೊಗಗಳೆಲ್ಲ ನಿರ್ಜೀವ
ಸತ್ತ ಹೆಣದ ರಾಶಿ ಆಕಡೆ ಇಕಡೆ
ಎಲ್ಲಿ ನೋಡಿದರು ನೋವು
ಅಕ್ರಂದನ ಚೀರಿ ಚೀರಿ  ಹದ್ದು
ಮಾಂಸ  ಕಿತ್ತು  ಕಿತ್ತು ಚೆಲ್ಲಾಡಿದೆ
ಈ ಕರಾಳ ಕ್ಷಾಮ ನನ್ನ ಎದೆಯೊಳಗೆ
ಎಲ್ಲ  ಬಿಟ್ಟು ಹೊದ ಈ ಪಾಳು ಮನೆ 
ನಂಬಿಕೆ ಎಂಬ ಸಣ್ಣ ಕಿಡಿ ಇಲ್ಲ
ವಿಶ್ವಾಸ ಎಂಬ ಸಣ್ಣ ಗೂಡು ಇಲ್ಲ
ನಿರ್ಜೀವ ಯಾತ್ರೆ ಸಾಗಿದೆ
ಈ ಬೀಕರ ನೀರವತೆ ಚುಚ್ಚಿ ಚುಚ್ಚಿ
ಕೊಲ್ಲುವ ಸಾದನಗಳೆಷ್ಟೋ
ದಿಕ್ಕ ಅರಿಯದ ದಾರಿ ಹೊಕ್ಕ ನಾನು
ಪಕ್ಕ ಬಾರದಿರಿ ನೆರಳು ಸೊಕಿದರು
ಕೊಳೆತು ನಾರುವ ಸೋಂಕು
ಸುಟ್ಟು ಬಸ್ಮವಾದ ಎಲ್ಲ ಆಸೆಗಳು
ಶೂಲಕ್ಕೆ ಏರಿಸುವ ತಾಪ
ನಡು ನೆತ್ತಿಮೇಲೆ
ಬಾಳು ಅನಾಥ ಗೋಳು
ಆಗೋ ಒಂದು  ಹನಿ ಬಿತ್ತು
ಅಮೃತದಷ್ಟೆ ಸುಗಂಧ ಉರಿಯುತಿದ್ದ
ಎಲ್ಲ ಗಾಯಗಳಿಗೆ ಲೇಪವಾದ ಮಜ್ಜನ
ಎಲ್ಲೋ ಆಗಸದಲ್ಲಿ ಒಂದು ದೇವಿ ಪ್ರಕಟ
ಪ್ರೀತಿ, ಪ್ರೇಮ , ವಿಶ್ವಾಸ, ನಂಬಿಕೆ
ತನ್ನ ಕೊಡದಲಿ ಹೊತ್ತು ತಂದಿಹಳು
ಅವಳ ಹಸ್ತದಿಂದ ವರವಾಯಿತು
ಜೀವಾ ಕಳೆ ತೊಂಬಿದ ಭಾವ  
ಬಾಳಿಗೆ ಆಸರೆ ನಿನ್ನ ಸ್ವರ
ದಿನಕ್ಕೊಮ್ಮೆ ನಿನ್ನ ದರ್ಶನ
ಹೊಸ ರಂಗೊಲಿಗೊಂದು ಹೊಸ ಚುಕ್ಕಿ
ಹೊಸ ಮಾಮರ ಹೊಸ ಕೋಗಿಲೆ
ಮತ್ತೆ ಹಾಡಿದೆ ಹೊಸ ಶೃಂಗಾರ ರಾಗ
 
~ ಸಂಜು ~

ಶಿವನಿಗೆ ಅರ್ಪಣೆ


     ಶಿವನಿಗೆ ಅರ್ಪಣೆ

ಮಹಾದೇವ ಮಹಾಕಾಯ
ಮಂಜುನಾಥ ಶಂಕರಾಯ
ಮುರುಡೇಶ್ವರ ಶಿವಮಯ
ಜಗದೀಶ ಸುರೆಶಾಯ
ಚಂದ್ರಶೇಕರ ಮಹಾಮಾಯ
ಪಾರ್ವತಿ ಪತೇ ಚಂದ್ರಧರಾಯ
ಗಂಗಾಧರ ಶಶಿಧರಾಯ
ವಿಶ್ವನಾಥ ವಿಷೆವೆರ್ಶ್ವರಾಯ
ಗಜಚರ್ಮಾಂಬರ ತ್ರಿಶುಲಾಯ
ಕೈಲಾಸವಾಸ ನಾಗೆಶವರಾಯ
ಒಂಕಳೆಶವರ ಜಂಗಮಯ
ಆತ್ಮಲಿಂಗ ಅಂತಾತ್ಮರಾಯ
ಶಿವಪ್ಪ ಶಿವಲಿಂಗಾಯ
ಈಶ್ವರ ಮಹೇಶ್ವರಾಯ
ಬಕ್ತನೆಂಟ ಕರುಣಕರಾಯ
ನೀಲಕಂಠ ನಂಜುಂಡೆಶ್ವರಾಯ
ನಂಧಿ ವಾಹನ ನಂಧಿಶ್ವರಾಯ
ಗಣೇಶ ಪಿತ ಗಣೆಶ್ವರಾಯ
ಶಣ್ಮುಗ ಪಿತ ಸರ್ವೆಶವರಾಯ
ಗೌರಿಮನೋಹರ ಗಿರಿಶಾಯ
ಅಂಬರೀಷ ಅಮರನಾಥಯ
ಮಹಾದೇವ ಮರ್ತ್ಯೊಂಜಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
~ ಸಂಜು ~

ಕನ್ನಡಾಂಬೆ ನಿನಗೆ ಶರಣು


ಕನ್ನಡಾಂಬೆ  ನಿನಗೆ ಶರಣು


ತಾಯಿ ಮಾತೆ ವಿಧ್ಯಾದಾತೆ

ಕನ್ನಡಾಂಬೆ  ನಿನಗೆ ಶರಣು

 ನಿನ್ನ ಮಡಿಲಿನ ಕಂದ ನಾನು

ಅಕ್ಷರದ ಅನ್ನ ನೀಡು

ವರವ ಕೊಡು ಧೀನ ನಾನು

ಕಲಿವ ಹಸಿವು ತಾಳಲಾರೆ

ಬೇಗ ಒಲಿದು ಹಸಿವು ನೀಗು

ಕೈ ಬಿಡದೆ ಕಾಪಾಡು ಮಾತೆ



ತಾಯಿ ಮಾತೆ ವಿಧ್ಯಾದಾತೆ

ಕನ್ನಡಾಂಬೆ  ನಿನಗೆ ಶರಣು



ಕರುನಾಡ  ರಕ್ಷಕಳು ನೀನು

ಕನ್ನಡ ಮಕ್ಕಳ ಶಿಕ್ಷಕಳು ನೀನು

ಲಕ್ಷ ಮಕ್ಕಳಲ್ಲಿ ನನಗೂ ಒಂದು

ಜಾಗ ನೀಡು ತಿದ್ದಿ ನಡೆಸು

ಮೊದಲ ಹೆಜ್ಜೆ ತೊಡರಿದರು

ಕೈ ಹಿಡಿದು ನಡೆಸು ಮಾತೆ

ತಾಯಿ ಮಾತೆ ವಿಧ್ಯಾದಾತೆ

ಕನ್ನಡಾಂಬೆ  ನಿನಗೆ ಶರಣು

ನಮ್ಮೂರೆ  ಅಂಧ ನಮ್ಮವರೆ ಚೆಂದ

ಕನ್ನಡ ಸುಸ್ವಾರಮೃತ ಚೆಂದ

ನಮ್ಮೆಲರ ಸಿರಿ ನಾಡು ಕರ್ನಾಟಕ ನೆಲೆ ಬೀಡು

ಸಾಹಿತ್ಯ ಸಂಸ್ಕೃತಿಗೆ ಹೆಸರು ನಮ್ಮ ಕರುನಾಡು

ಹಸೀರು ಹುಟ್ಟಾ ನಿನ್ನ ಚೆಲುವು

ಕಣ್ಣಿಗೆ ಹಬ್ಬ ನೊಡೀದಷ್ಟು ಸಂತಸವು

ಅಮ್ಮ ತಾಯಿ ಎಂತಹ ಕರುಣೆ ನಿನ್ನ ಒಲವು

ನನ್ನ ತೊದಲು ನುಡಿಗಳೆಲ್ಲ ನಿನ್ನ ಚರಣಕ್ಕೆ


ತಾಯಿ ಮಾತೆ ವಿಧ್ಯೆದಾತೆ

ಕನ್ನಡಾಂಬೆ  ನಿನಗೆ ಶರಣು



~ಸಂಜು~