Tuesday, November 6, 2012

ಖಾಲಿ ಪುಟದ ಸರ್ಗ


ಖಾಲಿ ಪುಟದ ಸರ್ಗ

ಬರೆಯಲಾರೆ ಏನನ್ನು
ಮನದಲ್ಲಿ ಇಂದು
ಬಿರುಗಾಳಿ ಎದ್ದು
ನಿರ್ನಾಮವಾಗಿ
ಪಾಳುಬಿದ್ದ ಉರಿನಂತೆ
ಶ್ಮಶಾನದಂತೆ ಮೌನವು
ದೃಷ್ಟಿ ಹಾಯಿಸದಷ್ಟು ಬಯಲು
ತಂಪು ನೆರಳ ಒಂದು ಸ್ಥಳವು
ಕಾಣುತ್ತಿಲ್ಲ ತಲೆ ಮರೆಸಲು
ಸುಡು ಬಿಸಿಲಿಗೆ ಇಳಿವ
ಬೆವರಿಗೆ ತೊಯಿದ ಮನವು
ಯಾಕಿಂತ ಬರ ಸಿಡಿಲು
ಬಂದೆರಗಿತು ಬದುಕಿಗೆ
ಕನಸೊಂದೆ ಕಟ್ಟಿದ
ಆ ಆಸೆಗಿತ್ತ ಶಾಪವೇ
ಏಳು ಬಿಳಿನ ಬಗೆ ಇಲ್ಲ
ಬದುಕ ತಲ್ಲಣಿಸಿದ ಹೊಡೆತಕ್ಕೆ
ತಿಳಿಯಾಗುವ ಸೂಚನೆ ಇಲ್ಲ
ಕೆಸರು ಬಿದ್ದ ಕೊಳದಲ್ಲಿ
ಸುಟ್ಟ ಬಾದೆಯಷ್ಟೇ
ನೋವಿನಲ್ಲಿ
ನರಳುತ್ತಿದೆ ಮನವು
ಎಲ್ಲಿಗೊಯಿತು ಆ ಕಾರ್ಮೋಡ
ತೊಯಿದು ತಂಪೆರೆಯುವ
ಸುಳಿವು
ಕಾಣದಾಯಿತು ಆ
ಕಾಮನಬಿಲ್ಲು
ಅ ಹೊಸ ಕನಸಿಗಿತ್ತ
ಹಸಿವು
 
ಸಂಜು

Monday, November 5, 2012

ನಿನ್ನೊಲವ ಸಿರಿವಂತಕೆ

ನಿನ್ನೊಲವ ಸಿರಿವಂತಕೆ

ಬಂದಿದೆ ಸಿರಿವಂತಕೆ
ಆಗಿಹೆ ಕೋಟ್ಯಾಧಿಪತಿ
ತೆಲಿಹೆ ಐಶ್ವರ್ಯದ
ಅಮಲಿನಲ್ಲಿ
ನಿನ್ನೊಲವಿನ ಪುಟ್ಟ
ಗುಡಿಸಿಲಿನಲ್ಲಿ
ನಿನ್ನ ಪ್ರೀತಿಯ
ಬೊಗಸೆ ಅಂಬಲಿಯಲ್ಲಿ
ನಿನ್ನ ಆಸೆರೆಯ
ಚಿಂದಿ ಬಟ್ಟೆಯಲ್ಲಿ
ನಿನ್ನ ಎದೆ ಗುಡಿಯ
ಪುಟ್ಟ ಹಣತೆಯಲಿ
ಬಡತನವಿದ್ದರು
ಚಿಂತೆಯಿಲ್ಲ
ನಿನ್ನ ಒಲುಮೆ ಒಂದು
ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚುವೆ
ನೀ ಜೊತೆಗಿರಲು
ನನ್ನ ಬದುಕಿಗೆ
ಪ್ರೀತಿ ದೇವತೆ ನೀನು
ಮತ್ತೇನನ್ನು ಕೇಳಲಿ
ವರವ ಆ ದೇವರಲ್ಲಿ

ಸಂಜು

 

Saturday, November 3, 2012

ಹೂ ಬಳ್ಳಿಯ ಬೆಡಗಿ


   ಹೂ ಬಳ್ಳಿಯ ಬೆಡಗಿ
 
ಬಾಳೆಯ ಗಿಡಕ್ಕೆ ಬಾಗಿದ
ಹೂ ಬಳ್ಳಿಯ ಬೆಡಗಿ
ನೀಳಾ ರೇಷ್ಮೆಯ ನುಣುಪು
ಸೊಂಪಾದ ಕೇಶರಾಶಿ
ನೋಡಲೆನಿತು ಚೆಂದ
ನಿನ್ನ ಸೊಬಗು ಷೋಡಶಿ
ಮನಸೂರೆ ಮಾಡುವ
ನಿನ್ನ ಮೈಮಾಟವೇನು
ನಿನ್ನ ನೋಡುತಲೇ
ಕಣ್ಣಿನಲ್ಲಿ ಕನಸುಗಳ
ಹುಟ್ಟಿಸುವ, ನಿನ್ನ
ರೂಪ ಲಾವಣ್ಯವೇನು
ನಿನ್ನ ನೋಟದಲ್ಲಿ
ಕೊಲೆಮಾಡುವ ಆ ತಿಕ್ಷ್ಣವೇನು
ನಿನ್ನ ನೋಟಕ್ಕೆ ಬಲಿಯಾದ
ಬಲಿ ಪಶುವು ನಾನು
ನಿನ್ನಂದವ ಹೊಗಳಲೇ
ಇಂದು ಕವಿಯಾದೆ ನಾನು

ಸಂಜು

ಗೆಳತಿ ನಿನ್ನ ಮೋಹದ ಬಗೆ


  ಗೆಳತಿ ನಿನ್ನ ಮೋಹದ ಬಗೆ

ಗೆಳತಿ ನಿನ್ನ ಈ ಪ್ರೀತಿಯ
ರೀತಿ ಮಾಡಿದ ಮೋಹದ ಬಗೆ
ಮನವರಳಿತು ಹೃದಯ ಪುಟಿದೆದ್ದು
ಹಾಡಿದೆ ಇಂದು
ಸುಖವೆನ್ನಲೇ ಕುಶಿಯನ್ನಲೇ
ನನ್ನ ಭಾಗ್ಯಕ್ಕೆ ನಲಿಯಲೇ
ಯಾವ ರಾಗದಿ ಹಾಡಿದರು
ನನ್ನ ಸಂತೋಷವನ್ನು ಬಿಚ್ಚಿ
ತೋರಲಾರದು
ನೀ ನನಗಿತ್ತ ಪ್ರೀತಿಯ ಉಡುಗೊರೆಗಳ
ಎಷ್ಟೆಂದು ಬಣ್ಣಿಸಲಿ ನೀ ಕೊನೆಗಿತ್ತ
ಆ ನೋಟಕ್ಕೆ ಮನಸೋತಿದೆ
ನೆನೆಯುತ್ತ ಸವಿಯುತ್ತ
ಮನದ ಉಲ್ಲಾಸಕ್ಕೆ
ತೆರೆ ಸರಿದಿದೆ ಸಂಭ್ರಮಕ್ಕೆ
ಎಷ್ಟೊಂದು ಒಲವೆ ನಿನಗೆ ನನ್ನ ಮೇಲೆ
ಈ ಜನುಮ ಸವೆದರು ತೀರಿಸಲಾರೆ
ನನಗೆಂತ ಅದೃಷ್ಟ ನೀ ತಂದೆ
ನಿನ್ನ ಮೊಗರವಿಂಧದ
ಪೂರ್ಣ ಚಂದ್ರನ ತೋರುತ್ತ
ನನ್ನ ಬಾಳಿಗೆ ಎಂದೂ
ಮಾಸದ ಬೆಳಧಿಂಗಳಾಗಿ ಬಂದೆ
ನಿನ್ನ ನಯನಕ್ಕೆ ಸೋಲಲೇ
ನಿನ್ನ ಮುಗುಳುನಗೆಗೆ ಮಣಿಯಲೇ
ನಿನ್ನ ಮೌನದೆ ತೋರಿದ
ನೂರು ಮುಖಭಾವಕ್ಕೆ
ನಾ ಸೋತು ಶರಣಾಗಲೇ
ಒಮ್ಮೊಮ್ಮೆ ನಿನ್ನ ಸೌಂದರ್ಯ ನೆನೆಯುತ್ತ
ಕನಸಲ್ಲಿ ಬಣ್ಣ ತುಂಬುವೆ
ಒಮ್ಮೊಮ್ಮೆ ನಿನ್ನ ಮಾತು ನೆನೆಯುತ್ತ
ತನ್ನೊಳಗೆ ನಗುತ್ತ ನಲಿವೆ
ಬಣ್ಣಿಸಲಾರೆ ನುಡಿಯಲಾರೆ
ಹಾಡಲಾರೆ ಮನದಲ್ಲಾಡೋ
ನೂರಾರು ಭಾವಗಳ
ಹೇಗೆ ನಾ ತೋರಲೇ
ನಾ ನಿನ್ನ ಮನಸಾರೆ ಪ್ರೀತಿಸುವೆ
ನಿನ್ನಿಲ್ಲದೆ ಬಾಳಲಾರೆ
ನಿನ್ನ ಒಲವಿಲ್ಲದೆ
ಬದುಕಲಾರೆ
ಇಷ್ಟು ಹೇಳಿ ನನ್ನ
ಕವನ ಮುಗಿಸಬಲ್ಲೆ
ಆದರು ಮುಗಿಯಲಾರದಷ್ಟು
ಪ್ರೀತಿ ಕೊನೆಯಾಗಲಾರದಷ್ಟು
ಮಾತು ನನ್ನ ಮನದಾಳದೆ
ಇನ್ನು ಇದೆ
 
ನಿನ್ನ ಪ್ರೀತಿಯ ಸವಿ ಕನಸಲ್ಲಿ
ಬಾಳುತ್ತಿರುವ ಈ ನಿನ್ನ

~ಸಂಜು ~

ನನ್ನಮ್ಮ


ನನ್ನಮ್ಮ
ಬಂದೆನು ಭೂಮಿಗೆ
ನಿನ್ನ ಮಡಿಲಾಗಿ
ನಿನ್ನ ಕುಶಿಯ ಕಡಲಾಗಿ
ಆಳುತ್ತ ನಗುತ್ತ
ಹಠ ಮಾಡಿದೆ ನಿನ್ನ
ಪ್ರಿತಿಗಾಗಿ ಮಮತೆಗಾಗಿ
ಬುದ್ದಿ ಕಲಿಸಿದೆ
ಪಾಠ ಕಲಿಸಿದೆ
ಬದುಕಿನ ಹೊಸ ಹೊಸ
ಅಧ್ಯಾಯ ತೆರೆಸಿದೆ
ನನ್ನ ಏಳಿಗೆಗಾಗಿ.

ನನಗೆ ಜನ್ಮವಿತ್ತು
ನೀನು ಮರು ಜನ್ಮ ಪಡೆದೆ
ಶುಭಾಶಯ ನಿನಗು
ನನ್ನದೇನಿಲ್ಲ ಅಸ್ತಿತ್ವವಿಲ್ಲಿ
ಧರೆಗೆ ತಂದು ಹೆಸರು ಕೊಟ್ಟು
ಜನ್ಮವಿತ್ತ ದೇವತೆ ನೀನು
ಅಮ್ಮ ನೀನು ನನಗೆ ಅ ದೇವನೇ
ಕೊಟ್ಟ ವರ ನಿನಗಿಂತ ನನಗೆ
ಬೇರೆ ಉಡುಗೊರೆ ಬೇಕೇ

ನಿನ್ನ ನೆನಪಿನಲ್ಲಿ ಅಮ್ಮ ಈ

~ಸಂಜು ~

Thursday, November 1, 2012

ಮಡದಿಯೇ , ನನ್ನ ಜೀವದ ಗೆಳತಿಯೇ


ಮಡದಿಯೇ , ನನ್ನ ಜೀವದ ಗೆಳತಿಯೇ
*********************************
 
ಮಡದಿಯೇ , ನನ್ನ ಜೀವದ ಗೆಳತಿಯೇ
ನಿನ್ನೊಲುಮೆಯಾ ಕಣ ಕಣ
ನನ್ನುಸಿರ ಕ್ಷಣ ಕ್ಷಣ ಹಿಡಿದೇ
ಸಾಗರನ ಆಳದಿ ಮುಳುಗಿ ಏಳಬಲ್ಲೆ
ನಿನ್ನೊಲುಮೆಯ ಸಾಗರದಿ
ಮುಗುಳುವುದು ಅಷ್ಟೇ ಬಲ್ಲೆ
ಮೇಲೆ ಏಳಲು ಒಲ್ಲೆ
ನಿನ್ನಾ ಆಲಿಂಗನದಲ್ಲಿ
ಎಲ್ಲ ಮರೆತು ಇರುವ ಆಸೆ
ನಿನ್ನ ತೋಳಾ ತೆಕ್ಕೆಯಲಿ
ನೂರು ನೋವ ಮರೆವ ಆಸೆ
ಮನದಲ್ಲಿ ನೆಲಸಿರು ಪ್ರೇಮ ದೇವತೆ
ನನೆದೆಯಲ್ಲಿ ವಾಸಿಸಿರುವ
ಪ್ರೇಮ ಪಕ್ಷಿಯೇ ನನ್ನ ಆರಗಿಣೆಯೇ
ಕೈ ಹಿಡಿದು ಜೊತೆ ನಡೆದು
ಬಾಳ ಸಾಗಿಸುವ ಆಸೆ
ನನ್ನ ಮನೆಯ ಅಂಗಳದಿ
ನಿನ್ನ ಪ್ರೀತಿಯ ಪುಟ್ಟ ರಂಗೋಲಿಯ
ನೋಡಿ ನಲಿವ ಮಹದಾಸೆ
ಮೂಡಣದಿ ದಿಬ್ಬವನೇರಿ
ಈ ರವಿಯಾ ಹೊನ್ನ ಕಿರಣ
ನನ್ನ ಮನೆಯ ಬೆಳಗಿದಂತೆ
ನಿನ್ನೊಲುಮೆ
ಬೆಳಧಿಂಗಳ ಶಶಿಯಾ ಬೆಳ್ಳಿ
ಕಿರಣ ನನ್ನ ಎದೆಗೆ ತಂಪೆರಗುವಂತೆ
ನಿನ್ನೊಲುಮೆ
ನನ್ನ ಬಾಳು ಹಸನಾಗಿ
ಮೊಳಕೆ ಹೊಡೆದು
ಹೊಸ ಪೈರು ಚಿಗುರಿದ
ಭೂಮಿಯಂತೆ
ನಿನ್ನೊಲುಮೆ
ನಿನ್ನ ಪ್ರೀತಿ ಎಂತು ವಿಶೇಷ
ನೀನಾಡೋ ಪ್ರೀತಿ ಮಾತೆ ನನ್ನ
ಬದುಕಿಗೊಂದು ಅವಶೇಷ
ಮನದಲ್ಲಿ ಹಾಡೋ ಮಾತೆ ನೂರು
ತುಟಿ ಬಿರಿದರೆ ಉಸಿರಿಸುವುದು ಬರಿ
ನಿನ್ನ ಹೆಸರು
ನನ್ನೊಲವಿನ ಮಂದಾಕಿನಿಯೇ
ಜೀವ ಜಲವ ಸುರಿಸು ಬಾರೆ
ನೀನಿಲ್ಲದೆ ನನಗಿಲ್ಲ ಇ ಧರೆ

ಸಂಜು
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

 
ಕನ್ನಡದ ಮಾತೆ
ಕರುನಾಡ ದೇವತೆ
ಕನ್ನಡಿಗರು ನಾವೆಂಬ
ಅಭಿಮಾನವೆಲ್ಲಿ
ಪರ ಭಾಷಿಕರ
ಹಾವಳಿ ಇಲ್ಲಿ
ನಿನ್ನದೇ ನೆಲದಲ್ಲಿ
 
ದೂರ ದೇಶದಲ್ಲಿ
ಎಲ್ಲೋ ಕೇಳಿದರೆ
ಸಂತೋಷದಲ್ಲಿ
ದನಿ ಕೇಳಿ ಓಡಿದರೆ
ಅವನಿಗೂ ಆಂಗ್ಲದ
ಅಭ್ಯಾಸವಿಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಕನ್ನಡ ಕಲಿಸುವ
ಗುರುಗಳಲ್ಲಿ
ಹೋದರೆ
ಗುಡ್ ಮಾರ್ನಿಂಗ್
ಅಂತಲೇ ಶುರು ಮಡಿದ
ಅಭ್ಯಾಸವಿಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಕನ್ನಡಮ್ಮ ನೀನು
ನಮ್ಮ ಅಮ್ಮ
ಅಂತಲೇ ಕೊಂಡಾಡುವರು
ವರುಷಕೊಮ್ಮೆ ಇಲ್ಲಿ
ನಿನದೆ ನೆಲದಲ್ಲಿ
ವರ್ಷವಿಡಿ ಪರಬಾಷೆಯಲ್ಲಿ
ವ್ಯವಹರಿಸುವ
ಅಭ್ಯಾಸವಿಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಐಟಿ ಬಿಟಿ ಗಳ
ಕಂಪನಿಗಳಲ್ಲಿ
ದೊಡ್ಡ ದೊಡ
ಮಹಲಿನಲ್ಲಿ
ಕಪ್ಪು ಗಾಜಿನ
ಪರದೆಯ ಹಿಂದೆ
ಕನ್ನಡ ನುಡಿದರೆ
ಕಕ್ಕಾ ಬಿಕ್ಕಿಯಾಗಿ
ನೋಡುವರು
ಅಪಮಾನಿಸುವಂತೆ ಅಲ್ಲಿ
ಪರಬಾಷೆಗಳು
ಯಾವುದೇ ಆಗಲಿ
ಉತ್ತರಿಸುವರು
ಅವರದೇ ಶೈಲಿಯಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಬರೆಯುತ ಹೋದರೆ
ಈ ಕವನದಲ್ಲಿ
ಮುಗಿಯುವುದಿಲ್ಲ
ಅವಾಂತರಗಳು ಇಲ್ಲಿ
ನಿನ್ನ ಮೇಲೆ ಅಭಿಮಾನ
ಏನೇನು ಅಂತ ಹೇಳಲಿ
ಕನ್ನಡಿಗರು ನಾವೆಲ್ಲಾ
ಕನ್ನಡ ತಾಯಿಯ
ಕನ್ನಡ ಬಾಷೆಯ
ಅಭಿಮಾನವಿರಲಿ


ಜೈ ಕನ್ನಡಾಂಬೆ
ಜೈ ಕರ್ನಾಟಕ ಮಾತೆ
ಕನ್ನಡ ರಾಜ್ಯೋತ್ಸವ ಶುಭಾಶಯಗಳು


ಸಂಜು

ಮುಕ ಮನದ ಮೌನ ರಾಗ

ಮುಕ ಮನದ ಮೌನ ರಾಗ
----------------------------
ಇತ್ತು ನಿನ್ನ ಪ್ರೀತಿಯಲ್ಲಿ
ಒಂದು ಬಗೆಯ ಐಚಿಕ
ಇಷ್ಟ ಬಂದಾಗ
ನೆನಪಿಸಿಕೊಳ್ಳುವೆ
ಇಷ್ಟ ಬಂದಾಗ
ಮರೆಯುವೆ
ಬಹಳ ಚೆನ್ನಾಗಿ
ನಿನಗೆ ತಿಳಿದಿದೆ
ನನ್ನ ಓಲೈಸಲು
ಇಷ್ಟ ಬಂದಾಗ
ನಗಿಸುವೆ
ಇಷ್ಟ ಬಂದಾಗ
ಅಳಿಸುವೆ
---------------------------
ತೊರೆದೆ ನನ್ನೇ ನಾನು
ನಿನ್ನ ಪ್ರೀತಿಗಾಗಿ
ಮರೆತೇ ಎಲ್ಲ ನನ್ನ ಒಲವು
ಇಂದು ಬೇಸರವಾಗಿದೆಯ
ನಿನ್ನ ಪ್ರಿತಿಯಲ್ಲೇ ಹುಚ್ಚ
ನಾನು
ಅರ್ಥವಾಗದಿದ್ದರೆನಂತೆ
ಹುಚ್ಚನೆಂದು ಕಲ್ಲು ಹೊಡೆ
ನನ್ನ ಒಲವಿನಿಂದ
ನಿನ್ನ ದಾರಿ
ಕೊಚ್ಚೆಯಾಗಿದರೆನಂತೆ
ಸ್ವಚ್ಚ ಮಾಡಿ ಒಗೆದು ನಡೆ
--------------------------
ಮಣ್ಣು ಮುಚ್ಚಿದ
ಗೋರಿಯಲ್ಲಿ
ಯಾರು ಹುಡುಕುವುದಿಲ್ಲ
ಮಣ್ಣ ಕೆದಕಿಯು
ಆವನ ಪ್ರೀತಿಯ

ಎಂದೋ ಸತ್ತು
ಬದುಕುತ್ತಿರುವೆ
ಇನ್ನು ನೀನು ಹುಡುಕಲಿಲ್ಲ
ಬದುಕಿರುವ ರೀತಿಯ
---------------------------
ನನ್ನ ಪ್ರೀತಿ ಅರ್ಥೈಸಿಕೊಳ್ಳೆ
ನನ್ನ ಭಾವ ತಿಳಿದುಕೊಳ್ಳೆ
ಮನದ ಆಳಲು ಸ್ವಲ್ಪ ಕೇಳೆ
ಹೃದಯವಿಂದು ಹರಿದ ಹಾಳೆ
ಪ್ರೀತಿ ಕೊಟ್ಟು ಬದುಕಿದವನು
ಪ್ರೀತಿ ಮರೆತು ಬದುಕಲಾರೆ
ಪ್ರೀತಿ ಕೊಟ್ಟು ಬದಕು
ಕಲಿಸಿದವಳು
ನಿನ್ನ ಬಿಟ್ಟು ಹೇಗೆ ನಾನೇ
ಬದುಕ ಹೇಗೆ ನಾನು ಕಾಣೆ
---------------------------
ಇರಲಿ ಬಿಡು
ಈ ಪುಸ್ತಕ
ನಿನಗೆ ಉಪಯೋಗದಲ್ಲ
ಇದರಲ್ಲಿ ಬರೀ
ನಂಬಿಕೆ ಬರವಸೆಗಳ
ಬಗ್ಗೆಯ ಬರೆದಿದೆಯಲ್ಲ

ಸಂಜು