Sunday, April 22, 2012

ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ

ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ
*******************************
ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ
ಜೊತೆಗೂಡಿ ಹಾಡಿದ ಹಾಡು ನನ್ನ ಉಸಿರಲ್ಲಿರುವಾಗ ...............2
ಆ ಸ್ವರಗಳು ನನ್ನ ಜೀವನ ರಾಗವಾಗಿರಲು
ನಿನ್ನ ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ

ಆ ಬೆಳದಿಂಗಳ ರಾತ್ರಿ ತಂಪನೆಯ ಚಳಿ ಗಾಳಿ
ನಾವಾಡಿದ ಪ್ರೀತಿ ಸಲ್ಲಾಪಗಳ ಆಲಾಪ .....................2
ಈ ಚಿತ್ರಗಳೆಲ್ಲ ಕಣ್ಣ ತುಂಬಲು
ನಿನ್ನ ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ

ನೀನಿಟ್ಟ ಕಮಲ ಇನ್ನು ಬಾಡಿಲ್ಲ ಕೊಳದಲ್ಲಿ
ಅವಳಲ್ಲಿನ್ನೂ ನಿನ್ನ ಮುಖಭಾವ ತೊರುತಿರಲು .............2
ಹತ್ತಿರ ಹೋದಂತೆ ಮಾಯವಾಗಲು
ನಿನ್ನ ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ

ನಿನ್ನ ನೋಡದೆ ಒಂದು ಸಂಜೆಯೂ ಕಳೆದಿಲ್ಲ
ನಿನ್ನ ಮಾತಿನ ಉಸಿರು ತಂಗಾಳಿ ತರದೆ ಇರಲಿಲ್ಲ ...............2
ಸುಳ್ಳಾಗಿದ್ದರೆ ಕೇಳು ನಿನ್ನ ಹೃದಯವನ್ನು ಒಮ್ಮೆ
ಅದು ಎಲ್ಲ ಕಥೆಯ ಮತ್ತೆ ನೆನಪಿಸಲು
ನಿನ್ನ ನೆನಪಿನ ಅಂಗಳದಿಂದ ಹೇಗೆ ಹೊರಗೆ ಬರಲಿ

~ಸಂಜು~

ಅಹಂಕಾರಿ

ಅಹಂಕಾರಿ
*************
ಕಂಡ ದೇವರುಗಳಿಗೆ
ಕೆಂಡದ ಸೇವೆ ಮಾಡಿ
ಗಳಿಸಿದ್ದು ಬರಿ ಇದ್ದಿಲು ಬೂದಿ
... ಪಕ್ವವಾದೆನೆಂಬ ಅಹಂಕಾರ
ಭೂಪನು ಮೆರೆದೊಳ್
ಪರಿಪೂರ್ಣತೆಗೆ ಮಸಿ ಚುಕ್ಕೆ ನೀನು
ತರ್ಕಪರ್ಕಕ್ಕೆ ತಲೆ ದಂಡ ನಿನ್ನ ಅಭಿಮಾನ
ಸಲ್ಲದು ನಿನಗಿಂತ ಬಿಗುಮಾನ
ನೀನಾರೆಂಬುದ ಅರಿ
ನಿನ್ನ ಭಾಗ್ಯಕ್ಕೆ ತಲೆ ಬಾಗು
ಅಹಂಕಾರದ ದುರಾಭಿಮಾನಕ್ಕೆ
ಬಲಿ ಕೋಣದಂತೆ ತಲೆ ಬಾಗಬೇಡ
ನಾನು, ಅಹಂ, ಎಂಬುದ ತೊರೆದು
ಎಲ್ಲರೊಳಗೆ ನಾನು ನನ್ನಿಂದ ಏನಿಲ್ಲ
ಅಹಂಭಾವದಿ ಗಳಿಸಿದ್ದು , ಗೆದ್ದದ್ದು
ಎಲ್ಲವೂ ಕರಿ ಇದ್ದಿಲು ಬೂದಿಯೆ
ಗಾಳಿಗೆ ತೂರಿದ ಮೇಲೆ
ಮತ್ತೆಂದೂ ಕೆಂಡವಾಗದು ಬೂದಿ

~ಸಂಜು~

Saturday, April 21, 2012

ಕೋಟಿ ಕೋಟಿ ಪೊಜೆ ಫಲ ಕೊಟ್ಟಮೇಲೆ



ಕೋಟಿ ಕೋಟಿ ಪೊಜೆ ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......
*****************************
ನಿನ್ನೊಂದಿಗೆ ನನ್ನ ಬಾಳ ಹಾದಿ ಎಂದೋ ಸೇರಿದೆ
ನಿನ್ನ ಒಳಿತಿಗೆ ನನ್ನ ಪೂಜೆ  ದೇವರ ಸೇರಿದೆ
ಕೋಟಿ ಕೋಟಿ ಪೂಜೆ  ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ನಿನ್ನ ಸೇರುವ ಆಸೆಗಳಲ್ಲಿ
ನಿನ್ನ ಪ್ರೀತಿಯ ಹಕ್ಕಿನಲ್ಲಿ
ಅ ದೇವರ ಮೊರೆ ಹೊಕ್ಕಿರುವೆ
ನಿನ್ನ ಬೇಡಿರುವೆ
ಕೋಟಿ ಕೋಟಿ ಪೂಜೆ  ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ನಿನ್ನಿಂದ  ನಾ ಇಲ್ಲಿ ಬಾಳುತಿರುವೆ
ನೂರು ಆಸೆಗಳ ಕನಸು ಕಟ್ಟಿರುವೆ
ಒಂದು ಕ್ಷಣ ನಿನ್ನ ನಿನಪಿಂದ ಹೊರಗಿಲ್ಲ
ಯಾವ ಕ್ಷಣ ನಾ ನಿನ್ನ ಮರೆತರು
ಆ ಕ್ಷಣ ನಾ ಶಿಕ್ಷೆ ಬೇಡಿರುವೆ
ಕೋಟಿ ಕೋಟಿ ಪೊಜೆ ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ನಿನಗೆ ಎಲ್ಲ ತಿಳಿದಿದೆ
ನನ್ನ ಹೃದಯ ಪ್ರತಿ ಹಾಡು ಕೇಳಿರುವೆ
ನನ್ನೀ ಕಣ್ಣ ಒಮ್ಮೆ ಓದಿ ನೋಡು
ಕೊಂಚ ಮುನಿಸಿಕೊಂಡರು
ತುಸು ಬೇಸರಗೊಂಡರು
ನಿನಗಲ್ಲವೆ ಗೊತ್ತು
ನನ್ನ ಒಲಿಸಿ ಕೊಳುವ ಕಲೆ
ಕೋಟಿ ಕೋಟಿ ಪೊಜೆ ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ನಿನಗೆಲ್ಲ ಗೊತಿದೆ ಮನದ ತಳಮಳ
ನನ್ನೆಲ್ಲ  ಒಳ ಗೊಂದಲ
ಇಡಿ ರಾತ್ರಿ ನಿನ್ನದೆ ಹಂಬಲ
ಆರಿ ಆರಿ ಉರಿಯುವ ದೀಪದಂತೆ ಚಂಚಲ
ನಿದ್ರೆಗಳಲ್ಲಿ ಮಧ್ಯೆ ಮದ್ಯೆ   ಬೇಡಿದ ಎಚ್ಚರದಲ್ಲೆ 
ಕೋಟಿ ಕೋಟಿ ಪೂಜೆ  ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ಆಸೆಗಳ ಹಾಳೆಯ ಮೇಲೆ
ಹಣೆಬರದ ಮಸಿಕಡ್ಡೀಯಿಂದ
ನನ್ನೆಲ್ಲಾ ಭಾವಗಳು ಬಿತ್ತರಿಸಿದೆ
ಅರಿತಿಹೆನು ನಿನ್ನೆಲ್ಲ ಭಾವಗಳ
ನನ್ನಂತೆ ನೀನು ಭಾವುಕಳು
ನಿನ್ನೊಂದಿಗೆ ನನ್ನೆಲ್ಲಾ
ಭಾವ ಬೆರೆಸಿ ಬರೆಯುವ ಆಸೆ
ಕೋಟಿ ಕೋಟಿ ಪೂಜೆ  ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ನನ್ನದೇ ನೆರಳು ನೀನು
ನನ್ನೊಳಗು ಅವರಿಸಿರುವೆ ನೀನು
ಪ್ರತಿ ಕ್ಷಣ ನನಗೆ ಭಾಸವಾಗಿದೆ
ಮೇಣದಂತೆ ಉರಿದು ಹೋದೆ
ನಿನ್ನ ಒಳಿತಿಗೆ ದೇವರಿಗೆ ಅರ್ಪಣೆಯಾದೆ
ಕೋಟಿ ಕೋಟಿ ಪೊಜೆ ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......

ನೀ ನನ್ನ ಪ್ರೀತಿಸು ಪ್ರೀತಿಸದಿರು
ನಿನ್ನನೆ ಬೇಡುತಿರುವೆ
ಪ್ರತಿ ಪೂಜೆ  ನಿನಗೆಂದೆ ಈಸಲು  ಇಡುವೆ
ಕೋಟಿ ಕೋಟಿ ಪೂಜೆ  ಫಲ ಕೊಟ್ಟಮೇಲೆ
ನಿನ್ನ ನಾ ಪಡೆದಿರುವೆ .......
 
~ಸಂಜು~

Friday, April 20, 2012

ಉತ್ಸಾಹ

ಉತ್ಸಾಹ
***************
ಸಾವಿರ ಸಾವಿರ
ಆಸೆಗಳೆಲ್ಲ ನನ್ನ ಮುಷ್ಟಿಯಲ್ಲಿ ಇದೆ
ಆಗಸಕ್ಕೆ ಹಾರುವ ರೆಕ್ಕೆ ನನ್ನ ಎದೆಯಲಿದೆ
ಹೊಸ ಹರುಷದ ಗಾಳಿ ನನ್ನ ಉಸಿರಲಿದೆ
... ಗುರಿ ಸಾಧಿಸೋ ಹುಮ್ಮಸ್ಸು ರಬಸದ ಆಲೆಯೆಂತೆ ನುಗ್ಗಿದೆ
ಈ ಜೀವನದ ಪ್ರತಿ ಕ್ಷಣದಲ್ಲೂ ನಾನು ಬದುಕ ಬೇಕು
ಪ್ರತಿ ಕಣದಲ್ಲೂ ಸಂತೋಷ ತುಂಬ ಬೇಕು
ಪ್ರತಿ ಕ್ಷಣದಲ್ಲೂ ನಾನು ಬದುಕ ಬೇಕು

ನನಗಾಗೆ ಹುಟ್ಟಿದೆ ಹೊಸ ಉದಯ ನೇಸರ ,
ಕೊಟ್ಟಿದೆ ನನಗೆ ಜೈಸಬೆಕೆಂಬ ಆಶೆಯ
ಬದುಕಿಗೆ ಬಿದಿದ್ದೆ ಹೊಸ ಉಜ್ವಲ
ನನ್ನ ದಾರಿ ಆಯಿತು ಪ್ರಜ್ವಲ
ಈ ಜೀವನದ ಪ್ರತಿ ಕ್ಷಣದಲ್ಲೂ ನಾನು ಬದುಕ ಬೇಕು
ಪ್ರತಿ ಕಣದಲ್ಲೂ ಸಂತೋಷ ತುಂಬ ಬೇಕು
ಪ್ರತಿ ಕ್ಷಣದಲ್ಲೂ ನಾನು ಬದುಕ ಬೇಕು

ಬರುವ ಎಡರು ತೊಡರುಗಳಿಗೆ ಎದರಿಕೆ ಯಾಕೆ
ಬದುಕುವ ಮುಂಚೆಯ ಸಾಯುವುದು ಯಾಕೆ
ನೋವು ಕಷ್ಟಗಳಿಗೆ ಹೆದರಿ ಕುರುವುದು ಯಾಕೆ
ಹುಟ್ಟಿದ್ದೆವೆ ಏನಾದರೂ ಸಾಧಿಸುವುದಕ್ಕೆ
ಈ ಜೀವನದ ಪ್ರತಿ ಕ್ಷಣದಲ್ಲೂ ನಾನು ಬದುಕ ಬೇಕು
ಪ್ರತಿ ಕಣದಲ್ಲೂ ಸಂತೋಷ ತುಂಬ ಬೇಕು
ಪ್ರತಿ ಕ್ಷಣದಲ್ಲೂ ನಾನು ಬದುಕ ಬೇಕು

~ಸಂಜು~

ನನ್ನ ಎದೆಯ ಹಾಳೆಗಳಲ್ಲಿ ನಿನ್ನ ಹೆಸರ ಬರೆದಿರುವೆ

ನನ್ನ ಎದೆಯ ಹಾಳೆಗಳಲ್ಲಿ ನಿನ್ನ ಹೆಸರ ಬರೆದಿರುವೆ
ನಿನ್ನ ಆಸೆಯಲ್ಲಿ ಪ್ರತಿ ಹಾಡು ಬರೆದಿರುವೆ
ಕ್ಷಣ ಕ್ಷಣವೂ ನಿನ್ನ ಪ್ರೀತಿಯಲ್ಲೆ ಕಾಯುತ್ತಿರುವೆ
ನಿನ್ನ ಸ್ನೇಹ ಕಂಡಮೇಲೆ ತಿಳಿದದ್ದು
... ಪ್ರೀತಿಯಂಬ ಅಮೃತದ ಸವಿ ಕಂಡದ್ದು
ಪ್ರೀತಿಯಂಬ ಅಮೃತದ ಸವಿ ಕಂಡದ್ದು

ಹೃದಯದಲ್ಲಿನ ಪ್ರೀತಿ ಬಡಿತ
ನನ್ನೊಳಗಿನ ಸಾವಿರ ಆಸೆ ತುಡಿತ
ಆ ಅಸೆಗಳ ಪ್ರತಿ ಕನಸು
ಎಲ್ಲವೂ ನನ್ನ ನಿನ್ನ ಹತ್ತಿರ ತಂದಿವೆ ಹೊಸ ಸೊಗಸು
ನಿನ್ನ ಹತ್ತಿರ ತಂದಿವೆ ಹೊಸ ಸೊಗಸು

ಮರೆಯಲಾಗದ ಸವಿ ನೆನಪು
ಮುಗ್ದತೆಯ ನಿನ್ನ ಪ್ರೀತಿ ತಂಪು
ನನ್ನ ಉಸಿರಲ್ಲಿ ಒಂದಾಗಿದೆ
ಪ್ರತಿ ಉಸಿರು ನನ್ನ ಬದುಕಿನ ಸರಿಗಮವಾಗಿದೆ
ನಿನ್ನ ಸೇರಿ ಹೊಸ ರಾಗವಾಗಿ ಹಾಡಿದೆ
ನಿನ್ನ ಸೇರಿ ಹೊಸ ರಾಗವಾಗಿ ಹಾಡಿದೆ

ನನ್ನೀ ಕಣ್ಣುಗಳಲ್ಲಿ , ನನ್ನ ನೊಟದಲ್ಲಿ
ನನ್ನೀ ಪ್ರತಿಬಿಂಬದಲ್ಲಿ , ನನ್ನ ನೆನಪುಗಳಲ್ಲಿ
ನಿನ್ನೊಂದಿಗೆ ಬೆಸೆದು ಹೋಗಿವೆ
ಕಲ್ಪನೆಯಲ್ಲೆ ನನ್ನೀ ಜೀವನ ನಡೆದಿದೆ
ನಿನ್ನ ಸೇರುವ ಆಸೆ ಜೀವಾ ತುಂಬಿದೆ
ನಿನ್ನ ಸೇರುವ ಆಸೆ ಜೀವಾ ತುಂಬಿದೆ

ನನ್ನ ಎದೆಯ ಹಾಳೆಗಳಲ್ಲಿ ನಿನ್ನ ಹೆಸರ ಬರೆದಿರುವೆ
ನಿನ್ನ ಆಸೆಯಲ್ಲಿ ಪ್ರತಿ ಹಾಡು ಬರೆದಿರುವೆ

~ಸಂಜು~

ಮಲಗು ನನ್ನ ಮುದ್ದು ಮಗುವೆ


 ಚಿನ್ನದಂತ ತೊಟ್ಟಿಲಲ್ಲಿ, ಬಣ್ಣದ ಗಿಲಕಿಲಿ
ಮಲಗಿಸು ಎನ್ನ ಮುದ್ದು ಕಂದನ
ಸುಗಂಧದ ಸಂಬ್ರಾಣಿ ದೂಪವೆ,
ಕೆನ್ನೆಗೆ ಇಟ್ಟ ಕಪ್ಪು ಕಾಡಿಗೆ
... ಮಲಗಿಸು ಎನ್ನ ರಾಜಕುಮಾರನ
ಮೆತ್ತೆನೆಯ ಹಾಸಿಗೆಯ ಅರಳೆ,
ಚಿತ್ರದ ಮಲಗುಮೂಡೆ
ಬೆಚ್ಚನೆ ಮಲಗಿಸು ಎನ್ನ ಹಸು ಕಂದನ
ತಣ್ಣನೆಯ ಗಾಳಿಯೆ, ಗಂಧದ ಪರಿಮಳವೆ
ಮಲಗಿಸು ಎನ್ನ ಮುದ್ದು ಕಂದನ
ಈ ಹಾಡಿನ ರಾಗ, ನನ್ನ ಉಸಿರ ಸಂಗೀತವೆ
ಜೋ ಜೋ ಲಾಲಿ ಮಲಗಿಸು ಎನ್ನ ಕುಮಾರನ
ಬೆಳದಿಂಗಳ ಚಂದಮಾಮನೆ,
ತಳ ತಳಿಸುವ ನಕ್ಷತ್ರವೆ
ಮಲಗಿಸು ಎನ್ನ ಚಿತ್ತ ಚೊರನ
ಚಿನ್ನದಂತ ತೊಟ್ಟಿಲಲ್ಲಿ, ಬಣ್ಣದ ಗಿಲಕಿಲಿ
ಮಲಗಿಸು ಎನ್ನ ಮುದ್ದು ಕಂದಮ್ಮನ.
~ಸಂಜು~

Monday, April 16, 2012

ಪ್ರೀತಿ ಸರಸ ಪ್ರಲಾಪ

ಪ್ರೀತಿ ಸರಸ ಪ್ರಲಾಪ
************************
ನಿನ್ನ ತುಟಿಯ ಮೇಲಿನ ಒಂದು ಹನಿ ಜೇನು
ನನ್ನ ಹೃದಯ ದಾಹ ಹಿಂಗಿಸುವುದೇನು
ನಿನ್ನ ತನು ಬಳಸಿ ಹಿಡಿವ ಹಂಬಲವೇನು
ಮನ ಶ್ರುಂಗಾರ ಫಲಂಗ ಏರಿದೆ ಬರಲಾರೆಯ ನೀನು
...
ನುಣುಪು ಮೈಯ ಹಾಲು ತುಂಬಿದ ಕೊಡ
ಕಡೆದು ಉಬ್ಬಿದೆ ನಿನ್ನ ಕೆನ್ನೆ ಬೆಣ್ಣೆ ಮುದ್ದೆ
ಒಮ್ಮೆ ಸವರಿ ಮುತ್ತು ಕೊಡುವ ಆಸೆ ಕೂಡ
ಪ್ರತಿ ಮುತ್ತಿಗೆ ಸಾವಿರ ಅರ್ಥ ಹೇಳ ಬಂದೆ
ಹಣೆಯಿಂದ ಗಲ್ಲದ ವರೆಗೂ ನಾ ಹೇಳ ಬಲ್ಲೆ
ಮೊಗಾ ಮಂಧಾರಾ ತೋರೆಯ ಬಳಿ ಬಾರೆಯ

ಅದಾವ ಶಿಲ್ಪಿ ಕಡೆದ ನಿನ್ನ ಮಾಟ
ಬಳ್ಳಿಯಲ್ಲಿ ನಾ ನೊಡಲಿಲ್ಲ ಅ ಬಳುಕುವಾಟ
ಹೃದಯದೊಳಗೆ ದುಂಡು ಮಲ್ಲೆ
ಸುಘಂದ ಬಯಸಿ ಮನ ಸೆಳೆದಿದೆ ನಲ್ಲೆ
ಪ್ರೀತಿ ಉನ್ಮಾದ ಸುಖದ ಮತ್ತು
ತೇಲಿ ತೇಲಿ ಹೊದೆ ನಾನು
ನೀ ಕೂಟ್ಟಾಗ ಬಿಸಿಯ ಮುತ್ತು
ಮತ್ತೆ ಮತ್ತೆ ಬಯಸಿದೆ ಆ ಮತ್ತು
ತರಬಾರದೆ ನೀ ನಶೆ ತರಬಾರದೆ

ತೊಳ ಬಳಸಿ ಬಿಗಿದ ಅಪ್ಪುಗೆ
ಪ್ರತಿ ಕಣವು ಕಲೆತು ಬೆಚ್ಚಗೆ
ಹಾಲು ಜೇನು ಸೇರಿ ಅಮೃತ ಪಾನ
ನಾನು ನೀನು ಸೇರಿ ಶ್ರುಂಗಾರ ರಸ ಪಾನ
ತಣ್ಣನೆಯ ತೆಳು ಗಾಳಿಯಲ್ಲಿ
ಸಣ್ಣ ಬೆವರ ಸಾಲು ಹಣೆಯಲಿ
ತುಸು ಹೆದರಿಕೆ ತುಸು ಕಾತುರ
ಹೊಸ ಕಾಮನೆ ಒಳ ವತ್ತಡ
ತಾಳಲಾರೆ ಬಳಿ ಬಾರಲಾರೆಯ
ಸರಸ ತರಲಾರೆಯ
~ಸಂಜು~

Thursday, April 12, 2012

ಎಲೆಲ್ಲೂ ನೀನೇ ನನ್ನಲ್ಲೂ ನೀನೇ

ಎಲೆಲ್ಲೂ ನೀನೇ ನನ್ನಲ್ಲೂ ನೀನೇ
***********************
 ಕಣ್ಣೊಳಗೂ ನೀನು ಕಣ್ಣ  ಹೊರಗು ನೀನೇ
 ಮನದೊಳಗು ನೀನೇ ಮಾತಲ್ಲೂ  ನೀನೇ
 ನೆನೆದರೂ  ನೀನೇ ಬಾಕಿ ಎಲ್ಲ ಮರೆಸುವೆ ನೀನೇ
 ಉಸಿರಾಟವು ನೀನೇ , ಎದೆ ಬಡಿತವು ನೀನೇ
 ಕನಸಲ್ಲು ನೀನೇ , ನನಸಲ್ಲು ನೀನೇ
 ಜೀವವು ನೀನೇ ಭಾವವೂ ನೀನೇ
 ಬಂಧುವು ನೀನೇ ಬಳಗವು ನೀನೇ
 ನನ್ನೆಲ್ಲಾ ಯೊಚನೆ ನೀನೇ
 ನನಗೆಲ್ಲ ಸೊಚನೆ ನೀನೇ
 ನನ್ನೆಲ್ಲಾ ಕವನಗಳು ನೀನೇ
 ನನ್ನೆಲ್ಲಾ ಹಾಡುಗಳು ನೀನೇ
 ನನ್ನ ರಾಗವು ನೀನೇ ತಾಳವು ನೀನೇ
 ನಾ ಕೇಳುವ  ಸಂಗೀತವು ನೀನೇ 
 ನಾ ಹಾಡುವ ಸವಿ ಭಾವವು ನೀನೇ
 ನನ್ನೆಲ್ಲಾ ನೋವಿಗೆ ಮದ್ದು ನೀನೇ
 ನನ್ನ ಜೀವಾ ಸಂಜಿವಿನಿ ನೀನೇ
 ನನ್ನ ಉತ್ಸಾಹ ನೀನೇ ನನ್ನ ಸಂತೋಷ  ನೀನೇ
 ನನ್ನ ಜೀವನದ ಮುಂದಿನ ಹಾದಿ ನೀನೇ
 ಎಲ್ಲೆ ನಿಂತರು ದಿಕ್ಕು ಸೂಚಕ ನೀನೇ
 ಕಷ್ಟ ಕಾಲದಲ್ಲಿ ನನಗೆ ಸಾಂತ್ವನ ನೀನೇ
 ಎಲೆಲ್ಲೂ ನೀನೇ ನನ್ನಲ್ಲೂ ನೀನೇ
 ಎಲೆಲ್ಲೂ ನೀನೇ ನನ್ನಲ್ಲೂ ನೀನೇ
 
~ ಸಂಜು ~

Wednesday, April 11, 2012

ಕನಸು

ಕನಸು
ಸಾವಿರ ಮೈಲು ದೂರದಲ್ಲಿ ಒಂದು ಚಿಕ್ಕ ಕೊಣೆಯಲ್ಲಿ
ರಾತ್ರಿ ಮಲಗುವ ಹೊತ್ತು ನಿನ್ನ ನೆನಪು ಕಾಡಿತ್ತು
ನಿನ್ನ ಸವಿ ನೆನಪಿನಲ್ಲೆ ಒಂದು ಯೊಚನೆ ಬಂದಿತ್ತು
ನಿನ್ನ ಪ್ರೀತಿ ಅರಿಯಲು ನಾ ಎನು ಮಾಡಲಿ ಎಂತೊ
ಅದೆ ಯೊಚನೆಯಲ್ಲಿ ಮನಸು ನಿದ್ರೆಗೆ ಜಾರಿತ್ತು
ಮತ್ತೆ ಕನಸು ನನ್ನ ಎಚ್ಚರಿಸಿತು
ಎಂತಹ ಸುಂಧರ ಕನಸು ಹೇಗೆ ಹೇಳಲಿ ತಿಳಿಯದಾಗಿತ್ತು
ಮುಂದೆ ಹೇಳಲೇ ಬೇಡವೇ ಒಂದು ಯಕ್ಷಪ್ರೆಶ್ನೆಯಾಗಿತ್ತು
ಹುಂ ಧೈರ್ಯ ಮಾಡಿ ಹೇಳುವೆ ಕೇಳು
ನನ್ನ ಹುಡುಕಿ ನೀ ದೊರ ದೊರ ಅಲೆಯುತಿರುವೆ
ನನ್ನ ಮನೆಯ ವಿಳಾಸ ಕಾಣದೆ
ಆತುರದಲ್ಲಿ ನೀನು ಹುಡುಕುತಿರುವೆ
ಕೊನೆಗೆ ಎಲ್ಲೋ ಗುಂಪು ನೋಡಿ
ನನ್ನ ಬಗ್ಗೆ ಕೆಳುತಿರುವೆ
ನನ್ನ ಒಳಮನಕೆ ಕೇಳಿತು ನಿನ್ನ ಕೊಗು
ಎದ್ದು ಬಂದು ಬಿಡಲೇ ನಿನ್ನ ಸ್ವಾಗತಕ್ಕೆ ಎಂಬ ಅಳಲು
ಒಳಗೆ ಕೇಳಿದೆ ಆಳುವಿನ ಅಕ್ರಂಧನ ಚೀರು
ಓಡಿ ಬಂದು ನನ್ನ ಎದೆಯ ಮೇಲೆ
ಇಟ್ಟ ಒಂದೊಂದು ಹನಿ ಕಣ್ಣೀರು
ನನ್ನ ದೆಹದ ಮೇಲಿದ್ದ ಹೂವಿನ ಹಾರಗಳಿಗಿಂತ ಬಾರವಾಗಿತ್ತು
ಎಚ್ಚರ ವಾಗಿ ಮೈಯೆಲ್ಲಾ ಬೆವತಿತ್ತು

~ಸಂಜು~

ಆಸೆ


ಮೊಡದ ಮರೆಯಲ್ಲಿ ಶಶಿ


ಮೊಡದ ಮರೆಯಲ್ಲಿ ಶಶಿ
****************
ಅರೆ ಕ್ಷಣ ಮೊಡದಲ್ಲಿ ಮಯವಾದರೆ ತಾಳಲಾರೆನು
ಪ್ರತಿ ಅರೆತಿಂಗಳು ಇಡಿ ರಾತ್ರಿ ಕಾಣದಿರೇ
ಮನಸ್ಸು ಸ್ತಬ್ದ ನಿರ್ವಿಕಾರ ಭಾವ ಇಡಿ ಜಗತ್ತೆ ನಿಂತ ಅನುಭೂತಿ
ಕಿಂಚ್ಚಿತ್ತು ಕರುಣೆ ಬಾರದೆ ನಿನ್ನದೆ ನೈದಿಲೆ ಮೇಲೆ
ಹುಚ್ಚು ಹಿಡೀದಂತೆ ಆಗಿ ತಲೆ ಚಿಟ್ಟು ಹಿಡಿದಿದೆ
ಬಾ ...... ಒಲವೇ ....ಬಾ.....ಬೇಗ ಬಂದು ಬಿಡು
ನಿನ್ನೊಲುಮೆಯ ವಿರಹ ತಾಳಲಾರೆ
ಹೃದಯ ಹರಿದು ಚೀರಾಗುವ ಮುನ್ನ
ಮನವು ಕಣ್ಣೀರಿನಲ್ಲಿ ಕರಗಿ ನೀರಾಗುವ ಮುನ್ನ
ನಿನ್ನದೆ ಬೆಳದಿಂಗಳ ರಾತ್ರಿಗಳಲ್ಲಿ ನಲಿದವನು ನಾನು
ಇಷ್ಟು ಮುನಿಸು ಒಳಿತಲ್ಲ ನನ್ನ ಬಳಿ ಬರಬಾರದೇ
ಕಣ್ಣಿಗೆ ಚಿರ ನಿದ್ರೆ ತಾಗುವ ಮುನ್ನ

~ಸಂಜು~

ಕಾಲೇಜು

ಕಾಲೇಜು
***************
ಕಳೆದದ್ದು ಹಾಡಿದ್ದು ಕುಣಿದದ್ದು
ಕಲಿತದ್ದು ಪಡೆದದ್ದು ಕಳೆದು ಕೊಂಡದ್ದು
ನೂರಾರು ನೆನಪು ಕೊಟ್ಟ
ನಮ್ಮ ಈ ಕಾಲೇಜು
ಸಾವಿರ ಮುತ್ತು ಮಣಿಗಳ ಸುಂಧರ ಹಾರ
ಸ್ನೇಹ ಬಳಗ ನಮ್ಮೊಳಗೆ ಬಾಂದವ್ಯ ಅಪಾರ
ಮೊದಲ ದಿನದ ಅ ಸುಂದರ ನೆನಪು
ಇಂದು ನನಗೆ ಮರೆಯಲಾರದ ಸೊಗಸು
ನಮ್ಮ ಗುರುಗಳು ನಮಗಿಟ್ಟ ಪಾಟ
ಜೀವನೊದ್ದಕ್ಕು ನಮಗೆ ದಾರಿ ದೀಪಾ
ಜೀವದ ಗೆಳೆಯರ ಅಗಲಿಕೆ ನೋವು
ಇಂದು ನನಗೆ ಉಸಿರು ಬಿಗಿ ತಂದವು
ಮರೆಯದಿರಿ ನನ್ನ ಜೀವಾ ಗೆಳೆಯರೆ
ನಿಮ್ಮ ನೆನಪು ಸದಾ ಹೊತ್ತೊಯುವೆ
ನನ್ನ ಬಾಳಿನೂದಕ್ಕು
ಕಳೆದದ್ದು ಹಾಡಿದ್ದು ಕುಣಿದದ್ದು
ಕಲಿತದ್ದು ಪಡೆದದ್ದು ಕಳೆದು ಕೊಂಡದ್ದು
ನೂರಾರು ನೆನಪು ಕೊಟ್ಟ
ನಮ್ಮ ಈ ಕಾಲೇಜು

~ಸಂಜು~

ಬರಬಾರದೇ ನೀ ಬರಬಾರದೆ


ಬರಬಾರದೇ ನೀ ಬರಬಾರದೆ
----------------------------
ಸಾಗರದಾಚೆ ನಾನೆಲ್ಲೋ ಕುಳಿತು ಹಾಡಿದೆ ಸಾವಿರ ಭಾವ (ಗಂ)
ಸಾಗರದಾಚೆ ನಿನ್ನಲೆ ಅವಿತು ಹೋಗಿದೆ ನನ್ನೀ ಜೀವಾ (ಹೆ)

ಅನುರಾಗ ನನ್ನಲಿ ಮನೆಮಾಡಿ
ತವಕವಿತ್ತಿದೆ ನಿನ್ನ ಸೇರಲು ಜೊತೆ ಸಮಭಾವನೆಗೆ
ಶರವೇಗ ನನ್ನ ಮನ ಓಡೊಡೀ
ಹವಣಿಸಿದೆ ನನ್ನ ಒಡಲು ನಿನ್ನ ಭಾಹು ಆಲಿಂಗನಕ್ಕೆ
ಬರಬಾರದೇ ನೀ ಬರಬಾರದೆ .............................(ಗಂ)
ಸಾಗರದಾಚೆ ನಾನೆಲ್ಲೋ ಕುಳಿತು ಹಾಡಿದೆ ಸಾವಿರ ಭಾವ (ಗಂ)
ಸಾಗರದಾಚೆ ನಿನ್ನಲೆ ಅವಿತು ಹೋಗಿದೆ ನನ್ನೀ ಜೀವಾ (ಹೆ)

ಅನುಬಂಧ ನಮ್ಮಿಬ್ಬರ ಜೊತೆಮಾಡೀ
ನನ್ನೊಳಗು ಹೊಸ ರಾಗ ಹಾಡಿದೆ
ಹೊಸೆದಂತ ನಿನ್ನ ಪ್ರೀತಿಯ ಅಮೃತದಿಂದ
ಬಾಹುಗಳಿಗೆ ಕಾತರವಿತ್ತಿದೆ
ಬರಬಾರದೇ ನೀ ಬರಬಾರದೆ .............................(ಹೆ)
ಸಾಗರದಾಚೆ ನಾನೆಲ್ಲೋ ಕುಳಿತು ಹಾಡಿದೆ ಸಾವಿರ ಭಾವ (ಗಂ)
ಸಾಗರದಾಚೆ ನಿನ್ನಲೆ ಅವಿತು ಹೋಗಿದೆ ನನ್ನೀ ಜೀವಾ (ಹೆ)

ತುಸು ದೂರ ಕುಳಿತಿರುವೆ ಯಾಕೆ
ನನ್ನವಳೆ ನಿನಗಿನ್ನು ಶಂಕೆ
ಭಯ ಬಿಡು ಅರ್ಪಿಸು ನಿನ್ನ ತನು
ಹೃದಯ ಬೆರೆತು, ಮನಸ್ಸು ಕಲೆತು
ತನು ಬೆರೆಯಲು ತಡ ಇನ್ನು ಯಾಕೆ
ಬರಬಾರದೇ ನೀ ಬರಬಾರದೆ ............................. (ಗಂ)
ಸಾಗರದಾಚೆ ನಾನೆಲ್ಲೋ ಕುಳಿತು ಹಾಡಿದೆ ಸಾವಿರ ಭಾವ (ಗಂ)
ಸಾಗರದಾಚೆ ನಿನ್ನಲೆ ಅವಿತು ಹೋಗಿದೆ ನನ್ನೀ ಜೀವಾ (ಹೆ)

ಒಳ ಮನಕೆ ಸಾವಿರ ಬಯಕೆ
ಸರಿ ದೂರ ನನಗಿನ್ನು ನಾಚಿಕೆ
ಸಂಯಮ ಕೊಂಚ ತೋರು
ನನ್ನದೆಲ್ಲ ನಿನ್ನದೆ
ಕಾತರ ನನ್ನಲೂ ಇಹುದು
ಬರಬಾರದೇ ಅ ಸಮಯ ಬರಬಾರದೇ.............................(ಹೆ)
ಸಾಗರದಾಚೆ ನಾನೆಲ್ಲೋ ಕುಳಿತು ಹಾಡಿದೆ ಸಾವಿರ ಭಾವ (ಗಂ)
ಸಾಗರದಾಚೆ ನಿನ್ನಲೆ ಅವಿತು ಹೋಗಿದೆ ನನ್ನೀ ಜೀವಾ (ಹೆ)

ಅನುರಾಗ ನನ್ನಲಿ ಮನೆಮಾಡಿ
ತವಕವಿತ್ತಿದೆ ನಿನ್ನ ಸೇರಲು ಜೊತೆ ಸಮಭಾವನೆಗೆ
ಶರವೇಗ ನನ್ನ ಮನ ಓಡೊಡಿ
ಹವಣಿಸಿದೆ ನನ್ನ ಒಡಲು ನಿನ್ನ ಭಾಹು ಆಲಿಂಗನಕ್ಕೆ
ಬರಬಾರದೇ ಅ ಸಮಯ ಬರಬಾರದೆ
ಬರಬಾರದೇ ಅ ಸಮಯ ಬರಬಾರದೆ
ಬರಬಾರದೇ ಅ ಸಮಯ ಬರಬಾರದೆ.............................(ಗಂ) (ಹೆ)

~ಸಂಜು~

Friday, April 6, 2012

ಬರಬಾರದ ಕಾಲ ಬಂದೈತೆ , ಮೈತುಂಬ ಸಾಲ ತಂದೈತೆ

ಬರಬಾರದ ಕಾಲ ಬಂದೈತೆ
ಮೈತುಂಬ ಸಾಲ ತಂದೈತೆ 

 ಎಷ್ಟು ದುಡೀದ್ರು ಸಂಸಾರ ನಡೀತಿಲ್ಲ
ತಿಂಗಳ ಕೊನೆ ಮತ್ತೆ ಸಾಲ ತಪ್ಪಿದಲ್ಲ

ತಿಂಗಳು ತಿಂಗಳು ಹಬ್ಬಗಳಿಗೇನು ಕಮ್ಮಿ ಇಲ್ಲ
ಬಡ್ತಿ, ಬೋನಸ್ಸೂ ಕನಸ್ನಾಗೆ ಕೂಡ ಬರಕಿಲ್ಲ

ಮನೆ ತುಂಬ ಮಕ್ಕಳು ನೊಡಾಕೆ ಎರಡು ಕಣ್ಣು ಸಾಲ್ದು
ಯಾಕೆ ಬೆಕ್ಕಿತ್ತು ಇ ಕರ್ಮ ನನ್ನ ಹೆಂಡ್ರು ಗೊಣಗತಿದ್ಲೂ

ದ್ಯವರು ಕೊಟ್ಟ ಸುಮ್ಕಿರ್ರೊ ಅಂತ ಅಜ್ಜಿ ಮೂಲೇಲಿ
ನಿನ್ನ ಎಲಿ ಅಡಿಕೆ ಚಟ ಮುಗಿಲಿಲ್ಲ ಅಂತ ಬೈಕೊಂಡೆ ಮನಸ್ಸಲ್ಲೆ

ಶಾಲೆ ಫಿಸು , ಕರೆಂಟ್ ಬಿಲ್ಲು , ಫೋನ್‌ ಬಿಲ್ಲು, ನಗತಾವೆ ಮೂಲೆಲ್ಲಿ
ಬಾಡಿಗೆ ವಸೂಲಿ ಮಾಡಾಕೆ ಬಂದವನೇ ಶೆಟ್ರು ಬಾಗಿಲಲ್ಲಿ

ಬಂಡ ಬಡ್ಡಿ ಮಕ್ಕಳು ಎಷ್ಟು ಉಗಿದ್ರು ಮಾನಮರ್ವದೆ ಇಲ್ಲ
ಅಂತ ಬೈಕೊಂಡು ವಂಟ ಬಂದ ದಾರಿಗೆ ಸುಂಕ ಇಲ್ಲ

ಹೆಂಗಪ್ಪೊ ಶಿವನೆ ಅಂತ ತಲಿಮೇಲಿ ಕೈಹೊತ್ತು ಕುಂತ್ರೆ
ತಿರುಪತಿ ತಿಮ್ಮಾಪ್ಪನ ಪ್ಯಕೇಜ ಟ್ರಿಪ್ ನಿಲ್ಲಂಗಿಲ್ಲ ಹರಕೆ

ದೇಶ ಕೊಳ್ಳೆ ಹೊಡೆದವ್ರ ಮನೆ ಹಾಳಾಗ
ನಮಗೂ ವಾಸಿ ಕೊಟ್ರೆ ಅವನಿಗೆನು ಸವಿತದ

ಆಫಿಸ್ನಾಗೆ ಸಾಲ್ಗಾರ್ರು ಮನೆತನ್ಕಾ ಬತ್ತವ್ರೋ
ದಿನಸಿ ಅಂಗಡಿ ಕಾಕಾ ದಾರಿಲೆ ಬೈತವ್ನೋ

ತಿಂಗಳಿಗೆ 25 ರೂಪಾಯಿ ಲಾಟರಿನು ಹೊಡೀಲಿಲ್ಲ
ಹೊಡೆದದ್ದು ಬರೀ ಗ್ರಹಚಾರಗಳೆ ತಡಕಳಕ್ಕೆ ಅಗ್ತಿಲ್ಲ

~ಸಂಜು~

ದೂರ

ಈ...........ದೂರ ........... ಬಲು ಕ್ರೂರ
ಸಾಗರದಾಚೆ ನಾ ಎಲ್ಲೋ ಸಾವಿರಾರು ಮೈಲು ದೂರ
ಒಂಟಿತನದಿ ತೀರದಲ್ಲಿ ಅಲೆದಾಡಿ ಆಲೆಗಳಿಗೆ ಮುತ್ತಿಡ ಹೋದೆ,
ಉಪ್ಪಿತ್ತು ಅಚೆ ತೀರದಲ್ಲಿ ನನ್ನವಳ ಸುರಿಸಿದ ಕಣ್ಣೀರಿಗೆ :((((((

ಸಂಜು

ತುಂತುರು ಹನಿ

 ತುಂತುರು ಹನಿ ನೀರ ಆಣೆ
ನಿನ್ನ ಆಗಲಿ ನಾ ಇರಲಾರೆನೆ
ಮಣ್ಣಿನ ಸುಗಂಧದ ಆಣೆ
ನನ್ನ ಉಸೀರು ನೀನಲ್ಲವೇನೆ

ನನ್ನ ಒಲವೇ ನನ್ನ ನಲ್ಲೆ
ನಿನ್ನ ಬಿಟ್ಟು ಬಾಳಲಾರೆನೆ
ಮರವ ಸುತ್ತಿ ಹಾಡಲಾರೆ
ಹೃದಯ ಗೀತೆ ಕೇಳು ಬಾರೆ
ತುಂತುರು ಹನಿ ನೀರ ಆಣೆ
ನಿನ್ನ ಅಗಲಿ ನಾ ಇರಲಾರೆನೆ
ಮಣ್ಣಿನ ಸುಗಂಧದ ಆಣೆ
ನನ್ನ ಉಸೀರು ನೀನಲ್ಲವೇನೆ

ನಿನ್ನ ತಬ್ಬಿ ಹಿಡಿದ ಕ್ಷಣ
ನನ್ನಲ್ಲಿ ಏನೋ ರೊಮಾಂಚನ
ತುಟಿಗೆ ತುಟಿಯು ಬೆರತ ಸ್ಪರ್ಶ
ನನ್ನ ಮನಕೆ ಹೂವ ವರ್ಷ
ಲಜ್ಜೆ ಇಟ್ಟ ನಿನ್ನ ಮೊಗದ ಸೊಬಗ ಸಿರಿ
ಪ್ರಜ್ಞೆಯಿಲ್ಲದ ಸುಖಃವೆ ಸರಿ
ಹೆಜ್ಜೆ ಜೊತೆ ಹೆಜ್ಜೆ ಸೇರಿ
ತುಳಿದೆ ಏಳು ಜನ್ಮದ ಸಪ್ತಪದಿ
ತುಂತುರು ಹನಿ ನೀರ ಆಣೆ
ನಿನ್ನ ಆಗಲಿ ನಾ ಇರಲಾರೆನೆ
ಮಣ್ಣಿನ ಸುಗಂಧದ ಆಣೆ
ನನ್ನ ಉಸೀರು ನೀನಲ್ಲವೇನೆ

~ಸಂಜು~