Tuesday, December 4, 2012

ನಿನ್ನೆಲ್ಲ ಭಾವ ಇಷ್ಟ ನನಗೆ


 ನಿನ್ನೆಲ್ಲ ಭಾವ ಇಷ್ಟ ನನಗೆ

ನಿನ್ನ ಪ್ರತಿ ಮಾತಿಗು
ಕೋಪ ಇಷ್ಟ ನನಗೆ
ಎರೆಡೆ ನಿಮಿಷದಲ್ಲಿ
ಮನವಲಿಸುವ

ಪ್ರೀತಿಯು ಇಷ್ಟ ನನಗೆ
ಹೃದಯ ಒಪ್ಪುವುದಿಲ್ಲ
ಒಂದು ಕ್ಷಣ ನಿನ್ನ ವಿರಸ
ಎರೆಡೆ ನಿಮಿಷದಲ್ಲಿ
ಮತ್ತೆ ನಿನ್ನ ಮಾತಿಗೆ
ಹೃದಯ ಹರ್ಷ ಇಷ್ಟ ನನಗೆ
ನನ್ನ ಕಣ್ಣಿರು ಕಂಡರೆ
ಎಲಿಲ್ಲದ ಸಿಟ್ಟು ನಿನಗೆ
ಆ ಸಿಟ್ಟಿನಲ್ಲು ನನ್ನ
ಅಪ್ಪಿ ಮುದ್ದಿಸುವ
ಪರಿ ಇಷ್ಟ ನನಗೆ
ನಿನ್ನೊಂದಿಗೆ ಬಿಟ್ಟು
ಬೇರೆ ಯಾರೊಂದಿಗೆ
ಮಾತನಾಡಲು ಇಷ್ಟವಿಲ್ಲ
ನನಗೆ
ನಾ ಮಾತನಾಡುವಾಗ ನಿನ್ನ
ಕೋಪ ಇಷ್ಟ ನನಗೆ
ತಪ್ಪು ಮಾಡುವುದು
ನಿನ್ನ ಮನ ನೋಯಿಸುವುದು
ಇಷ್ಟವಿಲ್ಲ ನನಗೆ
ತಪ್ಪು ಮಾಡಿ ನಿನ್ನ
ಮನ ನೊಂದ ಮೇಲೆ
ನನಗೆ ಅರ್ಥೈಸುವ
ಪರಿ ಇಷ್ಟ ನನಗೆ
ನಿನ್ನ ಮಾತು ಕೇಳಬಾರದು
ಅಂತೇನು ಇಲ್ಲ ನನಗೆ
ನೀನು ಕೋಪಗೊಂಡು
ನನ್ನ ಮೇಲೆ ನಿನ್ನ
ಹಕ್ಕು ಸಾದಿಸುವ
ಪರಿ ಇಷ್ಟ ನನಗೆ
ನನ್ನ ಪ್ರೀತಿ ನನ್ನ ಹೃದಯ
 ನನ್ನ ಮನಸ್ಸು ನನ್ನ ಇಷ್ಟ
 ಕಷ್ಟ ಎಲ್ಲ ಗೊತ್ತು
ನಿನಗೆ
ಎಲ್ಲವನ್ನು ಮರೆ ಮಾಚಿ
ನನ್ನ ಇಷ್ಟಪಡುವ
ಪರಿ ಇಷ್ಟ ನನಗೆ

ಸಂಜು

ವಿಧಿಯಾಟ


ವಿಧಿಯಾಟ
ಒಂಟಿತನದಲ್ಲಿ ಯಾರ
ಕಾಯುವಿಕೆಯು ಇರುವುದಿಲ್ಲ
ವಿಧಿ ಪಗಡೆ ಆಟದಲಿ
ಒಮ್ಮೊಮ್ಮೆ ಒಂಟಿ ಕಾಯಿ ಇಂದಲೇ
ಆಟ ಗೆಲುವು ಕಾಣಬಹುದು
ವಿಧಿಯಾಟ ಎಂದೂ ಮೋಸ
 ಮಾಡುವುದಿಲ್ಲ
ನಿನ್ನಿಂದ ದೊರವಿರುವುದು
ಒಂದು ಅವನ ಚಾಲಾಕಿ ಆಟ
ಇರಬಹುದು

ಸೋಲಿಂದ ತಪ್ಪಿಸಲು
ಎಲ್ಲೋ ಸುಖದ ಸುಧೆ
ತುಂಬಿಸಿರುತ್ತಾನೆ
ಇಲ್ಲವಾದರೆ ನೆರೆಳೆಂದು
ದೇಹವನ್ನು ಬಿಟ್ಟು ನಡೆದಿದೆಯ

ಸಂಜು

ಸಣ್ಣ ಹನಿ


  ಸಣ್ಣ ಹನಿ
ಹೃದಯದ ಬಾಷೆಗೆ ಹೆಸರೇಕೆ
ಕೊಡಲಿ
ಪ್ರೀತಿಯ ಭಾವಕ್ಕೆ ಪತ್ರವೇಕೆ
ಬರೆಯಲಿ
ಈ ಹೃದಯದಲ್ಲಿ ನೋವಿಲ್ಲ
ಬರಿ ನೆನಪುಗಳೆ
ಆ ನೆನಪುಗಳು ನೋವಿತ್ತರೆ
ನಾ ನಿನ್ನೇಕೆ ದೊಷಿಸಲಿ
ಸಂಜು

ಮೂಕ ಮನಸ್ಸಿನ ಮೌನ ರಾಗ


 ಮೂಕ ಮನಸ್ಸಿನ ಮೌನ ರಾಗ
ನನ್ನ ಯೋಚನಾಲಹರಿ
ನಿನ್ನ ತಲುಪುವಂತಿದ್ದರೆ
ನನ್ನ ಭಾವಲಹರಿಯ ಅಲಾಪ
ನಿನ್ನ ಮುಟ್ಟುತಿದ್ದರೆ

ನೀ ನನಗಾಗಿ ಬದುಕದೆ
ಇರುತ್ತಿರಲಿಲ್ಲ
ಎಷ್ಟೋ ಮಾತುಗಳು
ನನ್ನೊಳಗೆ ಆಡಗಿದೆ
ಅವನೆಲ್ಲ ನಿನಗೆ
ಹೇಳುತ್ತಹೊದರೆ
ಈ ಜನ್ಮ ಸಾಲುತ್ತಿರಲಿಲ್ಲ
ತುಟಿ ಬಿಚ್ಚಿ ಎರೆಡು
ಮಾತನಾಡಿದರೆ
ನೀನಿಲ್ಲದೆ ಮರಣವನ್ನಾದರು
 ಅಪ್ಪುತಿದ್ದೆ
ನೀನಿಲ್ಲದೆ
ಬದುಕಿತ್ತಿರಲಿಲ್ಲ

ಸಂಜು

ಪ್ರೀತಿಯ ವರವಾಗು ಗೆಳತಿ


ಪ್ರೀತಿಯ ವರವಾಗು ಗೆಳತಿ

ಏನಾದರೆ ಏನು, ನೀ
ನನ್ನ ಜೊತೆಗಿರಲು
ಈ ಭುವಿ ಬಾನು ನೀನು
ನನ್ನೋಳಗಿರಲು

ಮರೆತೆಲ್ಲ ಕಷ್ಟಗಳ
ನಿನ್ನೋಲವಿನಲ್ಲಿ
ಸುಖ ಸ್ವರ್ಗದ ಗಣಿ
ನೀನಾಗಿರಲು
ಪಡೆಯುವಾಸೆ ನನಗೆ
ನಿನೆಲ್ಲ ಪ್ರೀತಿಯ
ಈ ಜನುಮದಲ್ಲಿ
ಪ್ರೀತಿಯ ಆಗಸದ ಛಾವಣಿ
ನೀನಾಗಿರಲು
ವರವಾಗಿ ಪಡೆದಂತೆ
ಈ ನಮ್ಮ ಬೆಸುಗೆ
ಈ ಬಂಧನಕ್ಕೆ
ಸುಧೆ ನೀ ತುಂಬಿರಲು
ಬರುವೆಯ ಗೆಳತಿ
ಈ ನನ್ನ ಬಾಳಿಗೆ
ವರ್ಷಗಳ ತಪ್ಪಸಿಗೆ
ದೇವರು ಒಲಿದಂತೆ
ನೀನೆ ನಾ ಕೇಳುವ
ವರವಾಗಿರಲು
ಪ್ರತಿ ಜನ್ಮದಲ್ಲು

ಸಂಜು

ಹೇಗಿದ್ದೆ ಹೇಗಾದೆ


   ಹೇಗಿದ್ದೆ ಹೇಗಾದೆ
ಮನುವಾಗಿ ಹುಟ್ಟಿ ಬಂದೆ
ಜೀವವಾದೆ ಅಪ್ಪ ಅಮ್ಮನಿಗೆ
ಒಬ್ಬ ಗಣ್ಯ ವ್ಯಕ್ತಿಯಾದೆ
ಸಮಾಜಕ್ಕೆ
ಸದ್ಗುಣ ಸಂಪನ್ನನಾದೆ

ಹಿರಿಯರಿಗೆ
ಮರ್ಗದರ್ಷಕನಾದೇ
ಕಿರಿಯರಿಗೆ
ಗೌರವಾನ್ವಿತನಾದೆ
ಉದ್ದೆಗೆ
ತಕ್ಕ ಮಟ್ಟಿಗೆ
ಸಿರಿವಂತನಾದೆ
ಬದುಕುಕಿಗೆ
ಆದರೀಗ
ನಿನ್ನ ಕಂಡೆ
ಸೋತುಹೋದೆ
ನಿನ್ನ ಪ್ರೀತಿ ಪಡೆದೆ
ಪರವಶನಾದೆ
ನನ್ನೆ ಮರೆತು ಶರಣಾದೆ
 ಜೀವನ ಪೂರ್ತಿ ಪಡೆದ
ಎಲ್ಲ ಬಿರುದುಗಳನು
ಪಕಕ್ಕೆ ಇಟ್ಟು
ನಿನಗೆ ನಾ ಅಗ್ಗವಾದೆ
ನಿನ್ನ ಮೇಲೆ ಅತಿಯಾದ
ಪ್ರೀತಿಗೆ
ಸದಾ ಹೇಳುವ
 ಗೋಳಿನಂತೆ
ತಿರ್ಸ್ಕಾರವಾದೆ
ಹೇಳಬಯಸಿದ
ಮನಸ್ಸಿನ ಭಾವಗಳು
ನೀನಗೆ ಹೇಳಿ ಹೇಳಿ
ನಿನ್ನ ಮುಂದೆ
ಕಡೆಗಣಿಸಿ ಹೋದೆ
ಜೀವನದಲ್ಲಿ ಏನೇನೋ ಆಗಿದ್ದ
ನಾನು ನಿನ್ನ ಮುಂದೆ ಎನಿಲ್ಲವಾದೆ
ಇಂದು ನನ್ನೇ ಕನ್ನಡಿಯ
ಮುಂದೆ ನೋಡಲು
ನಗುತ್ತ ಹುಚ್ಚನಾದೆ
ಆಳುತ್ತ ಪೆಚ್ಚನಾದೆ
ಹುಚ್ಚು ಹಿಡಿಸಿದ ಪ್ರೀತಿ
ಕಣ್ಣ ಮುಚ್ಚುವವರೆಗು
ಬಿಡದೆ
ಸಂಜು

ಹೈ ಫೈ ಬದುಕು


   ಹೈ ಫೈ ಬದುಕು

ಎಲ್ಲಿ ನೋಡಿದರು ಐ ಟಿ ಬಿ ಟಿ
ಎಲ ತಿನ್ನುವುದು ಬರ್ಗರ್ ಶರ್ಗರ್
ಯಾರ ಕೇಳಿದರು ಟೆನ್ಶನ್ ಟೆನ್ಶನ್
ಬೂಜ್ಜು ಬಾಡಿಗೆ ಫ್ರೀ ಇನ್ಕಮ್
ಎಲ್ಲ ಕುರುವುದು ಮುಂದೆ
ಕಂಪ್ಯೂಟರ್

ಕೂತರೆ ಏಳುವುದು
24 ಸವೆನ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ನಿದ್ದೆ ಮಾಡುವುದು
ನೋ ಟೈಮ್ ಟೈಮ್
ಅಲಾರಂ ಒಂದೇ ಇವರಿಗೆ
ಸರಿಯಾದ ಟೈಮ್
ಕನಸಿನಲ್ಲೂ ಕೂಡ
ಡೆಡ್ಲೈನ್ ಟೆನ್ಶನ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ಮನೆಯಲಿ ವೈಫು
ಫೋನಲ್ಲೇ ಫ್ಯಾಮಿಲಿ ಲೈಫು
ಸಂಬಳ ಮಾತ್ರ ನೋ ಟೆನ್ಶನ್
ರಿಸೆಸ್ಸನ್ ಟೈಮ್
ಫುಲ್ ಜಾಬ್ ಟೆನ್ಶನ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ಬ್ರಾಂಡೆಡ್ ಕ್ಲಾಥ್ಸ್
ಇವರಿಗೆಲ್ಲ ಕಾಮನ್
ಶಾಪಿಂಗ್ ಮಾಲ್
ನಲ್ಲಿ ಇವರ ವೀಕೆಂಡ್
ಕ್ಲಬ್ ಬಾರುಗಳು
ಇವರಿಗೆ ಯಾವಾಗಲು
ವೆಲ್ಕಮ್
ಕ್ರೆಡಿಟ್ ಕಾರ್ಡುಗಳು
ಮನಿ ಆಲ್ ಟೈಮ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ಸಂಜು