Saturday, March 31, 2012

ಸ್ನೇಹ ಮತ್ತು ಪ್ರೀತಿ

ಸ್ನೇಹದಲ್ಲಿ ಮಾತುಗಳ ಸುರಿಮಳೆ
ಪ್ರೀತಿಯಲ್ಲಿ ಮೌನಕ್ಕೇಕೆ ಈ ಕಳೆ
ಸ್ನೇಹ ಸಂತೋಷ ತಂದರೆ
ಪ್ರೀತಿಯಲ್ಲಿ ಏಕೆ ಕಣ್ಣೀರ ಧಾರೆ
ಸ್ನೇಹ ಎಲ್ಲರ ಸೇರಿಸುತ್ತದೆ
ಪ್ರೀತಿಯಲ್ಲಿ ಏಕೆ ಎಲ್ಲ ಬಿಟ್ಟುಹೋಗುತ್ತದೆ
ಆದರೂ ಎಲ್ಲರು ಪ್ರೀತಿ ಇಲ್ಲದೆ
ಬಾಳಲಾರೆ ಎನ್ನುತ್ತಾರೆ

 ~ಸಂಜು~

ನನ್ನ ಗೆಳತಿಗೆ ಒಂದು ಪ್ರೇಮ ಪತ್ರ


 ನನ್ನ ಎದೆಯ ಸಿಂಹಾಸನದ ಅರಸಿ
ಏನೆಂದು ಕರೆಯಲಿ ನಿನಗೆ
ನನ್ನ ಒಲವೇ , ನನ್ನ ಹೃದಯವೇ , ನನ್ನ ಜಿವವೇ ,
ಸಾಲಲಿಲ್ಲ ನನ್ನ ಮನದ ಷೋಡಶಿ

 ಏನೆಂದು ಬರೆಯಲಿ ನಿನಗೆ
ನನೊಲುಮೆಯ ಗೆಳತಿ , ನನ್ನ ಬಾಳಸಂಗಾತಿ, ನನ್ನ ಒಡತಿ ,
ಸಾಲಲಿಲ್ಲ ನನ್ನ ಮನದ ರೂಪಸಿ
ನಿನ್ನ ಪ್ರೀತಿಯ ನೆರಳಲ್ಲಿ
ನನ್ನ ಬಾಳು ಹಸನಾಗಿರಲಿ
ನನ್ನೆಲ್ಲಾ ಭಾವಗಳ ಬಲ್ಲೆ ನೀನು
ಪ್ರತಿ ಸ್ಪಂದನ ಹೀಗೆ ಸದಾ ಇರಲಿ
ನಿನ್ನ ಕಣ್ಣ ಬಿಂಬದಲ್ಲಿ ರೂಪ ನಾನು
ಆ ಚಿತ್ರ ಮಾಸದಿರಲಿ
ಬೇರೇನೂ ಕೇಳೆನು ನಾನು
ಬೇರೇನೂ ಬೇಡೆನು ನಾನು

ನನ್ನ ಹೃದಯ ಹೊತೋಟದಲ್ಲಿ
ಹಸಿರಾ ಚೆಲ್ಲಿದವಳು ನೀನು
ಒಣಗದಿರಲಿ ಬರಡಾಗದಿರಲಿ
ನನ್ನ ಕನಸು ಕಲ್ಪನೆಗಳಿಗೆ
ಹೊಸ ಜೀವ ತಂದವಳು ನೀನು
ಒಡೆಯದಿರಲಿ ಸಾಯದಿರಲಿ
ಬೇರೇನೂ ಕೇಳೆನು ನಾನು
ಬೇರೇನೂ ಬೇಡೆನು ನಾನು

ನನ್ನ ಜೀವವಾಗಿ ಬಾ ಹೊಸ ಚೇತನವನ್ನು ತಾ
ನನ್ನ ಬಾಳ ಹೂದೋಟದಲ್ಲಿ ಹೊಸ ಚಿಲುಮೆಯಾಗಿ ಬಾ
ಬೇರೇನೂ ಕೇಳೆನು ನಾನು
ಬೇರೇನೂ ಬೇಡೆನು ನಾನು

~ಸಂಜು~

ನೆನಪಾಗಿ

ಮೊದಲ ಸಲ ಈರುಳ್ಳಿ ಹೆಚ್ಹುವಾಗಲು ನೆನೆಪಾಗಲಿಲ್ಲ
ತರಕಾರಿ ಹೆಚ್ಹಿ ಕೈ ಕುಯ್ಯಿಕೊಂಡಾಗಲು ನೆನಪಾಗಲಿಲ್ಲ
ಅನ್ನಕ್ಕೆ ನೀರು ಹಿಡೊವಾಗಲೂ ನೆನಪಾಗಲಿಲ
ಮುದ್ದು ಹಿಟ್ಟು ತಿರುವುವಾಗಲು ನೆನಪಾಗಲಿಲ
ತಟ್ಟೆಗೆ ಹಾಕಿ ಬಡಿಸಿಕೊಂಡಾಗ ಅರ್ಧಬಾಗ ಮಾಡಿ
ತುತ್ತು ತೆಗೆದು ಬಾಯಿಗೆ ಇಡುವಾಗ ನೆನಪಾಗಿ ಕಾಡಿ
ತಿನ್ನದೆ ಮತ್ತೆ ಮುಚ್ಚಿಟ್ಟೆ, ಮನಸೋತು ಹೋಗಿತ್ತು ಬಾಡಿ
ಈರುಳ್ಳಿಗೆ ಜಗ್ಗದ ಕಣ್ಣೀರು, ನೆನಪಿಗೆ ಬಗ್ಗಿದೆ
ತಟ್ಟೆಯಮೆಲೆ ಬಿದ್ದಿತು ಹೊರಳಾಡಿ.

 ~ಸಂಜು~

ನೀ ಬರುವ ದಾರಿಯಲ್ಲಿ

ನೀ ಬರೊ ದಾರಿಯಲ್ಲಿ ನಗೆ ಹೂವ ನಾನು ಚೆಲ್ಲಿ
ಮಂಧಾರ ಪುಷ್ಪಗಳು ಸುಮಧುರ ಗಂಧ ಬೀರಿ
ಚಂದನದ ಚಾಮರಗಳು ತಂಪು ಗಾಳಿ ನಿನ್ನೆಡೆ ತೂರಿ
ಮನ ತುಂಬಿದೆ ಹರ್ಷ ಉಲ್ಲಾಸ
ನೀ ಬರೊ ದಾರಿಯಲ್ಲಿ ನಗೆ ಹೂವ ನಾನು ಚೆಲ್ಲಿ

ಮನದಂತೆ ಮನೆಯನ್ನು ಸಿಂಗರಿಸಿ ಇಟ್ಟೆ
ಹೃದಯದಲ್ಲಿ ನಿನ್ನ ಪ್ರೀತಿ ಬೆರೆತಂತ್ತೆ
ಹಾಲು ಜೆನಿನ ಬಟ್ಟಲ ತುಂಬಿಸಿಟ್ಟೆ
ಹೃದಯದಲ್ಲಿ ಹಬ್ಬ ಸಂತಸ
ನೀ ಬರೊ ದಾರಿಯಲ್ಲಿ ನಗೆ ಹೂವ ನಾನು ಚೆಲ್ಲಿ

ಗೋಡೆ ಗಡಿಯಾರ ಬೇಗ ಒಡಯಲಿಲ್ಲ
ಮನ ಅದರ ಓಟ ಮೀರಿಸಿದೆ
ನನ್ನ ಕಾಲು ಮನೆಯಲ್ಲಿ ನಿಲ್ಲಲಿಲ್ಲ
ಹಾದಿಗಳ ದಾಟಿ ಒಡೆದು
ನೀ ಬರೊ ದಾರಿಯಲ್ಲಿ ನಗೆ ಹೂವ ನಾನು ಚೆಲ್ಲಿ
ಮುಂಜಾವಿನಲ್ಲೇ ದೇವರಿಗೆ ಅರ್ಚನೆ ಮಾಡಿಸಿ
ದೇವರಲ್ಲಿ ಬಿನೈಸಿದೆ
ಕೈ ಭಾರಿಸಿತ್ತು ಗುಡಿಯ ಘಂಟೆ
ಹೂವು ,ಅರಿಶಿನ, ಕುಂಕುಮ ತಟ್ಟೆಯಲ್ಲಿ ಇಟ್ಟು
ಕಾಯುತ್ತಿರುವೆ
ನೀ ಬರೊ ದಾರಿಯಲ್ಲಿ ನಗೆ ಹೂವ ನಾನು ಚೆಲ್ಲಿ.

~ಸಂಜು~

Monday, March 26, 2012

ತೀರದ ಬಾದೆ

ಮನಸ್ಸಿನ ತುಂಬೆಲ್ಲಾ
ನಿನ್ನ ನೆನಪು ಬರೆ ಎಳೆದು ಹೋಗಿದೆ
ಸರಿಯಾದ ಉಪಚಾರವಿಲ್ಲದೆ
ನೊಂದು ಬಾದೆ ಪಡುತಿದೆ

ಕಣ್ಣ ಒಂದು ಪದರದಲ್ಲಿ
ಎಲ್ಲೋ ನಿನ್ನ ಚಿತ್ರಾ ಅಚ್ಚೆ ಮಾಡಿದೆ
ಒಮ್ಮೊಮ್ಮೆ ಸ್ಪಷ್ಟವಾಗಿ ಗೊಚರಿಸಿ
ತನ್ನ ತಾನೆ ನೀರು ಹರಿಯುತ್ತದೆ

ಹೃದಯದ ಯವುದೋ ಎಳೆಯಲ್ಲಿ
ನಿನ್ನ ಪ್ರೀತಿ ಹೆಪ್ಪು ಗಟ್ಟಿದೆ
ಜೊತೆಯಾಗಿ ಕಳೆದ
ಪ್ರೀತಿ ಆಸರೆ ಬೇಡಿ
ಬಿಟ್ಟು ಬಿಟ್ಟು ಬಡೀಯುತ್ತದೆ.

--ಸಂಜು--

Saturday, March 24, 2012

ಮದುಮಗಳ

ಮದುವೆಗೆ ಉಳಿದಿಲ್ಲ ಇನ್ನು ತಿಂಗಳು
ಮದುಮಗಳ ಹರುಷ ಹೇಳತಿರದು
ಹರ್ಷಕ್ಕೆ ಒಂದೆ ದಾರಿ
ಗಂಡು ಆಗಲೆ ಪಲಾಯನ
ಮದುಮಗಳ ಮದುವೆ ನಿಂತಿದೆ
ಬಂಧುಗಳ ಮನ ನೊಂದಿದೆ
ಹೆತ್ತವರ ಗೊಳು ಕೆಳಲಾಗದೆ .........?
ಒಂದು ಎರಡು ತಿಂಗಳು ಕಳೆದಿದೆ
ಮತ್ತೆ ಮಾಮೂಲಿಯಂತೆ ಎಲ್ಲ ನಡಿದಿದೆ

ಆದರೆ ನೊಂದ ಹೆಣ್ಣಿನ ಅಕ್ರಂದನ
ಒಳಗೆ ನಡೆಸಿದೆ ಯುದ್ದ ಖಡ್ಗ ಮಂಥನ
ಅತ್ತು ಅತ್ತು ಸೊತಿಹುದು ನಯನಾ
ಅವನೀಗೆ ಮಾಡಬಾರದಿತ್ತು ಶಪಿಸಿದೆ ಮನ
ಕನಸು ಒಡೆದು ಚುರು ಚುರಾಗಿದೆ
ಮನಸ್ಸು ಆಸೆ ಪಟ್ಟಿದೆಲ್ಲ ಮಣ್ಣಾಗಿದೆ
ಸಮಾಜದ ಕಿಡಿ ಮಾತು ಕೆಳಲಾಗದೆ
ಯತ್ನಿಸಿದೆ ಮನ ನೇಣು ಉರುಳಿಗೆ

ಮನೆಯ ಕಿಟಕಿಯಿಂದ ಇವೆಲ್ಲ ನೊಡುತಿದ್ದ
ಒಬ್ಬ ಸುಂದರ ತರುಣ ನೆರೆಯವನು
ನನ್ನ ಸ್ತಿತಿ ಕಂಡು ಮರುಕ ಪಟ್ಟಿದ್ದ
ದುಖಃದಲ್ಲಿ ಗಮನಿಸಲೆ ಇಲ್ಲ ಅವನ
ಗೆಳೆತನಕ್ಕೆ ಬಯಸದೇ ಇದ್ದ ಈ ಮನ

ಮುಂದೊಂದು ದಿನ ಮತ್ತೆ ಅದೆ ವದು ವಿಕ್ಷಣೆ
ಮನಸ್ಸು ಒಪ್ಪುತಿಲ್ಲ , ದೇಹದಲ್ಲಿ ಶಕ್ತಿ ಇಲ್ಲ
ಹಟ ಬಿಡದ ಹೆತ್ತವರು ಸಿಂಗರಿಸಿ ತಂದು ಇಟ್ಟರು
ತಲೆ ಎತ್ತುವ ಬಾದೆ ಬೇಡ
ಮನಸಿನಂತೆ ತಲೆ ಭಾರವಾಗಿದೆ

ಒಪ್ಪೀ ಬಿಟ್ಟರಂತೆ
ಮತ್ತದೇ ಸಡಗರದ ಸಂತೆ
ಮತ್ತೆ ನೋವಾ ತಿನ್ನೋ ಶಕ್ತಿ ಇಲ್ಲ
ಹೆತ್ತವರಿಗೆ ನನ್ನ ಬಾದೆ ತಿಳಿಯುತ್ತಿಲ್ಲ
ಅವನೇ ಅವನೇ ಅವನೆ ನನ್ನ ಗಂಡನಂತೆ
ಕಿಟಕಿಯ ಬಳಿ ದಿನನಿತ್ಯ ನನ್ನ ನೊಡಿದವನಂತೆ
ಎಲ್ಲೋ ಕಳೆದು ಹೋಗಿದ್ದ ಒಂದು ಸಣ್ಣ ಮಿಂಚು
ಕಾಲಿಗೆ ಎಡವಿದಂತೆ ಅನಿಸಿತು

~ಸಂಜು~

ನನ್ನವಳಿಗೆ

ಕರಗದೆ ಕೊರೆಯುವ
ಬೊರ್ಗರೆದು ಸುರಿಯುವ
ನಿನ್ನ ಪ್ರೀತಿ ಅಪಾರ
ನಿನ್ನ ಹೆಸರ ಹೆಳಲೆನು
ಬೇಡ ನಿನ್ನ ಹೆಸರೂ ಸಾವಿರ ಮಂದಿಗೆ ಇರಬಹುದು
ನಿನ್ನ ಪ್ರೀತಿ ಸಾವಿರದೊಳ ಒಂದು ವಿಶೆಷ ಹೃದಯ ನಿನದು
ನಿನ್ನ ಧನಿಗೆ ತಿರುಗುವೆ
ನಿನ್ನ ಪ್ರೀತಿಗೆ ಸೊಲುವೆ
ನಿನ್ನ ಹೃದಯದ ಕರೆಗೆ
ನನ್ನೆ ನಾ ಮುಡುಪಾಗಿಡುವೆ
ನನ್ನ ಕರೆಯುವಾಗ
ನನ್ನ ಹೆಸರು ಕರೆಯಬೆಡ
ಹಾಗೆ ಸುಮ್ಮನೆ
ಒಂದು ನಿಟ್ಟುಸಿರು ಬಿಡು ಸಾಕು
ನಿನ್ನ ಮುಂದೆ ಓಡೋಡಿ ಬರುವೆ

~ಸಂಜು~

ನನ್ನ ಒಲವೇ

 ನೀ ಬಂದೆ ನನೊಳಗೆ
ನನ್ನ ಉತ್ಸಾಹಕ್ಕೆ ಜ್ಯೊತೆಯಾದೆ
ನನ್ನ ಸಂತಸಕ್ಕೆ ನೀ ನಲಿದೆ
ನನ್ನ ದುಖಃಕ್ಕೆ ಕಣ್ಣ ತುಂಬಿಕೊಂಡೆ
ಹ್ರುದಯವನಿತ್ತೆ ಪ್ರೀತಿಯ ಬಿತ್ತೆ
ಮೊಳೆಕೆ ಒಡೆದು ಸಸಿಯಾಗಿಸಿದೆ
ಬಂದು ಬಳಗ ಪ್ರೀತಿ ತೋರಲಿಲ್ಲ
ನಿನ್ನ ಮಡಿಲಲ್ಲಿ ಇಟ್ಟು ಮಲಗಿಸಿದೆ
ಸಾಂತ್ವನ ನೀಡಿದೆ
ಅಮ್ಮನ ಪ್ರೀತಿ ಕೊಟ್ಟೆ
ತಂದೆಯ ಸ್ನೇಹ ಕೊಟ್ಟೆ
ಅಣ್ಣ ತಂಗಿಯರ ಒಲುಮೆ ಕೊಟ್ಟೆ
ನನ್ನ ಗೆಲುವು ನಿನಂದೆಂದುಕೊಂಡೆ
ನನ್ನ ಸೋಲು ನಿನದೆಂದೆ
ಪ್ರೀತಿಯ ಅಕ್ಷಯ ಪಾತ್ರೆ ನೀನು
ಒಲವ ತೋಡಿ ಅಬ್ಯಂಜಿಸಿದೆ
ಪ್ರೀತಿ ಪ್ರೇಮಕ್ಕೆ ಇನೊಂದು ಹೆಸರೂ ನೀನು
ಹೆಂಡತಿಯಂದು ಕರೆಯುವುದಷ್ಟೆ ನಾನು

~ಸಂಜು~

ಸೌಂದರ್ಯ

ಪ್ರತಿ ದಿನ ನಿನ್ನ ಬದಲಾಗುವು ಸೌಂದರ್ಯ
ಸ್ವಲ್ಪ ಕನಿಕರ ತೋರು ನಿನ್ನ ಬಿಂಬ ತೋರುವ ಕನ್ನಡಿಗೆ
ಎಷ್ಟೇ ಹೊಟ್ಟೆ ಕಿಚ್ಚು ಪಟ್ಟರು ಅವಳು ಅರಿಯಲಾರಳು ನಿನ್ನ ಒಳಮನದ ಆಂತರ್ಯ
~ಸಂಜು~

ಬಲಿದಾನ


ದೆಶ ಬಲಿದಾನ ಕೇಳಲಿಲ್ಲ
ಆದರೂ ಬಲಿ ಆದರೂ ಯೋಧರು
ತಮ್ಮ ಪ್ರಾಣ ಲೆಕ್ಕಿಸಲಿಲ್ಲ
ದೆಶದ ಸ್ವತಂತ್ರಕ್ಕಾಗಿ ಕೊಂದರು
ಗಾಂಧಿ ಶಾಂತಿ ಮಂತ್ರ ಒಪ್ಪದಿದ್ದರೂ
ಭಗತ್ ಸಿಂಗ್ , ಸುಖ್ ದೇವ್ , ರಾಜ್ಗುರು
ಇವರ ಕ್ರಾಂತಿ ಮಂತ್ರ ಒಂದೇ
ವಂದೇ ಮಾತರಂ
ಆದರೂ ತಂದಿತ್ತು ಸ್ವಾತಂತ್ರ್ಯ
ಗಾಂಧಿ ಶಾಂತಿ ಮಂತ್ರ
ಅದಾದ ಮೇಲೆ ಶುರು ಆಗಿದ್ದು
ನೆಹರು ಜಿನ್ನಾ ಕುತಂತ್ರ
ಗಾಂಧಿ ಮುಂದೆಯೆ ನಡೆದೇ ಹೋಯಿತು
ಕಲ್ಕತ್ತಾ ಕರಾಚಿಯ ರಕ್ತಪಾತ
ಮೂಕ ಪ್ರೆಕ್ಷಕ ಆಗ ನಮ್ಮ ತಾತ
ಮಾಡಿದ್ದು ಮಹಾ ಪಾಪ ನಾತರಂ
ಒಮೊಮ್ಮೆ ಯೊಚಿಸಿದರೆ ಹಿಂದು ಧರ್ಮಕ್ಕೆ
ಅವಾ ಮಾಡಿದ್ದು ಸರಿಯೇ.......? ಸಂದರ್ಬಕ್ಕೆ

 ~ಸಂಜು~

Sunday, March 18, 2012

ಹೊರೆ

ಕತ್ತಲಾಗುವೆ ಒತ್ತಿಗೆ
ಬತ್ತಿ ಹೊಗಿತ್ತು ದೆಣಿಗೆ
ಅಣಕಿಸಿದೆ ಪುಸ್ತಕದ ಹೊರೆ
ಮರಳಿ ಯತ್ನವಮಾಡು ಎಂದಿದೆ
ಜೆಡನ ಪೊರೆ.........

~sanju~

ಪ್ರೀತಿಯಾ

ಇ ನಡುವೆ .........ಇ ನಡುವೆ ...............ಇ ನಡುವೆ
ಎನೊ ಇತ್ತು............... ನನ್ನ................. ನಿನ್ನ ನಡುವೆ
ಎವುದೊ ಕೊಂಡಿ ಶಾಂತಿಯನ್ನು ಕದಡಿ ಹೋಗಿದೆ
ಮನಸ್ಸಿನಿಂದ ಹೋಗದೇ ಹೋಗಬೇಕು ಎಂದು ನೀನು ಹೋದೆ
ಹೃದಯದಲ್ಲಿ ಮಾಸದ ಹಚ್ಚು ಹಾಗೆ ಉಳಿದೆ ...........ಹೋಗಿದೆ
... ತಿನುತ್ತಿದೆ ಮೆದುಳನ್ನು ನಿನಾ ನೆನಪು ...ದಿನೆ....... ದಿನೆ
ಪೂರ್ತಿ ತಿಂದು ಹುಚ್ಚನಾಗುವೆ ಮೊದಲು ಬಂದು ಹೇಳು ಏನದು
ಪ್ರೀತಿಯ ............ಪ್ರೀತಿಯ ..........ಪ್ರೀತಿಯಾ..............

ಪ್ರೀತಿ ಬಾಂದವ್ಯಗಳ

ಗಂಡ ಹೆಂಡಿರ ಜಗಳ
ಉಂಡು ಮಲುಗುವ ತನಕ
ಬಾಳನೆ ನುಂಗಿ ನೀರು ಕುಡಿದು
ಮಲಗಿದವನಿಗೆ ಪ್ರೀತಿ ಯಾಕೆ ಕನ್ನಿಕೆ

... ಪ್ರೀತಿ ನಿಡಲಾಗದವಳು ಒಡಲ ಚೆಲ್ಲಿ
ಕುಂತರನು ಪ್ರೀತಿ ಭೋಗ ಯಾಂತ್ರಿಕವಿಲ್ಲಿ
ತಾಳಿ ಕಟ್ಟಿ ಬಾಂದವ್ಯವಂತೆ
ಲೊಹದ ತಂತಿ ಕುತ್ತಿಗೆ ಬಿಗಿದಂತೆ

ಬಾಳಿನ ಹಾಗು ಹೋಗು ಏರು ಬಿಳು ಎಲ್ಲ ಸಹಜ
ಪ್ರೀತಿ ಬಾಂದವ್ಯಗಳ ತುಂಬು ಕಣಜಾ
ಲೋಹದ ಕೊಟೆ, ಕಬ್ಬಿಣದ ಕಡಲೆ
ಎಲ್ಲು ಒಡೆಯುವುದಿಲ್ಲ ನಿನ್ನ ಬಾಳು ಮನುಜ

ಪ್ರೀತಿಗೆ

‌ತಿಂಗಳ ಬೆಳಕು ತಾ ಬಂದು
ನೈದಿಲೆಯು ಮೋಹಗೊಂಡು
ಚಂದಿರನ ಹಾಲ ನಗೆಯಕಂಡು
ಬಿಂಬಕ್ಕೆ ಪ್ರತಿಬಿಂಬ ತೋರಿದ
ಕೊಳವು ತಾ ಮುಂದು
...
ತಂಗಾಳಿಗೆ ಮೀಯಬೆಕೆಂದು
ಮೈ ಒಡ್ಡಿ ನಿಂತಿಹ ಮರವೊಂದು
ಚಳಿ ಒಂದು ತಾಳದೆ
ಮರವ ಬಳ್ಳಿ ಅಪ್ಪಿ ನಿಂತಿದೆ

ಮಾಮರಕ್ಕೆ ಕೊಗಿಲೆಯೊ
ಕೊಗಿಲೆಗೆ ಮಾಮರವು
ಕುಡಿ ಹಾಡಲು ಸ್ವರ ಇಂಪಾದವು
ಪ್ರೇಮಿಗಳಿಗೆ ಪ್ರೀತಿಯೊ
ಪ್ರೀತಿಗೆ ಪ್ರೆಮಿಗಳೊ
ಕುಡಿ ಹುಡಿದರೆ ಬಾಳು ಸುಧೆ

~ಸಂಜು~

Tuesday, March 13, 2012

ಕ್ರೂರ ಬದುಕು:

ದುರ್ದೈವದಿ ಹೆಗಲು ಅಂಟಿದೆ ಬೇತಾಳಕ್ಕೆ
ಮನ ಕಾಲ ಬಿದಿದ್ದೆ ಪಾತಳಕ್ಕೆ
ಕಂಡಲ್ಲೆಲ್ಲ ಕ್ಷುದ್ರ ಮಾಂತ್ರಿಕರೆ
ತಲೆ ಬುರುಡೆ ಹಾರಕ್ಕೆ ಸತ್ಕಾರವೆ
(ಹೊಟ್ಟೆ ಕಿಚ್ಚಿನ ಜನಗಳು )

 ಬಳಿಯಲ್ಲೆ ವಿಷ ಸರ್ಪಗಳ ಹಾವಳಿ
ವಿಧಿ ಎರಡು ಕೈ ಕಟ್ಟಿದ ಮನೆ ಛಾವಣಿ
 ರೌದ್ರಾವತಾರ ಹೊತ್ತಿದೆ ಕಡುಗಪ್ಪು ರಾತ್ರಿ
 ಬೆಳಕೆಂಬ ಸುಳಿವಿಲ ಮನಕೇಕೆ ಬ್ರಾಂತಿ
(ಜೊತೆಗೆ ವಿಧಿ ಕೋಪ)

ಹಸುಗೂಸು ಹೃದಯ ತೊದಲುತಿದೆ
ಭಾವನೆಗಳು ಸುಟ್ಟು ಭಸ್ಮವಾಗಿವೆ
ಬದುಕಬೇಕೆಂಬ ಆಸೆ ಕ್ಷೀಣವಾಗಿದೆ
ಮನಸ್ಸಲೆಲ್ಲೋ ಕೊಲೆ ಶೂಲೆಗೆರೆದೆ
(ಮುಗ್ದ ಮನಸ್ಸು )

ಕಡುಗಪ್ಪು ಗೊಂಡಾರಣ್ಯ ಈ ಲೋಕ
ರಕ್ತ ಪಿಪಾಸಿ ಗಳ ಮೃಗ ವಿಕಾರ
ನಡುಗಿದೆ ಮೈ ಮನ ಥರ ಥರ
ಎಲ್ಲಿ ನೋಡಿದರೆ ಅಲ್ಲಿ ವ್ಯಗ್ರ
( ಸುತ್ತಲು ಕಾಲು ಎಳೆಯುವ ಜನ, ಪರಿಸರ)

ಕಾಣದ ಕೈಗಳ ಹಿಡಿತ
ಅಪ್ಪಳಿಸಿದೆ ಚಾಟಿಯ ಹೊಡೆತ
ಒಂದರ ಮೇಲೊಂದು ಬಾಸುಂಡೆಗಳು
ಕಾಲ ಚಕ್ರ ಮುಗಿದಿಲ್ಲ ಇನ್ನು
ಬವಣೆಯ ಬದುಕು ನಡೆಯುತ್ತಿದೆ ಇನ್ನು
(ಬದುಕಿನ ಹೊಡೆತಗಳು )

~ಸಂಜು~

ಹಳ್ಳಿ ಕೂಲಿ,

ಉಣ್ಣಕೊಂಡೂ ತಿನಕೊಂಡು
ಸ್ಯೆಲಿ ಕಲಿಲಿಲ್ಲ
ದನ ಮೆಸ್ಕೊಂಡು ಗಿಲ್ಲಿ ಹೊಡ್ಕೊಂಡ
ಬೆಸಾಯಾ ಕೈಬಿಡಲಿಲ್ಲ

ರಾಮಯ್ಯನ ಮಾವಿನ ತೋಪು
ಚೆನ್ನರಾಯಣ್ಣ ನ ತೆಂಗಿನ ತೋಪು
ಹಲಸು ಮಾವು ಕದ್ದು
ತಿಂದು ತೇಗಿದಂಗೆ ಹರೆಯ ಹೊಯಿತು

ಕೂಲಿ ನಾಲಿ ಮಡ್ದೊ
ಸಲ್ದೇ ಹೋಯಿತು ಹಂಗೂ
ಐನೊರ ಅಂಗಡಿ ಸಾಲ ಗೀಲ
ಇಲ್ಲ ಅನ್ನೊ ಬೊಲ್ಡು
ಬೀಡಿ ಬೆಂಕಿಪುಟಣಕ್ಕೆ
ನಮ್ಮ ದಿನಗೂಲಿ ಸಾಲವಲ್ದು

ಕಳೆ ಕೀಳುವ ಬಸ್ವಿ ಹಿಂಗ್ಯಾಕೆ ನಕ್ತಾಳೆ ಮುಸಿ ಮುಸಿ
ಪೈರ ಇಸ್ಕೊಂಬಾಗ ತಾಕೈತೆ ಕೈಯಿ ಎಲ್ಲೋ ವಸಿ
ಅದ್ಕೆ ಕಿಸಿತಾವಳೆ ಕಲ್ಲಾ........ ಬಸ್ವಿ
ಅಂಗ ಇಂಗ ದಿನ ತಡಕಿಸಿ
ಲಗ್ನ ಮಾಡಿದ್ರು ನಮ್ಗ ಅದೇ……… ಇಸವಿ

ಆದರೂ ಸಾಲಿಲ್ಲ ನಮ್ಮಿಬ್ಬರ ಕೂಲಿ
ಫೊಟೊದಾಗೆ ಕುಂತ್ಕಾಂಡೂ ಶಿವ ಮಡ್ತವ್ನೆ ಗೇಲಿ
ಜೀವನ ಮಾಡೊದು ಹೆಂಗೊ ಶಿವನೆ ಅಂತಾವಳೆ ಬಸ್ವಿ
ಅಂಗು ..ಇಂಗು ಸಾಕ್ತ ಇವನಿ ಹೊಟ್ಟೆ ಬಸಿದಿ

 ಉಗಾದಿ ಹೋಗಿ ಉಗಾದಿ ಬರಲಿಲ್ಲ ಇನ್ನು
ಅಷ್ಟರಲ್ಲೇ ಹುಟ್ಟೆ ಬಿಡ್ತು ಒಂದು ಕೂಸು ಹೆಣ್ಣು
ಹೆಂಡ್ರು ಬೈಗಳ ಕೇಳಲಾಗದೆ , ಮಗೀ ಸಂಕಟ ನೋಡಲಾಗದೆ  
ಕುಂತೆ ಚಿಂತಿ ಮಾಡ್ತಾ ಹೆಂಡದ ಅಂಗಡಿ ಮುಂದೆ

 ~ಸಂಜು ~

Monday, March 12, 2012

ವಿಚಲಿತ ಮನಸ್ಸು

ಯಾಕೋ ಇತ್ತೀಚಿಗೆ
ಬದಲಾದಂತೆ ಅನಿಸುತ್ತಿದೆ
ಹಗಲ ಕನಸ್ಸು ಹೆಚ್ಚಾದಂತಿದೆ
ಮನಸ್ಸು ಹಸುಗೂಸಿನಂತಿದೆ
ಯಾಕೋ ಹೃದಯದ ಮಾತು
ಕೆಳಬೇಕು ಅಂತನಿಸಿದೆ
ಅದರ ಮೇಲೆ ಶಂಕೆ ಉಂಟಾಗಿದೆ
ಪ್ರೀತಿ, ಗೀತಿ , ಬಂದಂತೆ ಹಾಗಿದೆ
ಮೂಕಿ , ಟಾಕಿಯಂತಾಯಿತು ಮನಸ್ಸು
ಮೌನದಲ್ಲೆ ಕಂಡಿದೆ ಸಾವಿರ ಕನಸ್ಸು
ಶಬ್ದಗಳ ಲಟ .. ಪಟ.. ಬೆಡ
ಏಕಾಂತದಲಿ ಆಗಸನ ಚುಚ್ಹಿದೆ ನೊಟ
~ಸಂಜು~

Saturday, March 10, 2012

ಸಾವಿರ ಭಾವಗಳು

ಹೊರ ಹೊಮ್ಮಲಾರದ ಸಾವಿರ ಭಾವಗಳು
ಖಾಲಿ ಖಾಲಿ ಬದುಕನ್ನು ತುಂಬಿಹುದು
ಎನಿತ್ತೂ ನನ್ನ ನಿನ್ನ ನಡುವೆ
ಏಕಾಂತದಲ್ಲಿ ಕಾಡುತಿಹುದು……………….

ಈ ಬಂದಕ್ಕೆ ಏನು ಹೆಸರಿದೆ
ಸಂಬಂದ ಒಳಗೊಳಗೆ ಒದ್ದಾಡಿದೆ
ಅನುಬಂದ ಕಾಡುತಿದೆ ಬಿಟ್ಟು ಬಿಡದೆ
ಹೃದಯಕ್ಕೆ ಏನೂ ತಿಳಿಯದಾಗಿದೆ………..

ಅನಾಮಿಕ ಸಂಬಂಧವು
ನಮಿಬ್ಬರ ನಡುವೆ ಎಬ್ಬಿಸಿದೆ
ಅಶಾಂತಿ ಅಲೆಯ...ಹರಿಸುತಿದೆ
ತುಮುಲದ ಹೊಳೆಯ
ಈ ಅನುರಾಗದ ತಳಮಳವು
ತಿಳಿಯಲೇ ಇಲ್ಲ ನನಗು ನಿನಗೂ ………..

ಕಣ್ಣಿನಲ್ಲಿ ಓದಲು ಆಗಲಿಲ್ಲ
ತುಟಿ ಬೀರಿದರು ಹೆಳಲಾಗುತ್ತಿಲ್ಲ
ಒಳಗೆ ಬಲವಾಗಿ ಹೊತ್ತಿಹುದು
ನೆನೆಪುಗಳ ಜ್ವಾಲೆ
ದೂರ ದೂರ ಹೋದರು
ಮರೆಯಲಾಗುತ್ತಿಲ್ಲ ಅನುರಾಗದ ಅಲೆ ………………

ನಿನ್ನ ಅಂದ ಎಂತದು,ಹೀಗೆ
ಹೃದಯದಲ್ಲಿ ಒತ್ತಿದೆ ಛಾಯೆ
ಸಾವಿರ ಕನವರಿಕೆ ಕೂತಿದೆ ಹಾಗೆ
ನಿನ್ನ ಹೆಸರಿನಲ್ಲೇನಿದೆ ಮಾಯೆ
ತಿಳಿಯದಾಗಿದೆ ಮರುಳೆ ...........

ಏಕೆ ನೆನಪು ಬರುತಿಹುದು
ಸಾರಿ ಸಾರಿ ಆಳಿಸಿದರು?
ಈ ಪ್ರೀತಿ ಏಕೆ ಇತರ?
ಒಂಟಿ ಬದುಕು ನೋವಿನ ಸಾಗರ
ಅದೇಕೋ ಗೊತ್ತಿಲ್ಲ ನಾನು ಬದಲಾದೆ ಈ ತರ ...........

ಒಮ್ಮೆ ಬಂದು ಹೊಗಿಬಿಡು
ಪಿಸುಮತಲ್ಲಿ ಮೆಲ್ಲಗೆ ಕೂಗಿ ಬಿಡು
ಇದು ಪ್ರೀತಿ ಎಂದು ಸಾರಿ ಬಿಡು
ಇಲ್ಲವೆ ಹುಚ್ಚು ಎಂದು ಶಾಪವಿಡು
ಬದುಕಲಾರೆ ಈ ತರ…………..
******** ಸಂಜು ***********

Sunday, March 4, 2012

ಪ್ರೀತಿ ವಿರಹ

ಗುರಿ ಒಂದು ಕಡೆ ಮುಖಮಾಡಿದೆ
ದಾರಿ ಒಂದು ಕಡೆ ದೂಡಿದೆ
ಮದ್ಯ ಹಳ್ಳ ದಿಣ್ಣೆಗಳ ತಡೆ
ನಡೆವ ಕಾಲು ಮುರಿದಿದೆ
ಮುರಿದಿಟ್ಟ ಹ್ರುದಯದ ಚೂರುಗಳು
ಇನ್ನು ಉಸಿರಾಡುತ್ತಿದೆ
ಪ್ರೀತಿ ಮಾಡೋದೇ ತಪ್ಪಾಗಿದ್ದರೆ
ಆ ತಪ್ಪು ನನ್ನಿಂದಾಗಿದೆ
ಇಷ್ಟು ಕಟೋರ ಶಿಕ್ಷೇ
ಬೇಡ ಮನ ತುಂಬ ನೊಂದಿದೆ
ಎಂದೂ ಉದಯಿಸದ ಸೂರ್ಯನ ಹಾಗೆ
ಮುಳುಗಿದೆ ಹೃದಯ
ಒಂದೇ ಒಂದು ಸಣ್ಣ ಕಿರಣದ ಸನ್ನೆ ಸಾಕು
ಬದುಕಲು, ಕೊಡುವೆಯ
ಹೇ…… ಕಾಲವೇ ಸ್ವಲ್ಪ ಬರವಸೆ ಕೊಡು
ಎಲ್ಲೋ ಸಾವು ಬೇಡ
ಅವಳ ಮಡಿಲಲ್ಲೆ ಕೊಡು
ಸಿಗಲಾರದ ಅವಳ ಆಸರೆ ಕೇಳುವುದಿಲ್ಲ
ಪ್ರೀತಿ ಇರದ ಮನುಷ್ಯ ಜನ್ಮ ಮುಂದೆಂದು ಬೇಡ.

~ ಸಂಜು ~