ಉಣ್ಣಕೊಂಡೂ ತಿನಕೊಂಡು
ಸ್ಯೆಲಿ ಕಲಿಲಿಲ್ಲ
ದನ ಮೆಸ್ಕೊಂಡು ಗಿಲ್ಲಿ ಹೊಡ್ಕೊಂಡ
ಬೆಸಾಯಾ ಕೈಬಿಡಲಿಲ್ಲ
ಹಲಸು ಮಾವು ಕದ್ದು
ತಿಂದು ತೇಗಿದಂಗೆ ಹರೆಯ ಹೊಯಿತು
ಐನೊರ ಅಂಗಡಿ ಸಾಲ ಗೀಲ
ಇಲ್ಲ ಅನ್ನೊ ಬೊಲ್ಡು
ಬೀಡಿ ಬೆಂಕಿಪುಟಣಕ್ಕೆ
ನಮ್ಮ ದಿನಗೂಲಿ ಸಾಲವಲ್ದು
ಅದ್ಕೆ ಕಿಸಿತಾವಳೆ ಕಲ್ಲಾ........ ಬಸ್ವಿ
ಅಂಗ ಇಂಗ ದಿನ ತಡಕಿಸಿ
ಲಗ್ನ ಮಾಡಿದ್ರು ನಮ್ಗ ಅದೇ……… ಇಸವಿ
ಜೀವನ ಮಾಡೊದು ಹೆಂಗೊ ಶಿವನೆ ಅಂತಾವಳೆ ಬಸ್ವಿ
ಅಂಗು ..ಇಂಗು ಸಾಕ್ತ ಇವನಿ ಹೊಟ್ಟೆ ಬಸಿದಿ
ಹೆಂಡ್ರು ಬೈಗಳ ಕೇಳಲಾಗದೆ , ಮಗೀ ಸಂಕಟ ನೋಡಲಾಗದೆ
ಕುಂತೆ ಚಿಂತಿ ಮಾಡ್ತಾ ಹೆಂಡದ ಅಂಗಡಿ ಮುಂದೆ
~ಸಂಜು ~
ಸ್ಯೆಲಿ ಕಲಿಲಿಲ್ಲ
ದನ ಮೆಸ್ಕೊಂಡು ಗಿಲ್ಲಿ ಹೊಡ್ಕೊಂಡ
ಬೆಸಾಯಾ ಕೈಬಿಡಲಿಲ್ಲ
ರಾಮಯ್ಯನ ಮಾವಿನ ತೋಪು
ಚೆನ್ನರಾಯಣ್ಣ ನ ತೆಂಗಿನ ತೋಪು ಹಲಸು ಮಾವು ಕದ್ದು
ತಿಂದು ತೇಗಿದಂಗೆ ಹರೆಯ ಹೊಯಿತು
ಕೂಲಿ ನಾಲಿ ಮಡ್ದೊ
ಸಲ್ದೇ ಹೋಯಿತು ಹಂಗೂ ಐನೊರ ಅಂಗಡಿ ಸಾಲ ಗೀಲ
ಇಲ್ಲ ಅನ್ನೊ ಬೊಲ್ಡು
ಬೀಡಿ ಬೆಂಕಿಪುಟಣಕ್ಕೆ
ನಮ್ಮ ದಿನಗೂಲಿ ಸಾಲವಲ್ದು
ಕಳೆ ಕೀಳುವ ಬಸ್ವಿ ಹಿಂಗ್ಯಾಕೆ ನಕ್ತಾಳೆ ಮುಸಿ ಮುಸಿ
ಪೈರ ಇಸ್ಕೊಂಬಾಗ ತಾಕೈತೆ ಕೈಯಿ ಎಲ್ಲೋ ವಸಿ ಅದ್ಕೆ ಕಿಸಿತಾವಳೆ ಕಲ್ಲಾ........ ಬಸ್ವಿ
ಅಂಗ ಇಂಗ ದಿನ ತಡಕಿಸಿ
ಲಗ್ನ ಮಾಡಿದ್ರು ನಮ್ಗ ಅದೇ……… ಇಸವಿ
ಆದರೂ ಸಾಲಿಲ್ಲ ನಮ್ಮಿಬ್ಬರ ಕೂಲಿ
ಫೊಟೊದಾಗೆ ಕುಂತ್ಕಾಂಡೂ ಶಿವ ಮಡ್ತವ್ನೆ ಗೇಲಿ ಜೀವನ ಮಾಡೊದು ಹೆಂಗೊ ಶಿವನೆ ಅಂತಾವಳೆ ಬಸ್ವಿ
ಅಂಗು ..ಇಂಗು ಸಾಕ್ತ ಇವನಿ ಹೊಟ್ಟೆ ಬಸಿದಿ
ಉಗಾದಿ ಹೋಗಿ ಉಗಾದಿ ಬರಲಿಲ್ಲ ಇನ್ನು
ಅಷ್ಟರಲ್ಲೇ ಹುಟ್ಟೆ ಬಿಡ್ತು ಒಂದು ಕೂಸು ಹೆಣ್ಣು ಹೆಂಡ್ರು ಬೈಗಳ ಕೇಳಲಾಗದೆ , ಮಗೀ ಸಂಕಟ ನೋಡಲಾಗದೆ
ಕುಂತೆ ಚಿಂತಿ ಮಾಡ್ತಾ ಹೆಂಡದ ಅಂಗಡಿ ಮುಂದೆ
No comments:
Post a Comment