Tuesday, August 21, 2012

ಚೆಲುವೆ ಚೆಲುವೆ

ಚೆಲುವೆ ಚೆಲುವೆ
 

 ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ
ಐದೇ ನಿಮಿಷ ಐದೇ ನಿಮಿಷ ಕಂಡಾಗಲೇ
ನನ್ನಾಸೆ ಎದೆಯ ತಳ್ಳಿದೆ ಬೆಂಕಿಯಲ್ಲೇ
...
ನಾನೆಷ್ಟೋ ಬಣ್ಣದ ಕನಸುಗಳ ಕಂಡೆ
ನನ್ನ ನಿನ್ನ ಸೇರಿಸಲೆಂದೇ ಬಂದೆ
ಬಂದ ವೇಗದಲ್ಲಿ ಹೆದರಿ ನಿಂದೆ
ನೀನು ಹೆಜ್ಜೆ ಗುರುತು ಸಿಗದ ಕಡಲ ಮಿನ
ನನ್ನ ಬೇಟೆಗೆ ಸಿಗದ ಜಿಂಕೆಯೇ ಕಣ್ಣ
ನಿನ್ನ ಜಾಲಕ್ಕೆ ಬಿದ್ದ ಪ್ರೀತಿ ನಾನ
ಬಾ ಒಲವೆ ನನ್ನ ಒಲವೆ ನಿ ನೋಡು ಚೆಲುವೆ
ನನ್ನ ಪ್ರೀತಿ ನಿನಗೆಲ್ಲು ಸಿಗದ ಗಣಿಯೆ

ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ

ನಿನ್ನ ಕಣ್ಣುಗಳು ಹೇಳಿದ್ದು ಸುಳಲ್ಲ
ನಿ ನನ್ನ ಪ್ರೀತಿ ಮಾಡಿದ್ದು ಕನಸಲ್ಲ
ಅಡಿ ಅಡಿಗೂ ಮುಳ್ಳು ನನ್ನ ಎದೆ ಚುಚ್ಚಲು
ಸಾವಿರ ಪ್ರೀತಿ ಹೂವು ನನ್ನ ತಬ್ಬಿ ಬಾಚಲು
ಇ ಪ್ರಿತಿಯಂಬುದು ಕ್ಷಣ ಕ್ಷಣ ನನ್ನ ಕೊಂದಿದೆ
ನಿನ್ನ ಆಸೆ ಗೋಪುರ ನನ್ನ ಕಟ್ಟಿಹಾಕಿದೆ
ನಿನ್ನ ಗಿಂಜಿ ಕೇಳುವೆ ನನ್ನ ಕೊಂದು ಕೇಳುವೆ
ನಿನೆಷ್ಟೇ ಮರೆಮಾಚಿದರು ನಿನ್ನ ಕಣ್ಣು ಹೇಳದೆ ಬಿಡದು
ನನ್ನ ನಿನ್ನ ಸೇರಿಸದೆ ಇರದು
ಬಾ ಒಲವೆ ನನ್ನ ಒಲವೆ ನಿ ನೋಡು ಚೆಲುವೆ
ನನ್ನ ಪ್ರೀತಿ ನಿನಗೆಲ್ಲು ಸಿಗದ ಗಣಿಯೆ


ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ

ನೀನು ಸುಂದರ ಹುತೋಟದ ಚೆಲುವಿನ ಹೂವ
ನಾ ನಿನ್ನ ಅರಸಿ ಬಂದಿರುವ ದುಂಬಿಯ ಸಾವ
ಆದ ನೆನಸಿಕೊಂಡರೆ ಎದೆಯಲಿ ಮಿಡುಕಿದೆ ಜೀವ
ನಿನ್ನ ಪ್ರೀತಿ ಆಸರೆ ಬಯಸೀದೆ ತಪ್ಪ
ನಿನ್ನ ಆಸೆಯಲ್ಲಿ ನನ್ನ ನಾ ಕಳೆದು ಕೊಂಡದ್ದು ಬೆಪ್ಪ
ನಿ ಯಾರಿಗಾದರು ನಿನ್ನ ಪ್ರೀತಿ ತುಂಬಿಸಿ
ಹೃದಯವು ಕೊಡುವುದು ಸತ್ಯ ವಾದರೆ
ನನಗೆ ಒಮ್ಮೆ ಎಸೆದು ನೋಡು
ನಾ ಹೇಗೆ ಪುಜಿಸಿಟ್ಟು ಕಾಪಾಡುವೆ ನೋಡು
ಬಾ ಒಲವೆ ನನ್ನ ಒಲವೆ ನಿ ನೋಡು ಚೆಲುವೆ
ನನ್ನ ಪ್ರೀತಿ ನಿನಗೆಲ್ಲು ಸಿಗದ ಗಣಿಯೆ


ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ
ಐದೇ ನಿಮಿಷ ಐದೇ ನಿಮಿಷ ಕಂಡಾಗಲೇ
ನನ್ನಾಸೆ ಎದೆಯ ತಳ್ಳಿದೆ ಬೆಂಕಿಯಲ್ಲೇ
ನಾನೆಷ್ಟೋ ಬಣ್ಣದ ಕನಸುಗಳ ಕಂಡೆ
ನನ್ನ ನಿನ್ನ ಸೇರಿಸಲೆಂದೇ ಬಂದೆ
ಬಂದ ವೇಗದಲ್ಲಿ ಹೆದರಿ ನಿಂದೆ

~ ಸಂಜು ~

ನೀ ನಿಲ್ಲದೆ

ನೀ ನಿಲ್ಲದೆ
 

 ನೀ ನಿಲ್ಲದೆ ನೀ ನಿಲ್ಲದೆ
ಕುಶಿ ಇಲ್ಲ ಬದುಕಿಲ್ಲ
ನನ್ನ ಎದೆಗೆ ನೆಮ್ಮದಿ ಇಲ್ಲ
ನನ್ನ ಬದುಕು ನೀನೆ
...
ನೀನೆ ನನ್ನ ಉಪಾಸನೆ
ನೀನೆ ನನ್ನ ಆರಾಧನೆ

ಹೇಗೆ ನಿನಗೆ ಅರ್ಥೈಸಲಿ
ಇನ್ಯಾರಿಗೆ ಹೇಳಲಿ
ಇನ್ನ ಎಲ್ಲಿಗೆ ಹೋಗಲಿ
ಇನ್ಯಾವ ದೇವರಿಗೆ
ನನ್ನ ಪೂಜೆ ಅರ್ಪಿಸಲಿ

ನಿನ್ನ ಹಾಣೆ ನಿನ್ನ ಹಾಣೆ
ಓ ನನ್ನ ಒಲವೆ
ನಿನಗಾಗಿ ನಿನಗಾಗಿ
ನಾ ಹುಚ್ಚನಾದೆ
ಹೇಗೆ ಬದುಕಲಿ ನೀ ಹೇಳು
ಸಾವು ಕೂಡ ಅತ್ತಿರ ಸುಳಿಯುತ್ತಿಲ್ಲ
ಸಾವು ಕೂಡ ಅತ್ತಿರ ಸುಳಿಯುತ್ತಿಲ್ಲ
ನನ್ನ ಬದುಕು ನೀನೆ
ನೀನೆ ನನ್ನ ಉಪಾಸನೆ
ನೀನೆ ನನ್ನ ಆರಾಧನೆ

ಓ ನನ್ನ ದೇವರೇ
ನಿನ್ನ ಬಿಟ್ಟು ನಾ ಯಾರಿಗೆ ಕೆಳಲ್ಲಿ
ನಿನ್ನ ಬಿಟ್ಟು ನನಗೆ ಯಾರಿರುವರು
ನನ್ನಂತೆ ಪ್ರೀತಿ ಹುಟ್ಟಿಸು ಅವಳಲ್ಲಿ
ನನಗಾಗಿ ಕಂಬನಿ ತರಿಸು ಕಣ್ಣಲಿ
ಅವಳ ನೆನಪು ಇಷ್ಟು ಸತಾಯಿಸಿದೆ
ನನ್ನ ಬದುಕು ನೀನೆ
ನೀನೆ ನನ್ನ ಉಪಾಸನೆ
ನೀನೆ ನನ್ನ ಆರಾಧನೆ

ನೀ ನಿಲ್ಲದೆ ನೀ ನಿಲ್ಲದೆ
ಕುಶಿ ಇಲ್ಲ ಬದುಕಿಲ್ಲ
ನನ್ನ ಎದೆಗೆ ನೆಮ್ಮದಿ ಇಲ್ಲ

~ ಸಂಜು ~
 

ನಿನ್ನ ಹಕ್ಕು

ನಿನ್ನ ಹಕ್ಕು
 

 ಓ ಮನಸ್ಸೇ ನಿನಗೇಕೆ
ಅಂಜಿಕೆ ಶಂಕೆ
ನಿನ್ನಗಾಗೆ ಈ ಬೆಳ್ಳಂ ಬೆಳ್ಳಗೆ
ಶುಭ ಶುಭ ಅಂದಿದೆ
...
ಬೆಳಗಾಗೆ ನಿ ಎದ್ದು
ಏನೇನೋ ಚಿಂತಿಸುವೆ
ನಡೆದದ್ದೆಲ್ಲ ಒಳೆಯದಕ್ಕೆ
ಅಂತ ಸುಖಪಡು ಅದು ನಿನ್ನ ಹಕ್ಕೆ

ಕಳೆದದ್ದಕ್ಕೆ ಕೊರಗುತ್ತ
ಕೈಲಿರುವುದ ಬಿಡಬೇಡ
ನಾನು ನೀನು ತಂದದ್ದು ಏನು ಇಲ್ಲ
ಹೋಗುವಾಗ ಕೊಂಡೊಯುವುದು ಇಲ್ಲ
ಇರುವ ಬದುಕು ನಮ್ಮದು
ಅದರಲಿ ನೆಮ್ಮದಿ ಪಡೆಯುವುದು
ಆಗುವುದೆಲ್ಲ ಒಳೆಯದಕ್ಕೆ
ಅಂತ ಸುಖಪಡು ಅದು ನಿನ್ನ ಹಕ್ಕೆ

ಯಾರಿಗಾಗಿ ಈ ತಪ್ಪಿತಸ್ಥ ಭಾವನೆ
ನಿನ್ನ ಸುಖಕ್ಕೆ ಯಾರಿಗಿಲ್ಲ ಕಾಮನೆ
ನಿನ್ನ ಸುಖಕ್ಕೆ ನಿನ್ನೆ ಹಕ್ಕುದಾರಳು
ಇದಕ್ಕೆ ದುಖ ಕೊಟ್ಟು ಮಾಡದಿರು ವಂಚನೆ
ಪಡೆದದ್ದೆಲ್ಲ ಒಳೆಯದಕ್ಕೆ
ಅಂತ ಸುಖಪಡು ಅದು ನಿನ್ನ ಹಕ್ಕೆ

ಎಷ್ಟು ತ್ಯಾಗ ಮಾಡಿ ಬದುಕುವೆ
ಪ್ರೀತಿ ಬಿಟ್ಟೆ, ಆಸೆ ಬಿಟ್ಟೆ, ಬದುಕ ಕೊಟ್ಟೆ
ಇದ್ದ ಭಾವನೆಗಳು ಸತ್ತೆ ಹೋಯಿತು
ಅಸೆ ಕನಸುಗಳು ಸುಟ್ಟು ಬಸ್ಮವಾಯಿತು
ಇನ್ನು ತ್ಯಾಗ ಮಾಡಿ ಏನು ಗಳಿಸುವೆ
ಬದುಕೇ ಕಳೆದು ಹೋದಮೇಲೆ ಯಾರ ಕೇಳುವೆ
ಅಪ್ಪ ಅಮ್ಮ ಅಣ್ಣ ತಮ್ಮ
ಸ್ನೇಹ, ಪ್ರೀತಿ, ಮಮತೆ ಇವುಗಳಲ್ಲೇ ನಿನ್ನ ಬದುಕೇ
ಅಂತ ಸುಖಪಡು ಅದು ನಿನ್ನ ಹಕ್ಕೆ

ಎಣಿಸಿದರು ಬದುಕಿನಲ್ಲಿ ಕ್ಷಣಗಳ
ಪ್ರತಿ ಕ್ಷಣದಲ್ಲೂ ಹುಡುಕು ಇರುವ ಬದುಕ ಕಣಗಳ

~ ಸಂಜು ~

ಕಳೆದು ಹೋದ ದಿನಗಳು

ಕಳೆದು ಹೋದ ದಿನಗಳು
ಹಾಗೇನು ಇಲ್ಲ ನನ್ನ ಜೀವನ ಕೆಟ್ಟು ಹೋಗಿದೆ ಅಂತ
ಆದರೆ ನನ್ನ ಶಾಲಾ ಕಾಲೇಜಿನ ಜೀವನ ಬೇರೆಯೇ ಇತ್ತು

ನನಗೆ ನಗು ಬರುವುದಿಲ್ಲ ಅಂತ ಏನು ಇಲ್ಲ
ಸ್ನೇಹಿತರೊಂದಿಗೆ ನಕ್ಕಿ ನಲಿದ ನಗುವೇ ಬೇರೆ ಇತ್ತು

...
ಜೀವನದ ಒತ್ತಡಗಳಿಂದ ರಾತ್ರಿಗಳು ಕಳೆಯಲು ಆಗುತ್ತಿಲ್ಲ ಅಂತ ಏನು ಇಲ್ಲ
ಆದರೆ ಪರೀಕ್ಷೆಗೆಂದು ಇಡಿ ರಾತ್ರಿ ಕಳೆದ ರಾತ್ರಿಗಳ ಹಾಗೆ ಇಲ್ಲ

ಹಾಗೇನು ಇಲ್ಲ ಜೀವನದಲ್ಲಿ ಗಳಿಸಿದಕ್ಕೆ ಸಂತೋಷವಿಲ್ಲ
ಕೇವಲ ಉತಿರ್ಣನಾಗುವಷ್ಟು ಅಂಕ ತೆಗೆದು ಕುಶೀ ಪಟ್ಟಷ್ಟು ಇಲ್ಲ

ಹಾಗೇನು ಇಲ್ಲ ಈಗ ಜೀವನ ಸುಖವಾಗಿ ಇರಲಾಗಿತ್ತಿಲ್ಲ
ಆದರೆ ಸ್ನೇಹಿತರೊಂದಿಗೆ ಇದ್ದ ಸುಖ ಜೀವನದಂತೆ ಇಲ್ಲ

ಸಂಜು

ಓ ನನ್ನ ಗೆಳತಿ

ಓ ನನ್ನ ಗೆಳತಿ

 ನಿನ್ನ ಬದುಕಿಗೆ ಕಹಿ ರಸವಾದೆ
ನೀನಿತ್ತ ಒಲವಿಗೆ ಬರಿ ನೋವ ತಂದೆ
ನಾ ಏನು ಪಾಪ ಮಾಡಿದೆನೋ
ನಿನ್ನ ಒಲವ ಉಳಿಸಿಕೊಳ್ಳಲು ಅನರ್ಹನಾದೆ
ಅದಾವ ಗಳಿಗೆಯಲ್ಲಿ ನಾ ನಿನ್ನ ಬದುಕಿಗೆ ಬಂದೆ
ಬೇರೇನೂ ಕೊಡಲಿಲ್ಲ ಬರಿ ನೋವು ಸಂಕಟ ತಂದೆ
ಏನೇನೋ ಆಸೆ ಕೊಟ್ಟೆ ಏನೇನೋ ಕನಸ ಕೊಟ್ಟೆ
ಕೊನೆಗೆ ಬರಿ ನೋವಿನ ಕಡಲಾಗಿ ನಿನ್ನ ಮುಂದೆ ನಿಂದೆ
ಸಾದ್ಯವಾದರೆ ಕ್ಷಮೀಸಿ ಬಿಡು
ನಿನ್ನಿಂದ ತಿರಸ್ಕೃತ ಬದುಕು ಸಹಿಸಲಾರೆ
ಪ್ರತಿ ಕ್ಷಣ ನರಕ ಸುಡುಗಾಡು
ನಾ ಹೋಗುತ್ತಿರುವೆ ಗೆಳತಿ
ಮತ್ತೆ ಬಾರದ ಲೋಖಕ್ಕೆ
ನಿನ್ನ ಬದುಕಿನಿಂದ ದೂರ
ಮತ್ತೆಂದು ಬರಲಾರೆ
ನಿನ್ನಗೆ ದುಖ ತರಲಾರೆ
ಸುಖವಾಗಿ ಇರು
ನಿನ್ನ ಪ್ರೀತಿ ಹೊತ್ತೊಯುತ್ತಿರುವೆ
ಅದೊಂದೇ ನನಗೆ ಶ್ರೀ ರಕ್ಷೆ
ನಿನ್ನ ನೆನಪ ಎದೆಯಲ್ಲಿ ಬಿತ್ತಿ ಸಾಗುತ್ತಿರುವೆ
ಮುಂದಿನ ಬದುಕಿನ ಕ್ಷಣಗಳಿಗೆ
ನನ್ನನೆಂದು ದ್ವೇಷಿಸದೆ ನನ್ನ ಬೀಳ್ಕೊಡು
ನನಗಾಗಿ ಇನ್ನೆಂದು ಕಣ್ಣಿರ ತರಬೇಡ
ನನ್ನ ಕಳುಹು ಗೆಳತಿ ಸಾದ್ಯವಾದರೆ
ಕ್ಷಮಿಸಿಬಿಡು ಗೆಳತಿ

ನಿನ್ನ ಬದುಕಿನಿಂದ ಬಲು ದೂರ
ಸಾಗುತ್ತಿರುವ ನಿನ್ನ ಗೆಳೆಯ
ಸಂಜು
 

Tuesday, August 7, 2012

ನನ್ನದೇ ಕಥೆ ಇನ್ನು ಹೆಸರಿಟ್ಟಿಲ್ಲ



ಸಂಜೆ ರಂಗು ತಿಳಿಗೆಂಪು ಆಗಸದಲ್ಲಿ, ಕೆಮ್ಮಣ್ಣ ಓಕಳಿ ಮೈದಾನದಲ್ಲಿ ಗದ್ದಲವೋ ಗದ್ದಲ್ಲ ಮಕ್ಕಳು ಎಲ್ಲೆಡೆ ಆಟದಲ್ಲಿ ಕೇಕೆ, ಕ್ರೆಕೆಟ್, ಚುಚೆಂಡು, ಲಗೋರಿ , ಆಟಗಳಲ್ಲಿ ಮಕ್ಕಳು ಮಗ್ನ ಸಂಜೆ ೬.೩೦ ಆದದ್ದೆ ತಡ ಯಾರೋ ಒಬ್ಬ ಬೊಬ್ಬೆ ಹೊಡೆದ ಹುಚಪ್ಪಣ್ಣ ಬತ್ತಾವರೆ ಓಡ್ರೋ ಅಂತ ಕೆಲವೇ ಕ್ಷಣದಲ್ಲಿ ನಿಶಬ್ದ ಎಲ್ಲರು ಓಟ ಕಿತ್ತು ಓಡಿದವರೇ ಒಮ್ಮಲ್ಲೇ ಹಾರಾಡುತಿದ್ದ ಕೆಮ್ಮಣ್ಣು ಹಾಗೆ ನೆಲದಮೇಲೆ ನಿದ್ರೆಗೆ ಶರಣಾಗುತಿತ್ತು , ನಾನು ಕೂಡ ಎದ್ದು ಬಿದ್ದು ನನ್ನ ಕೊಣೆ ಸೇರಿದೆ ಪುಸ್ತಕ ಹಿಡಿದು ೩ ಒಂಸಾ ೩ ೩ ಟುಸಾ ಫೋರ್  ಅಂತ ಸುಮ್ಮನೆ ಗೊಣಗುತ್ತ ಕೂತೆ ಆಗಲೇ ನನಗಿಂತ ಮುಂಚೆ ನನ್ನ ತಂಗಿ ಓದಲು ಶುರು ಮಾಡಿದಳು ಅವಳಿಗೂ ನನಗೂ ಮೊದಲಿಂದಲೂ ಹಾವು ಮುಂಗುಸಿ ಅವಳ ಮೇಲೆ ನಾನು ಚಾಡಿ ಹೇಳೋದು ಅವಳು ನನ್ನ ಮೇಲೆ ಹೇಳೋದು ಸರ್ವೇ ಸಾಮಾನ್ಯ , ಆದರೆ ನಮ್ಮ ತಂದೆ ಅಂದರೆ ನಮಗಷ್ಟೇ ಅಲ್ಲ ಇಡಿ ಏರಿಯದಲ್ಲೇ ಎಲ್ಲರಿಗು ಭಯ ಗೌರವ ಅವರ ಅಫಿಸಿನ ಬಸ್ಸು ಬರುವೆ ವೇಳಗೆ ಇಡಿ ಮೈಧಾನ ನಿಶಬ್ಧ ಮತ್ತು ನಮ್ಮ ಮನೆಯ ಅಂಗಳದಲ್ಲಿ ಸುತ್ತ ಮುತ್ತಲಿನ ಹೆಂಗಸರ ಮೀಟಿಂಗ್ ಕೂಡ ಖುಲಾಸೆ

ನಮ್ಮದು ಮದ್ಯಮ ವರ್ಗದ ಕುಟುಂಬ ತಂದೆ ಸಾರ್ಕರಿ ನೌಕರರು ಭುಮಾಪನ ಇಲಾಖೆ ನಿಷ್ಠಾವಂತ ಅಧಿಕಾರಿ ಲಂಚ್ಚ ತೆಗೆದುಕೊಳ್ಳುವವರಿಗೆ ಸಿಂಹ ಸ್ವಪ್ನ ಅದ್ದುದರಿಂದ ಅವರು ವರ್ಗಾವಣೆ ಆಗದ ಉರಿಲ್ಲ ತುಂಬಾ ಬಡತನದಲ್ಲೇ ಬೆಳೆಸಿದರು ನಮ್ಮನು ನಾವು ಮೂರೂ ಜನ ಗಂಡು ಮಕ್ಕಳು ಒಬ್ಬಳೇ ತಂಗಿ ಅಮ್ಮ ಗೃಹಲಕ್ಷ್ಮಿ ಚಿಕ್ಕಂದಿನಿಂದಲೇ ಬಹಳ ಸಿಸ್ತಿನಿಂದ ಬೆಳೆದ ವಾತಾವರಣ

ಆದರು ನಮ್ಮ ಮೂವರಲ್ಲಿ ಯಾರಲ್ಲೂ ವಿಧ್ಯೆ ಅಷ್ಟಾಗಿ ಒಲಿಯಲಿಲ್ಲ ಅದೊಂದೇ ಕೊರತೆ ನಮ್ಮ ತಂದೆಗೆ ಇದದ್ದು ತಂಗಿ ನಮ್ಮೆಲರನ್ನು ಮೀರಿಸಿದವಳು ಆ ವಿಷಯದಲ್ಲಿ ಆದುದರಿಂದ ಅವಳು ಅಪ್ಪನಿಗೆ ಅಚ್ಚು ಮೆಚ್ಚು ನಾವೆಲ್ಲಾ ಸ್ವಲ್ಪ ದೂರದಲ್ಲೇ ನಿಂತು ನೋಡುತಿದ್ದೆವು ಅವರನ್ನ ಏನಾದರು ಕೇಳುವುದು ಎಲ್ಲ ನಮ್ಮ ಅಮ್ಮನ ಜವಾಬ್ಧಾರಿ



ಇಲ್ಲಿಗೆ ಮನೆಯ ಪಿಟಿಕೆ ಮುಗಿಸಿ ನನ್ನ ಕಥೆಗೆ ಬರುತ್ತೇನೆ ,

ನಾನೊಬ್ಬ ಸ್ನೇಹ ಜೀವಿ ಮತ್ತು ತುಂಬಾ ಭಾವುಕ ಚಿಕ್ಕಂದಿನಿಂದಲೇ ಎಡವುತ್ತಾ ಕುಂಟುತ್ತ ಸಾಗಿತ್ತು ನನ್ನ ವಿಧ್ಯಾಭ್ಯಾಸ ಆದರೆ ಎಲ್ಲಿಯೂ ಅನೂತ್ತಿರ್ಣನಾಗಿರಲಿಲ್ಲ ಅಂಕಗಳು ಮಾತ್ರ ೩೫ ರ ಮೇಲೆ ದಾಟುತಿರಲಿಲ್ಲ ಹೇಗೋ ಎಸ ಎಸ ಎಲ್ ಸಿ ಅಲ್ಲಿ ಅದೇನು ಜಾದು ನಡೆಯಿತೋ ಗೊತ್ತಿಲ್ಲ ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ಅದೊಂದೇ ಈಗಲೂ ನನಗೆ ಹೆಗ್ಗಳಿಕೆ

ಆಮೇಲೆ ಕಾಲೇಜು ವಿಜ್ಞಾನ ವಿಷಯದಲ್ಲಿ ಪಡೆದ ಕುರ್ಚಿ , ಅಪ್ಪನಿಗೆ ನನ್ನನು ವೈದ್ಯ ಓದಿಸಬೇಕೆಂಬ ಆಸೆ ಆದರೆ ನನ್ನ ಸ್ನೇಹಿತರು ನನಗೆಂದೆ ಕಾಯುತಿದ್ದರು ಕಾಲೇಜಿನ ಮುಖದ್ವಾರದಲ್ಲಿ , ಇಷ್ಟು ದಿನ ಮನೆಯಲ್ಲಿ ಸಿಸ್ತಿನಿಂದ ಬೆಳೆದವನಿಗೆ ಒಮ್ಮೆಲೇ ಸ್ವರ್ಗ ಸಿಕ್ಕಷ್ಟು ಕುಶಿ ಬಣ್ಣ ಬಣ್ಣದ ವಸ್ತ್ರಗಳಲಿ ಹುಡುಗಿಯರು ಹುಡುಗರು ಎಲ್ಲರು ಶ್ರೀಮಂತ ಕುಟುಂಬದವರೇ ದ್ವಿತೀಯ ದರ್ಜೆಯಲ್ಲಿ ಪಾಸು ಮಾಡಿದರು ನನೆನ್ನೋ ಮಹಾ ಕಡೆದು ಕಟ್ಟೆ ಹಾಕಿದ ಹಾಗೆ ಬೀಗಿದರೆ ಕೊನೆಗೆ ನನಗೆ ಸಿಕ್ಕ ಎಚ್ ವಿಭಾಗ ಅಲ್ಲಿ ಎಲ್ಲರು ೩೫ ರಿಂದ ೪೦ರ ಒಳಗಿನ ಶೇಕಡ ದವರೆ ಸ್ವಲ್ಪ ಸಿರಿವಂತರೆ ಅಗಂತ ಬಡ ವಿದ್ಯರ್ತಿಗಳ ಗುಂಪು ಇಲ್ಲವೆಂದಲ್ಲ ಇತ್ತು ಆದರೆ ಮನಸ್ಸು ಸಿರಿವಂತರ ಸಹವಾಸ ಬಯಸಿತು ಏಕೆಂದರೆ ಕಪ್ಪು ಬಿಳುಪಿಗೂ ರಂಗು ರಂಗಿಗು ಇದ್ದ ವ್ಯತ್ಯಾಸವದು ಆಯ್ಕೆ ನಿಶ್ಚಿತವಾಗಿತ್ತು

ಅವರ ಜೊತೆಗಿನ ಒಡನಾಟ ಅಷ್ಟೇನೂ ಕುಶಿ ಕೊಡುತ್ತಿರಲಿಲ್ಲ ಏಕೆಂದರೆ ಅವರ ಸಮಕ್ಕೆ ನನ್ನ ಕಿಸೆಯಲ್ಲಿ ಕಾಸು ಇರುತ್ತಿರಲಿಲ್ಲ ರಾತ್ರಿ ಅಪ್ಪ ಮಲಗಿದ ಮೇಲೆ ಅವರ ಪ್ಯಾಂಟಿನ ಕಿಸೆಯಲ್ಲಿ ಸಿಕ್ಕ ಚೆಲ್ಲರೆಗಳು ಸಾಕಾಗುತ್ತಿರಲಿಲ್ಲ ಇದಕ್ಕೆ ನನಗೂ ಅಮ್ಮನಿಗೂ ಯಾವಾಗಲು ಜಗಳ ಬಿಡಿ ಅದು ಬೇರೆ ವಿಷಯ ಅವರು ತಡಕುವು ಮೊದಲೇ ನಾನು ಕಾಲಿ ಮಾಡಿರುತಿದ್ದೆ , ಆ ಸಿಕ್ಕ ಚೆಲ್ಲರೆಯಲ್ಲಿ ಸಂಗಂ, ತ್ರಿಭುವನ್, ಸಂತೋಷ್, ಚಿತ್ರ ಮಂಧಿರಗಳಿಗೆ ಹೋಗಲಾಗುತಿರಲಿಲ್ಲ ಅವರೊಟ್ಟಿಗೆ ಅವರು ಮೆಜೆಸ್ಟಿಕ್ ಬಸ್ಸು ಅಥವಾ ಬೈಕು ಹೊಡಿಸಿಕೊಂಡು ಹೋದಮೇಲೆ ನಾನು ನವರಂಗ್ ಅಥವಾ ಪ್ರಸನ್ನ ಪ್ರಮೋದ್ ಇವುಗಳಿಗೆ ಗಾಂಧೀ ಕ್ಲಾಸ್ ಗೆ ಹೋಗಲು ಸಾಕಾಗುತ್ತಿತ್ತು

ಮುದುವರೆಯುವುದು ......