Tuesday, August 7, 2012

ನನ್ನದೇ ಕಥೆ ಇನ್ನು ಹೆಸರಿಟ್ಟಿಲ್ಲ



ಸಂಜೆ ರಂಗು ತಿಳಿಗೆಂಪು ಆಗಸದಲ್ಲಿ, ಕೆಮ್ಮಣ್ಣ ಓಕಳಿ ಮೈದಾನದಲ್ಲಿ ಗದ್ದಲವೋ ಗದ್ದಲ್ಲ ಮಕ್ಕಳು ಎಲ್ಲೆಡೆ ಆಟದಲ್ಲಿ ಕೇಕೆ, ಕ್ರೆಕೆಟ್, ಚುಚೆಂಡು, ಲಗೋರಿ , ಆಟಗಳಲ್ಲಿ ಮಕ್ಕಳು ಮಗ್ನ ಸಂಜೆ ೬.೩೦ ಆದದ್ದೆ ತಡ ಯಾರೋ ಒಬ್ಬ ಬೊಬ್ಬೆ ಹೊಡೆದ ಹುಚಪ್ಪಣ್ಣ ಬತ್ತಾವರೆ ಓಡ್ರೋ ಅಂತ ಕೆಲವೇ ಕ್ಷಣದಲ್ಲಿ ನಿಶಬ್ದ ಎಲ್ಲರು ಓಟ ಕಿತ್ತು ಓಡಿದವರೇ ಒಮ್ಮಲ್ಲೇ ಹಾರಾಡುತಿದ್ದ ಕೆಮ್ಮಣ್ಣು ಹಾಗೆ ನೆಲದಮೇಲೆ ನಿದ್ರೆಗೆ ಶರಣಾಗುತಿತ್ತು , ನಾನು ಕೂಡ ಎದ್ದು ಬಿದ್ದು ನನ್ನ ಕೊಣೆ ಸೇರಿದೆ ಪುಸ್ತಕ ಹಿಡಿದು ೩ ಒಂಸಾ ೩ ೩ ಟುಸಾ ಫೋರ್  ಅಂತ ಸುಮ್ಮನೆ ಗೊಣಗುತ್ತ ಕೂತೆ ಆಗಲೇ ನನಗಿಂತ ಮುಂಚೆ ನನ್ನ ತಂಗಿ ಓದಲು ಶುರು ಮಾಡಿದಳು ಅವಳಿಗೂ ನನಗೂ ಮೊದಲಿಂದಲೂ ಹಾವು ಮುಂಗುಸಿ ಅವಳ ಮೇಲೆ ನಾನು ಚಾಡಿ ಹೇಳೋದು ಅವಳು ನನ್ನ ಮೇಲೆ ಹೇಳೋದು ಸರ್ವೇ ಸಾಮಾನ್ಯ , ಆದರೆ ನಮ್ಮ ತಂದೆ ಅಂದರೆ ನಮಗಷ್ಟೇ ಅಲ್ಲ ಇಡಿ ಏರಿಯದಲ್ಲೇ ಎಲ್ಲರಿಗು ಭಯ ಗೌರವ ಅವರ ಅಫಿಸಿನ ಬಸ್ಸು ಬರುವೆ ವೇಳಗೆ ಇಡಿ ಮೈಧಾನ ನಿಶಬ್ಧ ಮತ್ತು ನಮ್ಮ ಮನೆಯ ಅಂಗಳದಲ್ಲಿ ಸುತ್ತ ಮುತ್ತಲಿನ ಹೆಂಗಸರ ಮೀಟಿಂಗ್ ಕೂಡ ಖುಲಾಸೆ

ನಮ್ಮದು ಮದ್ಯಮ ವರ್ಗದ ಕುಟುಂಬ ತಂದೆ ಸಾರ್ಕರಿ ನೌಕರರು ಭುಮಾಪನ ಇಲಾಖೆ ನಿಷ್ಠಾವಂತ ಅಧಿಕಾರಿ ಲಂಚ್ಚ ತೆಗೆದುಕೊಳ್ಳುವವರಿಗೆ ಸಿಂಹ ಸ್ವಪ್ನ ಅದ್ದುದರಿಂದ ಅವರು ವರ್ಗಾವಣೆ ಆಗದ ಉರಿಲ್ಲ ತುಂಬಾ ಬಡತನದಲ್ಲೇ ಬೆಳೆಸಿದರು ನಮ್ಮನು ನಾವು ಮೂರೂ ಜನ ಗಂಡು ಮಕ್ಕಳು ಒಬ್ಬಳೇ ತಂಗಿ ಅಮ್ಮ ಗೃಹಲಕ್ಷ್ಮಿ ಚಿಕ್ಕಂದಿನಿಂದಲೇ ಬಹಳ ಸಿಸ್ತಿನಿಂದ ಬೆಳೆದ ವಾತಾವರಣ

ಆದರು ನಮ್ಮ ಮೂವರಲ್ಲಿ ಯಾರಲ್ಲೂ ವಿಧ್ಯೆ ಅಷ್ಟಾಗಿ ಒಲಿಯಲಿಲ್ಲ ಅದೊಂದೇ ಕೊರತೆ ನಮ್ಮ ತಂದೆಗೆ ಇದದ್ದು ತಂಗಿ ನಮ್ಮೆಲರನ್ನು ಮೀರಿಸಿದವಳು ಆ ವಿಷಯದಲ್ಲಿ ಆದುದರಿಂದ ಅವಳು ಅಪ್ಪನಿಗೆ ಅಚ್ಚು ಮೆಚ್ಚು ನಾವೆಲ್ಲಾ ಸ್ವಲ್ಪ ದೂರದಲ್ಲೇ ನಿಂತು ನೋಡುತಿದ್ದೆವು ಅವರನ್ನ ಏನಾದರು ಕೇಳುವುದು ಎಲ್ಲ ನಮ್ಮ ಅಮ್ಮನ ಜವಾಬ್ಧಾರಿ



ಇಲ್ಲಿಗೆ ಮನೆಯ ಪಿಟಿಕೆ ಮುಗಿಸಿ ನನ್ನ ಕಥೆಗೆ ಬರುತ್ತೇನೆ ,

ನಾನೊಬ್ಬ ಸ್ನೇಹ ಜೀವಿ ಮತ್ತು ತುಂಬಾ ಭಾವುಕ ಚಿಕ್ಕಂದಿನಿಂದಲೇ ಎಡವುತ್ತಾ ಕುಂಟುತ್ತ ಸಾಗಿತ್ತು ನನ್ನ ವಿಧ್ಯಾಭ್ಯಾಸ ಆದರೆ ಎಲ್ಲಿಯೂ ಅನೂತ್ತಿರ್ಣನಾಗಿರಲಿಲ್ಲ ಅಂಕಗಳು ಮಾತ್ರ ೩೫ ರ ಮೇಲೆ ದಾಟುತಿರಲಿಲ್ಲ ಹೇಗೋ ಎಸ ಎಸ ಎಲ್ ಸಿ ಅಲ್ಲಿ ಅದೇನು ಜಾದು ನಡೆಯಿತೋ ಗೊತ್ತಿಲ್ಲ ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ಅದೊಂದೇ ಈಗಲೂ ನನಗೆ ಹೆಗ್ಗಳಿಕೆ

ಆಮೇಲೆ ಕಾಲೇಜು ವಿಜ್ಞಾನ ವಿಷಯದಲ್ಲಿ ಪಡೆದ ಕುರ್ಚಿ , ಅಪ್ಪನಿಗೆ ನನ್ನನು ವೈದ್ಯ ಓದಿಸಬೇಕೆಂಬ ಆಸೆ ಆದರೆ ನನ್ನ ಸ್ನೇಹಿತರು ನನಗೆಂದೆ ಕಾಯುತಿದ್ದರು ಕಾಲೇಜಿನ ಮುಖದ್ವಾರದಲ್ಲಿ , ಇಷ್ಟು ದಿನ ಮನೆಯಲ್ಲಿ ಸಿಸ್ತಿನಿಂದ ಬೆಳೆದವನಿಗೆ ಒಮ್ಮೆಲೇ ಸ್ವರ್ಗ ಸಿಕ್ಕಷ್ಟು ಕುಶಿ ಬಣ್ಣ ಬಣ್ಣದ ವಸ್ತ್ರಗಳಲಿ ಹುಡುಗಿಯರು ಹುಡುಗರು ಎಲ್ಲರು ಶ್ರೀಮಂತ ಕುಟುಂಬದವರೇ ದ್ವಿತೀಯ ದರ್ಜೆಯಲ್ಲಿ ಪಾಸು ಮಾಡಿದರು ನನೆನ್ನೋ ಮಹಾ ಕಡೆದು ಕಟ್ಟೆ ಹಾಕಿದ ಹಾಗೆ ಬೀಗಿದರೆ ಕೊನೆಗೆ ನನಗೆ ಸಿಕ್ಕ ಎಚ್ ವಿಭಾಗ ಅಲ್ಲಿ ಎಲ್ಲರು ೩೫ ರಿಂದ ೪೦ರ ಒಳಗಿನ ಶೇಕಡ ದವರೆ ಸ್ವಲ್ಪ ಸಿರಿವಂತರೆ ಅಗಂತ ಬಡ ವಿದ್ಯರ್ತಿಗಳ ಗುಂಪು ಇಲ್ಲವೆಂದಲ್ಲ ಇತ್ತು ಆದರೆ ಮನಸ್ಸು ಸಿರಿವಂತರ ಸಹವಾಸ ಬಯಸಿತು ಏಕೆಂದರೆ ಕಪ್ಪು ಬಿಳುಪಿಗೂ ರಂಗು ರಂಗಿಗು ಇದ್ದ ವ್ಯತ್ಯಾಸವದು ಆಯ್ಕೆ ನಿಶ್ಚಿತವಾಗಿತ್ತು

ಅವರ ಜೊತೆಗಿನ ಒಡನಾಟ ಅಷ್ಟೇನೂ ಕುಶಿ ಕೊಡುತ್ತಿರಲಿಲ್ಲ ಏಕೆಂದರೆ ಅವರ ಸಮಕ್ಕೆ ನನ್ನ ಕಿಸೆಯಲ್ಲಿ ಕಾಸು ಇರುತ್ತಿರಲಿಲ್ಲ ರಾತ್ರಿ ಅಪ್ಪ ಮಲಗಿದ ಮೇಲೆ ಅವರ ಪ್ಯಾಂಟಿನ ಕಿಸೆಯಲ್ಲಿ ಸಿಕ್ಕ ಚೆಲ್ಲರೆಗಳು ಸಾಕಾಗುತ್ತಿರಲಿಲ್ಲ ಇದಕ್ಕೆ ನನಗೂ ಅಮ್ಮನಿಗೂ ಯಾವಾಗಲು ಜಗಳ ಬಿಡಿ ಅದು ಬೇರೆ ವಿಷಯ ಅವರು ತಡಕುವು ಮೊದಲೇ ನಾನು ಕಾಲಿ ಮಾಡಿರುತಿದ್ದೆ , ಆ ಸಿಕ್ಕ ಚೆಲ್ಲರೆಯಲ್ಲಿ ಸಂಗಂ, ತ್ರಿಭುವನ್, ಸಂತೋಷ್, ಚಿತ್ರ ಮಂಧಿರಗಳಿಗೆ ಹೋಗಲಾಗುತಿರಲಿಲ್ಲ ಅವರೊಟ್ಟಿಗೆ ಅವರು ಮೆಜೆಸ್ಟಿಕ್ ಬಸ್ಸು ಅಥವಾ ಬೈಕು ಹೊಡಿಸಿಕೊಂಡು ಹೋದಮೇಲೆ ನಾನು ನವರಂಗ್ ಅಥವಾ ಪ್ರಸನ್ನ ಪ್ರಮೋದ್ ಇವುಗಳಿಗೆ ಗಾಂಧೀ ಕ್ಲಾಸ್ ಗೆ ಹೋಗಲು ಸಾಕಾಗುತ್ತಿತ್ತು

ಮುದುವರೆಯುವುದು ......

2 comments:

  1. ಚೆನ್ನಾಗಿದೆ ......ಶುಭವಾಗಲಿ ...
    ಫಾಂಟ್ಸ್ ಮೇಲೆ ಗಮನ ಕೊಡಿ ಒಂದೇ ಅಳತೆ ಇರಲಿ..

    ReplyDelete
  2. ಧನ್ಯವಾದ ಪ್ರಕಾಶ್‌ ಮುಂದಿನ ಸಂಚಿಕಿಯಲ್ಲಿ ಗಮನ ಹರಿಸುತ್ತೆನೆ

    ReplyDelete