ಗೆಳತಿ ಕಾದಿರುವೆ
ಹೇ ತಂಗಾಳಿಯೇ ಒಮ್ಮೆ ಅವಳ ಸೋಕಿ ಬಾ
ನನ್ನ ವಿರಹವ ಸ್ವಲ್ಪ ಸಾರಿ ಬಾ ನಾ ಬರುತ್ತಿರುವೆ ಅವಳಿಗೆಂದೇ
ಸ್ವಲ್ಪ ನನಗಾಗಿ ಕಾಯಲು ಹೇಳಿ ಬಾ
ತುಡಿಯುತ್ತಿದೆ ಮನ ಅವಳ ತಬ್ಬಿ ಹಿಡಿಯಲು
ನನ್ನ ಎದೆಯ ಪ್ರೀತಿ ಆಳ ಅವಳಿಗೆ ಸಾರಲು ಮರೆತು ಹೋಗಿದ್ದೆ ನನ್ನೆ ನಾ ಕನ್ನಡಿಯಲ್ಲಿ ನೋಡಲು
ನನ್ನಾಸೆಯಿಂದ ಅವಳ ಸಿಂಗರಿಸುವ ಆಸೆ ಹೊಂದಲು
ಬಣ್ಣ ಬಣ್ಣದ ಹೂವುಗಳಿಂದ ನಿನ್ನ ಸಿಂಗರಿಸುವ ಆಸೆ ಇದೆ
ಅವಳ ಕೇಶರಾಶಿಯೊಂದಿಗೆ ಸ್ವಲ್ಪ ಆಟವಾಡುವ ಮನಸ್ಸಿದೆ ನನ್ನ ಪ್ರೀತಿಗೆ ಹುಚ್ಚೆದ್ದು ನನ್ನ ಬಿಟ್ಟು ಹೋಗಲಾರಳೆ
ಅವಳ ನೋವೆಲ್ಲ ತೆಗೆದು ಕುಶಿಯನ್ನು ಮಡಿಲ ತುಂಬುವೆ
ಹೇ ತಂಗಾಳಿಯೇ ಒಮ್ಮೆ ಅವಳಿಗೆ ನನ್ನ ಓಲೆ ತಲುಪಿಸು
ನಾನು ಎಲ್ಲಿ ಇದ್ದರು ಅವಳಬಳಿಯಲ್ಲೇ ನನ್ನ ಮನಸ್ಸು ನಮ್ಮ ನಡುವಿನ ಅಂತರ ಇನ್ನು ಕೆಲವೇ ದಿನಗಳು
ಒಮ್ಮೆ ನಿನ್ನ ನೋಡಿದರೆ ಸಾಕು ನನಗೆ ಸ್ವರ್ಗ ಆ ಕ್ಷಣಗಳು
ಸಂಜು
No comments:
Post a Comment