Wednesday, August 29, 2012

ಸೋನೆ ಮಳೆಯಾಗಿ ಬಾ


   ಸೋನೆ ಮಳೆಯಾಗಿ ಬಾ
ಸೋನೆಯ ಮಳೆಯಾಗಿ ನನ್ನ ಸ್ಪರ್ಶಿಸು
ವಿರಹಾಗ್ನಿಯ ಈ ಬೇಗೆಯ ತೀರಿಸು
ಮನ ವ್ಯಾಕುಲ ಅ ಒಂದು ಹನಿ ಹಿಡಿಯಲು
ನೀನು ಹಬೆಯಾಗಿ ಎಲ್ಲೋ ಕರಗಿ ಹೋದೆ

ಕನಸಿಗೆ ಬಂದರೆ ನಿನ್ನ ಅಂದದಿ ಸುಸಜ್ಜಿಸುವೆ
ಅಲ್ಲೂ ನಿನ್ನ ಸ್ಪರ್ಶಕ್ಕೆ ಆತುರಿಯಲು ಮಾಯವಾಗುವೆ
ಮಂಕಾಗಿ , ಬೇಸರದಿ , ಅಲೆದಾಡಿ ನಿನ್ನ ಹುಡುಕಲು
ಮೋಡದ ಮರೆಯಲ್ಲಿ ನೀ ಇಣುಕಿ ನಗುವೇ

ನೀ ಗುಲಾಬಿಯು ಯಾವ ಹೋ ತೋಟಕ್ಕೆ
ನೀನಿದ್ದರೆ ಸೊಗಸು ನನ್ನೆದೆಯ ಅಂಗಳಕ್ಕೆ
ಪ್ರೀತಿಯ ಹೊಳೆ ನೀನು ಯಾವ ಊರಿಗೆ
ದಾಹ ತೀರಿಸು ಹರಿದು ನನ್ನೀ ಬಾಳಿಗೆ

ಎಲ್ಲರೊಂದಿಗೆ ಹಂಚಿ ನಗು ನಗುತ ನಲಿವೆ
ಪ್ರೀತಿಯ ಭಾಗ್ಯಹೀನ ನಾನು ಕೊಡ
ನನ್ನದು ಹಸಿದ ಹೊಟ್ಟೆ ನೋಡ
ಎಲ್ಲರಿಗು ಕೊಟ್ಟು ನನ್ನೇಕೆ ಮರೆವೆ

~ಸಂಜು ~

No comments:

Post a Comment