ಆ ಸಣ್ಣ ಮಳೆ
ನೀ ನಡೆವ ಹಾದಿಯಲಿ ಒಮ್ಮೆ ತುಂತುರು
ಮಳೆ ಹನಿದರೆ
ಮಳೆಯಲ್ಲಿ ನೆನೆಯುತ್ತ ನೀ
ಹರ್ಷಗೊಂಡರೆ ಮಳೆಯ ಹನಿ ನಿನ್ನ ಕೇಶಾರಾಶಿಯಿಂದ ನಿನ್ನ ಕೆನ್ನೆಗೆ ಇಳಿದರೆ
ತಣ್ಣನೆಯ ಗಾಳಿ ನಿನ್ನ ಸೋಕಿ ಮುದಗೊಳಿಸಿದರೆ
ನನ್ನ ನೆನಪು ನಿನ್ನ ಮನದಲ್ಲಿ ಅರಳಿದರೆ
ಒಮ್ಮೆ ಕಣ್ಣು ಮುಚ್ಚಿ ನಿನ್ನ ಬಾಹುಗಳಲ್ಲಿ ಆ ಮಳೆಯ ಆಲಂಗಿಸು
ನನ್ನ ಬೆಚ್ಚನೆಯ ಸಿಹಿ ಮುತ್ತು ನಿನ್ನ ಸೋಕುವುದು
ಅದರ ಅನುಭೂತಿ ನನ್ನ ಇಲ್ಲಿ ಸ್ಪರ್ಸಿಸುವುದು
~ ಸಂಜು ~
No comments:
Post a Comment