Tuesday, December 4, 2012

ಕನಸು


    ಕನಸು
ಇನ್ನು ಮೆಲ್ಲಗೆ ಮಾತನಾಡು
ಹೃದಯದ ಬಡಿತ
ಎಲ್ಲೋ ಕೇಳುತ್ತಿರಬಹುದು
ಪದಗಳು ಉಸುರಿದ ಮೇಲೆ
ತುಟಿಯಿಂದ
ಸಮಯಗಳು ಸಂಗ್ರಹಿಸಿ
ನೆನಪಿನಲ್ಲಿ ಇಡಬಹುದು
ಕಿವಿಯಿಂದ ನೇರ
ಹೃದಯಕ್ಕೆ ನಾಟಿ ಬಿಡಬಹುದು
ಹೃದಯದ ಮಾತು ಹೃದಯಕ್ಕೆ
ತಿಳಿಸಲು ಪದಗಳು ಬೇಕೇ
ಕಣ್ಣಿನಲ್ಲೇ ಎಲ್ಲ ಹೇಳಿ
ಮುಗಿಸಿ ಬಿಡಬಹುದು
ಹಾಗೆ ಕಣ್ಣಿನಲ್ಲೇ ಸನ್ನೆ ಮಾಡು
ಸಾಕು ನನ್ನೀ ಹೃದಯ
ಪದ ತುಂಬಿ ಹಾಡುವುದು
 ಕಣ್ಣು ಮುಚ್ಚಿ ನನ್ನ
ಕನಸ ಅನುಭವಿಸು
ರಾತ್ರಿ ಕತ್ತಲು
ಕದ್ದೊಯ್ದರೆ ಕಷ್ಟ
ಇಲ್ಲವೇ ಒಂದು
ಸಣ್ಣ ಗಾಳಿ ಹಾರಿಸಿ
ಬಿಡಬಹುದು
ಇಂದು ಇಷ್ಟು ಹಾತ್ತಿರವಿದ್ದಿಯ
ಕನಸಿನಲ್ಲಿ
ಹೀಗೆಯೇ ನಮ್ಮ ದುರಗಳು
ಕಮ್ಮಿಯಾಗಲಿ
ನನಸಲ್ಲಿ
ಅಷ್ಟರಲ್ಲಿ
 ನಮ್ಮಿ ಜೀವನ
ಮುಗಿದು ಬಿಡಬಹುದು

ಸಂಜು

ನಿನ್ನ ಅಂದಕೆ ನಾ ಸೋತೆ ಪ್ರೀತಿ ದೇವತೆ


  ನಿನ್ನ ಅಂದಕೆ ನಾ ಸೋತೆ
ಪ್ರೀತಿ ದೇವತೆ

ಮಗ್ಗು ಮಲ್ಲಿಗೆಯ ಹಾರವಿಲ್ಲ
ಮುತ್ತಿನ ಮಣಿಯ ಸರವಿಲ್ಲ

 ಯಾವುದೇ ಸಿಂಗಾರವಿಲ್ಲದೆ
ನೀನು ಎಷ್ಟು ಸುಂದರ
ನಿನ್ನ ಮುದ್ದು ಮೊಗವೆಷ್ಟು
ಅಂದದ ಆಗರ

ನಿನ್ನ ಪ್ರೀತಿಯೇ ನಿನ್ನ ಸೌಂದರ್ಯ
ಆ ಸೌಂದರ್ಯವೇ ನಿನ್ನ ಆಭರಣ
ನೀನು ಹೂವಿನ ತಾಜಾತನ
ಆ ಇಬ್ಬನಿ ಮೇಲಿನ ಕಿರಣ
ನಿನ್ನ ಜತೆಗಿದ್ದರೆ ಆ ಸುಘಂಧ
ನಿನ್ನ ಜೊತೆಗಿರುವ ನನ್ನ ಆನಂದ
ಮನದಲ್ಲಿ ಸಪ್ತ ಸ್ವರಗಳ ನಾದ

ನಿನ್ನ ಮಾತು ಅಪ್ಪಟ್ಟ ಚಿನ್ನ
ನಿನ್ನ ನಗೆಯೇ ರತ್ನಾಭಾರಣ
ನಿನ್ನ ನೋಟವೇ ಹೊನ್ನ ಕಿರಣ
ನಿನ್ನ ರೂಪವೆ ಒಂದು
ಪ್ರಕಾಶ ಜ್ಯೋತಿ
ನಿನ್ನ ಮೊಗವು ಒಂದು
ಸುಂದರ ಮೂರ್ತಿ
ನಿನ್ನ ನೋಡದೆ ಹೇಗೆ ನನ್ನ
ಪರಿಸ್ತಿತಿ

ನನ್ನ ಮನದಲ್ಲಿ ಪ್ರೀತಿ ತುಂಬಿ
ನನ್ನ ಕನಸಲ್ಲಿ ಬಣ್ಣ ತುಂಬಿ
ನನ್ನ ಬದುಕಿಗೆ ಅರ್ಥ ತುಂಬಿ
ನೀ ನನ್ನ ಪ್ರೇಮದ
ದೇವತೆ

ನಿನ್ನ ಪ್ರೀತಿಯ
 ಸಂಜು

ತ್ಯಪೆಯಲ್ಲಿ ತಾಪ


ತ್ಯಪೆಯಲ್ಲಿ ತಾಪ

ಮುಂಗಾರು ಮಳೆ ಸುರಿದು
ಹೋಗಿತ್ತು ತ್ಯಾಪೆ ಒಡಲ ತೊಯ್ದು
ಚಾಡಿ ಏಟು ಹೊಡೆದಂಗೆ
ಬರ ಸಿಡಿಲು ಬಡಿದಂಗೆ

ಚಡಪಡಿಸಿತ್ತು ಜಠರ
ಆರುಚಿದರು ಒಸಿ ಗಂಜಿ
ಕೊಡಲಿಲ್ಲ ಮಂಡೆ ಬಿಸಿ ಬಸವಿ
ಸಿಡುಕಿದಳು ಕೆಂಗಣ್ಣ ಲ್ಲೇ
ನಾ ಮುದುರಿದೆ ಅಂಜಿ
ಅವಳೆಲ್ಲಿ ಮಾಡಿಯಳು
ಇದ್ದ ಪಾವಕ್ಕಿ ಕೊಟ್ಟು
ಬುಂಡೆಯಾ ಇಳಿಸಿದ್ದು
ಮರೆತೊಯಿತು
ಕುಡಿದದ್ದು ಇಳಿದು
ಹೋಯಿತು
ಇವಳ ಬಾಯಿ ಜಗಿತಕ್ಕೆ
ತಮಟೆಯ ಕಾಯಿಸೋಕೆ
ಬಿಸಿ ಒಲೆಯು ಕಾಣೆ
ಪುಡಿಗಾಸು ಎಣಿಸೋಕೆ
ಹೆಣಕ್ಕು ಬರವಯಿತೇನೆ
ಹೊಟ್ಟೆ ಹಸಿವ ತಡೆದವರು
ತಡೆಯರು ಇವರು ಮೈ ಬಿಸಿ
ಮಳೆಗಾಲದಲ್ಲಿ ಇರುವುದೊಂದೇ
ವಿನೋದ, ಇವರೊಳಗೆ
ಮಲಗಿದರು ತಾ ಜಾಡಿಸಿ
ತ್ಯಾಪೆ ಕಂಬಳಿ

ಸಂಜು

ನಿನ್ನೊಲವ ಸಿರಿವಂತಕೆ


   ನಿನ್ನೊಲವ ಸಿರಿವಂತಕೆ

ಬಂದಿದೆ ಸಿರಿವಂತಕೆ
ಆಗಿಹೆ ಕೋಟ್ಯಾಧಿಪತಿ
ತೆಲಿಹೆ ಐಶ್ವರ್ಯದ
ಅಮಲಿನಲ್ಲಿ
ನಿನ್ನೊಲವಿನ ಪುಟ್ಟ
ಗುಡಿಸಿಲಿನಲ್ಲಿ
ನಿನ್ನ ಪ್ರೀತಿಯ
ಬೊಗಸೆ ಅಂಬಲಿಯಲ್ಲಿ
ನಿನ್ನ ಆಸೆರೆಯ
ಚಿಂದಿ ಬಟ್ಟೆಯಲ್ಲಿ
ನಿನ್ನ ಎದೆ ಗುಡಿಯ
ಪುಟ್ಟ ಹಣತೆಯಲಿ
ಬಡತನವಿದ್ದರು
ಚಿಂತೆಯಿಲ್ಲ
ನಿನ್ನ ಒಲುಮೆ ಒಂದು
ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚುವೆ
ನೀ ಜೊತೆಗಿರಲು
ನನ್ನ ಬದುಕಿಗೆ
ಪ್ರೀತಿ ದೇವತೆ ನೀನು
ಮತ್ತೇನನ್ನು ಕೇಳಲಿ
ವರವ ಆ ದೇವರಲ್ಲಿ

ಸಂಜು 

ಉಡುಗೊರೆ


   ಉಡುಗೊರೆ
ನಿನ್ನ ಅಂದಕ್ಕೆ ಸರಿ ಸಾಟಿ
ಯಾರು ನೈಧಿಲೆ
ಮೊಗ ಚಂದಿರ
ನೋಟ ವಯ್ಯಾರ
ನೀ ನನ್ನ ಕೋಮಲೆ
ನನ್ನ ಬಾಳ ಬೆಳಕಿಗಿಂತ
ಬೆಳಕು ನಿನ್ನ
ಕಣ್ಣ ಹೊಳೆಪು
ನಿನ್ನ ನೋಡುತ
ಬಾಳೆಲ್ಲ ಕಾಲ ಕಳೆಯಲೇ
ಸ್ವಲ್ಪ ಆಸೆ ತೋರಿ
ನಿನ್ನ ಪ್ರೀತಿ ಮಾಡಲೇ
ನಿನ್ನ ಹೊಗಳಲು ನಿನಗೆ
ಹಿಡಿಸದು
ನಿನ್ನ ಚಿತ್ರ ಬಿಡಿಸದೆ
ನನ್ನಾಸೆ ನಿಲ್ಲದು
ನಿನ್ನ ಅಂದಕ್ಕೆ ನಾ ಯಾರ
ಹೊಲಿಸಲಿ
ನಿನಗೆ ನೀನೆ ಸಾಟಿ
ಭೂಲೋಕದ ಅಂದವೆಲ್ಲ
ನಿನ್ನಲ್ಲೇ ಕಾಣುವೆ
ನಿನ್ನ ನಾನು ಪಡೆದ ಮೇಲೆ
ಇ ಲೋಖವಿನ್ನೇಕೆ
ನನಗೆ ನೀನು ಮಾತ್ರ ಸಾಕೆ
ನೀ ನನ್ನ ಲೋಖವೇ
ನಿನ್ನ ಬಿಟ್ಟು ನಾನು ಇಲ್ಲ
ನನ್ನೇ ಕೊಟ್ಟ ಮೇಲೆ ನಿನಗೆ
ನಿನಗೆ ಬೇರೆ ಏನು
ಉಡುಗೊರೆ ಕೊಡಲಿ ಚೆಲುವೆ
ನಿನ್ನ ಸಂಜು