ತ್ಯಪೆಯಲ್ಲಿ ತಾಪ
ಮುಂಗಾರು ಮಳೆ ಸುರಿದು
ಹೋಗಿತ್ತು ತ್ಯಾಪೆ ಒಡಲ ತೊಯ್ದು
ಚಾಡಿ ಏಟು ಹೊಡೆದಂಗೆ
ಬರ ಸಿಡಿಲು ಬಡಿದಂಗೆ
ಚಡಪಡಿಸಿತ್ತು ಜಠರ
ಆರುಚಿದರು ಒಸಿ ಗಂಜಿ
ಕೊಡಲಿಲ್ಲ ಮಂಡೆ ಬಿಸಿ ಬಸವಿ
ಸಿಡುಕಿದಳು ಕೆಂಗಣ್ಣ ಲ್ಲೇ
ನಾ ಮುದುರಿದೆ ಅಂಜಿ
ಅವಳೆಲ್ಲಿ ಮಾಡಿಯಳು
ಇದ್ದ ಪಾವಕ್ಕಿ ಕೊಟ್ಟು
ಬುಂಡೆಯಾ ಇಳಿಸಿದ್ದು
ಮರೆತೊಯಿತು
ಕುಡಿದದ್ದು ಇಳಿದು
ಹೋಯಿತು
ಇವಳ ಬಾಯಿ ಜಗಿತಕ್ಕೆ
ತಮಟೆಯ ಕಾಯಿಸೋಕೆ
ಬಿಸಿ ಒಲೆಯು ಕಾಣೆ
ಪುಡಿಗಾಸು ಎಣಿಸೋಕೆ
ಹೆಣಕ್ಕು ಬರವಯಿತೇನೆ
ಹೊಟ್ಟೆ ಹಸಿವ ತಡೆದವರು
ತಡೆಯರು ಇವರು ಮೈ ಬಿಸಿ
ಮಳೆಗಾಲದಲ್ಲಿ ಇರುವುದೊಂದೇ
ವಿನೋದ, ಇವರೊಳಗೆ
ಮಲಗಿದರು ತಾ ಜಾಡಿಸಿ
ತ್ಯಾಪೆ ಕಂಬಳಿ
ಸಂಜು
No comments:
Post a Comment