Tuesday, December 4, 2012

ನನ್ನೀ ಪ್ರೇಮ


ನನ್ನೀ ಪ್ರೇಮ

ನಿನನ್ನೇ ಮನದಲ್ಲಿ
ನೆಲಸಿ ಪೂಜಿಸುತ್ತಿರುವಾಗ
ಎಲ್ಲೆಂದರಲ್ಲಿ
ನಿನ್ನೀ ವಿರಸ ತರವೇ
ತಿಳಿದು ತಿಳಿಯದಂತೆ
ನಿನ್ನ ಅಜ್ಞಾನ ತರವೇ
ಎಲೆಲ್ಲು ನಿನ್ನದೇ ಧ್ಯಾನ
ಎಲ್ಲವನ್ನು ಮರೆತು
ನಿನ್ನ ನೆನಪುಗಳೇ
ಪ್ರತಿ ನಿತ್ಯ ಅಭ್ಯಂಜನ
ನಿನ್ನ ಮಾತುಗಳನ್ನೇ
ದಿನ ನಿತ್ಯದ ನಾ ತಿನ್ನುವ
ಮೃಷ್ಟಾನ್ನ
ನಿನ್ನ ಹಾವ ಭಾವಗಳನ್ನೇ
ನನ್ನ ಜೋಗಳ ವಾಗಿಸಿ
ಮಲಗುವ ಸೋಪಾನ
ನಿನ್ನಲ್ಲೇ ಲೀನ ನಾನು
ನೀನಿಲ್ಲದೆ ಏನಿಲ್ಲ ನಾನು
ಹೇಗೆ ತಡೆಯಲಿ ನನ್ನ
ಪ್ರವಾಹದಂತೆ ಕಟ್ಟೆ
ಹೊಡೆದು ಮುನ್ನುಗುವ
ನನ್ನೀ ಪ್ರೇಮ
ನಿನ್ನ ಸೇರದಿದ್ದರು
ನಿನ್ನ ಸ್ಪರ್ಶಿಸುವ
ಒಂದು ಹನಿಯಾಗುವ ಆಸೆ
ಅದೇಕೋ ನನ್ನೊಳಗೆ
ನಾನೇ ಇಲ್ಲ
ಎಲ್ಲವನ್ನು ನಿನಗೆ
ಧಾರೆ ಎರೆದು
ಸುಮ್ಮನೆ ಬರಿ ದೇಹ
ನಾನಿಲ್ಲಿ
ಹೇಗೆ ಬಿಚ್ಚಿಡಲಿ
ನನ್ನೆಲ್ಲ ಭಾವ
ಹೇಗೆ ಅರ್ಥೈಸಲಿ ನಿನಗೆ
ನನ್ನೀ ಸ್ತಿತಿ
ಅರೆ ಘಳಿಗೆ ನಿಲ್ಲದೆ
ಮೋಡದಲ್ಲಿ ಮಾಯವಗುವೆ
ನೀನು
ನಿನ್ನೀ ಚಂಚಲೆತೆಯ
ಸೆಣ ಸೇನು
ನಾ ಭುಮಿಯಾಗಿದ್ದರೆ
ತಿರುಗದೆ ನಿನನ್ನೇ
ನೋಡುತ್ತಾ ಕುಳಿತು
ಬಿಡುತಿದ್ದೆ ಚಂದಿರೆ

ಸಂಜು

No comments:

Post a Comment