Tuesday, December 4, 2012

ಗೆಳತಿ ನನ್ನ ಜ್ಯೋತೆಗಾತಿ


 ಗೆಳತಿ ನನ್ನ ಜ್ಯೋತೆಗಾತಿ
ವಸಂತ ಋತುವಿನ ದಿನಗಳಲೀ
ಪ್ರೀತಿಯ ಹೂವುಗಳ ಹಾರಿಸು
ಗೆಳತಿ ನನ್ನ ಜ್ಯೋತೆಗಾತಿ

ನಿನ್ನ ತುಟಿಗಳ ನಗುವಿನಲ್ಲಿ
ಸುಂದರ ಗೀತೆ
ಒಂದು ಹುಟ್ಟಿಸು
ವರ್ಷವಾಗಲೀ ಪ್ರೀತಿಯ
ಸುರಿಮಳೆ
ನೀನು ನನ್ನ ಪ್ರೀತಿಸು
ಗೆಳತಿ ನನ್ನ ಜ್ಯೋತೆಗಾತಿ

ಹೀಗೆ ಕಳೆದು ಹೋಗದಿರಲಿ
ವಸಂತ ಮನವ ಚಂಚಲಿಸಿ
ಅನುಭವಿಸದೆ
ಪ್ರೀತಿಯ ಸವಿ ರುಚಿ
ಹೇಗೆ ಕಳಯಲಿ
ಮನದ ಭಾವ ಬಿಚ್ಚಿ
ಹೃದಯ ಸ್ಪರ್ಶಿಸು
ಗೆಳತಿ ನನ್ನ ಜ್ಯೋತೆಗಾತಿ

ಕರುಣೆ ತಾಳ್ಮೆ ಪ್ರೀತಿಯ
ಹೃದಯ ನಿನ್ನದು
ನೋವಿನ ಸಣ್ಣ
ಕಣವು ನಿನ್ನ ಸೋಕದಿರಲಿ
ಪ್ರೀತಿ ನಿನ್ನ ಮಾಡಿದ ಮೇಲೆ
ಆ ಹೃದಯವು ನನ್ನದೇ
ಆ ನೋವು ನನ್ನದೇ
ಕಣ್ಮುಚ್ಚಿ ಮನ ತುಂಬಿ
ಪ್ರೀತಿಸು
ಗೆಳತಿ ನನ್ನ ಜ್ಯೋತೆಗಾತಿ
 ಸಂಜು

No comments:

Post a Comment