ಮೂಕ
ಮನಸ್ಸಿನ ಮೌನ ರಾಗ
ನಿಲ್ಲಿಸಲಾಗದ ನೆನಪುಗಳು ತೆರೆ
ಹಠ ಬಿಡದ ಹೃದಯ ಒಂದು ಕಡೆ
ಉಸಿರಾಟಕ್ಕೆನು ನಿಂತೇ ಬಿಡಬಹುದು
ನಿನ್ನ ಮರೆಯುವ ಒಂದು ಕ್ಷಣಕ್ಕೆ
ಬದುಕುವುದಕ್ಕೆನು ಆಸೆ ಇಲ್ಲ
ಉಳಿದಿರುವೆ ಇನ್ನು ನಿನ್ನ ಬಿಟ್ಟು
ಹೋಗುವ ಒಂದೇ ಭಯಕ್ಕೆ
ನಿನ್ನ ಮರೆಯುವುದೇ ಒಂದು ಸಾವು
ಇದಕಿಂತ ಇನ್ನೊಂದು ಸಾವು ಬೇಕೇ
ಎಂಥ ಲೋಕ ಎಂಥ ಭೂಮಿ
ಎಂಥ ಬದುಕು ಎಲ್ಲೂ
ನೀನೆ ಇಲ್ಲದ ಮೇಲೆ
ಆ ದೇವರೆಂತವನು
ಇಷ್ಟು ಸುಂಧರ ಶ್ರುಷ್ಠಿ ಯಲ್ಲಿ
ಇಷ್ಟೊಂದು ನೋವು ಕೊಡುವ
ಪ್ರಿತಿಯಂತ ವಿಷವನೇಕೆ
ಬಿತ್ತಿದ ಹೃದಯದಲ್ಲಿ
ನಾನು ನೀನು ನೀನು ನಾನು
ಏಕೆ ಬಂತು
ನಾನು ನಾನೇ ನೀನು ನೀನೆ
ಯಕಾಗಬಾರದಿತ್ತು
ಹೂವು ಹಣ್ಣು ಬಳ್ಳಿ ಕಾಡು
ತೊರೆ, ಬೆಟ್ಟ ಗುಡ್ಡಗಾಡು
ಎಷ್ಟು ಸುಂದರ
ನೋಡಲೆಂದು ಹೋದರೆ
ಕಣ್ಣ ಮುಚ್ಚಿ ಕಣ್ಣ ಬಿಡಲು
ಎಲೆಲ್ಲು ನಿನ್ನದೇ ಚಿತ್ತಾರ
ಸಂಜು
No comments:
Post a Comment