Tuesday, December 4, 2012

ಮದುವೆ ಶಾಪವಾಯಿತೇ


    ಮದುವೆ ಶಾಪವಾಯಿತೇ
ಗಂಡು ಹೆಣ್ಣು ಜೋತೆಗೂಡಿದರೆ
ಮದುವೆಯೆಂತೆ
ಎಲ್ಲೋ ಹುಟ್ಟಿ ಎಲ್ಲೋ
ಗಂಟುಬಿದ್ದರಂತೆ

ಬಾಳು ಪೂರ್ತಿ ಸಾಗಿಸುವ
 ಇದು ಬಂಡಿಯಂತೆ
ಜೋಡಿ ಮಾಡುವಾಗ
ಏಕೆ ಮಾಡುವುದಿಲ್ಲ ಚಿಂತೆ
ಚಿಕ್ಕಂದಿನಿಂದಲ್ಲೂ
ಸಾಕಿದ ಮುದ್ದು
ಗಿಳಿಯಂತೆ
ಮಾಡುವರು ಸಾಗುವಳಿ
ಗಿಡುಗನ್ಯಾರು ಪಾರಿವಾಳ ಯಾರು
ತಿಳಿಯದಂತೆ
ಜಾತಕ ಕೂಡಿದರೆ
ಇವರಿಗೆ ಸಾಕಂತೆ
ಕಟ್ಟಿ ಕಳುಹಿದರೆ ಸಾಕು
ಮುಗಿದ ಕಥೆ
ಅವರಿಗಂತೆ
ಶುರುವಾಗುವ ಹೊಸ ಜೀವನ
ಆ ಹೆಣ್ಣಿಗಂತೆ
ತುಳಿದ ಮೊದಲ ಹೆಜ್ಜೆ
ಮುಳ್ಳು ತುಳಿದು
ಕಣ್ಣಿರಂತೆ
ಬಾಳು ಪೂರ್ತಿ
ಅದೇ ಕಟಿನ
ಜೀವಾವದಿ
ಶಿಕ್ಷೆಯೆಂತೆ
ಕನಸು ಕಮರಿ
ಆಸೆ ಚಿವುಟಿ
ಬವಣೆ ಬದುಕಿನಲ್ಲೇ
ಈಡಿ ಕಾಲವಂತೆ
ಮದುವೆ ಮಾಡುವ
ಆ ದಿನಗಳಲ್ಲಿ
ಈ ಆತುರವೇಕೆ
ಆ ಹೆಣ್ಣು ಕೂಡ ಒಂದು
ಜಿವವೆಂದು
ಅವಳಿಗೂ ಆಸೆ ಕನಸು
ಇರಬಹುದೆಂದು
ಮರೆತರೇಕೆ

ಸಂಜು

No comments:

Post a Comment