ಬಾಳ ಧಾರಿಯಲ್ಲಿ
ಎಷ್ಟೋ ಅಮೂಲ್ಯ
ಮುತ್ತು ರತ್ನ ಕಂಡೆ
ಎಲ್ಲಕಿಂತ ಅಮುಲ್ಯವಾಗಿ
ನನ್ನ ಪುಟ್ಟ ಚಂದ್ರನಾಗಿ
ಮುದ್ದು ಮೊಗದ
ಬೆಣ್ಣೆ ಕ್ರಿಷ್ಣನಂತೆ
ನನ್ನ ಬದುಕಿಗೆ ಬಂದೆ
ಮಗುವಾಗಿ
ವರವಾಗಿ
ನಿನ್ನ ತುಂಟ ನೋಟ
ನಿನ್ನ ಚೇಷ್ಟೇ ಆಟ
ಅಂಬೆಗಾಲಿನ ಓಟ
ಮುದ್ದು ಮಾಡಿ
ಮೋದದಿ ನೋರು
ನೋವ ಮರೆತು
ನಿನ್ನೊಂದಿಗೆ
ನಾನು ಗೊಂಬೆ
ಆಟ
ಬಿದ್ದು ಬಿದ್ದು
ತೊದಲುತ್ತಲಿ
ಪಪ್ಪಾ ಎಂದು ಕರೆದೆ
ಹರ್ಷ ಗೊಂಡು
ಅಮಲಿನಲ್ಲಿ
ನಾ ಈ ಲೋಕ
ಮರೆತೇ
ನಿನ್ನ ನನಗೆ ಕೊಟ್ಟ
ನಿನ್ನ ಜೀವದ ಅಮ್ಮನಿಗೆ
ಶರಣು
ಅವಳ ಬಾಳ ಬೆಳಕಾದೆ
ನನ್ನ ಮನೆಯೇ
ನಗುವಾದೆ
ಆ ದೈವನ ಕೃಪೆಗೆ
ನಾ ಶರಣು
ನಿನಗೆ ನನ್ನ ಆಯಸ್ಸು
ಶ್ರೇಯಸ್ಸು ಆರೋಗ್ಯ
ವಿದ್ಯಾ ಬುದ್ದಿ ಸೌಬಾಗ್ಯ
ಎಲ್ಲ ದೊರೆತು
ಸುಖವಾಗಿರು
ನನ್ನ ಶಶಿಯಾಗಿರು
ನನ್ನ ಮುದ್ದು ಮಗುವೆ
ನಿನ್ನಗೆ ಹುಟ್ಟುಹಬ್ಬದ ಶುಭಾಶಯ
ಮುದ್ದು ಹರ್ಷು
ನಿನ್ನ ಪಪ್ಪ
ಸಂಜು
No comments:
Post a Comment