Tuesday, December 4, 2012

ಹಾಗೆ ನಾಲ್ಕು ಹೆಜ್ಜೆ


   ಹಾಗೆ ನಾಲ್ಕು ಹೆಜ್ಜೆ
ನಿನ್ನ ಬಳಸಿ ನಡೆಯುವಾಗ
ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡಲು
ಸಣ್ಣ ಮಳೆ ಹನಿಯುತ್ತಿರಲು
ಹಸಿರು ಮರದ ತಂಪಿನಲ್ಲಿ

ನೆರಳು ಆಸೆ ಪಟ್ಟು
 ನಮ್ಮ ಜ್ಯೋತೆ ನಡೆದರೇ
ತಂಪು ತಂಗಾಳಿ ನಮ್ಮಗೆ
ಸ್ವಾಗತದ ಹೂವು ಸಿಂಚನ
ಸಿಂಪಡಿಸಿದೆ
ಪ್ರೀತಿ ಸಲ್ಲಾಪದಲ್ಲಿ
ಜೊತೆ ನಡೆದರೆ ನಾವು
ಮನಸ್ಸುಗಳು ಬಿಗಿದಪ್ಪಿ
ನಮ್ಮ ಆಲಂಗಿಸಿ
ತುಸು ನಾಚಿಕೆ ತುಸು
ನಗುವಿನ ಆಲೆ
ನಮ್ಮ ಆವರಿಸಿ
ಶೃಂಗಾರ ನಮಗೆ
ಸ್ವರ್ಗ ತೋರಿದೆ
ಗೆಳತಿ
ಸಂಜು

No comments:

Post a Comment