ಮಳೆಗಾಲ
ನನ್ನ ಬಾಳಿಗೆ
ಕಣ್ಣ ಮುಚ್ಚಿದಾಗಲೆಲ್ಲ
ನಿನ್ನೆ ಕಾಣುವೆ ನೈಧಿಲೆ
ಒಬ್ಬೊಂಟಿಯಾಗಿ
ನಾ ಮಾತನಾಡುತು
ಸಂತೋಷ ಪಡುವೆ ಕೋಮಲೆ
ಇಂತಹ ಒಂದು ಮಳೆಗಾಲ
ನನ್ನ ಬಾಳಿಗೆ ತಂದೆ ಮೇಘವೇ
ನನ್ನ ನವಿಲೇ, ನನ್ನ ಹಂಸವೇ
ನಿನ್ನ ಮುಗ್ದ ಕಣ್ಣ ಕಂಡೆ ನೆ
ಆ ಕಣ್ಣಿನಲ್ಲೇ ನನ್ನ ಬಿಂಬ ಕಂಡೆನೆ
ನಾ ಸೋತು ಹೋದೆನೆ
ಪದಗಳ ಸಾಗರ ಕರಗಿ
ಹನಿಯಾಗುವುದು ನಿನ್ನ
ಮಾತಿನಲ್ಲಿ
ಮೌನದಲ್ಲೇ ನೀ ಹಾಡದೆ
ಹೇಳಿದ ಮಾತುಗಳೆಲ್ಲ
ನನ್ನ ಎದೆ ಕಡಲ ತುಂಬಿದೆ
ಪ್ರೀತಿಯಲ್ಲಿ
ನಿನಗಾಗೆ ತುಡಿಯುವ ನನ್ನ ಮನಸ್ಸಿನ
ನಡಿಗೆಯು ವೇಗದಿ ನಿನ್ನೆಡೆಗೆ
ತಾನಾಗೆ ಓಡುತಿದೆ
ದೂರ ಸಮಯ ಕಾಲ ಎಲ್ಲ
ದಣಿವು ಹಸಿವು ಬಯರಿಕೆಯೆಲ್ಲ
ನಿನ್ನ ಒಮ್ಮೆ ನೋಡಲು
ಕ್ಷಿಣಿಸಿ ಮಾಯವಾಗುವುದೇ
ನಿನ್ನ ಪ್ರೀತಿಯಲ್ಲಿ ಏನಾದರು
ಈ ಹೃದಯ ತೇಲುತ್ತಿದೆ
ಆ ಮೋಡದಲ್ಲಿ ನಡೆಯುತ್ತಿದೆ
ನಿನ್ನ ಬಿಟ್ಟು ಬೇರೇನು ಯೋಚಿಸದೆ
ನಿನ್ನೊಂದಿಗೆ ಬಾಳುತಿಹೆ
ಈ ಭೂಮಿ ಬಾನು ನನ್ನ
ಒಬ್ಬನೇ ಬಿಟ್ಟು ಸುತುತ್ತಿದೆ
ಸಂಜು
No comments:
Post a Comment