Wednesday, February 29, 2012

ನಿನಗಾಗಿ ಕಾಯುವೆ,.


ನೀ ನನ್ನೋಳಗಿದ್ದೆ
ನೋವು ತಿಳಿಯದೆಹೋದೆ
ಕಣ್ಣು ತುಂಬಿಬರುವುದು
ನನ್ನ ಒಂಟಿತನದಲಿ
ಈ ಜೀವನ....... ಆ ಸಾವು
ನಿನ್ನೊಂದಿಗೆ ಇರಲಿ
ನಿನಗಾಗಿ ಕಾಯುವೆ,....
ಓ ನನ್ನ ಹೃದಯವೇ,,...
ಓ ನನ್ನ ಪ್ರೀತಿಯೇ....
ನೀನು ಇಲ್ಲದೆ ಬಾಳಿಲ್ಲ....
ನನ್ನ ಪ್ರೀತಿ ಹೇಗೆ ಅರಿಯಬಲ್ಲೆ
ನನ್ನೀ ಹೃದಯದ ಶಾಂತಿ
ಕದಡಿ ಹೋಗಿದೆ ನೀನಿಲ್ಲದೆ......
ನನ್ನ ಒಲವೆ ನೀ ಮಾಡಿದ್ದು ಸರಿಯೇ
ನನ್ನೀ ಕಣ್ಣು ಕ್ಷಮೆ ಕೇಳುತಿದೆ
ಮಾಡಿದ ಪ್ರೀತಿಗೆ...
ನಿನಗಾಗಿ ಕಾಯುವೆ..
ಓ ನನ್ನ ಹೃದಯವೇ.....
ಓ ನನ್ನ ಪ್ರೀತಿಯೇ..
ಹೃದಯದ ಹಾದಿ ಮಸಣದಂತೆ ಬರಿದಾಗಿದೆ ……
ಬಾಹುಗಳಲ್ಲಿ ನಿಶ್ಯಕ್ತಿ ತಾಂಡವವಾಡಿದೆ
ನನ್ನೀ ಉಸಿರು ನಿನ್ನ ಸುಗಂಧಕ್ಕೆ
ಆತೊರೆಯುತ್ತಿದೆ....
ಒಮ್ಮೆ ಬಂದು ಬಿಡು
ದುಃಖವನ್ನು ಹೊಡೆದು ಅಟ್ಟುವೆ
ನೀನಿಲ್ಲದೇ ದೂಡುವ ಶಕ್ತಿ ಎಲ್ಲಿದೆ ………….
ಮನಸ್ಸಿಗೆ ಶಾಂತಿ ಇಲ್ಲ
ನಿನಗಾಗಿ ಕಾಯುವೆ,.....
ಓ ನನ್ನ ಹೃದಯವೇ......
ಓ ನನ್ನ ಪ್ರೀತಿಯೇ

ನನ್ನೀ ನೈದಿಲೆ


ಎಲ್ಲಿಲ್ಲದ ಕೋಪ
ಸೂರ್ಯ ನಿನ್ನ ತಾಪ
ಮನ್ನಿಸಲಾರೆ ಚಳಿಯೇ
ನಿನ್ನ ಕೊರೆವ ತಂಗಾಳಿಗೆ
ನಿಮ್ಮಿಬ್ಬರ ಆರ್ಭಟಕ್ಕೆ
ನನ್ನೀ ನೈದಿಲೆಯ
ಮೃದು ಅದರ ಕೆಡುತಿಹುದು

~ಸಂಜು~
 

ದೂರದ ಬೆಟ್ಟ ನುಣ್ಣಗೆ..

ದೂರದ ಬೆಟ್ಟ ನುಣ್ಣಗೆ...
ಹತ್ತಿರ ... ಹೋದಂತೆ ಕಲ್ಲು ಮುಳ್ಳು ಕಾಲಿಗೆ ....

ದೂರದ ಸೂರ್ಯ...ಗುಂಡಗೆ..
ಹತ್ತಿರ ಹೋದಂತೆ ಕೆಂಡದದುಂಡಗೆ 

ದೂರದ ಸಾಗರ ಸೇರಿದಂತಿದೆ..
ಬಳಿಗೆ ಹೋದರೆ ಇಬ್ಬಾಗವಾಗಿದೆ

ದೂರದ ಪ್ರೀತಿ ಮನದಲ್ಲಿ ಸುಖಃ ಸ್ವಪ್ನವಾಗಿದೆ
ಹತ್ತಿರ ಹೋಗಲೇ ಬೇಡವೇ…… ಶಂಕೆಯಾಗಿದೆ

Thursday, February 23, 2012

ಮನಸ್ಸು ಗೆದ್ದವ ಮಹಾತ್ಮ


ಎದ್ದು ಬಂದೆಯ  ಮೋಡ
ಗೆದ್ದು ಬಂದೆಯ ಕೂಡ 
ಬೀಗು ಬಿಮ್ಮಾನ ಬೇಡ
ಹಿಂದೆ ಬಿದ್ದವರು ಇನ್ನು
ಓಡುತಿರುವರು ನೋಡ..

ಆಟ ಇನ್ನು ಮುಗಿದಿಲ್ಲ
ಗೆಲುವು ನಿನಗೆ ಒಬ್ಬನಿಗಲ್ಲ
ಮಂದಿ ಇನ್ನು ಹವಣಿಸುತಿರುವರು
ನಿನ್ನ ಸೋಲು ಖಚಿತ ಎನ್ನುತಿರುವರು  
ಗೆದ್ದು ಬರುವ  ಶಕ್ತಿ  ಅವರಲ್ಲೂ ಇದೆ
ನಿನ್ನ  ಸೋಲಿಸುವ ಆತ್ಮವಿಶ್ವಾಸ  ಅವರಲ್ಲೂ ಇದೆ

ಬೇಕು ಚದುರಂಗದ ಚಾಣಕ್ಷತೆ
ಸ್ವಲ್ಪಾ ಏಮಾರಿದರೆ  ಗದ್ದಿ ಕಸಿಯುತ್ತೆ
ನಿನ್ನ ಆಟ ನೀನು ನಡೆಸು  
ಎದುರಾಳಿಯ ನೆಟ್ಟ ನೋಟಕ್ಕೆ  ಸಂಧಿಸು
ಬುದ್ದಿ ತೀಕ್ಷ್ನವಾಗಿಸು

ಬದುಕು ಒಂದು ಕಡೆ
ಎದುರಾಳಿ ಒಂದು ಕಡೆ
ಚಲವಿರಲಿ ಮನಸ್ಸಿನಲ್ಲಿ
ಬಲವಿರಳು  ತೋಳಿನಲ್ಲಿ 
 ಮನಸ್ಸು ಗೆದ್ದವ ಮಹಾತ್ಮ
ಜೀವನವ  ಗೆದ್ದವ ಪರಮಾತ್ಮ

~ಸಂಜು~

Saturday, February 18, 2012

ಮುದ್ದು ಪುಟ್ಟ ಹುಡುಗಿ

ಆಟವ ಬಿಟ್ಟು ಬಂದೆ 
ಬುತ್ತಿ ಕೊಟ್ಟು ಬತ್ತಿನಿ ಎಂದೆ 
ಆಟಕ್ಕೆ ಉಫಿ ಎಂದೆ 
ಮೋಸ ಮಾಡಬೆಡಿ ಬಂದೆ ಬಂದೆ

ಅವ್ವ ಎಲ್ಲಿದ್ಯವ್ವ 
ಬುತ್ತಿ ತಂದೀವ್ನಿ ಬಾರವ್ವ 
ಅಪ್ಪೊ ಬಾರಪ್ಪೊ
ಉಂಡು ಗೈಮೆ ಮಾಡುವೆ ಬಾರಪ್ಪೊ 
ಬಿರ್ರಿನ್ ಬರ್ರಪ್ಪೊ ಆಟಕ್ಕೆ ಒತ್ತಾಯಿತು ಬರ್ರಪ್ಪೊ

ಯಾಕೆ ಮಾಗಿ ಇಸ್ಕೂಲ್ಗೆ ಹೊಗ್ಲಿಲ್ಲ್ವೆ 
ಇಲ್ಲ ಕಾಣಕ್ಕ ನಾ ವಲ್ಲೆ 
ಒಕಲುತಾನ ಕಲಿಬೆಕಂತಲ್ಲೆ 
ಅದ್ಕೆ ಕುಂಡ್ಸವರೆ ಮನ್ಯಲ್ಲೆ 


Friday, February 17, 2012

ರಾಮಣ್ಣನ ಟೀ ಅಂಗಡಿ


ರಾಮಣ್ಣನ ಟೀ ಅಂಗಡಿ
ಇತ್ತು ಒಂದು ಟೀ ಅಂಗಡಿ
ಕಾಲೆಜು ಕಂಪೌಂಡ್ ಮುಂದೆ
ದಿನ ದೂಡುತಿದ್ದ ಬಾಳ ಬಂಡಿ

ಸಿಗರೇಟ್ ಗುಟ್ಕ ಮಾರುತಿದ್ದ
ಸೇದಿ , ತಿಂದು ಹಾಳಾಗಬೇಡಿ
ಅಂತ ಬಾಯಿ ತುಂಬ ಬಡ್ಕೊಳತಿದ್ದ

 ದಪ್ಪ ಕನಡ್ಕಾ ಹಾಕುತಿದ್ದ
ಚಿಲ್ಲರೆ  ಲೆಕ್ಕ ಸರಿಯಾಗೆ ಕೊಡುತಿದ್ದ
ಸಾಲ ಕೇಳಿ ಸ್ನೇಹ ಕಳ್ಕೊ ಬೇಡಿ
ಅಂತ ಬೋರ್ಡು ಬೇರೆ  ಹಾಕಿದ್ದ

ರೇಡಿಯೊ ಜೋರಾಗೆ ಹಾಕೂತಿದ್ದ
ವಿವಿದಭಾರತೀ ಕೇಳುತಿದ್ದ...
ರಾಜಣ್ಣ ಹಾಡು ಬಂತು ಅಂದ್ರೆ
ತಕ್ಕಾ ದಿಮ್ಮಿ ಕುಣಿತಿದ್ದ

 ಬೆಳ್ ಬೆಳ್ಗೆ ಸ್ಪೆಷಲ್ ಕ್ಲಾಸು
ತಲೆಗೆ ಹೊಗಲ್ಲ ಪಾಠ
ಇಲ್ದೆ ಇದ್ರೆ ರಾಮಣ್ಣ ನ
ಸ್ಪೆಷಲ್ ಟೀ ಗ್ಲಾಸು

ಒಳ್ಳೆ ಹುಡುಗರಿಗೆ ಕರೆದು ಬುದ್ದಿ ಹೇಳುತಿದ್ದ.
ಕೆಟ್ಟ ಹುಡುಗರಿಗೆ ಶಾಪ ಹಾಕುತಿದ್ದ
ಹಸ್ಕೊಂಡು ಬಂದ್ರೆ ಟೀ, ಬನ್ನು ಕೊಡುತಿದ್ದ
ಚೆಂದಾಗಿ ಓದಿ ಬುದಿವಂತ್ರಾಗ್ರೊ ಅಂತ
ಹರಸುತಿದ್ದ

ಎಷ್ಟು ಹುಡುಗರು ಹೋದರು...
ಎಷ್ಟು ಹುಡುಗರು ಬಂದರು
ವರ್ಷದಮೆಲೆ ವರ್ಷ ಕಳಿತು
ಪೆಟ್ಟಿ ಅಂಗಡಿ ಮಾತ್ರ ಅಲ್ಲಾಡದಂಗೆ ಇತ್ತು

ನಾನು ಓದಿ ಮುಗ್ಸಿ ಕೆಲಸಕ್ಕೆ ಸೇರ್ಕೊಂಡು...
ಮದುವೆ ಮನೆ ಎಲ್ಲ ಮಾಡ್ಕೊಂಡು
ಕಾರ್ ನಲ್ಲಿ  ಹಾಗೆ ಹಾದು  ಹೋಗುವಾಗ
ನೆನಪು ಹಂಗೆ ಸುಳಿದಂಗೆ ಆಗಿ
ಅದೇ  ಅಂಗಡಿ ಅದೇ ಟೀ
ಅದೇ  ದಪ್ಪ ಕನಡ್ಕಾ
ಅದೇ ಚಿಲ್ರೆ ಕಾಸು
ಆದರೆ ರಾಮಣ್ಣ ಈಗ ರಾಮಜ್ಜಾ ಆಗಿದ್ದ
ನೆನಪೈತ ರಾಮಣ್ಣ ಅಂದೆ ,
ಯಾರು ಸ್ವಾಮಿ ನೀವು ಅಂದ ರಾಮಜ್ಜಾ
ಕಣ್ಣು ಹಾಗೆ ಒಂದು ಸಲೀ ನೆಂದು ಹೋಯಿತು...
ಮನಸೆಲ್ಲ ಹಾಗೆ ಒಂದು ಸಲೀ ಭಾರ ಆಯಿತು

~ ಸಂಜೀವ್ ಕುಮಾರ್‌ ~

Thursday, February 16, 2012

ಮದುವಣಗಿತ್ತಿ


ಕಳೆಯಿತೆ ನಿನ್ನ ಅಟ್ಟಹಾಸ
ಬರಿದು ಆಯಿತೇ ನಿನ್ನ ಬತ್ತಳಿಕೆ
ಮೆರೆದು ನಿಂತೇ ಕೊನೆಗೂ
ಮದುವಣಗಿತ್ತಿಯೆ ಮೆರುಗು

ಎಂಥ ಸಾಧನೆ ನಿನ್ನೊಡಲಿಗೆ
ಅಂಗಿ ಆರಿಶಿನದ ಕಲೆಗೆ
ಬಿಟ್ಟು ಕೊಟ್ಟೆ ನಿನ್ನ ಅರ್ಧ ಹಾಗೆ
ಗಿಟ್ಟಿಸಿ ಕೊಂಡ ಕನಸಿನಾಂಗೆ 

ಒಂದೊತ್ತಿನ ಊಟ ಸಾಕು ನನಗೆ
ಕಳಿಸಬೆಡೀ ದೊರದ ಊರಿಗೆ
ನಿನ್ನ ಈ ಆರ್ತನಾದ ಕೇಳಲಾಗದೆ 
ಕಂಬನಿಯ ಸಾಗರನಿಗೆ ಸೇರಿಸುತ್ತಿದ್ದೆ ನೇಸರ
ಕಾಣಲಾರನೆಂದು .....ಅವಿತಿದ್ದ ಚಂದಿರ

ತವರ ಮಣ್ಣ ಋಣ ತೀರಿತೆಂದು
ಬಂಡಿ ನಡೆದಿದೆ ದಾರಿ ನೂಕುತ  ಮುಂದು .....
ಮನದ ಅಳಲು ಕೂಗಿ ... ಕರೆದು
ಹಡೆದವರ ಕಣ್ಣ ಒರೆಸಿರಿ … ಭಂದು
ನನ್ನ ಪ್ರೀತಿ ಋಣಾ ತೀರಿಸಿರಿ... ಎಂದು
 

           ~ಸಂಜು~