Friday, February 17, 2012

ರಾಮಣ್ಣನ ಟೀ ಅಂಗಡಿ


ರಾಮಣ್ಣನ ಟೀ ಅಂಗಡಿ
ಇತ್ತು ಒಂದು ಟೀ ಅಂಗಡಿ
ಕಾಲೆಜು ಕಂಪೌಂಡ್ ಮುಂದೆ
ದಿನ ದೂಡುತಿದ್ದ ಬಾಳ ಬಂಡಿ

ಸಿಗರೇಟ್ ಗುಟ್ಕ ಮಾರುತಿದ್ದ
ಸೇದಿ , ತಿಂದು ಹಾಳಾಗಬೇಡಿ
ಅಂತ ಬಾಯಿ ತುಂಬ ಬಡ್ಕೊಳತಿದ್ದ

 ದಪ್ಪ ಕನಡ್ಕಾ ಹಾಕುತಿದ್ದ
ಚಿಲ್ಲರೆ  ಲೆಕ್ಕ ಸರಿಯಾಗೆ ಕೊಡುತಿದ್ದ
ಸಾಲ ಕೇಳಿ ಸ್ನೇಹ ಕಳ್ಕೊ ಬೇಡಿ
ಅಂತ ಬೋರ್ಡು ಬೇರೆ  ಹಾಕಿದ್ದ

ರೇಡಿಯೊ ಜೋರಾಗೆ ಹಾಕೂತಿದ್ದ
ವಿವಿದಭಾರತೀ ಕೇಳುತಿದ್ದ...
ರಾಜಣ್ಣ ಹಾಡು ಬಂತು ಅಂದ್ರೆ
ತಕ್ಕಾ ದಿಮ್ಮಿ ಕುಣಿತಿದ್ದ

 ಬೆಳ್ ಬೆಳ್ಗೆ ಸ್ಪೆಷಲ್ ಕ್ಲಾಸು
ತಲೆಗೆ ಹೊಗಲ್ಲ ಪಾಠ
ಇಲ್ದೆ ಇದ್ರೆ ರಾಮಣ್ಣ ನ
ಸ್ಪೆಷಲ್ ಟೀ ಗ್ಲಾಸು

ಒಳ್ಳೆ ಹುಡುಗರಿಗೆ ಕರೆದು ಬುದ್ದಿ ಹೇಳುತಿದ್ದ.
ಕೆಟ್ಟ ಹುಡುಗರಿಗೆ ಶಾಪ ಹಾಕುತಿದ್ದ
ಹಸ್ಕೊಂಡು ಬಂದ್ರೆ ಟೀ, ಬನ್ನು ಕೊಡುತಿದ್ದ
ಚೆಂದಾಗಿ ಓದಿ ಬುದಿವಂತ್ರಾಗ್ರೊ ಅಂತ
ಹರಸುತಿದ್ದ

ಎಷ್ಟು ಹುಡುಗರು ಹೋದರು...
ಎಷ್ಟು ಹುಡುಗರು ಬಂದರು
ವರ್ಷದಮೆಲೆ ವರ್ಷ ಕಳಿತು
ಪೆಟ್ಟಿ ಅಂಗಡಿ ಮಾತ್ರ ಅಲ್ಲಾಡದಂಗೆ ಇತ್ತು

ನಾನು ಓದಿ ಮುಗ್ಸಿ ಕೆಲಸಕ್ಕೆ ಸೇರ್ಕೊಂಡು...
ಮದುವೆ ಮನೆ ಎಲ್ಲ ಮಾಡ್ಕೊಂಡು
ಕಾರ್ ನಲ್ಲಿ  ಹಾಗೆ ಹಾದು  ಹೋಗುವಾಗ
ನೆನಪು ಹಂಗೆ ಸುಳಿದಂಗೆ ಆಗಿ
ಅದೇ  ಅಂಗಡಿ ಅದೇ ಟೀ
ಅದೇ  ದಪ್ಪ ಕನಡ್ಕಾ
ಅದೇ ಚಿಲ್ರೆ ಕಾಸು
ಆದರೆ ರಾಮಣ್ಣ ಈಗ ರಾಮಜ್ಜಾ ಆಗಿದ್ದ
ನೆನಪೈತ ರಾಮಣ್ಣ ಅಂದೆ ,
ಯಾರು ಸ್ವಾಮಿ ನೀವು ಅಂದ ರಾಮಜ್ಜಾ
ಕಣ್ಣು ಹಾಗೆ ಒಂದು ಸಲೀ ನೆಂದು ಹೋಯಿತು...
ಮನಸೆಲ್ಲ ಹಾಗೆ ಒಂದು ಸಲೀ ಭಾರ ಆಯಿತು

~ ಸಂಜೀವ್ ಕುಮಾರ್‌ ~

No comments:

Post a Comment