ಗೆಳತಿಯೆ ನಿನ್ನ ನೊಡಲೆಂತು ಚಂದ
ಬಣ್ಣಿಸಲಾಗದ ಆನಂದ
ನಿನ್ನ ಮಾತಿನ ಆಲಾಪ
ಲೋಕ ಮರೆತು ಕೇಳುವೆ ಕೊನೆ ತನಕ
ನಿನ್ನ ಕಣ್ಣ ಸಾಗರದ ಆಳ ಬಿಂಬವಾಗಿ ಕರಗಿ ಹೋಗಬೇಕೆಂಬ ಅಂಬಲ
ನೀ ಕೊಟ್ಟ ಪ್ರೀತಿ ಎಷ್ಟು ಅಮರ ಹೃದಯಕ್ಕೆ ಪುಳಕವು ನಿರಂತರ
ನನ್ನ ಕಳೆದು ಕೊಳುವುಂತೆ ನಿನ್ನ ಭಯ ಕಣ್ಣ ಬಾಷ್ಪ ಹರಿದು ಹೋಯಿತು ಆ ಸಮಯ
ಒಂದೊಂದು ಬಾರಿಯೂ ಅಡಗಿದ ನಿನ್ನ ಪ್ರೀತಿಗೆ
ಹೃದಯ ಪುಳಕಿತಗೊಂಡಿತು ಬಾರಿ ಬಾರಿ
ಬಣ್ಣಿಸಲಾಗದ ಆನಂದ
ನಿನ್ನ ಮಾತಿನ ಆಲಾಪ
ಲೋಕ ಮರೆತು ಕೇಳುವೆ ಕೊನೆ ತನಕ
ನಿನ್ನ ನಗುವು ನೋಡಿದಷ್ಟು ಮೋಡಿ
ಎಲ್ಲಾ ದುಃಖ ಮರೆಸುವಂತ ಕನ್ನಡಿ ಸ್ಪಂದಿಸಿದಷ್ಟು ನೀ ಎನ್ನ ಮನಕ್ಕೆ ಔಷದಿ
ನೋವಿಗೆ ಎಡೆ ಇಲ್ಲ ಈಗ ನನ್ನ ಮನದಿ ಹೋಗಿ ಬರುವೆ ಮೂರು ದಿನ ನಾ ಸಿಗಲಾರೆ
ಹೋಗಿ ಬರುವೆ, ಹೋಗಿ ಬರುವೆ ಹೇಳಿದೆ ಸಾರಿ ಸಾರಿ ಒಂದೊಂದು ಬಾರಿಯೂ ಅಡಗಿದ ನಿನ್ನ ಪ್ರೀತಿಗೆ
ಹೃದಯ ಪುಳಕಿತಗೊಂಡಿತು ಬಾರಿ ಬಾರಿ
~ ಸಂಜು~
No comments:
Post a Comment