Saturday, February 4, 2012

ಗೌಡತಿ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ
ಹಿರಿಯರು ನಡೆಸಿದಂತೆ ನಡೆದೇ
ಚಿಕ್ಕ ಮಗುವಿನಂತ ಮನಸ್ಸು
ಕಾಣಲಿಲ್ಲ ದೂಡ ಕನಸು
ಸಸಿ ಬೆಳೆದು ಗಿಡವಾಯಿತು
ಮನಸ್ಸು ಮೊಳಕೆಯೆಲ್ಲೆ ಇತ್ತು
ಮದುವೆಯೆಂತೆ ಹಬ್ಬ ಬಂತು
ಎಲ್ಲರ ಸಡಗರ ನನ್ನೊಂದಿಗಿತ್ತು
ಎನೊ ದೊಡ್ಡ ಹಬ್ಬದಂತೆ
ಸಿಂಗರಿಸಿಕೊಂಡು ನಾನು  ನಿಂತೆ
ಮಂಚ ಹಂಚಿಕೊಂಡ ಮೆಲೆ
ತಿಳಿದದ್ದು ಇವನು ಗಂಡನೆಂದು
ಅಂತ ಮುಗ್ದ ಹೆಣ್ಣಿಗೆ ಇದು ತರವೇ
ಹೆಳು ದೇವರೇ
ಯಾರ ಕೇಳಲಿ ಎನು ಮಾಡಲಿ
ಒಂದು ತಿಳಿಯದಾಯಿತು ಮನದಲ್ಲಿ
ಇನ್ನು ಆಟ ಮುಗಿದೆಲ್ಲವೆಂದು
ಆಟದಂತೆ ಕಣ್ಣ ಮುಚ್ಚಿ ನಡೆದೇ ಮುಂದೆ
ವರ್ಷ ಕಳೆಯಲಿಲ್ಲ ಇನ್ನು
ನನ್ನ ಮಡಿಲಲ್ಲಿ ಒಂದು ಗೊಂಬೆ
ನನ್ನ ಮನಸ್ಸು ಕೇಳಲಿಲ್ಲ
ಪ್ರೀತಿ ಎಂತೊ ತಿಳಿಯಲಿಲ್ಲ
ನಾನು ಗೌಡತಿ ಹಾಗೆ ಹೋಗಿದ್ದೆ

No comments:

Post a Comment