Tuesday, January 31, 2012

ಪ್ರಾಕೃತಿಕ ಬದುಕು

ಸಮಯಾ ಕಳೆದಂತೆ
 ಬೇಸಿಗೆಯು ನಿಟ್ಟುಸಿರು ಬಿಡುವುದು

 ಮರದ ಕೊಂಬೆಯು ಬಾಗಿ
 ಹರಿಯುವ ನೀರಿನಲ್ಲಿ ತನ್ನದೇ  ಬಿಂಬವ ಕಾಣುತ್ತ
... ಬೆರಾಳಡಿಸುತ್ತ ಆಟವಾಡುವುದು

 ಚಂದಿರನ್ನು ತನ್ನ ಬೆಳಕ ಚೆಲ್ಲುವನು
 ಮಾಯಾನಗರಿ ಇಂದ
 ಕಣ್ಣು , ಹೃದಯ ಮಿಯುವುದು
 ಹೊಳೆಯುವ ಹೊಸ ದೃಷ್ಟಿ ಮನೋಹರದಿಂದ
 ಇಂತಹ ಪ್ರಶಾಂತತೆಯ ಜಾಗದಲ್ಲಿ
 ನಿನಿರುವಿಕೆ ಏಕೆ , ನಿನೆಲಿರುವೆ
 ನಮೊಳಗೆ ಆಡಗಿಹ ಸಾವಿರ ಪ್ರಶ್ನೆಗೆ
 ಉತ್ತರವಿಡಿದು ಪ್ರಕೃತಿ ನಿಂತಿದೆ

 ಮರದ ಬೇರಿನಂತೆ
 ನಾನು ನನ್ನ ಬೇರ ಬಿಡುವೆನು
 ಜೀವನದ ಸತ್ಯ ಸಾರಾಂಶ ಉಳ್ಳ
 ಪುಷ್ಟೀಕರಿಸಿದ  ಮಣ್ಣಿನಲ್ಲಿ
 ಸ್ವತಂತ್ರವಿದೆ  ಇಬ್ಬರಿಗೂ
 ಆಲಂಗಿಸಲು ಲೌಕಿಕ ಭಾವನೆಗಳ
 ನಮ್ಮ ಜೀವನದ ಪಯಣದ   ಸತ್ಯ ಹರಿವುದು
 ಶಾಂತಿಯ ಉತ್ಸಾಹದಿಂದ
 ~ಸಂಜು~

No comments:

Post a Comment