Tuesday, January 31, 2012

ಮನಸ್ಸು

ಬ್ರಮೆಯಂತೆ ಬಿದಿರು ಬೊಂಬಿನ ಆಟ
 ಬಣ್ಣ ಕಳಚಿದ ಮುಖಃವಾಡಗಳ ಕೂಟ
 ಬಂಡ ಬೂಟಾಟಿಕೆಗಳ ನರ್ತನ
 ನಂಬಿ ಕೆಟ್ಟೆ ಹೊಯೇತೆ ಜೀವನ
... ಜಿಂಕೆಯೆಂತೆ ಚಂಚಲ
 ಪಂಜಿನ ಬೆಳಕಿನಲ್ಲೇ ನಿಶ್ಚಲ
 ಕತ್ತಲಲ್ಲೇ  ಕರಗಿ ಹೋಗೋ ಜಿಜುಂಬೆ ಯೋ
 ನೆಟ್ಟ ದಿಟ್ಟ ನೋಟಕ್ಕೂ ನಿಲುಕದ ನಯನ 
 ಆಡ್ದ ಗೋಡೆಯ ಮಣ್ಣಿನ ದೀಪ
 ಅರ್ದ ಇತ್ತ ಅರ್ದ ಅತ್ತ ನೆರಳಿನಂತೆ ನೆಪ
 ಸುಟ್ಟ ಉಳುವಿನಂತೆ ವದ್ದಾಟ
 ತಿಳಿಯದಾಯಿತು ಮನದ ಆರ್ಭಟ

 ಒಲುಮೆಗೆ ಒಲಿದು ಗೆಳುಮೆಗೆ ನಲಿದು
 ಡೊಂಕ ಡೆಂಕನೆ ಕುಣಿದೆದ್ದ ಮನಸ್ಸು
 ಸುಖಾಃ ಪಾನಕ್ಕೆ ಅತುರ್ಯತೆ
 ಕ್ಷಣ ಕ್ಷಣಕ್ಕೂ ಕಾತುರತೆ
 ಎಂದು ಆಯಿತೋ ನಿನ್ನ ಜನ್ಮ
 ಬದುಕು ಮಾಸಿದರು ಅರಿಯದ ಮರ್ಮ
 ಕೊಂಚ ತಡಿ ಓಡಬೇಡ
 ತೆವಳುತಿದೆ ಬದುಕು ಬಂಡ
 ~ ಸಂಜು ~

No comments:

Post a Comment