Wednesday, June 27, 2012

ತಿರುಗಿ ನಾ ಬರುವೆನು


ತಿರುಗಿ ನಾ ಬರುವೆನು 

ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು 
ತಿರುಗಿ ನಾ ನೊಡಲು ಮನಸ್ಸೆಲ್ಲ  ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ  (ವೃಂದಗಾಯಕರು)

ನಿನ್ನ ದುಃಖಕ್ಕೆ ಕಾರಣ ನಾ  ನಿನ್ನ ಎದೆಯ ತೋರಣ
ಕಣ್ಣೀರು ತಾಳೆನು ಮನ ಸಂತೈಸಿಕು ನಾ ಬರುವೆನು
ನಾ ಹೊದಮೇಲು ಇರುವೆನು ನಿನ್ನೊಂದಿಗೆ ಬಾಳುವೆನು
ನಿನ್ನ ನೆನಪಲ್ಲಿ ಬರುವೆನು ಕನಸಲ್ಲಿ ಸೇರುವೆನು

ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು 
ತಿರುಗಿ ನಾ ನೊಡಲು ಮನಸ್ಸೆಲ್ಲ  ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು 
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ  (ವೃಂದಗಾಯಕರು)

ನನ್ನ ಎದೆಯಲ್ಲಿ ಬಚ್ಚಿಟ್ಟ ನೊವಿದೆ ನನ್ನೊಳಗು ಕಾಡಿದೆ
ದಾರಿ ಉದಕ್ಕು ತೆಂಗು ಬಾಳೆ ನನ್ನ ಕಣ್ಣೀರ ಒರೆಸಿದೆ 
ದಾರಿ ಕ್ರಮಿಸಿ ಓಡಿದೆ ನನ್ನ ಮನ ಹಿಂದಕ್ಕೆ ಹೊರೆಟಿದೆ
ನಿನ್ನೆಲ್ಲ ಮುಖಭಾವ ಕಣ್ಣಿನಲ್ಲಿ ಚಲನಚಿತ್ರದ ಹಾಗೆ  ಓಡಿದೆ 

ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು 
ತಿರುಗಿ ನಾ ನೊಡಲು ಮನಸ್ಸೆಲ್ಲ  ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು 
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ  (ವೃಂದಗಾಯಕರು)

~ಸಂಜು~

Saturday, June 9, 2012

ನಾ ಒಂಟಿ ಅಲ್ಲ

1.       ನಾ ಒಂಟಿ ಅಲ್ಲ
*****************
ಮನ ಮಿಡಿಯುವ ಮಾತು ಪ್ರೀತಿ
ಹೃದಯ ತುಡಿಯುವ ಬಾಧೆ ಈ ರಿತಿ
ನೀನಿಲ್ಲದ ಇ ಪ್ರತಿ ಕ್ಷಣದ ಮುಳ್ಳು
ಪ್ರತಿ ಹೆಜ್ಜೆಗೂ ನನ್ನ ಚುಚ್ಚಿದೆ
ಮರೆಯಾಗಿ ಹೊದ ಅ ಕೊನೆ ನೋಟ
ಕಣ್ಣಾವರಿಸಿ ಪ್ರತಿ ಸಲ ಕಣ್ಣೋರೆಸಿದೆ
ನಾ ಒಂಟಿ ಅಲ್ಲ ನಿನ್ನ ಹವಾ ಭಾವ
ನನ್ನೊಂದಿಗೆ ನಾ ಇದ್ದಲೆಲ್ಲ ನನ್ನ ಜೊತೆಗೂಡಿದೆ 
ನನ್ನ ಆಡುಗೆಯಲ್ಲಿ ನಿನ್ನ ಪ್ರೀತಿ ರಸ
ಪ್ರತಿ ತುತ್ತಿನಲ್ಲು ನನ್ನ ತನು ತುಂಬಿದೆ
ನಾ ಓಡಾಡುವಾಗ ನನ್ನ ಜ್ಯೊತೆ
ನಿನ್ನ ಮೈ ಸುಗಂಧ ನನ್ನ ಪಕ್ಕದಲ್ಲೇ
ಕೈ ಹಿಡಿದು  ನಡೆದಿದೆ
ನನ್ನ ಸ್ನಾನದಲ್ಲಿ ನಿನ್ನ ಬಿಗಿ ಅಪ್ಪುಗೆ
ಬಿಸಿ ನೀರ  ಹಬೆಯಾಗಿ ನನ್ನ ತನು ಸೇರಿದೆ
ನಾ ಮಲಗುವಾಗ ನಿನ್ನ ಒಲವ ಚೇತನ
ನನ್ನ ಹೊದಿಕೆಯಾಗಿ ನನ್ನ ಅಪ್ಪಿ ಮಲಗಿದೆ
ನಾ ಒಂಟಿ ಅಲ್ಲ ನನ್ನೊಂದಿಗೆ ನಿನ್ನ ಆತ್ಮ
ನನ್ನ ಸುತ್ತು ಸುತ್ತಿ ಬಳಸಿದೆ
ನನ್ನ ನೆನಪಿನಾಳದ ಸಿಹಿ ಹೊಂಗನಸು ನೀನು
ನನ್ನ ಮನಸ್ಸಿನಾಳದಲ್ಲಿ  ಪ್ರೀತಿ ಬಿಂಬಿಸಿದವಳು  ನೀನು

~ಸಂಜು~

ಜೊತೆ ಇಲದ ಪಯಣ


ಜೊತೆ ಇಲದ ಪಯಣ
************
ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ
ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಸ ನಿಸ ನಿಸ ನಿಸ ರೆ ರೆ ರೆ
ಸ ನಿಸ ನಿಸ ನಿಸ ರೆ ರೆ ರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ

ಜೊತೆ ಬಾಳುವ ಜೊತೆ ಸೇರುವ ಆಸೆ ನೊರು ನೊರು
ನಮ್ಮ ನಡುವಿನಲ್ಲಿ ಇರುವ ಅಂತರಗಳು ಸಾವಿರ ಮೈಲು

ಜೊತೆ ಬಾಳುವ ಜೊತೆ ಸೇರುವ ಆಸೆ ನೊರು ನೊರು
ನಮ್ಮ ನಡುವಿನಲ್ಲಿ ಇರುವ ಅಂತರಗಳು ಸಾವಿರ ಮೈಲು

ಹೃದಯ ಬಡಿತೆ ಒಂದೆ ಜೀವಗಳ ತುಡಿತ ಒಂದೆ
ಆದರೆ ಮದ್ಯದಲ್ಲಿ ಬೀಕೋ ಅಂತಿದೆ ನಮ್ಮ ದೊರಗಳು

ಹೃದಯ ಬಡಿತೆ ಒಂದೆ ಜೀವಗಳ ತುಡಿತ ಒಂದೆ
ಆದರೆ ಮದ್ಯದಲ್ಲಿ ಬೀಕೋ ಅಂತಿದೆ ನಮ್ಮ ದೊರಗಳು

 ನಮ್ಮಿಬ್ಬರ ಇಷ್ಟಗಳ ನಡುವೆ ಇ ದೂರದ ದೂರ
ಮೌನದ ನೀರಾವತೆ ಕಾಲಕ್ಕು ಇಷ್ಟವಾಗಿರಬಹುದು

ನಮ್ಮಿಬ್ಬರ ಇಷ್ಟಗಳ ನಡುವೆ ಇ ದೂರದ ದೂರ
ಮೌನದ ನೀರಾವತೆ ಕಾಲಕ್ಕು ಇಷ್ಟವಾಗಿರಬಹುದು

 ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ

ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ
ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ

ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಸ ನಿಸ ನಿಸ ನಿಸ ರೆ ರೆ ರೆ
ಸ ನಿಸ ನಿಸ ನಿಸ ರೆ ರೆ ರೆ

ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ

 ~ಸಂಜು~

ಅನಾಥ ಹೃದಯ


ಅನಾಥ ಹೃದಯ
*****************
 ಈ ನನ್ನ ಹೃದಯ
ಗೀತೆ ಹಾಡಿದೆ ಕೇಳುವೆಯ

ಹೃದಯಕ್ಕೆ ಇಂದು ಅನಾಥ ಭಾವ
ಹುಡುಕಿಸಿಕೊಡಿ ಅದರ ನೆಲೆಯ ...2

ದಾರಿಯಲಿ ಹಾದು ಹೋದ
ನೂರು ದಾರಿ ಸಖಿಯರು
ಯಾರೊಬ್ಬರೂ ಒಪ್ಪಿಕೊಳಲ್ಲಿಲ್ಲ
ನನ್ನ ಹೃದಯ ಗುರುತಿಸಲಿಲ್ಲ

ತುಂಬ ಮುಗ್ಧ ಆದರೂ ದಿಕ್ಕಿಲ್ಲ
ಹುಡುಕಿಸಿಕೊಡಿ ಅದರ ನೆಲೆಯ

ಹೃದಯಕ್ಕೆ ಇಂದು ಅನಾಥ ಭಾವ
ಹುಡುಕಿಸಿಕೊಡಿ ಅದರ ನೆಲೆಯ

ಜಗಮಗಿಸುವ ಇ ಲೋಕದ ಆಟ
ಮನೆ ಮಟ ಇಲ್ಲದೆ
ನನ್ನೀ ಹೃದಯದ ಅಲೆದಾಟ
ಮೋಸ ದೋಷಗಳಿಲ್ಲದೆ
ತನ್ನದೆ ಒಂಟಿ ಓಟ
ಇವನು ಬೆಳಕಿನಲ್ಲಿ ಬಿದ್ದಂತ ನಕ್ಷತ್ರ
 ಕಣ್ಣಿಗೆ ಗೋಚರಿಸಲೇ ಇಲ್ಲ
ಇನ್ನು ಗುರುತಿಸುವುದು ಎಲ್ಲಿ ಕ್ಷಣಮಾತ್ರ

ಇವನು ಹರೆಯ ಬಂದು ಚಿಗುರು ಎಲೆ
ಹುಡುಕಿಸಿಕೊಡಿ ಅದರ ನೆಲೆಯ

ಹೃದಯಕ್ಕೆ ಇಂದು ಅನಾಥ ಭಾವ
ಹುಡುಕಿಸಿಕೊಡಿ ಅದರ ನೆಲೆಯ

ಸುತ್ತ ತಿರುಗಿ ನೋಡಿದರು
ಬಾಕಿ ಎಲ್ಲ ಹೃದಯಕ್ಕು ಇದೆ ಸೂರು
ನನ್ನೊಬ್ಬನಿಗೆ ಯಾಕಿ ಇ ಗೊಳು
ಯಾರು ಕೇಳಲೇ ಇಲ್ಲ

ಇವನು ದಾರಿ ಆಲೆಮಾರಿ
 ಹುಡುಕಿಸಿಕೊಡಿ ಅದರ ದಾರಿ

 ಬಡಿತ ನಿಂತು ಮಣ್ಣ ಸೆರುವ ಮುನ್ನ
ಹುಡುಕಿಸಿಕೊಡಿ ಅದರ ನೆಲೆಯ

ಹೃದಯಕ್ಕೆ ಇಂದು ಅನಾಥ ಭಾವ
ಹುಡುಕಿಸಿಕೊಡಿ ಅದರ ನೆಲೆಯ



~ಸಂಜು~

Tuesday, June 5, 2012

ಉಪಾಯ


ಉಪಾಯ
***************

ಅವನಿಗೆ ನಾ ಮಾಡಿದ ಆಡುಗೆ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಪಲ್ಯೆ ಹಿಡಿಸಲಿಲ್ಲ 
ಅವನಿಗೆ ನಾ ಮಾಡಿದ ತಿಂಡಿ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಕಾಫಿ  ಹಿಡಿಸಲಿಲ್ಲ
ಅವನಿಗೆ ನಾ ತೊಳೆದು ಕೊಟ್ಟ ಕಾಲ್ ಚೀಲ
ಹಿಡಿಸಲಿಲ್ಲ
ಅವನಿಗೆ ನಾ ಇಸ್ತ್ರೀ ಮಾಡಿಟ್ಟ ಬಟ್ಟೆ ಹಿಡಿಸಲಿಲ್ಲ
ಸಿಟ್ಟಿಗೆದ್ದು ಒಂದು ದಿನ ಕೇಳಿದರೆ ಕಾರಣ
ಅವನು ಹೇಳಿದ ಉತ್ತರ ಇವು ಯಾವು
ನನ್ನ ಅಮ್ಮ ಮಾಡಿದ ಹಾಗೆ ಇಲ್ಲ
ಒಮ್ಮೆ ಪ್ರೀತಿಯಿಂದ ಅವನ ನೊಡೀ ನಕ್ಕೆ ಒಂದು ಸಲ
ಹೊಳೆಯಿತು ಮಿಂಚು ತಲೆಯಲಿ ಪಳ ಪಳ
 
ಅಯ್ಯೊ ದೇವರೇ ಇದು ನನಗೆ ಹೊಳೆಯಲೆ ಇಲ್ಲ
ಅತ್ತಿರ ಹೊದವಳೆ ಬಿಗಿಯಾಗಿ ಚಟೀರನೆ ಕೊಟ್ಟೆ ಕಪಾಳಕ್ಕೆ
ಮತ್ತೆ ಕೇಳಿದೆ ಇದು ನಿಮ್ಮ ಅಮ್ಮ ಕೊಟ್ಟ ಹಾಗೆ ಇತ್ತ ಅಂತ

~ಸಂಜು~


ನನ್ನವಳು


ನನ್ನವಳು
*************
ನನ್ನವಳು ನನ್ನ ಆಳೊ
ಮನೆಯವಳು
ನನ್ನವಳು ನನ್ನೊಳಗೆ
ಮನೆಮಾಡಿಹಳು
ನನ್ನವಳು ನನ್ನೆದೆಯ
ನಂದಾ ದೀಪವಾಗಿಹಳು
ನನ್ನವಳು ನನ್ನುಸಿರ
ಪ್ರತಿ ಕಣದಲ್ಲಿ ತುಂಬಿಹಳು
ನನ್ನವಳು ನನ್ನ ಬದುಕಿನ
ಮಾರ್ಗದರ್ಶಕಳು
ನನ್ನವಳು ತಿಳಿ ನೀರಿನಂತೆ
ನಿಶ್ಚಲ ಸಂಯಮದ ಗೆಳತಿ
ನನ್ನವಳು ನನ್ನ  ಅರಮನೆಯ
ಗತ್ತಿನ ಮನೆಒಡತಿ 

~ಸಂಜು~

Monday, June 4, 2012

ಮನಸ್ಸು ಕುದರೆ


ಮನಸ್ಸು ಕುದರೆ
******************
ಕಡೀವಾಣವಿಲ್ಲದ ಕುದುರೆ
ಓಟಕಿತ್ತಿದ ಚಂಚಲೆ ಚಿಗುರಿ  
ಮಿತಿ ಇಲ್ಲ ಅಂಕೆಶಂಕೆ ಇಲ್ಲ
ವೇದನೆಯ ಮಹಾಪೂರವೆ
ಅಲ್ಪತೃಪ್ತಿಗೆ ಚಿಟಪಟಿಸುವ
 ಬೊಕ್ಕಸದ ಮಳೆ ನೀರೆ
 
ಪ್ರೀತಿ ಎಂದರೆ ಎಷ್ಟು ಬೇಕು
ಎಂದು ಅಳೆಯುವ ದೇವರೇ
ಇಷ್ಟಗಲದ   ಹೃದಯಕ್ಕೆ
ಹಸಿವಿಗೆ ಮಿತಿ ಇಲ್ಲದ
ಒಂದರ ಮೇಲೆ ಇನ್ನೊಂದು
ಹುಡುಕುವ ಅಲೆದಾಟವೇಕೆ

ಎಲ್ಲಿಂದೆಲ್ಲಿಗು ತೃಪ್ತಿ ಇಲ್ಲ
ಮನ ಹೊಲಸು ಕಾರ್ಖಾನೆ
ಕೊಳೆತಷ್ಟು ಸಲ ಮತ್ತೆ ಉದ್ಭವ
ಹೊರಬರುವ ಹೊಸ ಭಾವಕ್ಕು ಶುಭ್ರವಿಲ್ಲ

ಇಲ್ಲದ ಸಂಶಯ
ಕಾರಿರುಳಿನಂತೆ ಛಾಯಾ
ಒಳ ಹೊಕ್ಕರು ಹೊರ ದಬ್ಬಿದರು
ಕಾಡುವ ನೋವು
ಏನೂ ತಿಳಿಯದಿದ್ದರೂ
ಪರಿಕಲ್ಪನೆಯ ಅಟ್ಟಹಾಸ

ಕಂಡ ಅರಿಯೆ , ಕೇಳಿ ಅರಿಯೆ
ಒಳ ನೋವನ್ನು ಬಾಯಿತೆರೆದು ಹೇಳಲಾರೆ
ಎಷ್ಟು ಸಲ ವಿಭಿನ್ನ ವಿಭಿನ್ನ ರೀತಿಯಲಿ
ತೋಡಿಕೊಂಡರು ಅರ್ಥೈಸಿಕೊಳ್ಳುವ
ಸಹೃದಯಕ್ಕು ಇದೆ ವ್ಯೆಥೆ

~ಸಂಜು~