ಮನಸ್ಸು ಕುದರೆ
******************
ಕಡೀವಾಣವಿಲ್ಲದ ಕುದುರೆ ******************
ಓಟಕಿತ್ತಿದ ಚಂಚಲೆ ಚಿಗುರಿ
ಮಿತಿ ಇಲ್ಲ ಅಂಕೆಶಂಕೆ ಇಲ್ಲ
ವೇದನೆಯ ಮಹಾಪೂರವೆ
ಅಲ್ಪತೃಪ್ತಿಗೆ ಚಿಟಪಟಿಸುವ
ಬೊಕ್ಕಸದ ಮಳೆ ನೀರೆ
ಪ್ರೀತಿ ಎಂದರೆ ಎಷ್ಟು ಬೇಕು
ಎಂದು ಅಳೆಯುವ ದೇವರೇ ಇಷ್ಟಗಲದ ಹೃದಯಕ್ಕೆ
ಹಸಿವಿಗೆ ಮಿತಿ ಇಲ್ಲದ
ಒಂದರ ಮೇಲೆ ಇನ್ನೊಂದು
ಹುಡುಕುವ ಅಲೆದಾಟವೇಕೆ
ಎಲ್ಲಿಂದೆಲ್ಲಿಗು ತೃಪ್ತಿ
ಇಲ್ಲ
ಮನ ಹೊಲಸು ಕಾರ್ಖಾನೆ ಕೊಳೆತಷ್ಟು ಸಲ ಮತ್ತೆ ಉದ್ಭವ
ಹೊರಬರುವ ಹೊಸ ಭಾವಕ್ಕು ಶುಭ್ರವಿಲ್ಲ
ಇಲ್ಲದ ಸಂಶಯ
ಕಾರಿರುಳಿನಂತೆ ಛಾಯಾಒಳ ಹೊಕ್ಕರು ಹೊರ ದಬ್ಬಿದರು
ಕಾಡುವ ನೋವು
ಏನೂ ತಿಳಿಯದಿದ್ದರೂ
ಪರಿಕಲ್ಪನೆಯ ಅಟ್ಟಹಾಸ
ಕಂಡ ಅರಿಯೆ , ಕೇಳಿ ಅರಿಯೆ
ಒಳ ನೋವನ್ನು ಬಾಯಿತೆರೆದು ಹೇಳಲಾರೆ ಎಷ್ಟು ಸಲ ವಿಭಿನ್ನ ವಿಭಿನ್ನ ರೀತಿಯಲಿ
ತೋಡಿಕೊಂಡರು ಅರ್ಥೈಸಿಕೊಳ್ಳುವ
ಸಹೃದಯಕ್ಕು ಇದೆ ವ್ಯೆಥೆ
~ಸಂಜು~
No comments:
Post a Comment