ಇಂದು ಏಕೋ
ಇಂದು ಏಕೋ
ಮನದಲ್ಲಿ ಕಾಲಿ ಕಾಲಿ ಬಿಕೊ ತುಂತುರು ಅಲಲ್ಲಿ ನೋವು
ಮಂಪರಿನಲ್ಲಿ ಕನವರಸಿ
ತಿವಿದು ಎಚ್ಚರಿಸಿ
ಎದ್ದು ಕುರಲು ಯತ್ನಿಸಿ
ಮತ್ತೆ ಬಿದ್ದ ಭಯ ತಡವರಿಸಿ
ಮನಸ್ಸಿನಲ್ಲಿ ಆದ ಕಸಿಮಿಸಿ
ಇಂದು ಏಕೋ
ಹೃದಯಕ್ಕೆ ಎನು ಬೇಕೋ ಬಿಟ್ಟು ಬಿಡದೆ ಡಬ ಡಬಿಸುವವ
ಬಿಕ್ಕಿ ಬಿಕ್ಕಿ ಅಳುವ ಭಾವ
ಭಾರದಂತೆ ಕಲ್ಲು ಹೊತ್ತು
ಹಟ ಮಾಡಿದೆ
ಮುಖಃ ಊದಿಸಿದೆ ಬಲು ಸೀಟ್ಟು
ಪ್ರೀತಿ ಬೇಕಾ ಪ್ರೇಮ ಬೇಕಾ
ಹೃದಯ ತುಂಬ ಊಟ ಬೇಕಾ ಎನು ಕೇಳು ಕೊಡುವೆನು
ಹಟ ಬಿಡು ಮಗುವೆ
ನಿನ್ನವಳ ಕಾಣಲಿಲ್ಲ
ಅವಳ ಮಾತು ಕೇಳಲಿಲ್ಲ ಹೃದಯ ಬಡಿತ ಲಯ
ಸೇರಲಿಲ್ಲ
ಅದಕ್ಕೆ ಈ ಮುನಿಸೆ
ಅವಳು ಬರದಿದ್ದರೆ ಎನು
ನಿನಗೆ ನಾನು ಇಲ್ಲವೇನು
ಜೊತೆಯಲ್ಲೇ ಇರುವೆನು
ಕೊನೆ ಬಡಿತದ ತುಟ್ಟ ತುದಿವರೆಗು
~ ಸಂಜು ~
No comments:
Post a Comment