Friday, January 11, 2013

ನೀನಿತ್ತ ಪ್ರೀತಿಗೆ ನಾನಿತ್ತ ಭಾವ ಈ ಪದಗಳು


ಬರಿಯ ಹೋದರೆ ಬರೀ ಭಾವನೆಗಳೆಲ್ಲ
ನನ್ನೆದೆಯ ಉಸಿರು
ಆ ಉಸಿರ ತುಂಬೆಲ್ಲ ನಿನ್ನದೇ ಹೆಸರು
ನೀನಿತ್ತ ಪ್ರೀತಿಗೆ ನಾನಿತ್ತ ಭಾವ
ಈ ಪದಗಳು
ಪದಗಳಲ್ಲ ನನ್ನೆದೆಯ ಜೀವ ಕಣಗಳು
ನಾ ಕಂಬನಿಯಾಗಲಾರೆ ನಿನ್ನ ಕಣ್ಣಿಗೆ
ಉಸಿರಾಗಿ ಬಾಳುವೆ ನಿನ್ನೆದೆಯ ಬಡಿತಕ್ಕೆ
ನಗುವಾಗಿ ಬಾಳುವೆ ನಿನ್ನ ಸಂತೋಷದೊಳಗೆ
ನನ್ನೆಲ್ಲ ಭಾವಗಳು ನಿನ್ನಲ್ಲೇ ಬಾಳುವಾಸೆ
ಹೊರಗೆಲ್ಲೋ ನಾ ಸುಮ್ಮನೆ ಇರುವೆ
ನಿನ್ನೊಳಗೆ ನಾ ಬಾಳುತ್ತಿರುವೆ
ಸಂಜು

ನಿನ್ನ ಕಂಡಮೇಲೆ ಹೀಗೆ ಪ್ರಜ್ಞೆ ಬಾರಲಿಲ್ಲ


ನಿನ್ನ ಕಂಡಮೇಲೆ
ಹೀಗೆ
ಪ್ರಜ್ಞೆ ಬಾರಲಿಲ್ಲ
ಮರಳಿ ಬರುವ ಕ್ಷಣದಲ್ಲಿ
ನನ್ನಿಂದ ದೂರವಾಗಿದ್ದು
ಅರಿವಿಗೆ ಕೂಡ ಬಾರಲಿಲ್ಲ

ಸಿಂಗರಿಸಿ ಸವರಿಸಿ ಕೊಳುತಿದ್ದೆ
ನಿನಗಾಗೆ
ನೀ ಮುಂದೆ ಬರಲು
ನೋಟ ಬೆರಸದೆ ಮುಂದೆ ಹೋದೆ
ಕಣ್ಣ ತುಂಬಿದ್ದು ಕಾಣದೆ
ಒರೆಸಿದೆ

ದೇವರ ಮೂರ್ತಿಯಂತೆ
ಪ್ರತಿಷ್ಟಾಪಿಸಿದ್ದೆ ಮನದಲ್ಲಿ
ಬರಿ ಮೂರ್ತಿಯಂತೆ
ಕಲ್ಲಾಗಿ ಹೋದೆ
ನನ್ನ ಬದುಕಲಿ

ಬಹಳ ಆಶೆಯವಿತ್ತು
ನಿನ್ನ ಮನೆಯ ದಾರಿ
ಸೇರಲು
ನನ್ನ ಬದುಕಿನ ದಾರಿಯ
ದಿಕ್ಕಾಪಾಲಾಗಿ
ನೀ ಮಾಡಿ ಹೋದೆ

ಸಂಜು

ನನ್ನೆದೆಯ ಮಣ್ಣು ಬರಡಾಗಿದೆ


ನಂಬಿಕೆ ಹುಟ್ಟಿದೆ ನನಗೆ
ನನ್ನೆದೆಯ ಮಣ್ಣು ಬರಡಾಗಿದೆ
ಹೂ ಗಿಡ ಹುಟ್ಟುವುದಿರಲಿ
ಒಂದು ಸಣ್ಣ ಹುಲ್ಲು
ಹುಟ್ಟುವುದಿಲ್ಲ
ಅರ್ಥವಾಗಿದೆ ನನಗೆ
ನೀ ಸಿಗುವುದಿಲ್ಲ
ಮನಸ್ಸಿನಲ್ಲಿ ಆಸೆ
ಹುಟ್ಟುವುದಿರಲಿ
ಕನಸಿನಲ್ಲೂ ನೀ
ನನ್ನ ಜೋತೆಯಗುವುದಿಲ್ಲ
ದೂರಲಾರೆ ಯಾರನ್ನು
ನನ್ನೀ ಪರಿಸ್ತಿತಿಗೆ
ತಪ್ಪುಗಳೆಲ್ಲ ನನ್ನದೇ
ಆದರೆ ಯಾರನ್ನು ದೂರಲಿ
ಒಬ್ಬರಿಗಾಗಿ ಬದುಕುವುದೆಂದರೆ
ಜೀವ ಮುಡುಪಾಗಿ ಇಡುವಾಸೆ
ಆ ಆಸೆಯೇ ಚಾಟಿಯಾಗಿ
ಬಡಿದರೆ ನಾ ಯಾರನ್ನು
ದೂಷಿಸಲಿ
ಹಣೆ ಬರಹದಲ್ಲಿ ಇಲ್ಲದನ್ನು
ನಾ ಯಾರಿಗೆ ಕೇಳಲಿ
ನೋವಿನ ಬವಣೆ
ಜೋಳಿಗೆ ತುಂಬಿರುವಾಗ
ಪ್ರೀತಿ ಬಿಕ್ಷೆ ಹೇಗೆ
ಕೆಳಲ್ಲಿ

ಸಂಜು

ಮರದ ಮೃಧಂಗ ಭಾರಿಸುತಿತ್ತು


ಮರದ ಮೃಧಂಗ
ಭಾರಿಸುತಿತ್ತು
ತನ್ನೊಳಗಿನ
ಲಾಲಸದೆ
ಚರ್ಮ ಹರಿದರು
ಬಿಡಲೊಲ್ಲದು
ತನ್ನಾಸೆಯ
ಸರಿಗಮದೇ
ಲೋಕ ಕೇಳುವ
ಜಂಜಾಟವಿಲ್ಲ
ಶೃತಿ ಸೇರಿಸುವ
ಜಿಜ್ಞಾಸೆ ಇಲ್ಲ
ಎಲ್ಲರೊಟ್ಟಿಗೆ
ಡಂ ಡಮಿಸುವ
ಶಕ್ತಿಯು ಇಲ್ಲ
ಕತ್ತಲೆಯ
ಕೊಣೆ
ಮೂಲೆ ಮನೆ
ಹುಚ್ಚು ಹಿಡಿದವ
ದೆವ್ವ ಮೆಟ್ಟಿದವ
ಪಟ್ಟದೊಂದಿಗೆ
ತುಪ್ಪಕ್ಕನೆ ಊಗಿದ
ಗೊಡೆ ರಂಗು
ಎಲೆ ಅಡಿಕೆ ಸುಣ್ಣ
ಹುಚ್ಚನಿಗಿದ್ದ
ಮನದಾಳದ ನೋವ
ಅರಿತವರ್ಯಾರು
ಬಡಿದು ಉರ ಬಿಡಿಸಿದ
ಈ ಹಾಳು ಜನರು
ಮಡದಿ ಮನಿ ಬಿಟ್ಟಳು
ಮಕ್ಕಳು ಗುಡ್ಸ್ಲ ಬಿಡಿಸಿದರು
ಮಂದಿ ಹುಚ್ಚ ಬಡ್ಡಿ ಮಗ
ಅಂತ ಉರ ಬಿಡಿಸಿದರು
ಇಂತ ಮೃಧಂಗ
ಭಾರಿಸದಿದ್ದರೆ
ನಾ ಬಿಟ್ಟರು
ನನ್ನ ಅಂತರಂಗ
ಬಿಡದು
ಮರದ ಮೃಧಂಗ
ಭಾರಿಸಿತಿತ್ತು
ತನ್ನೊಳಗಿನ
ಲಾಲಸದೆ
ಚರ್ಮ ಹರಿದರು
ಬಿಡಲೊಲ್ಲದು
ತನ್ನಾಸೆಯ
ಸರಿಗಮದೇ

ಸಂಜು

ಸಣ್ಣ ಸಣ್ಣ ಚೂರು ಚೂರು ಪ್ರತಿ ಹೃದಯದ ಆಸೆಗಳು ನೂರು


ಸಣ್ಣ ಸಣ್ಣ ಚೂರು ಚೂರು
ಪ್ರತಿ ಹೃದಯದ ಆಸೆಗಳು
ನೂರು
ಒಂದೇ ಸಾರಿ
ಯಾರಾದರು
ಅರ್ಥೈಸಿಕೊಂಡರೆ
ಸಾಕು
ಜೀವನ ಪಾರು

ಕನಸುಗಳಿಗೆ ಬಣ್ಣ ತುಂಬಿ
ಬರುವುದು
ಬದುಕಿನ ಹಾದಿ ತಾನಾಗೆ
ತೆರೆದು ಕೊಳುವುದು
ಸಣ್ಣ ಸಣ್ಣದಾಗಿ ಚೂರು ಚೂರು

ಈ ಒಂದು ಭಾವದ
ಮದುರತೆಯ
ನೋವು
ಪ್ರೀತಿ ಹುಟ್ಟಿ
ಆರಳಿತು
ಹೃದಯದಲ್ಲಿ
ಸಾವಿರ ಹೂವು
ಸಣ್ಣ ಸಣ್ಣ ಚೂರು ಚೂರು

ಸಂಜು