ಬರಿಯ ಹೋದರೆ ಬರೀ ಭಾವನೆಗಳೆಲ್ಲ
ನನ್ನೆದೆಯ ಉಸಿರು
ಆ ಉಸಿರ ತುಂಬೆಲ್ಲ ನಿನ್ನದೇ ಹೆಸರು
ನೀನಿತ್ತ ಪ್ರೀತಿಗೆ ನಾನಿತ್ತ ಭಾವ
ಈ ಪದಗಳು
ಪದಗಳಲ್ಲ ನನ್ನೆದೆಯ ಜೀವ ಕಣಗಳು
ನಾ ಕಂಬನಿಯಾಗಲಾರೆ ನಿನ್ನ ಕಣ್ಣಿಗೆ
ಉಸಿರಾಗಿ ಬಾಳುವೆ ನಿನ್ನೆದೆಯ
ಬಡಿತಕ್ಕೆ
ನಗುವಾಗಿ ಬಾಳುವೆ ನಿನ್ನ ಸಂತೋಷದೊಳಗೆ
ನನ್ನೆಲ್ಲ ಭಾವಗಳು ನಿನ್ನಲ್ಲೇ
ಬಾಳುವಾಸೆ
ಹೊರಗೆಲ್ಲೋ ನಾ ಸುಮ್ಮನೆ ಇರುವೆ
ನಿನ್ನೊಳಗೆ ನಾ ಬಾಳುತ್ತಿರುವೆ
ಸಂಜು
'ನಿನ್ನೊಳಗೆ ನಾ ಬಾಳುತ್ತಿರುವೆ ' ವಾವ್ ಕವಿವಾರ್ಯ ಮೆಚ್ಚಿದೆ. ಒಳ್ಳೆಯ ಬ್ಲಾಗಿಗೆ ಬಂದು ಕವನವನ್ನು ಆಸ್ವಾದಿಸಿದೇ. ಖುಷಿಯಾಯಿತು.
ReplyDeleteಧನ್ಯವಾದ ಬಧ್ರಿನಾಥ್ ನಿಮ್ಮ ಮೆಚ್ಚುಗೆಗೆ ನನ್ನ ಹೃದಯದ ನಮನ
ReplyDelete