Saturday, January 5, 2013

ಧಾಮಿನಿಯ ಸಾವು


ಎಷ್ಟೊಂದು ಕೋಮಲೆ
ಎಂತಿದ್ದಳು ಅವಳು
ಹೆತ್ತವರ ಕುಸಮವಾಗಿ
ಬೆಳೆದವಳು

ತನ್ನ ಮನೆಯ ಆಸರೆಯಾಗಬೇಕೆಂಬ
ಅಶಾ ಕಿರಣ ಹೊತ್ತಿದವಳು
ಅಮಾನುಷ ಕಾಮುಕರ
ಬಲಿಪಶುವಾಗಿಹಳು
ಬಲಿಪಶುವಾಗಿಹಳು

ಕೊನೆ ಕ್ಷಣದಲ್ಲು ಅತ್ಮವಿಶವಾಸ
ಬಿಡದವಳು
ಬದುಕಬೇಕೆಂಬ ತನ್ನಾಸೆ ವ್ಯಕ್ತ
ಪಡಿಸಿದವಳು
ಕ್ಷಣ ಮಾತ್ರದೆ ಅಳಿದು ಹೋದಳು
ಕ್ಷಣ ಮಾತ್ರದೆ ಅಳಿದು ಹೋದಳು

ದೇಹವಿಂದು ನಿತ್ರಾಣವಾಗಿದೆ
ಕೇವಲ ನೀ ಹೆಸರಾಗಿ ಉಳಿದಿಹೇ
ಕೇವಲ ನೀ ಹೆಸರಾಗಿ ಉಳಿದಿಹೇ

ಹೇ ಭಾರತದ ಹೆಣ್ಣೇ
ಈಗೋ ನಾ ಯಾಚಿಸುತ್ತಿರುವೆ
ನಿನಗೆ ಕ್ಷಮೆ
ಎಲ್ಲ ಗಂಡು ಜಾತಿಯ
ಪರವಾಗಿ
ನಿನ್ನ ಕೊಂದವರ
ನಿರ್ನಾಮವಾಗಲಿ
ನಿನ್ನಾತ್ಮ ಸುಖಿಯಾಗಲಿ
ಶಾಂತಿ ದೊರಕಲಿ

ನೀನು ಸತ್ತದ್ದು ನಿನ್ನ ಸಾವಲ್ಲ
ಮಾನವತೆಯ ಸಾವು
ನೀನು ನಂಬಿದ
ಮನುಷ್ಯತ್ವದ ಸಾವು

ಸಂಜು

No comments:

Post a Comment