Wednesday, June 27, 2012

ಶ್ರೀ ಗುರು ರಾಘವೇಂದ್ರ


ಶ್ರೀ ಗುರು ರಾಘವೇಂದ್ರ

ಪೂಜ್ಯಯ ರಾಘವೆಂದ್ರಾಯ ಸತ್ಯ ಧರ್ಮ ರತಾಯಚಃ
                                              ಬಜತಾಂ ಕಲ್ಪ ವ್ರುಕ್ಷಯ ನಮತಾಂ ಕಾಮ ಧೇನವೆ


ಶ್ರೀ ಗುರು ರಾಘವೇಂದ್ರರ ಚರಣಕ್ಕೆ ನನ್ನ ಈ ಮೊದಲ ಕವನ ಅರ್ಪಣೆ

ತಂದೆ ಅಂದರು ನೀನೆ ತಾಯಿ ಅಂದರು ನೀನೆ
                                                                             
ಬಂಧು ಆಂದರು ನೀನೆ ಬಳಗ ಅಂದರು ನೀನೆ

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರ



ನಿನ್ನಲ್ಲಿ ಜ್ಞಾನ ಮಗ್ನನಾಗಿ ಲೋಕಮರೆವೆ

ಈ ಬದುಕಿನ ಕಷ್ಟ ಮರೆವೆ

ನನಗೇನು ಬೇಡ ನೀನಿರಲು ಮುಂದೆ

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರ



ನೊಂದವರಿಗೆ ನಿನ್ನ ಹೆಸರೇ ಸಾಕು

ನೀನಿರುವ ಒಂದು ನಂಬಿಕೆಯೇ ಸಾಕು

ದೀನ ದುರ್ಬಲರಿಗೆ ಕರುಣಾಮೂರ್ತಿ ನೀನು

ದಾರಿ ತಪ್ಪಿದರೆ ಕೈ ಹಿಡಿದು ನಡೆಸುವವನು ನೀನು

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರ



ಮಂಚಾಲಮ್ಮನ ಅಶ್ರಯದಲ್ಲಿ

ನೀನಿರುವೆ ತಂದೆ

ನಿನ್ನ ಅಶ್ರಯದಲ್ಲಿ ನಾನಿರುವೆ ತಂದೆ

ಅಲ್ಲಿಗೆ ಬಂದರೆ ಸಾಕು ನನ್ನ ಮನವು

ಹೂವಿನಷ್ಟೆ ಹಗುರ ಎಲೆಲ್ಲು ಸಂತಸವು

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರ



ನನ್ನ ಮನದಲ್ಲೂ ನೀನೆ ನನ್ನ ಹೃದಯದಲ್ಲು ನೀನೆ

ದಿಕ್ಕು ನೀನೆ ಧಾರಿ ನೀನೆ  ನನ್ನ ನಡೆಸುವಾತ ನೀನೆ

ನೀನು ನಡೆಸಿದಂತೆ ನಡೆವೆ ಕಷ್ಟ ದುಃಖ ಏನೇ ಇರಲಿ

ನಿನ್ನ ನಂಬಿ ನಡೆವುದಷ್ಟೆ ನನಗೆ

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರ



~ಸಂಜು~

ಇಂದು ಏಕೋ


ಇಂದು ಏಕೋ

ಇಂದು ಏಕೋ
ಮನದಲ್ಲಿ  ಕಾಲಿ ಕಾಲಿ ಬಿಕೊ
ತುಂತುರು ಅಲಲ್ಲಿ ನೋವು
ಮಂಪರಿನಲ್ಲಿ ಕನವರಸಿ
ತಿವಿದು ಎಚ್ಚರಿಸಿ
ಎದ್ದು ಕುರಲು ಯತ್ನಿಸಿ
ಮತ್ತೆ ಬಿದ್ದ ಭಯ ತಡವರಿಸಿ
ಮನಸ್ಸಿನಲ್ಲಿ ಆದ ಕಸಿಮಿಸಿ

ಇಂದು ಏಕೋ
ಹೃದಯಕ್ಕೆ ಎನು ಬೇಕೋ
ಬಿಟ್ಟು ಬಿಡದೆ ಡಬ ಡಬಿಸುವವ
ಬಿಕ್ಕಿ ಬಿಕ್ಕಿ ಅಳುವ ಭಾವ
ಭಾರದಂತೆ ಕಲ್ಲು ಹೊತ್ತು
ಹಟ ಮಾಡಿದೆ
ಮುಖಃ ಊದಿಸಿದೆ  ಬಲು ಸೀಟ್ಟು

ಪ್ರೀತಿ ಬೇಕಾ ಪ್ರೇಮ ಬೇಕಾ
ಹೃದಯ ತುಂಬ ಊಟ ಬೇಕಾ
ಎನು ಕೇಳು ಕೊಡುವೆನು 
ಹಟ ಬಿಡು ಮಗುವೆ  

ನಿನ್ನವಳ ಕಾಣಲಿಲ್ಲ
ಅವಳ ಮಾತು ಕೇಳಲಿಲ್ಲ
ಹೃದಯ ಬಡಿತ ಲಯ
ಸೇರಲಿಲ್ಲ
ಅದಕ್ಕೆ ಈ ಮುನಿಸೆ

ಅವಳು ಬರದಿದ್ದರೆ ಎನು
ನಿನಗೆ ನಾನು ಇಲ್ಲವೇನು
ಜೊತೆಯಲ್ಲೇ ಇರುವೆನು
ಕೊನೆ ಬಡಿತದ ತುಟ್ಟ ತುದಿವರೆಗು
 
~ ಸಂಜು ~

ಪ್ರೀತಿ ಸ್ಪಷ್ಟ


ಪ್ರೀತಿ ಸ್ಪಷ್ಟ

 ನಿನ್ನೊಳಗೆ ನೂರು ಮಾತಿದೆ
ಕೇಳುವ ಆಸೆ ನೂರು ನನ್ನಲ್ಲು ಇದೆ
ಮೌನದ ಪರದೆ ಸರಿಸಿ
ಮಾತಿನ ಅಮೃತಪಾನ ತುಸು ನೀಡೆ
 
ನನ್ನೊಳಗು ನೂರು ಭಾವವಿದೆ
ಕೇಳುವೆಯ ಈ ನನ್ನ ಹಾಡು
ಮನಸ್ಸು ಬಿಚ್ಚಿ ಹರಿಸ ಬಲ್ಲೆ
ಶ್ರುತಿ ಲಯಕ್ಕೆ ನಿನ್ನ ಎದೆಯ
ಬಡಿತ ನೀಡು ನಲ್ಲೆ

ಕಣ್ಣೊಳಗೆ ನೂರು ಹಸಿವಿದೆ
ನಿನ್ನಂಧವ ತುಸು ಉಣಿಸು ಕಣ್ಣಿನಲ್ಲೆ
ತುಟಿ ಆಧರಕ್ಕೆ ನೂರು ದಾಹವಿದೆ
ನಿನ್ನ ಆಧಾರದ ಸಿಹಿ ಜೆನು ಕುಡಿಸು ತುಟಿಯಲ್ಲೆ
ನನ್ನ ಒಡಲಲ್ಲಿ  ಬಿಸಿ ತಾಪವಿದೆ
ನಿನ್ನ ಒಡಲ ಬಂಧಿಸು ತಂಪು ಎರೆಯುತಲಿ

~ ಸಂಜು ~

ನಿನ್ನ ನೆನಪು


ನಿನ್ನ ನೆನಪು

ಮನದಾಳದ ಭಾವ
ನಿನ್ನ ಪ್ರೀತಿ ಹೆಸರನ್ನು  ಪಡೆದಿರಲು
ಒಳಗಣ್ಣ  ಪ್ರತಿ ಕೊಣೆಯಲು 
ಜೋತು ಹಾಕಿದ ನಿನ್ನ ಭಾವ ಚಿತ್ರಗಳು ಹಲವು
ಹೊರಗೆಲ್ಲು ನಿನ್ನ ಕಾಣದೆ 
ಮನ ಪರಿತಪಿಸಿ ನೊಂದಿದೆ 
ಒಮ್ಮೊಮ್ಮೆ ನಿನ್ನ ನೆನೆಯಲು 
ನಿನ್ನ ಹೆಸರ ಬರೆಯಲು
ಸಂತೋಷದ ಹಿಗ್ಗಿನಲ್ಲಿ ಮನಸ್ಸು 
ನಿನ್ನೊಂದಿಗೆ ಕಳೆದ ನನ್ನ ಜೀವನದ
ಕೆಲ ಕ್ಷಣಗಳಿಗೆ  ಆಮೃತಘಳಿಗೆಯನ್ನು 
ನೆನೆ ನೆನೆದು ನನ್ನ ಬರಡು ಜೀವನದಲ್ಲಿ 
ಪನ್ನೀರ ಕಾರಂಜಿ ಆಗಾಗೆ ಚಿಮ್ಮುತದ್ದೆ 
ದೂರದ ನಿನ ಉಲ್ಲಾಸದ ನೆನಪು.

~ ಸಂಜು ~

ತಿರುಗಿ ನಾ ಬರುವೆನು


ತಿರುಗಿ ನಾ ಬರುವೆನು 

ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು 
ತಿರುಗಿ ನಾ ನೊಡಲು ಮನಸ್ಸೆಲ್ಲ  ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ  (ವೃಂದಗಾಯಕರು)

ನಿನ್ನ ದುಃಖಕ್ಕೆ ಕಾರಣ ನಾ  ನಿನ್ನ ಎದೆಯ ತೋರಣ
ಕಣ್ಣೀರು ತಾಳೆನು ಮನ ಸಂತೈಸಿಕು ನಾ ಬರುವೆನು
ನಾ ಹೊದಮೇಲು ಇರುವೆನು ನಿನ್ನೊಂದಿಗೆ ಬಾಳುವೆನು
ನಿನ್ನ ನೆನಪಲ್ಲಿ ಬರುವೆನು ಕನಸಲ್ಲಿ ಸೇರುವೆನು

ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು 
ತಿರುಗಿ ನಾ ನೊಡಲು ಮನಸ್ಸೆಲ್ಲ  ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು 
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ  (ವೃಂದಗಾಯಕರು)

ನನ್ನ ಎದೆಯಲ್ಲಿ ಬಚ್ಚಿಟ್ಟ ನೊವಿದೆ ನನ್ನೊಳಗು ಕಾಡಿದೆ
ದಾರಿ ಉದಕ್ಕು ತೆಂಗು ಬಾಳೆ ನನ್ನ ಕಣ್ಣೀರ ಒರೆಸಿದೆ 
ದಾರಿ ಕ್ರಮಿಸಿ ಓಡಿದೆ ನನ್ನ ಮನ ಹಿಂದಕ್ಕೆ ಹೊರೆಟಿದೆ
ನಿನ್ನೆಲ್ಲ ಮುಖಭಾವ ಕಣ್ಣಿನಲ್ಲಿ ಚಲನಚಿತ್ರದ ಹಾಗೆ  ಓಡಿದೆ 

ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು 
ತಿರುಗಿ ನಾ ನೊಡಲು ಮನಸ್ಸೆಲ್ಲ  ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು 
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ  (ವೃಂದಗಾಯಕರು)

~ಸಂಜು~

Saturday, June 9, 2012

ನಾ ಒಂಟಿ ಅಲ್ಲ

1.       ನಾ ಒಂಟಿ ಅಲ್ಲ
*****************
ಮನ ಮಿಡಿಯುವ ಮಾತು ಪ್ರೀತಿ
ಹೃದಯ ತುಡಿಯುವ ಬಾಧೆ ಈ ರಿತಿ
ನೀನಿಲ್ಲದ ಇ ಪ್ರತಿ ಕ್ಷಣದ ಮುಳ್ಳು
ಪ್ರತಿ ಹೆಜ್ಜೆಗೂ ನನ್ನ ಚುಚ್ಚಿದೆ
ಮರೆಯಾಗಿ ಹೊದ ಅ ಕೊನೆ ನೋಟ
ಕಣ್ಣಾವರಿಸಿ ಪ್ರತಿ ಸಲ ಕಣ್ಣೋರೆಸಿದೆ
ನಾ ಒಂಟಿ ಅಲ್ಲ ನಿನ್ನ ಹವಾ ಭಾವ
ನನ್ನೊಂದಿಗೆ ನಾ ಇದ್ದಲೆಲ್ಲ ನನ್ನ ಜೊತೆಗೂಡಿದೆ 
ನನ್ನ ಆಡುಗೆಯಲ್ಲಿ ನಿನ್ನ ಪ್ರೀತಿ ರಸ
ಪ್ರತಿ ತುತ್ತಿನಲ್ಲು ನನ್ನ ತನು ತುಂಬಿದೆ
ನಾ ಓಡಾಡುವಾಗ ನನ್ನ ಜ್ಯೊತೆ
ನಿನ್ನ ಮೈ ಸುಗಂಧ ನನ್ನ ಪಕ್ಕದಲ್ಲೇ
ಕೈ ಹಿಡಿದು  ನಡೆದಿದೆ
ನನ್ನ ಸ್ನಾನದಲ್ಲಿ ನಿನ್ನ ಬಿಗಿ ಅಪ್ಪುಗೆ
ಬಿಸಿ ನೀರ  ಹಬೆಯಾಗಿ ನನ್ನ ತನು ಸೇರಿದೆ
ನಾ ಮಲಗುವಾಗ ನಿನ್ನ ಒಲವ ಚೇತನ
ನನ್ನ ಹೊದಿಕೆಯಾಗಿ ನನ್ನ ಅಪ್ಪಿ ಮಲಗಿದೆ
ನಾ ಒಂಟಿ ಅಲ್ಲ ನನ್ನೊಂದಿಗೆ ನಿನ್ನ ಆತ್ಮ
ನನ್ನ ಸುತ್ತು ಸುತ್ತಿ ಬಳಸಿದೆ
ನನ್ನ ನೆನಪಿನಾಳದ ಸಿಹಿ ಹೊಂಗನಸು ನೀನು
ನನ್ನ ಮನಸ್ಸಿನಾಳದಲ್ಲಿ  ಪ್ರೀತಿ ಬಿಂಬಿಸಿದವಳು  ನೀನು

~ಸಂಜು~

ಜೊತೆ ಇಲದ ಪಯಣ


ಜೊತೆ ಇಲದ ಪಯಣ
************
ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ
ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಸ ನಿಸ ನಿಸ ನಿಸ ರೆ ರೆ ರೆ
ಸ ನಿಸ ನಿಸ ನಿಸ ರೆ ರೆ ರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ

ಜೊತೆ ಬಾಳುವ ಜೊತೆ ಸೇರುವ ಆಸೆ ನೊರು ನೊರು
ನಮ್ಮ ನಡುವಿನಲ್ಲಿ ಇರುವ ಅಂತರಗಳು ಸಾವಿರ ಮೈಲು

ಜೊತೆ ಬಾಳುವ ಜೊತೆ ಸೇರುವ ಆಸೆ ನೊರು ನೊರು
ನಮ್ಮ ನಡುವಿನಲ್ಲಿ ಇರುವ ಅಂತರಗಳು ಸಾವಿರ ಮೈಲು

ಹೃದಯ ಬಡಿತೆ ಒಂದೆ ಜೀವಗಳ ತುಡಿತ ಒಂದೆ
ಆದರೆ ಮದ್ಯದಲ್ಲಿ ಬೀಕೋ ಅಂತಿದೆ ನಮ್ಮ ದೊರಗಳು

ಹೃದಯ ಬಡಿತೆ ಒಂದೆ ಜೀವಗಳ ತುಡಿತ ಒಂದೆ
ಆದರೆ ಮದ್ಯದಲ್ಲಿ ಬೀಕೋ ಅಂತಿದೆ ನಮ್ಮ ದೊರಗಳು

 ನಮ್ಮಿಬ್ಬರ ಇಷ್ಟಗಳ ನಡುವೆ ಇ ದೂರದ ದೂರ
ಮೌನದ ನೀರಾವತೆ ಕಾಲಕ್ಕು ಇಷ್ಟವಾಗಿರಬಹುದು

ನಮ್ಮಿಬ್ಬರ ಇಷ್ಟಗಳ ನಡುವೆ ಇ ದೂರದ ದೂರ
ಮೌನದ ನೀರಾವತೆ ಕಾಲಕ್ಕು ಇಷ್ಟವಾಗಿರಬಹುದು

 ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ

ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ
ಬದುಕಿನ ಪಯಣದಲ್ಲಿ ಸವೆಯುತ್ತಿದೆ ಧಾರಿ ದೂರ ದೂರ

ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ
ಸ ನಿಸ ನಿಸ ನಿಸ ರೆ ರೆ ರೆ
ಸ ನಿಸ ನಿಸ ನಿಸ ರೆ ರೆ ರೆ

ಜೊತೆಗಾತಿ ಇರುವಳು ಆದರೆ ಗುರಿ ಮಾತ್ರ ಬೇರೆ ಬೇರೆ

 ~ಸಂಜು~