Tuesday, July 24, 2012

ನೀ ಇರದ ಬಾಳಿಗೆ ಏನರ್ಥ


     ನೀ ಇರದ ಬಾಳಿಗೆ ಏನರ್ಥ

ನೀ ಇರದ ಬಾಳಿಗೆ ಏನರ್ಥ
ಕಡಲ ಸೇರದ ನದಿಗೆ ಏನರ್ಥ
ನೀ ಬರದ ದಾರಿಗೆ ಇಣುಕಿ ನಲ್ಲೆ
ಕಣ್ಣ ಇಂಗಿಸಿ ಸೋತಿದೆ
ದಾರಿ ಬದಿಯ ಹಸಿರು ಮನ ಹಿಂಡಿ ಕೆಣಕಿದರೆ ಏನ್ ಅರ್ಥ
ನೀ ಇರದ ಬಾಳಿಗೆ ಏನರ್ಥ

ಇರುಳುಗಳಿಲ್ಲ ನನ್ನ ಬಾಳಿಗೆ
ಎಲ್ಲವೂ ಬಿಟ್ಟ ಕಣ್ಣಿನ ಪರಿತಾಪ
ಹುಣ್ಣಿಮೆ ಬಂದು ಹೋದದ್ದೇ ತಿಳಿಯಲಿಲ್ಲ
ಈ ನೈದಿಲೆಗೆ ಮುಸುಕಾಗಿದೆ ನೀನೇ ಕರ್ತ
ನೀ ಇರದ ಬಾಳಿಗೆ ಏನರ್ಥ

ಸಾಗರನ ಬೆಳ್ಳಿ ಅಲೆ ಸೋತು
ಮರಳಿ ಓಡಿದೆ ನನ್ನ ಓಲೈಸದೆ
ಬೀಸು ತಂಗಾಳಿ ತೂರಿದೆ
ನನ್ನ ಬಳಿ ಸೋಕದೆ
ಎಲ್ಲಿ ನಡೆದರು ಬಿಡಲಿಲ್ಲ ನಿನ್ನ ನೆನಪು ಸ್ವಾರ್ಥ
ನೀ ಇರದ ಬಾಳಿಗೆ ಏನರ್ಥ

ನೀ ಇರದ ಬಾಳಿಗೆ ಏನರ್ಥ
ಕಡಲ ಸೇರದ ನಧಿಗೆ ಏನರ್ಥ
ನೀ ಬರದ ದಾರಿಗೆ ಇಣುಕಿನಲ್ಲೆ
ಕಣ್ಣ ಹಿಂಗಿಸಿ ಸೋತಿದೆ
ದಾರಿ ಬದಿಯ ಹಸಿರು ಮನ ಹಿಂಡಿ ಕೆಣಕಿದರೆ ಏನರ್ಥ
ನೀ ಇರದ ಬಾಳಿಗೆ ಏನರ್ಥ
 
~ ಸಂಜು ~

ಚಿಂತನೆಯ ಹಾದಿ


   ಚಿಂತನೆಯ ಹಾದಿ
ಯಾರು ಒಲ್ಲರೆಂದು
ಬಾಳ ಬೆಲ್ಲ ಸವೇದೀತೆ
ಯಾರು ಸಲ್ಲರೆಂದು
ಹೃದಯ ಬಡಿತ  ನಿಂತೀತೆ
ಯಾರು ಬಣ್ಣಿಸಲಿಲ್ಲವೆಂದು
ಹೂ ನಗುವ ಮರೆತೀತೆ
ಯಾರು ಕಾಣಲಿಲ್ಲವೆಂದು
ರಮಣಿಯ ಸೌಂದರ್ಯದ
ಪ್ರಕೃತಿ ನಿಂತೀತೆ
ಕುಣಿದು ಕುಣಿದು ಕುಪ್ಪಳಿಸಿದರು
ತಲ್ಲಣಿಸಿದೆ ಪೃಥ್ವಿ ತನ್ನ ಸುತ್ತನ್ನು 
ನೀಲ್ಲಿಸೀತೆ
ಯಾರು ನೆತ್ತಿ ಸುಟ್ಟು ಹಿಡಿ ಶಾಪ
ಹಾಕಿದರೆಂದು ಸೂರ್ಯ ತನ್ನ
ಕಿರಣ ನಿಲ್ಲಿಸೀತೆ
ಯಾರೊ ಕತ್ತಲಲ್ಲಿ ಬಿಕ್ಕಿ ಬಿಕ್ಕಿ
ಆಳುತಿಹನು ಎಂದು ಚಂದ್ರ ತನ್ನ
ಚೆಲುವನ್ನು ಮರೆತೀತೆ
ಮಣ್ಣ ಕಾಯುವವನು ನಾನು
ಅದನ್ನೆ ತುಳಿದು ನಡೆದರು
ಮಣ್ಣು ನನ್ನ ತೊರೆದೀತೆ

~ ಸಂಜು ~

ಎತ್ತು, ಕೊಣನ ಪರೆದಾಟ


 ಎತ್ತು, ಕೊಣನ ಪರೆದಾಟ
ಮನಸ್ಸು ಒಂದು ಕಡೆ
ಜೀವ ಇನೊಂದು ಕಡೆ
ಎರೆಡಕ್ಕು ಪೈಪೋಟಿ
ಎತ್ತು ಕೊಣನ ಸಂಬಂಧದ
ಲಟಾಪಟಿ
ಇದರ  ಮಧ್ಯೆ ಬದುಕು
ಎರೆಡಕ್ಕು ಮುಗುದಾರಾ  ಹಾಕಿ
ಎಳೆದಾಡುತ್ತಿದ್ದೆ
ತಾಳಮೆಳವಿಲ್ಲ ಇಬ್ಬರ  ಭಾವಕ್ಕು
ನಡೆಯಲು ಸೆಣೆಸಾಡುತ್ತಿದ್ದೆ 
ಮನಸ್ಸಿಗೆ ಬೇಡದ
ನಿದ್ರಾ ಅಹಾರ
ಜೀವಕ್ಕೆ ಬೇಕು
ಜೀವಕ್ಕೆ ಬೇಡದ
ನೋವು ಹಿಂಸೆ
ಹೃದಯ ಭಾರ
ಮನಸ್ಸಿಗೆ ಬೇಕು
ಯಾರ ಮಾತು ಕೇಳಲಿ
ಇಬ್ಬರು ನನ್ನ ಕೆಳಗೆ
ಗಪ್ಪ್ ಚುಪ್ಪ
ಅಂತ ವಿಧಿ ಚಾಟಿ ಏಟು
ಕೊಟ್ಟಿದೆ
ಸಾವಿನ ಆಸೆ ಮನಸ್ಸಿಗೆ
ಧೈರ್ಯ ಸಾಲದು ಜೀವಕ್ಕೆ
ಕನಸಿನ ಸುಂದರ ಲೋಕ
ಮನಸ್ಸಿನದು
ಜೀವಕ್ಕೆ ಹೊರಜಗತ್ತಿನ ವ್ಯಾಘ್ರ
ಬದುಕು 
ಪ್ರೀತಿ, ಪ್ರೇಮ, ಸುಖಃ
ಸುಮಧುರ ಭಾವ ಮನಸ್ಸಿಗೆ
ಅಪಮಾನ, ತಿರಸ್ಕಾರ  
ನೈಜ ಬದುಕಿನ ನೋವು ಜೀವಕ್ಕೆ
 
ಯಾರ ಕೇಳಲಿ ಎನು ಮಾಡಲಿ 
ಇಲ್ಲದ ಆಸೆ ಸಲ್ಲದ ಹಿಂಸೆ
ಅತೃಪ್ತಿ, ಜಿಗುಪ್ಸೆ ಈ
ತೊಗಲು ಧರಿಸಿದ
ಮನು ಜನ್ಮಕ್ಕೆ

~ ಸಂಜು ~

ಮದುವೆ, ಪ್ರೀತಿ


ಮದುವೆ, ಪ್ರೀತಿ
ಚೆಲುವಿನ ಹೂವ ರಾಶಿ
ಮಡದಿಯನ್ನಲು ಇಲಿಲ್ಲದ ಕುಶಿ
ನನ್ನವಳ ಸೊಬಗು
ಆರಳಿದ ಮಲ್ಲಿಗೆಯ ನಗು
ತುಂಟತನದ ಸೋಗು

ಅವಳ ಇಟ್ಟ
ಅಕ್ಕರೆ ಪ್ರೀತಿಗೆ
ತುಂಬಿತೆನ್ನ ತಂಬಿಗೆ
ಮನದಾಳದ ಅವಿತ್ತಿದ್ದ
ಪ್ರೀತಿ ಎಲ್ಲ ಸೂರೆ

ಕ್ಷಣ ಕ್ಷಣಕ್ಕೂ
ಮಿತಿಮೀರಿದ ಪ್ರೀತಿ
ಕಾಣದಿರೆ ಅರೆಕ್ಷಣ
ಮನದಲ್ಲಿ ಇಲಿಲ್ಲದ ಬ್ರಾಂತಿ
ಇ ತಾಪದಲಿ ಕಳೆದೆ ಹೋಯಿತು
ಕೈಯಲ್ಲಿ ಇದ್ದ ಅ ಕ್ಷಣ

ಬಿಂಕ ಕೋಪ ಮುನಿಸು
ಎಲ್ಲವು ಸಹಜ ಮಿತಿಯಲಿದ್ದರೆ
ಅನಿಸುತ್ತದೆ ಪ್ರೀತಿ ಇದದ್ದೆ
ಕನಸೇ ಮಿತಿಮೀರಿದರೆ

ಪ್ರೀತಿಯನ್ನು ಬೆಣ್ಣೆಯಂತೆ
ಹಿತವಾಗಿ ಹಿಡಿಯಲು
ತಿಂದಷ್ಟು ರುಚಿ ಹೆಚ್ಚು
ಸ್ವಂತದೆಂದು ಹಿಡಿದರೆ
ಶಕ್ತಿ ಮೀರಿ ಕಳೆದಷ್ಟು
ಮನಕ್ಕೆ ಹುಚ್ಚು

~ ಸಂಜು ~

ವ್ಯತ್ಯಾಸ


  ವ್ಯತ್ಯಾಸ
ಕಾದಿರುವಳು ರಾಧೆ
ತಂಪು ಸಂಜೆಯ
ಬಿಸಿ ತಾಪದಲಿ

ಕಾದಿರುವಳು ನನ್ನವಳು
ತಂಪು ಸಂಜೆಯ
ಬಿಸಿ ಕೊಪದಲಿ

ವ್ಯತ್ಯಾಸ ವಿಷ್ಟೆ
ರಾಧೆ,
ತೊರೆದರು ತನ್ನನೆ
ತೊರೆಯಳು ಮಾಧವನ

ನನ್ನವಳು ತೊರೆದರು
ನನ್ನನು
ತೊರೆಯಳು ತನ್ನ ಅಹಂ

~ ಸಂಜು ~

ನನ್ನ ಪುಟ್ಟ ಕಂಧ


   ನನ್ನ ಪುಟ್ಟ ಕಂಧ
ಈ ತುಂಟನ ಆಗಮನ
ಪ್ರಸವ ಮನೆಯಲ್ಲಿ ಅವಳ
ಅರೆ ಎಚ್ಚರದಲ್ಲಿ ಕೂಡ ಶ್ರಮ
ನನಗಿಲಿಲ್ಲದ ಹೊಡಾಟ
ಆಕಡೆ ಇಕಡೆ ಸಹಸ್ರ
ದೇವರ ನಾಮ
ಹೆಣ್ಣೊ ಗಂಡೊ ಬೇಧವಿರಲಿಲ್ಲ
ಬಯಸಿದ್ದ ಒಂದೆ ಸುಖಾಗಮನ
ಈ ತುಂಟನ ಆಗಮನ 
ಹಿಡಿದು ತಂದಳು ಧಾತ್ರಿ
ಕಣ್ಣು ಬಿಟಿರಲಿಲ್ಲ 
ನನ್ನ ಧನಿ ಕೇಳಿದೊಡನೆ ಖಾತ್ರಿ  
ಬಿಟ್ಟವನೆ ಕಣ್ಣು ಆಕಡೆ ಇಕಡೆ
ಹುಡುಕಾಟ ಪಿಳ ಪಿಳನೇ
ಧನಿಯಲ್ಲಿ ಅಪ್ಪನ ಗುರುತಿಸಿ
ಈ ತುಂಟನ ಆಗಮನ 

~ಸಂಜು~

Saturday, July 7, 2012

ಒಂಟಿ ವಿರಹಿ ಹಕ್ಕಿ ಹಾಡು


  ಒಂಟಿ ವಿರಹಿ ಹಕ್ಕಿ ಹಾಡು
ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  
ಕಾಡುತಿದೆ ಹಗಲು ಇರುಳು
ಬಳಲಿಕೆಯ ನೋವು

ತೊಂಬೆಯ ಗಿಡದ ರಂಬೆಯ
ತೂಗೂಯಲ್ಲೆ ಆಟ ಕ್ಷಣ ಕ್ಷಣ
ಪದೆ ಪದೇ ಮುತ್ತಿಕ್ಕಿ ಹೋಗುವ
ನಿನ್ನ ನೆನಪಿನ ಸಿಂಚನ
 
ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  

ಒಬ್ಬೊಂಟಿ ಜೀವನ
ನೆನಪಲ್ಲೇ ಸಂಸಾರ ಸಮ್ಮಿಲನ
ಕನಸಲ್ಲೂ ಬಿಂಕದ ಹುಸಿ ಕೋಪ
ಕಣ್ಣು ಬಿಟ್ಟರೆ ಎಲ್ಲ ಮಾಯಾ
ಮತ್ತದೇ ಒಂಟಿತನದ ಶಾಪ

ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  

ದೂರ ತೀರದಿಂದಲೇ
ವರ್ಷ ವಾಗಲಿ ನಿನ್ನ ಪ್ರೀತಿ ಅಮೃತ ಧಾರೆ
ಆಗದಿರಲಿ ತಿಳಿ ನೀಲಿ ಆಗಸದಲ್ಲಿ
ಕೊಂಚ ಸುರಿದು ಹೋಗೋ ಬಿಸಿಲು ಮಳೆ
 
ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  
ಕಾಡುತಿದೆ ಹಗಲು ಇರುಳು
ಬಳಲಿಕೆಯ ನೋವು

~ ಸಂಜು ~