ಎತ್ತು, ಕೊಣನ ಪರೆದಾಟ
ಮನಸ್ಸು ಒಂದು ಕಡೆ ಜೀವ ಇನೊಂದು ಕಡೆ
ಎರೆಡಕ್ಕು ಪೈಪೋಟಿ
ಎತ್ತು ಕೊಣನ ಸಂಬಂಧದ
ಲಟಾಪಟಿ
ಇದರ ಮಧ್ಯೆ ಬದುಕು
ಎರೆಡಕ್ಕು ಮುಗುದಾರಾ ಹಾಕಿ
ಎಳೆದಾಡುತ್ತಿದ್ದೆ
ತಾಳಮೆಳವಿಲ್ಲ ಇಬ್ಬರ ಭಾವಕ್ಕು
ನಡೆಯಲು ಸೆಣೆಸಾಡುತ್ತಿದ್ದೆ
ಮನಸ್ಸಿಗೆ ಬೇಡದ
ನಿದ್ರಾ ಅಹಾರ
ಜೀವಕ್ಕೆ ಬೇಕು
ಜೀವಕ್ಕೆ ಬೇಡದ
ನೋವು ಹಿಂಸೆ
ಹೃದಯ ಭಾರ
ಮನಸ್ಸಿಗೆ ಬೇಕು
ಯಾರ ಮಾತು ಕೇಳಲಿ
ಇಬ್ಬರು ನನ್ನ ಕೆಳಗೆ
ಗಪ್ಪ್ ಚುಪ್ಪ
ಅಂತ ವಿಧಿ ಚಾಟಿ ಏಟು
ಕೊಟ್ಟಿದೆ
ಸಾವಿನ ಆಸೆ ಮನಸ್ಸಿಗೆ
ಧೈರ್ಯ ಸಾಲದು ಜೀವಕ್ಕೆ
ಕನಸಿನ ಸುಂದರ ಲೋಕ
ಮನಸ್ಸಿನದು
ಜೀವಕ್ಕೆ ಹೊರಜಗತ್ತಿನ ವ್ಯಾಘ್ರ
ಬದುಕು
ಪ್ರೀತಿ, ಪ್ರೇಮ, ಸುಖಃ
ಸುಮಧುರ ಭಾವ ಮನಸ್ಸಿಗೆ
ಅಪಮಾನ, ತಿರಸ್ಕಾರ
ನೈಜ ಬದುಕಿನ ನೋವು ಜೀವಕ್ಕೆ
ಯಾರ ಕೇಳಲಿ ಎನು ಮಾಡಲಿ
ಇಲ್ಲದ ಆಸೆ ಸಲ್ಲದ ಹಿಂಸೆ
ಅತೃಪ್ತಿ, ಜಿಗುಪ್ಸೆ ಈ
ತೊಗಲು ಧರಿಸಿದ
ಮನು ಜನ್ಮಕ್ಕೆ
~ ಸಂಜು ~
No comments:
Post a Comment