Showing posts with label ಕವನ ಸಂಕಲನ. Show all posts
Showing posts with label ಕವನ ಸಂಕಲನ. Show all posts

Friday, July 27, 2012

ನೀನು ಮುಂಜಾವು ನಾನು ಹಿಬ್ಬನಿ

  ನೀನು ಮುಂಜಾವು ನಾನು ಹಿಬ್ಬನಿ

ಹೃದಯಕ್ಕೆ ನಿನ್ನದೇ ಅಪೇಕ್ಷೆ
ಹೃದಯಕ್ಕೆ ನಿನ್ನದೇ ಬೇಡಿಕೆ
ಆದರೆ ನಿನ್ನ ಪಡೆಯಲಾಗುತ್ತಿಲ್ಲ
ನಿನ್ನ ತಿಳಿಯಲಾಗುತ್ತಿಲ್ಲ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
 
ಎಷ್ಟೋ ಕನಸು ಹೃದಯ ನಿನ್ನೊಂದಿಗೆ
ಸೇರಿ ಸಿಂಗರಿಸಿದೆ
ಕನಸಿನಲ್ಲೂ ಹೃದಯ ಹೆದರಿದೆ
ಸುಖ ಪಡಲು ಭಯವಿದೆ
ಎಲ್ಲಿ ನೀನು ಮರೆಯಗುವೆಯೋ
ಎಲ್ಲಿ ನನ್ನ ತೊರೆದು ಬಿಡುವೆಯೋ
ಏಕೆ ಹೃದಯ ಹೊಡೆದು ಹೋಗುವ ಭಯ
ಏಕೆ ಕಣ್ಣಿರು ಕಟ್ಟೆ ಹೊಡೆದು ಹರಿಯುವ ಭಯ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ

ನೀನೇನೆ ಪ್ರತಿ ಕ್ಷಣ ಬಂದಿಸಿದ್ದಿಯ
ಸಮಯದ ಈ ಸಂಕೋಲೆಯಲ್ಲಿ
ನೀನೇನೆ ಪ್ರತಿ ಉಸಿರಿನಲ್ಲಿದ್ದಿಯ
ಕನಸಿನ ಈ ಸುಂದರ ಯಾನದಲ್ಲಿ
ನೀನೇನೆ ಪ್ರತಿ ನೋಟದಲ್ಲಿದ್ದಿಯ
ಮಬ್ಬಿನ ಕಣ್ಣು ಮಂಜಿನಲ್ಲಿ
ನಿನ್ನ ಪರಿಮಳ ನನ್ನ ಸುತ್ತಮುತ್ತೆಲ್ಲ
ಎಲೆಲ್ಲಿಯು ನನ್ನೊಂದಿಗೆ
ನಿ ಇರುವೆ ನನ್ನಲಿ ಅದಕ್ಕೆಂದೇ
ಇನ್ನು ಉಸಿರಾಡುತ್ತಿರುವೆ
 
ಹೌದು ನಿನ್ನ ನೆರಳು ನಾ
ಆದರೆ ಪ್ರತಿ ಕ್ಷಣ ಇರಲಾಗುತ್ತಿಲ್ಲ ನಿನ್ನೊಂದಿಗೆ
ಹೌದು ಈ ಜೀವನದ ಪಯಣದಲ್ಲಿ ಇದ್ದೇನಿ
ಆದರೆ ನಿನ್ನ ಜ್ಯೋತೆ ಸಾಗಲು ಆಗುತ್ತಿಲ್ಲ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
 
~ ಸಂಜು ~

Thursday, July 26, 2012

ಅಮ್ಮ

ಅಮ್ಮ

ಅಮ್ಮ ನಿನ್ನ ಮಡಿಲಿನ ಕಂದ ನಾನು
ಎಷ್ಟೇ ದೊರ ವಿದ್ದರು ನಾನು
ನಿನ್ನ ಮಡಿಲಿನಲ್ಲೇ ನಾನು ಜೀವಂತ
ನನಾಗಾಗಿ ಕಣ್ಣಿರು ತರದಿರು
ನಿ ಸುರಿಸಿದಷ್ಟು ಕಣ್ಣಿರು
ತರವಲ್ಲ ನನ್ನ ಶ್ರೇಯಸ್ಸಿಗೆ
ಅದರ ಋಣ ನಾ ತಿರಿಸಲಾರೆ
ನಾ ಹುಟ್ಟಿದಾಗಲಿಂದ ಕೊಟ್ಟ ನೋವೆ ಸಾಕು
ಇನ್ನು ಪಡದಿರು ದುಖಃ ನಾ ತಾಳಲಾರೆ
ನಿನ್ನ ನೋಡಿಕೊಳ್ಳ ಬೇಕಾದ ಕರ್ತವ್ಯ ನನ್ನದು
ನಿನ್ನಿಂದ ದುರವಿರುವೆ ದೌರ್ಬಾಗ್ಯ ನನ್ನದು
ನನ್ನ ಹಡೆದೆ ಭೂಮಿಗೆ ತಂದೆ
ಅಕ್ಕರೆಯಿಂದ ಕಾಪಾಡಿದೆ
ಒಲವ ಕೊಟ್ಟೆ ಜೀವ ಬಸಿದೆ
ಸಣ್ಣ ನೋವಿಗೆ ನಿನ್ನು ಅತ್ತೆ
ನನ್ನ ಸಂತೈಸಿದೆ
ನಿನ್ನ ನೋಡಿಕೊಳ್ಳುವ ಆಸೆ ನೂರು
ಆಗುತ್ತಿಲ್ಲ ನಾನು ಏನು ಮಾಡಲು
ಅದೇ ನನಗೆ ಯಾವಾಗಲು ಕಣ್ಣಿರು
ನನಗೆ ನೋವು ಆದರೆ ನಿನ್ನ ಮಡಿಲು
ನಿನಗೆ ನೋವು ಕೇಳುವವರು ಯಾರು
ಆದೆ ನನಗೆ ಯಾವಾಗಲು ಕಣ್ಣಿರು

~ ಸಂಜು ~

Wednesday, July 25, 2012

ನಿನ್ನ ಹೆಸರು


 ನಿನ್ನ ಹೆಸರು
ನಿನ್ನ ಹೆಸರು ಕಂಡಲೆಲ್ಲ
ಓದುವುದಕ್ಕೆ ಹೆಗ್ಗು
ಕಣ್ನಿನಲ್ಲಿ ಹೊಳಪು
ಮನಸ್ಸಿಗೆ ಹಿತ
ಹೃದಯ ಪುಳಕಿತ
 
ಉಸಿರಲಿ ನಿನ್ನ ಹೆಸರು
ಕ್ಷಣ ತಪ್ಪದು 
ನಿನ್ನ ಹೆಸರ ಜಪಿಸಲು
ನನ್ನ ಮನಸ್ಸು

ನಿನ್ನ ಹೆಸರಲ್ಲೇ ಮೋಹ
ಊಕ್ಕಲು ಅದೇನು ಮೋಡಿ
ಆ ಅಕ್ಷರಕ್ಕೆ ಕಂಡಲೆಲ್ಲ
ಸೆಳೆದಿದೆ

ನಿನ್ನ ಹೆಸರಿಗೆ ಆ ದೆವನೆ
ನನ್ನ ಹೆಸರು ಜೊಡಿಸಿದ
ನನ್ನ ಹೃದಯದಲ್ಲಿ
ನಿನ್ನ ಹೃದಯ ಬೆರೆಸಿದೆ

ಅದೇನು ಕರುಣೆಯೊ
ಅವನಿಗೆ ನಾ ಕಾಣೆ
ನಿನ್ನ ಒಲವು ಕರುಣಿಸಿದ

ಅದಾವ ಜನ್ಮದಲ್ಲಿ ಪ್ರೀತಿ
ಬಾಕಿ ಇತ್ತೊ ಈ ಜನ್ಮದಲ್ಲಿ
ಮತ್ತೆ ಪ್ರೀತಿ ಇಟ್ಟ

ನಿನ್ನ ಹೆಸರಲ್ಲೇ ಇಂತಹ ಮೋಡಿ
ನೀ ಬಳಿ ಬಂದರೆ 
ನನಗಾಗೆ ನೀ ನಿಂದರೆ
ಕ್ಷಣ ಕ್ಷಣದಲ್ಲು ಬದುಕು
ಸ್ವರ್ಗವಾಗಿಸುವ ಆಸೆ 
 
ನಿನ್ನ ಹೆಸರ ಜಪದೊಂದಿಗೆ 
ತನ್ನ ತಾನೆ ಮರೆತು
ನಿನ್ನ ಒಲವಿನಲ್ಲಿ 
ಬದುಕುತ್ತಿರುವ

~ ಸಂಜು ~

Tuesday, July 24, 2012

ನನ್ನೊಲವೆ


   ನನ್ನೊಲವೆ
ನಿನ್ನೊಲವಿಗೆ ಸೊತೆ
ನಾ ಮನಸೊತೆ
ಬಾಗ್ಯ ಎನ್ನಲೆ
ಕರುಣೆ ಎನ್ನಲೆ
ಮರಣದ ಹಾದಿ ತಪ್ಪಿಸಿದವಳು
ಬದುಕುವ ಆಸೆ ತೊರಿಸಿದವಳು
ಉಸೀರು ಬಿಗಿ ಹಿಡಿದು
ನಿನ್ನ ನಗೆ ಒಮ್ಮೆ ನೋಡಲು
ಹರುಷದಿ ಶ್ವಾಸ ನಿರಾಳ
ಹೃದಯದ ಬಾರ ಹಗುರ
ನಿನ್ನ ಸೇರುವ ಆಸೆ
ದಿನ ದಿನವು ಬದುಕಿಗೊಂದು
ಹೊಸ ಉಸಿರು
ಬಾ ಗೆಳತಿ ಎನ್ನೆದಯ
ಪ್ರತಿ ಬಡಿತ  ನೀನು
ಅದರಲ್ಲಿನ ಪ್ರತಿ ಉಸಿರು ನೀನು
ನಿನ್ನ ಪ್ರೀತಿ ಅಮೃತ ಧಾರೆ
ನನ್ನ ನೀವ ಉಳಿಸುವ
ಜೀವಾ ರಸದಾರೆ
ನನ್ನ ಆಲಿಂಗಿಸಲು ಬಾ
ನನ್ನ ಸಂತೈಸಲು ಬಾ
ನಿನ್ನ ಮಡಿಲಿಗೊಂದು
ಮಗುವಾಗುವೆ
ನನ್ನ ಉಳಿಸು ಬಾ
ಬಾ ಗೆಳತಿ ಬಾ
ನಿನ್ನ ಬರುವಿಕೆಯಲೆ ನನ್ನ ಜೀವಾ
ನಿಂತಿದೆ ನಿನ್ನೊಲವಿಗೆ  ನನ್ನ
ಉಸಿರಿಡಿದಿರುವ

~ ಸಂಜು ~


ನಿ ಬಂದೆ ಬಾಳಲ್ಲಿ


  ನಿ ಬಂದೆ ಬಾಳಲ್ಲಿ
ನಿ ಬಂದೆ ಬಾಳಲ್ಲಿ
ಬೆಳದಿಂಗಳ ರಾತ್ರಿಲಿ
ಸಿಂಗರಿಸಿದ ಚಂದ್ರನಂತೆ
ತಾರೆಗಳ ತೇರಲ್ಲಿ
 
ನಿ ಬಂದೆ ಬಾಳಲ್ಲಿ
ಹಾಯದ ನಿದ್ರೆಯಲ್ಲಿ
ಸಿಹಿ ಕನಸ್ಸನಂತೆ
ಬಣ್ಣಗಳ ಜಾತ್ರೇಲಿ

ನಿ ಬಂದೆ ಬಾಳಲ್ಲಿ
ಸೊಂಪಾದ ಮರದಲ್ಲಿ
ಕೋಗಿಲೆಯ ಹೊಸ ಹಾಡಿನಂತೆ
ಇಂಪಾದ ರಾಗದಲ್ಲಿ

ನಿ ಬಂದೆ ಬಾಳಲೀ
ವಸಂತ ಕಾಲದಲಿ
ಹೊಸ ಮಾವು ಚಿಗುರಿದಂತೆ
ಸವಿಯಾದ ಸಿಹಿಯಲ್ಲಿ

ನಿ ಬಂದೆ ಬಾಳಲ್ಲಿ
ಮದುಮಗನ ಕಣ್ಣಲ್ಲಿ
ಹುರುಪಿನ ನವ ಕಳೆಯು ಬಂದಂತೆ
ಆ ಮೊದಲ ರಾತ್ರಿಲಿ

ನಿ ಬಂದೆ ಬಾಳಲ್ಲಿ
ಸಾವಿನ ಹಂಚಿನಲ್ಲಿ
ಬಳಲಿದ ದೇಹದಲ್ಲಿ
ಹೊಸ ಜೀವ ತಂದಂತೆ
ಅಮೃತವ ಉಣಿಸುತಲಿ

~ ಸಂಜು ~

ಓ.... ಒಲವೆ


    ಓ.... ಒಲವೆ

ನಿನಗೆ ನನ್ನ ಕಂಡರೆ ಇಷ್ಟವಾಗುವುದಿಲ್ಲವ
ಯಾಕಿಂತ ಕೋಪ ಇರಿಸು ಮುರಿಸು
ನಾ ನಿನಗೆ ಕೊಟ್ಟ ಪ್ರೀತಿ ಸಲಿಗೆ 
ನಿಜವೆನಿಸಲಿಲ್ಲವ
ನನ್ನ ಎದೆಯ ಪ್ರತಿ ಬಡಿತದಲ್ಲಿ ನಿನ್ನ ಹೆಸರು
ಒಮ್ಮೆ ಕೂಡ ನಿನ್ನಗೆ ಕೇಳಲಿಲ್ಲವ
ಪ್ರತಿ ದಿನ ಪ್ರತಿ ಕ್ಷಣ ದಲ್ಲಿ ನಿನ್ನ ನೆನಪು 
ಒಮ್ಮೆ ಕೂಡ ನಿನಗೆ ಆಕಳಿಕೆ
ತರಲಿಲ್ಲವ
ಯಾರಾದರು ನೆನೆದರು ಎಂದು ನನ್ನ ಹೆಸರು
ನೆನಪಿಗೆ ಬರಲಿಲ್ಲವ 
ತಡೆಯಲಾಗುತ್ತಿಲ್ಲ ಈ  ಘೋರ ಯಾತನೆ
ಮಣ್ಣಿನಲ್ಲಿ ನನ್ನ ಹುಗಿದು ಬಿಡು
ಇಲ್ಲವಾದರೆ ಬಾ ಪ್ರೀತಿ ಕೊಡು
ಸಾಯುವತನಕ ನಿನ್ನ ಪ್ರೀತಿ
ಹಂಬಲದಲಿ

~ ಸಂಜು ~

ಫಲಾನುಭವಿ


    ಫಲಾನುಭವಿ
ಕನಸೆಂಬ ಮಣ್ಣು ಹದಗೊಂಡು
ನೆನಪೆಂಬ ಬೀಜ ಬಿತ್ತಿ
ನನ್ನೊಲವ ಪ್ರೀತಿ ಧಾರೆ
ನೀರ ಎರೆಯಲು
ಗಿಡವಾಗಿ ಮರವಾಗಿ
ಫಲ ಕೊಡುವ ಕಾಲಕ್ಕೆ
ನಿನ್ನ ಕಾಯಲು
ನೀ ಬಂಧಿ ಆದೆ ಮರದ ನೆರಳಲ್ಲಿ
ನಿನ್ನವನೊಂದಿಗೆ ಅದರ ಫಲ
ಅನುಭವಿಸಲು

~ ಸಂಜು ~

ಪ್ರೀತಿ ಅಭಿವ್ಯಕ್ತಿ


    ಪ್ರೀತಿ ಅಭಿವ್ಯಕ್ತಿ

ಯಾರು ನಿನ್ನ ನೋಹಿಸಿದರು
ಯಾರು ನಿನ್ನ ಕಡೆಗಣಿಸಿದರು
ಯಾರು ನಿನ್ನ ದ್ವೇಷಿಸಿದರು
ಯಾರು ನಿನ್ನ ಪ್ರೀತಿಸದಿದ್ದರು
ಯಾರು ನಿನ್ನ ಕಷ್ಟ ಕೇಳದಿದ್ದರು
ಯಾರು ನಿನ್ನ ನೊಡಿಕೊಳ್ಳದಿದ್ದರು
ಯಾರು ನಿನ್ನ ಸ್ಪಂದಿಸದಿದ್ದರು
ಯಾರು ನಿನ್ನ ಕಣ್ಣ ಹೊರೆಸದಿದ್ದರು
ಯಾರು ನಿನ್ನ ಸಂತೈಸದಿದ್ದರು
ಯಾರು ಮನವ ಒಲೈಸದಿದ್ದರು
ಯಾರು ನಿನ್ನ ಅರ್ಥೈಸದಿದ್ದರು
ಯಾರು ಇಲ್ಲ ನನಗೆ ಎಂದು ಅನಿಸಿದರೆ
ಎಲ್ಲ ಬಂಧ ನಿನ್ನ ಬಿಟ್ಟು ಹೋದರೆ
ಪಂಜರದೊಳು ನಿನ್ನ ಬಂಧಿಸಿದರೆ
ಕಟ್ಟಳೆಗಳಿಗೆ ಕಟ್ಟು ಬಿಗಿದರೆ
ಒಮ್ಮೆ ನಿನ್ನ ಅಂತರಾತ್ಮದ ಮಾತು ಕೇಳು
ನಾನು ನಿನ್ನ ಪ್ರೀತಿಸುವೇನು
ನಾನು ನಿನ್ನ ನೋಹಿಸೇನು
ನಾನು ನಿನ್ನ ಕಡೆಗಣಿಸೇನು
ನಿನ್ನ ಕಷ್ಟ ತಲೆ ಮೇಲೆ ಹೊರುವೇನು
ನಿನ್ನ ಎದೆಯಲಿ ಇಟ್ಟು ಪೂಜಿಸುವೇನು
ಕಣ್ಣಿನಲ್ಲಿ ಬಚ್ಚಿಟ್ಟು ಕಾಪಡುವೆನು
ನಾನು ನಿನ್ನ ಪ್ರೀತಿಸುವೇನು
ನೀನು ಹೇಳೋ ಮೊದಲೇ
ನಿನ್ನ ಭಾವ ಆರಿಯಬಲ್ಲೆ
ಕೊಂಚ ನಿನ್ನ ಕಣ್ಣು ನೆಂದರು
ಹೊರಗೆ ಹರಿಯುವ ಮೊದಲೇ
ನಗಿಸಿ ಹಿಂಗಿಸುವೇನು
ನಿನ್ನ ಸ್ಪಂದಿಸುವೇನು
ನಿನ್ನ ಸಂತೈಸುವೇನು
ನಿನ್ನ ಒಲೈಸುವೇನು
ನಿನಗೆ ಯಾರು ಇಲ್ಲ
ಆದರೆ ನನಗೆ ನೀನೆ ಎಲ್ಲ
ಯಾರು ನಿನ್ನ ಬಿಟ್ಟರು
ನೀನು ನನ್ನ ಬಿಡದಿರು
ನನ್ನ ಹೃದಯದಲ್ಲಿ ಬಂಧಿ ಹಾಗು
ಕಟ್ಟಳೆಗಳನ್ನು ತೂರಿ ಬಿಸಾಕಿ
ನಿಯಮಗಳನು ಹೊಸಕಿ ಹಾಕಿ
ನೀನು ನನ್ನ ಪ್ರೀತಿಸು
ನೀನು ನನ್ನ ಪ್ರೀತಿಸು

~ ಸಂಜು ~

ಪ್ರೀತಿ ಸಮಯ


    ಪ್ರೀತಿ ಸಮಯ

ನಶಿಸಿ ಹೋಗಿತ್ತು ಮನ
ಗೆದ್ದಲು ಹಿಡಿದಿತ್ತು ಹೃದಯ
ಪ್ರೀತಿ ಪ್ರೇಮಗಳು
ಉಜ್ವಲ ದೀಪದ ಸಂಮಿಶ್ರಣ
ದೂರ ದೂರಕ್ಕು
ಇರಲಿಲ್ಲ ಒಂದು ಸಣ್ಣ ಕಿರಣ

ನೀ ಬಂದೆ ಬಾಳಿಗೆ
ಸ್ನೇಹದಿಂದ ಸಂಬಂಧ ಸೆಳೇದೆ
ಪ್ರತಿ ಮಾತಿನಲ್ಲೂ ಬರವಸೆಯ
ಹೊಸ ದೀಪ ಹಚ್ಚಿದೆ
ಒಲವನಿತ್ತು ಆ ದೀಪವ
ನನ್ನ ಎದೆಗೆ ನಂದಾದೀಪವಾಗಿಸಿ
ಉಜ್ವಲ ಬೆಳಕು ನೀಡಿದೆ 

ನೀನಿತ್ತ ಒಲವಿಗೆ 
ನನ್ನ ಇಡಿ ಜೀವಾ ತೇಯ್ದು
ನಿನ್ನ ಕಷ್ಟ ದುಖಃಗಳಿಗೆ
ನಾ ನಿಲ್ಲುವೆ ಪ್ರತಿ ಹಂತದಲ್ಲೂ
ನನ್ನೀ ಕೊನೆ ಉಸಿರ
ಕೊನೆ ಬಡಿತದವರೆಗೂ

ನಿನ್ನ ಕಣ್ಣ ಒಂದು ಹನಿ
ಸುರಿಸಿದರು ಈ ಧರೆಗೆ
ನನ್ನ ಎದೆಯ ದ್ವಾರದಲ್ಲಿ
ರಕ್ತ ಚಿಮ್ಮುವುದು ಅ ಘಳಿಗೆ
 
ನಿನ್ನ ತುಟಿಯ ಮಂದಹಾಸ 
ಕಂಡ ಕ್ಷಣ ನನ್ನ ಎದೆಯಲ್ಲಿ
ನೊರು ಪುಷ್ಪಗಳ ಆರಳಿದ
ಕಿಲಕಿಲ ಕಲರವ
ಸದಾ ಬಯಸುವೆ
ಸದಾ ಹರೆಸುವೆ

ದೊರದಲ್ಲೆ ನಿಂತು ನೊಡುವೆ
ನಿನ್ನ ಸಂತೊಷದಿ 
ಎಡೆ ಬಿಡದೆ ಕಾಯುವೆ
ನಿನ್ನ ಒಲವಿಗೆ
ಸದಾ ಬಯಸುವ

~ ಸಂಜು ~