ಪ್ರೀತಿ ಅಭಿವ್ಯಕ್ತಿ
ಯಾರು ನಿನ್ನ ನೋಹಿಸಿದರು
ಯಾರು ನಿನ್ನ ಕಡೆಗಣಿಸಿದರು
ಯಾರು ನಿನ್ನ ದ್ವೇಷಿಸಿದರು
ಯಾರು ನಿನ್ನ ಪ್ರೀತಿಸದಿದ್ದರು
ಯಾರು ನಿನ್ನ ಕಷ್ಟ ಕೇಳದಿದ್ದರು
ಯಾರು ನಿನ್ನ ನೊಡಿಕೊಳ್ಳದಿದ್ದರು
ಯಾರು ನಿನ್ನ ಸ್ಪಂದಿಸದಿದ್ದರು
ಯಾರು ನಿನ್ನ ಕಣ್ಣ ಹೊರೆಸದಿದ್ದರು
ಯಾರು ನಿನ್ನ ಸಂತೈಸದಿದ್ದರು
ಯಾರು ಮನವ ಒಲೈಸದಿದ್ದರು
ಯಾರು ನಿನ್ನ ಅರ್ಥೈಸದಿದ್ದರು
ಯಾರು ಇಲ್ಲ ನನಗೆ ಎಂದು ಅನಿಸಿದರೆ
ಎಲ್ಲ ಬಂಧ ನಿನ್ನ ಬಿಟ್ಟು ಹೋದರೆ
ಪಂಜರದೊಳು ನಿನ್ನ ಬಂಧಿಸಿದರೆ
ಕಟ್ಟಳೆಗಳಿಗೆ ಕಟ್ಟು ಬಿಗಿದರೆ
ಒಮ್ಮೆ ನಿನ್ನ ಅಂತರಾತ್ಮದ ಮಾತು ಕೇಳು
ನಾನು ನಿನ್ನ ಪ್ರೀತಿಸುವೇನು
ನಾನು ನಿನ್ನ ನೋಹಿಸೇನು
ನಾನು ನಿನ್ನ ಕಡೆಗಣಿಸೇನು
ನಿನ್ನ ಕಷ್ಟ ತಲೆ ಮೇಲೆ ಹೊರುವೇನು
ನಿನ್ನ ಎದೆಯಲಿ ಇಟ್ಟು ಪೂಜಿಸುವೇನು
ಕಣ್ಣಿನಲ್ಲಿ ಬಚ್ಚಿಟ್ಟು ಕಾಪಡುವೆನು
ನಾನು ನಿನ್ನ ಪ್ರೀತಿಸುವೇನು
ನೀನು ಹೇಳೋ ಮೊದಲೇ
ನಿನ್ನ ಭಾವ ಆರಿಯಬಲ್ಲೆ
ಕೊಂಚ ನಿನ್ನ ಕಣ್ಣು ನೆಂದರು
ಹೊರಗೆ ಹರಿಯುವ ಮೊದಲೇ
ನಗಿಸಿ ಹಿಂಗಿಸುವೇನು
ನಿನ್ನ ಸ್ಪಂದಿಸುವೇನು
ನಿನ್ನ ಸಂತೈಸುವೇನು
ನಿನ್ನ ಒಲೈಸುವೇನು
ನಿನಗೆ ಯಾರು ಇಲ್ಲ
ಆದರೆ ನನಗೆ ನೀನೆ ಎಲ್ಲ
ಯಾರು ನಿನ್ನ ಬಿಟ್ಟರು
ನೀನು ನನ್ನ ಬಿಡದಿರು
ನನ್ನ ಹೃದಯದಲ್ಲಿ ಬಂಧಿ ಹಾಗು
ಕಟ್ಟಳೆಗಳನ್ನು ತೂರಿ ಬಿಸಾಕಿ
ನಿಯಮಗಳನು ಹೊಸಕಿ ಹಾಕಿ
ನೀನು ನನ್ನ ಪ್ರೀತಿಸು
ನೀನು ನನ್ನ ಪ್ರೀತಿಸು
~ ಸಂಜು ~
No comments:
Post a Comment