ಕಛೇರಿಗೆ ಹೊರಡುವ ಶಕುನ
ಕಂಡಿತೆನಗೆ ಆರುಣೊದಯ
ಕೆಂಪು ಹಳದಿ ರಂಗಿನ
ರಂಗೊಲಿ ಮುಸುಕಿನಲ್ಲೆ ಗೌಜ ಗದ್ದಲ
ಪೂರ್ತಿ ಕಣ್ಣ ತೆರೆದು ನೋಡಲೆ
ಇಲ್ಲ ಎಳೆದು
ಮತ್ತೆ ತಬ್ಬಿ ಹಿಡಿಯಲೆ ನನ್ನ ಎದೆಗೆ
ಬೆಚ್ಚಗೆ ಹೊದಿಕೆಯೊಳಗೆ
ಶುಭ್ರದೆ ಸ್ನಾನ ಮಾಡಿ
ಹಣೆಗೆ ಮದ್ಯೆ ಕೆಂಪು ಬಿಂದು ಕೆನ್ನೆಗೆ ಹರಿಶಿನದ ಓಕಳಿ
ವೈಯಾರದೆ ನಡುವಿನಲ್ಲಿ ಸಿಕ್ಕಿಸಿದ
ಸೆರಗಿನ ಅಂಚು
ಕೈಯಲ್ಲಿ ಹಿಡಿದ ಕಾಫಿ
ಕಛೇರಿಗೆ ಹೊರಡಿಸುವ ಮನಸ್ಸು
ತೋರಿಸುತ್ತಿದೆ ಅಪಶಕುನದ ಸೆಳೆ ಹೊರಗೆ ಬೆಳಂ ಬೆಳಗ್ಗೆ
ಸೊನೆಯ ಸಣ್ಣ ತುಂತುರು ಮಳೆ
ಭಾನುವಾರದ ರಜೆಯ
ಇಲ್ಲ ಇಂದು (ಸಾ) ರಜೆಯ ಯಾವುದಾದರು ಹಬ್ಬವೇ
ವಾರವಂತು ಅಲ್ಲ
ನಟ್ಟ ನಡುವಿನ ವಾರ
ಭುದುವಾರ
ಆಗಲೆ ತಿಳಿದದ್ದು
ಇವಳು ಒಳಗಿಲ್ಲ ಕಛೇರಿಗೆ ಹೊರಡುವ
ಎಲ್ಲ ಶಕುನ ಒಮ್ಮೆಲೆ
ತಲೆಗೆ ಭಾರಿಸಿತ್ತಲ್ಲ
~ ಸಂಜು ~
No comments:
Post a Comment