Saturday, July 7, 2012

ಒಂಟಿ ವಿರಹಿ ಹಕ್ಕಿ ಹಾಡು


  ಒಂಟಿ ವಿರಹಿ ಹಕ್ಕಿ ಹಾಡು
ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  
ಕಾಡುತಿದೆ ಹಗಲು ಇರುಳು
ಬಳಲಿಕೆಯ ನೋವು

ತೊಂಬೆಯ ಗಿಡದ ರಂಬೆಯ
ತೂಗೂಯಲ್ಲೆ ಆಟ ಕ್ಷಣ ಕ್ಷಣ
ಪದೆ ಪದೇ ಮುತ್ತಿಕ್ಕಿ ಹೋಗುವ
ನಿನ್ನ ನೆನಪಿನ ಸಿಂಚನ
 
ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  

ಒಬ್ಬೊಂಟಿ ಜೀವನ
ನೆನಪಲ್ಲೇ ಸಂಸಾರ ಸಮ್ಮಿಲನ
ಕನಸಲ್ಲೂ ಬಿಂಕದ ಹುಸಿ ಕೋಪ
ಕಣ್ಣು ಬಿಟ್ಟರೆ ಎಲ್ಲ ಮಾಯಾ
ಮತ್ತದೇ ಒಂಟಿತನದ ಶಾಪ

ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  

ದೂರ ತೀರದಿಂದಲೇ
ವರ್ಷ ವಾಗಲಿ ನಿನ್ನ ಪ್ರೀತಿ ಅಮೃತ ಧಾರೆ
ಆಗದಿರಲಿ ತಿಳಿ ನೀಲಿ ಆಗಸದಲ್ಲಿ
ಕೊಂಚ ಸುರಿದು ಹೋಗೋ ಬಿಸಿಲು ಮಳೆ
 
ಸನಿಹವು ಇಲ್ಲದ , ದೂರವು ಇಲ್ಲದ
ನಿನ್ನ ಒಲವು,  
ಕಾಡುತಿದೆ ಹಗಲು ಇರುಳು
ಬಳಲಿಕೆಯ ನೋವು

~ ಸಂಜು ~

2 comments:

  1. ಸಂಜು!
    ನಿಮ್ಮ ಬ್ಲಾಗ್ ನೋಡಿದೆ ನಿಜಕ್ಕೂ ಒಂದು ಕವನಸಂಕಲನ
    ಓದಿದಷ್ಟು ತೃಪ್ತಿಯಾಗಿದೆ ...
    ಎಲ್ಲವೂ ಸುಂದರ ಹಾಗೂ ಭಾವನೆಯ ಕವನಗಳು..
    ಚಂದ್ರನ ಬೆಳದಿಂಗಳಿನಲ್ಲಿ ಮಿಚುವ ನಕ್ಷತ್ರಗಳ ಹಾಗೆ
    ಕಣ್ಣೀರಿನೊಳಗೆ ಬೆರೆತ ಭಾವನೆಗಳ ಬಿಂಧಿನ ಹಾಗೆ ..
    ಮಧುರವಾದ ಸಾಲುಗಳು..
    ನಿಮ್ಮೆಲ್ಲ ಕವನಗಳು ಆದಷ್ಟು ಬೇಗ
    ಒಂದು ಕವನ ಸಂಕಲನದ ರೂಪದಲ್ಲಿ ಬಂದು
    ಎಲ್ಲ ಕನ್ನಡಿಗರ ಮನೆ,ಮನ ತಲುಪಲಿ
    ಹೀಗೆ ನಿಮ್ಮ ಕಾವ್ಯದ ಪಯಣ ಸಾಗುತ್ತಲೇ ಇರಲಿ
    ಮತ್ತಷ್ಟು ಸುಂದರ ಕವನಗಳು ನಿಮ್ಮಿಂದ ಬರುತ್ತಲೇ ಇರಲಿ
    ಎಂದು ಹಾರೈಸುತ್ತೇನೆ ,,...
    ಶುಭವಾಗಲಿ ಗೆಳೆಯ!

    ReplyDelete
  2. ನಿಜಕ್ಕೂ ನನ್ನ ಬ್ಲಾಗ್ ಇವತ್ತಿಗೆ ಸಾರ್ಥಕತೆ ಪಡೆದಿದೆ ನಿಮ್ಮ ಮೆಚ್ಚುಗೆ ಹಾಗು ಪ್ರತಿಕ್ರಿಯೆಯಿಂದ, ಧನ್ಯವಾದ ಗೆಳೆಯ ನಿಮ್ಮ ಆರೈಕೆ ಹಾಗು ಪ್ರೋತ್ಸಾಹಕ್ಕೆ ನಿಜಕ್ಕೂ ಪುಸ್ಕಕ ಪರಿಷ್ಕೃತ ಗೊಳುತ್ತಿದ್ದೆ ಆದಮೇಲೆ ಅದನ್ನು ಮುದ್ರಣಗೊಳಿಸುವ ಪ್ರಯತ್ನ ನಡೆದಿದೆ

    ReplyDelete