Tuesday, July 24, 2012

ಕಛೇರಿಗೆ ಹೊರಡುವ ಶಕುನ


     ಕಛೇರಿಗೆ ಹೊರಡುವ  ಶಕುನ

ಕಂಡಿತೆನಗೆ   ಆರುಣೊದಯ
ಕೆಂಪು ಹಳದಿ ರಂಗಿನ ರಂಗೊಲಿ
ಮುಸುಕಿನಲ್ಲೆ  ಗೌಜ ಗದ್ದಲ

ಪೂರ್ತಿ ಕಣ್ಣ ತೆರೆದು ನೋಡಲೆ
ಇಲ್ಲ ಎಳೆದು ಮತ್ತೆ  ತಬ್ಬಿ ಹಿಡಿಯಲೆ
ನನ್ನ ಎದೆಗೆ
ಬೆಚ್ಚಗೆ ಹೊದಿಕೆಯೊಳಗೆ

ಶುಭ್ರದೆ ಸ್ನಾನ ಮಾಡಿ
ಹಣೆಗೆ ಮದ್ಯೆ  ಕೆಂಪು ಬಿಂದು
ಕೆನ್ನೆಗೆ ಹರಿಶಿನದ ಓಕಳಿ
ವೈಯಾರದೆ ನಡುವಿನಲ್ಲಿ ಸಿಕ್ಕಿಸಿದ
ಸೆರಗಿನ ಅಂಚು 
ಕೈಯಲ್ಲಿ ಹಿಡಿದ ಕಾಫಿ

ಕಛೇರಿಗೆ ಹೊರಡಿಸುವ ಮನಸ್ಸು
ತೋರಿಸುತ್ತಿದೆ ಅಪಶಕುನದ ಸೆಳೆ
ಹೊರಗೆ ಬೆಳಂ ಬೆಳಗ್ಗೆ
ಸೊನೆಯ ಸಣ್ಣ ತುಂತುರು ಮಳೆ 

ಭಾನುವಾರದ ರಜೆಯ 
ಇಲ್ಲ ಇಂದು (ಸಾ) ರಜೆಯ 
ಯಾವುದಾದರು ಹಬ್ಬವೇ
ವಾರವಂತು ಅಲ್ಲ
ನಟ್ಟ ನಡುವಿನ ವಾರ
ಭುದುವಾರ

ಆಗಲೆ ತಿಳಿದದ್ದು
ಇವಳು ಒಳಗಿಲ್ಲ
ಕಛೇರಿಗೆ ಹೊರಡುವ
ಎಲ್ಲ ಶಕುನ ಒಮ್ಮೆಲೆ
ತಲೆಗೆ ಭಾರಿಸಿತ್ತಲ್ಲ  

~ ಸಂಜು ~

ನನ್ನ ಮುಂಜಾವು


   ನನ್ನ ಮುಂಜಾವು
ದಿನದ ಉದಯ ನಿನ್ನಿಂದ
ದಿನವೆಲ್ಲಾ ನಿನ್ನಿಂದ
ಉತ್ಸಾಹ ನಿನ್ನಿಂದ
ಶುಭೊದಯ ನಿನ್ನಿಂದ
 
ಏಳುತಲಿ ಕಣ್ಣು ಬಿಟ್ಟ ಕ್ಷಣ
ನೋಡಿದರೆ ಸಾಕು
ನಿನ್ನ ಮುಖಾರವಿಂಧ
ಎಲ್ಲವೂ ಶುಭವೇ
ನಿನ್ನ ಶುಭಮುಕದಿಂಧ
 
ಮುಂಜಾನೆಯ ಕೋಗಿಲೆ
ಕೋರಳು ಧನಿ
ನಿನ್ನ ಸ್ವರ ನನ್ನ ಕಿವಿಗೆ
ಕೇಳಿದಷ್ಟು ಉತ್ಸಹ
ಹೊಸ ಚೇತನ
ದಿನವಿಡಿ ಆದೆ ಗುಂಗಿನಲ್ಲೆ

ಕಛೆರಿಗೆ ನಾ ಹೊಗುವೆ ಮುನ್ನ
ನೀ ಕೊಟ್ಟ ಪ್ರೀತಿಯ ಸಿಹಿ ಮುತ್ತು
ಮನ ತೇಲಿಸಿದೆ ರಜೆ ಹಾಕಿ
ನಿನ್ನೊಡನೆ ಇಡಿ ದಿನ ಕಳೆಯವು
ಆಸೆ ತಂದಿತ್ತು

ಪ್ರತಿ ದಿನದ ಈ ಶುಭಾ ಆರಂಭ
ಕೊಟ್ಟ ನಿನಗೆ ಕೋಟಿ ನಮನ
ನಿನ್ನ ಪತ್ನಿಯಾಗಿ ಪಡೆದದ್ದೆ
ನನ್ನ ಪುಣ್ಯ

~ ಸಂಜು ~

ನೀ ಇರದ ಬಾಳಿಗೆ ಏನರ್ಥ


     ನೀ ಇರದ ಬಾಳಿಗೆ ಏನರ್ಥ

ನೀ ಇರದ ಬಾಳಿಗೆ ಏನರ್ಥ
ಕಡಲ ಸೇರದ ನದಿಗೆ ಏನರ್ಥ
ನೀ ಬರದ ದಾರಿಗೆ ಇಣುಕಿ ನಲ್ಲೆ
ಕಣ್ಣ ಇಂಗಿಸಿ ಸೋತಿದೆ
ದಾರಿ ಬದಿಯ ಹಸಿರು ಮನ ಹಿಂಡಿ ಕೆಣಕಿದರೆ ಏನ್ ಅರ್ಥ
ನೀ ಇರದ ಬಾಳಿಗೆ ಏನರ್ಥ

ಇರುಳುಗಳಿಲ್ಲ ನನ್ನ ಬಾಳಿಗೆ
ಎಲ್ಲವೂ ಬಿಟ್ಟ ಕಣ್ಣಿನ ಪರಿತಾಪ
ಹುಣ್ಣಿಮೆ ಬಂದು ಹೋದದ್ದೇ ತಿಳಿಯಲಿಲ್ಲ
ಈ ನೈದಿಲೆಗೆ ಮುಸುಕಾಗಿದೆ ನೀನೇ ಕರ್ತ
ನೀ ಇರದ ಬಾಳಿಗೆ ಏನರ್ಥ

ಸಾಗರನ ಬೆಳ್ಳಿ ಅಲೆ ಸೋತು
ಮರಳಿ ಓಡಿದೆ ನನ್ನ ಓಲೈಸದೆ
ಬೀಸು ತಂಗಾಳಿ ತೂರಿದೆ
ನನ್ನ ಬಳಿ ಸೋಕದೆ
ಎಲ್ಲಿ ನಡೆದರು ಬಿಡಲಿಲ್ಲ ನಿನ್ನ ನೆನಪು ಸ್ವಾರ್ಥ
ನೀ ಇರದ ಬಾಳಿಗೆ ಏನರ್ಥ

ನೀ ಇರದ ಬಾಳಿಗೆ ಏನರ್ಥ
ಕಡಲ ಸೇರದ ನಧಿಗೆ ಏನರ್ಥ
ನೀ ಬರದ ದಾರಿಗೆ ಇಣುಕಿನಲ್ಲೆ
ಕಣ್ಣ ಹಿಂಗಿಸಿ ಸೋತಿದೆ
ದಾರಿ ಬದಿಯ ಹಸಿರು ಮನ ಹಿಂಡಿ ಕೆಣಕಿದರೆ ಏನರ್ಥ
ನೀ ಇರದ ಬಾಳಿಗೆ ಏನರ್ಥ
 
~ ಸಂಜು ~

ಚಿಂತನೆಯ ಹಾದಿ


   ಚಿಂತನೆಯ ಹಾದಿ
ಯಾರು ಒಲ್ಲರೆಂದು
ಬಾಳ ಬೆಲ್ಲ ಸವೇದೀತೆ
ಯಾರು ಸಲ್ಲರೆಂದು
ಹೃದಯ ಬಡಿತ  ನಿಂತೀತೆ
ಯಾರು ಬಣ್ಣಿಸಲಿಲ್ಲವೆಂದು
ಹೂ ನಗುವ ಮರೆತೀತೆ
ಯಾರು ಕಾಣಲಿಲ್ಲವೆಂದು
ರಮಣಿಯ ಸೌಂದರ್ಯದ
ಪ್ರಕೃತಿ ನಿಂತೀತೆ
ಕುಣಿದು ಕುಣಿದು ಕುಪ್ಪಳಿಸಿದರು
ತಲ್ಲಣಿಸಿದೆ ಪೃಥ್ವಿ ತನ್ನ ಸುತ್ತನ್ನು 
ನೀಲ್ಲಿಸೀತೆ
ಯಾರು ನೆತ್ತಿ ಸುಟ್ಟು ಹಿಡಿ ಶಾಪ
ಹಾಕಿದರೆಂದು ಸೂರ್ಯ ತನ್ನ
ಕಿರಣ ನಿಲ್ಲಿಸೀತೆ
ಯಾರೊ ಕತ್ತಲಲ್ಲಿ ಬಿಕ್ಕಿ ಬಿಕ್ಕಿ
ಆಳುತಿಹನು ಎಂದು ಚಂದ್ರ ತನ್ನ
ಚೆಲುವನ್ನು ಮರೆತೀತೆ
ಮಣ್ಣ ಕಾಯುವವನು ನಾನು
ಅದನ್ನೆ ತುಳಿದು ನಡೆದರು
ಮಣ್ಣು ನನ್ನ ತೊರೆದೀತೆ

~ ಸಂಜು ~

ಎತ್ತು, ಕೊಣನ ಪರೆದಾಟ


 ಎತ್ತು, ಕೊಣನ ಪರೆದಾಟ
ಮನಸ್ಸು ಒಂದು ಕಡೆ
ಜೀವ ಇನೊಂದು ಕಡೆ
ಎರೆಡಕ್ಕು ಪೈಪೋಟಿ
ಎತ್ತು ಕೊಣನ ಸಂಬಂಧದ
ಲಟಾಪಟಿ
ಇದರ  ಮಧ್ಯೆ ಬದುಕು
ಎರೆಡಕ್ಕು ಮುಗುದಾರಾ  ಹಾಕಿ
ಎಳೆದಾಡುತ್ತಿದ್ದೆ
ತಾಳಮೆಳವಿಲ್ಲ ಇಬ್ಬರ  ಭಾವಕ್ಕು
ನಡೆಯಲು ಸೆಣೆಸಾಡುತ್ತಿದ್ದೆ 
ಮನಸ್ಸಿಗೆ ಬೇಡದ
ನಿದ್ರಾ ಅಹಾರ
ಜೀವಕ್ಕೆ ಬೇಕು
ಜೀವಕ್ಕೆ ಬೇಡದ
ನೋವು ಹಿಂಸೆ
ಹೃದಯ ಭಾರ
ಮನಸ್ಸಿಗೆ ಬೇಕು
ಯಾರ ಮಾತು ಕೇಳಲಿ
ಇಬ್ಬರು ನನ್ನ ಕೆಳಗೆ
ಗಪ್ಪ್ ಚುಪ್ಪ
ಅಂತ ವಿಧಿ ಚಾಟಿ ಏಟು
ಕೊಟ್ಟಿದೆ
ಸಾವಿನ ಆಸೆ ಮನಸ್ಸಿಗೆ
ಧೈರ್ಯ ಸಾಲದು ಜೀವಕ್ಕೆ
ಕನಸಿನ ಸುಂದರ ಲೋಕ
ಮನಸ್ಸಿನದು
ಜೀವಕ್ಕೆ ಹೊರಜಗತ್ತಿನ ವ್ಯಾಘ್ರ
ಬದುಕು 
ಪ್ರೀತಿ, ಪ್ರೇಮ, ಸುಖಃ
ಸುಮಧುರ ಭಾವ ಮನಸ್ಸಿಗೆ
ಅಪಮಾನ, ತಿರಸ್ಕಾರ  
ನೈಜ ಬದುಕಿನ ನೋವು ಜೀವಕ್ಕೆ
 
ಯಾರ ಕೇಳಲಿ ಎನು ಮಾಡಲಿ 
ಇಲ್ಲದ ಆಸೆ ಸಲ್ಲದ ಹಿಂಸೆ
ಅತೃಪ್ತಿ, ಜಿಗುಪ್ಸೆ ಈ
ತೊಗಲು ಧರಿಸಿದ
ಮನು ಜನ್ಮಕ್ಕೆ

~ ಸಂಜು ~

ಮದುವೆ, ಪ್ರೀತಿ


ಮದುವೆ, ಪ್ರೀತಿ
ಚೆಲುವಿನ ಹೂವ ರಾಶಿ
ಮಡದಿಯನ್ನಲು ಇಲಿಲ್ಲದ ಕುಶಿ
ನನ್ನವಳ ಸೊಬಗು
ಆರಳಿದ ಮಲ್ಲಿಗೆಯ ನಗು
ತುಂಟತನದ ಸೋಗು

ಅವಳ ಇಟ್ಟ
ಅಕ್ಕರೆ ಪ್ರೀತಿಗೆ
ತುಂಬಿತೆನ್ನ ತಂಬಿಗೆ
ಮನದಾಳದ ಅವಿತ್ತಿದ್ದ
ಪ್ರೀತಿ ಎಲ್ಲ ಸೂರೆ

ಕ್ಷಣ ಕ್ಷಣಕ್ಕೂ
ಮಿತಿಮೀರಿದ ಪ್ರೀತಿ
ಕಾಣದಿರೆ ಅರೆಕ್ಷಣ
ಮನದಲ್ಲಿ ಇಲಿಲ್ಲದ ಬ್ರಾಂತಿ
ಇ ತಾಪದಲಿ ಕಳೆದೆ ಹೋಯಿತು
ಕೈಯಲ್ಲಿ ಇದ್ದ ಅ ಕ್ಷಣ

ಬಿಂಕ ಕೋಪ ಮುನಿಸು
ಎಲ್ಲವು ಸಹಜ ಮಿತಿಯಲಿದ್ದರೆ
ಅನಿಸುತ್ತದೆ ಪ್ರೀತಿ ಇದದ್ದೆ
ಕನಸೇ ಮಿತಿಮೀರಿದರೆ

ಪ್ರೀತಿಯನ್ನು ಬೆಣ್ಣೆಯಂತೆ
ಹಿತವಾಗಿ ಹಿಡಿಯಲು
ತಿಂದಷ್ಟು ರುಚಿ ಹೆಚ್ಚು
ಸ್ವಂತದೆಂದು ಹಿಡಿದರೆ
ಶಕ್ತಿ ಮೀರಿ ಕಳೆದಷ್ಟು
ಮನಕ್ಕೆ ಹುಚ್ಚು

~ ಸಂಜು ~

ವ್ಯತ್ಯಾಸ


  ವ್ಯತ್ಯಾಸ
ಕಾದಿರುವಳು ರಾಧೆ
ತಂಪು ಸಂಜೆಯ
ಬಿಸಿ ತಾಪದಲಿ

ಕಾದಿರುವಳು ನನ್ನವಳು
ತಂಪು ಸಂಜೆಯ
ಬಿಸಿ ಕೊಪದಲಿ

ವ್ಯತ್ಯಾಸ ವಿಷ್ಟೆ
ರಾಧೆ,
ತೊರೆದರು ತನ್ನನೆ
ತೊರೆಯಳು ಮಾಧವನ

ನನ್ನವಳು ತೊರೆದರು
ನನ್ನನು
ತೊರೆಯಳು ತನ್ನ ಅಹಂ

~ ಸಂಜು ~