Friday, July 26, 2013
Friday, January 11, 2013
ನೀನಿತ್ತ ಪ್ರೀತಿಗೆ ನಾನಿತ್ತ ಭಾವ ಈ ಪದಗಳು
ಬರಿಯ ಹೋದರೆ ಬರೀ ಭಾವನೆಗಳೆಲ್ಲ
ನನ್ನೆದೆಯ ಉಸಿರು
ಆ ಉಸಿರ ತುಂಬೆಲ್ಲ ನಿನ್ನದೇ ಹೆಸರು
ನೀನಿತ್ತ ಪ್ರೀತಿಗೆ ನಾನಿತ್ತ ಭಾವ
ಈ ಪದಗಳು
ಪದಗಳಲ್ಲ ನನ್ನೆದೆಯ ಜೀವ ಕಣಗಳು
ನಾ ಕಂಬನಿಯಾಗಲಾರೆ ನಿನ್ನ ಕಣ್ಣಿಗೆ
ಉಸಿರಾಗಿ ಬಾಳುವೆ ನಿನ್ನೆದೆಯ
ಬಡಿತಕ್ಕೆ
ನಗುವಾಗಿ ಬಾಳುವೆ ನಿನ್ನ ಸಂತೋಷದೊಳಗೆ
ನನ್ನೆಲ್ಲ ಭಾವಗಳು ನಿನ್ನಲ್ಲೇ
ಬಾಳುವಾಸೆ
ಹೊರಗೆಲ್ಲೋ ನಾ ಸುಮ್ಮನೆ ಇರುವೆ
ನಿನ್ನೊಳಗೆ ನಾ ಬಾಳುತ್ತಿರುವೆ
ಸಂಜು
ನಿನ್ನ ಕಂಡಮೇಲೆ ಹೀಗೆ ಪ್ರಜ್ಞೆ ಬಾರಲಿಲ್ಲ
ನಿನ್ನ ಕಂಡಮೇಲೆ
ಹೀಗೆ
ಪ್ರಜ್ಞೆ ಬಾರಲಿಲ್ಲ
ಮರಳಿ ಬರುವ ಕ್ಷಣದಲ್ಲಿ
ನನ್ನಿಂದ ದೂರವಾಗಿದ್ದು
ಅರಿವಿಗೆ ಕೂಡ ಬಾರಲಿಲ್ಲ
ಸಿಂಗರಿಸಿ ಸವರಿಸಿ ಕೊಳುತಿದ್ದೆ
ನಿನಗಾಗೆ
ನೀ ಮುಂದೆ ಬರಲು
ನೋಟ ಬೆರಸದೆ ಮುಂದೆ ಹೋದೆ
ಕಣ್ಣ ತುಂಬಿದ್ದು ಕಾಣದೆ
ಒರೆಸಿದೆ
ದೇವರ ಮೂರ್ತಿಯಂತೆ
ಪ್ರತಿಷ್ಟಾಪಿಸಿದ್ದೆ ಮನದಲ್ಲಿ
ಬರಿ ಮೂರ್ತಿಯಂತೆ
ಕಲ್ಲಾಗಿ ಹೋದೆ
ನನ್ನ ಬದುಕಲಿ
ಬಹಳ ಆಶೆಯವಿತ್ತು
ನಿನ್ನ ಮನೆಯ ದಾರಿ
ಸೇರಲು
ನನ್ನ ಬದುಕಿನ ದಾರಿಯ
ದಿಕ್ಕಾಪಾಲಾಗಿ
ನೀ ಮಾಡಿ ಹೋದೆ
ಸಂಜು
ನನ್ನೆದೆಯ ಮಣ್ಣು ಬರಡಾಗಿದೆ
ನಂಬಿಕೆ ಹುಟ್ಟಿದೆ ನನಗೆ
ನನ್ನೆದೆಯ ಮಣ್ಣು ಬರಡಾಗಿದೆ
ಹೂ ಗಿಡ ಹುಟ್ಟುವುದಿರಲಿ
ಒಂದು ಸಣ್ಣ ಹುಲ್ಲು
ಹುಟ್ಟುವುದಿಲ್ಲ
ಅರ್ಥವಾಗಿದೆ ನನಗೆ
ನೀ ಸಿಗುವುದಿಲ್ಲ
ಮನಸ್ಸಿನಲ್ಲಿ ಆಸೆ
ಹುಟ್ಟುವುದಿರಲಿ
ಕನಸಿನಲ್ಲೂ ನೀ
ನನ್ನ ಜೋತೆಯಗುವುದಿಲ್ಲ
ದೂರಲಾರೆ ಯಾರನ್ನು
ನನ್ನೀ ಪರಿಸ್ತಿತಿಗೆ
ತಪ್ಪುಗಳೆಲ್ಲ ನನ್ನದೇ
ಆದರೆ ಯಾರನ್ನು ದೂರಲಿ
ಒಬ್ಬರಿಗಾಗಿ ಬದುಕುವುದೆಂದರೆ
ಜೀವ ಮುಡುಪಾಗಿ ಇಡುವಾಸೆ
ಆ ಆಸೆಯೇ ಚಾಟಿಯಾಗಿ
ಬಡಿದರೆ ನಾ ಯಾರನ್ನು
ದೂಷಿಸಲಿ
ಹಣೆ ಬರಹದಲ್ಲಿ ಇಲ್ಲದನ್ನು
ನಾ ಯಾರಿಗೆ ಕೇಳಲಿ
ನೋವಿನ ಬವಣೆ
ಜೋಳಿಗೆ ತುಂಬಿರುವಾಗ
ಪ್ರೀತಿ ಬಿಕ್ಷೆ ಹೇಗೆ
ಕೆಳಲ್ಲಿ
ಸಂಜು
ಮರದ ಮೃಧಂಗ ಭಾರಿಸುತಿತ್ತು
ಮರದ ಮೃಧಂಗ
ಭಾರಿಸುತಿತ್ತು
ತನ್ನೊಳಗಿನ
ಲಾಲಸದೆ
ಚರ್ಮ ಹರಿದರು
ಬಿಡಲೊಲ್ಲದು
ತನ್ನಾಸೆಯ
ಸರಿಗಮದೇ
ಲೋಕ ಕೇಳುವ
ಜಂಜಾಟವಿಲ್ಲ
ಶೃತಿ ಸೇರಿಸುವ
ಜಿಜ್ಞಾಸೆ ಇಲ್ಲ
ಎಲ್ಲರೊಟ್ಟಿಗೆ
ಡಂ ಡಮಿಸುವ
ಶಕ್ತಿಯು ಇಲ್ಲ
ಕತ್ತಲೆಯ
ಕೊಣೆ
ಮೂಲೆ ಮನೆ
ಹುಚ್ಚು ಹಿಡಿದವ
ದೆವ್ವ ಮೆಟ್ಟಿದವ
ಪಟ್ಟದೊಂದಿಗೆ
ತುಪ್ಪಕ್ಕನೆ ಊಗಿದ
ಗೊಡೆ ರಂಗು
ಎಲೆ ಅಡಿಕೆ ಸುಣ್ಣ
ಹುಚ್ಚನಿಗಿದ್ದ
ಮನದಾಳದ ನೋವ
ಅರಿತವರ್ಯಾರು
ಬಡಿದು ಉರ ಬಿಡಿಸಿದ
ಈ ಹಾಳು ಜನರು
ಮಡದಿ ಮನಿ ಬಿಟ್ಟಳು
ಮಕ್ಕಳು ಗುಡ್ಸ್ಲ ಬಿಡಿಸಿದರು
ಮಂದಿ ಹುಚ್ಚ ಬಡ್ಡಿ ಮಗ
ಅಂತ ಉರ ಬಿಡಿಸಿದರು
ಇಂತ ಮೃಧಂಗ
ಭಾರಿಸದಿದ್ದರೆ
ನಾ ಬಿಟ್ಟರು
ನನ್ನ ಅಂತರಂಗ
ಬಿಡದು
ಮರದ ಮೃಧಂಗ
ಭಾರಿಸಿತಿತ್ತು
ತನ್ನೊಳಗಿನ
ಲಾಲಸದೆ
ಚರ್ಮ ಹರಿದರು
ಬಿಡಲೊಲ್ಲದು
ತನ್ನಾಸೆಯ
ಸರಿಗಮದೇ
ಸಂಜು
ಚೆಂದದ ಮಲ್ಲಿಗೆ ಸಿರಿಗಂಧದ ಕಂಪಿಗೆ
ಚೆಂದದ ಮಲ್ಲಿಗೆ
ಸಿರಿಗಂಧದ
ಕಂಪಿಗೆ
ಮನ ಸೋಲದೆ
ಕಣ್ಣಿನ ಕಾಡಿಗೆ
ನೋಟದ ಮಾತಿಗೆ
ಮೆಲ್ಲಗೆ ಮಿಸುಕಿದ
ಆ ಮೋಡಿಗೆ
ನನ್ನ ಕೊಲೆಯಾಗದೆ
ತೊಂಡೆಯ ತುಟಿಗೆ
ಕೆನೆ ಹಾಲಿನ ಗಲ್ಲಕ್ಕೆ
ಬೀಳುವ ಆ ಗುಳಿಗಳಿಗೆ
ನಕ್ಕರೆ ಸಕ್ಕರೆ
ಹೇಗೆ ನಾ ಉಳಿಯಲಿ
ಸಿಹಿಯಾಗದೆ
ಕಣ್ಣಿನ ಮಾತಿಗೆ
ನಿನ್ನ ಮುಂಗುರುಳಿನ
ಸರಸದಂತೆ
ಬೀಸುವ ತಂಗಾಳಿಗೆ
ಮರದ ರೆಂಬೆ
ತೀರದಲ್ಲಿ ಆಟವಾಡಿದೆ
ನಿನ್ನ ಅಂದ ಕಾಣುತಲಿ
ಚಂದಿರನು ಬಿಂಬವು
ಅದರೊಂದಿಗೆ
ಕುಣಿದು ನಲಿದಿದೆ
ಸಂಜು
ನನ್ನ ಉಸಿರ ತುಂಬೆಲ್ಲ ನಿನ್ನದೇ ಹೆಸರು
ನನ್ನ ಉಸಿರ ತುಂಬೆಲ್ಲ
ನಿನ್ನದೇ ಹೆಸರು
ನಿನ್ನ ನೆನಪೇ ನನ್ನ
ಆವರಿಸಿದೆ
ಸಂಜೆಯಿಂದ
ಮುಂಜಾವಿನವರೆಗು
ನೀ ನನ್ನ ದಿನಗಳಲ್ಲಿ
ನನ್ನ ರಾತ್ರಿಗಳಲ್ಲಿ
ಈ ನನ್ನ ಮೌನಗಳಲ್ಲಿ
ನನ್ನೆದೆಯ ಮಾತುಗಳಲ್ಲಿ
ತುಂಬಿರುವೆ
ಸಾಗುವ ಮೇಘಗಳೊಂದಿಗೆ
ಈ ನನ್ನ ಸಂದೇಶ
ಕಳುಹಿಸಲೇ
ಕಣ್ಣುಗಳಲಿ ಈ ನಿನ್ನ
ಬಿಂಬವೇನು
ನನ್ನ ಹಣೆಬರಹದ
ನೀನೆ ಏನು
ಸುವರ್ಣ ಅಕ್ಷರ
ನಿನ್ನೆದೆ ಬಡಿತದಿಂದ
ನನ್ನೆದೆ ಬಡಿತಕ್ಕೆ
ಸಂಕೊಲೇನು
ಹೂವುಗಳಲ್ಲಿ
ಮಂಜಿನ ಹನಿಯಂತೆ
ಬಣ್ಣಗಳ ಸುಂದರ
ರಂಗೋಲಿ ಇಟ್ಟಿದೇ
ನಿನ್ನದೇ ನೆನಪು
ನನ್ನ ಒಲವೆ
ಈ ಸಂಜೆಯ ತಂಗಾಳಿಯು
ಹೂವುಗಳ ನಗುವಿನ
ಇಂಪಾದ ರಾಗಗಳು
ಜುಳು ಜುಳು ಹರಿಯುವ
ನದಿಯ ಕಲರವು
ಸಾರುತ್ತಿದೆ
ನೀನಿಲ್ಲದೆ ಏನೋ
ಕಮ್ಮಿಯಂತೆ
ಹುತೋಟದ ಧುಂಬಿಯಾ
ಝೆಂಕಾರದ ನಾದೊಂದಿಗೆ
ಮರದ ಕೋಗಿಲೆ ದನಿಗೂಡಿಸಿದೆ
ನನ್ನೀ ಏಕಾಂತದ ಗೀತೆಗೆ
ನಿನ್ನ ಬರುವಿಕೆಯ ಸ್ವಾಗತಕ್ಕೆ
ಸಂಜು
Saturday, January 5, 2013
ನಮ್ಮ ಆ ಏಕಾಂತ
ಮಂಧಾರ ಪುಷ್ಪವು
ಗಮ ಚೆಲ್ಲಿ ಸುಘಂದವು
ನೀ ಬರಲು ಸನಿಹವು
ತನುವರಳಿ ರೊಮಾಂಚನವು
ಆ ನಿನ್ನ ಸ್ಪರ್ಶವು
ಮಂಜಿನ ಹನಿ
ಸ್ಪರ್ಶದಂತೆ
ಸುಮಧುರವು
ಮನದಾಸೆ ಹೇಗೆ ತಡಿಯಲಿ
ಈ ಏಕಾಂತದಲ್ಲಿ
ನೀ ಸ್ವಪ್ನ ಸುಂದರಿ
ನನ್ನ ಜೊತೆಗಿರಲು
ಹೃದಯ ಹೂತೋಟದಂತೆ
ಅರಳಿದೆ ಪ್ರತಿ ಸುಮವು
ನಿನಗೆಂದೇ ಹಾಸಲೇ
ಒಲವಿಂದ ಸಿಂಪಡಿಸಲೇ
ಮಧು ನಿನ್ನ ತುಟಿಗಳಲ್ಲಿ
ಕಮಲದಷ್ಟೇ ಕೋಮಲ
ನಿನ್ನ ಕೆನ್ನೆಗಳಲ್ಲಿ
ಮುಂಜಾವಿನ ಉದಯನ ಕೆಂಪು
ನಿನ್ನ ನಾಚಿಕೆಯಲ್ಲಿ
ರಂಗೋಲಿಗೆ ಬಣ್ಣ ಎರೆಚಿದಷ್ಟೇ
ಸುಂದರ ನಿನ್ನ ಪ್ರೀತಿಯಲ್ಲಿ
ಒಲವಿಂದ ನನ್ನೆದೆ ವೀಣೇ
ಮೀಟಿ ಬಾರೆ ಚೆಲುವೆ
ನಾ ನಿನ್ನೊಮ್ಮೆ ಮುದ್ದಿಸಲು
ನೀ ನನ್ನೊಮ್ಮೆ ಮುದ್ದಿಸಲು
ಅವು ಕ್ಷಣಗಳಲ್ಲ ಪ್ರತಿ ಕ್ಷಣವೂ
ಒಂದೊಂದು ಮುತ್ತಿನ
ಮಣಿಗಳು
ನಾ ನಿನ್ನ ಶೃಂಗಾರದೆ
ಸಿಂಗರಿಸಲು
ಬಾ ನನ್ನೊಲವೆ
ಈ ಹೃದಯ ತುಂಬಿದ
ಒಲವೆ ನಮಗೆ ಸಿರಿ
ನಮ್ಮಿಬ್ಬರೊಳಗೆ
ಸಂಜು
ಗಮ ಚೆಲ್ಲಿ ಸುಘಂದವು
ನೀ ಬರಲು ಸನಿಹವು
ತನುವರಳಿ ರೊಮಾಂಚನವು
ಆ ನಿನ್ನ ಸ್ಪರ್ಶವು
ಮಂಜಿನ ಹನಿ
ಸ್ಪರ್ಶದಂತೆ
ಸುಮಧುರವು
ಮನದಾಸೆ ಹೇಗೆ ತಡಿಯಲಿ
ಈ ಏಕಾಂತದಲ್ಲಿ
ನೀ ಸ್ವಪ್ನ ಸುಂದರಿ
ನನ್ನ ಜೊತೆಗಿರಲು
ಹೃದಯ ಹೂತೋಟದಂತೆ
ಅರಳಿದೆ ಪ್ರತಿ ಸುಮವು
ನಿನಗೆಂದೇ ಹಾಸಲೇ
ಒಲವಿಂದ ಸಿಂಪಡಿಸಲೇ
ಮಧು ನಿನ್ನ ತುಟಿಗಳಲ್ಲಿ
ಕಮಲದಷ್ಟೇ ಕೋಮಲ
ನಿನ್ನ ಕೆನ್ನೆಗಳಲ್ಲಿ
ಮುಂಜಾವಿನ ಉದಯನ ಕೆಂಪು
ನಿನ್ನ ನಾಚಿಕೆಯಲ್ಲಿ
ರಂಗೋಲಿಗೆ ಬಣ್ಣ ಎರೆಚಿದಷ್ಟೇ
ಸುಂದರ ನಿನ್ನ ಪ್ರೀತಿಯಲ್ಲಿ
ಒಲವಿಂದ ನನ್ನೆದೆ ವೀಣೇ
ಮೀಟಿ ಬಾರೆ ಚೆಲುವೆ
ನಾ ನಿನ್ನೊಮ್ಮೆ ಮುದ್ದಿಸಲು
ನೀ ನನ್ನೊಮ್ಮೆ ಮುದ್ದಿಸಲು
ಅವು ಕ್ಷಣಗಳಲ್ಲ ಪ್ರತಿ ಕ್ಷಣವೂ
ಒಂದೊಂದು ಮುತ್ತಿನ
ಮಣಿಗಳು
ನಾ ನಿನ್ನ ಶೃಂಗಾರದೆ
ಸಿಂಗರಿಸಲು
ಬಾ ನನ್ನೊಲವೆ
ಈ ಹೃದಯ ತುಂಬಿದ
ಒಲವೆ ನಮಗೆ ಸಿರಿ
ನಮ್ಮಿಬ್ಬರೊಳಗೆ
ಸಂಜು
ತೆರೆದಿದೆ ಇಂದು ಮನದ ದೇಗುಲ
ತೆರೆದಿದೆ ಇಂದು
ಮನದ ದೇಗುಲ
ನಿನ್ನಾಸನಕ್ಕೆ
ಆಗಿದೆ ಸಜ್ಜು
ನನ್ನೀ ಹೃದಯ
ತೊರೆದರು ನಿನ್ನದೇ
ಸೇರಿದರು ನಿನ್ನದೇ
ನನ್ನದೇನು ಇಲ್ಲ
ಈ ಬದುಕು
ನೀನಿಲ್ಲದೆ
ನನ್ನೊಳಗೂ ನುರಾಸೆ
ನಿನ್ನ ಸೇರುವ ಮಹದಾಸೆ
ಬದುಕು ಪಯಣವು
ಇಂದು ದುರಾಗಿಸಿದೆ
ಹೀಗೆ ಯಾಕೆ
ಬದುಕು ಒಂದು ಪಯಣವಾದರೆ
ನಡೆಸಿದಂತೆ ನಡೆದಿದೆ
ಈ ಬದುಕು
ಭಾವನಗೆಳ ಬಿಚ್ಚಲ್ಲು
ಚೆಲ್ಲ ಪಿಲ್ಲಿ ಎಲ್ಲೆಲ್ಲು
ತಿಳಿಯುವ
ಬಚ್ಚಿಡುವ ಮನಸ್ಸಿಲ್ಲದೆ
ಒತ್ತಡದೆ ಒದ್ದಾಡಿದೆ
ಸಂಜು
ಹಾರುವ ಹಕ್ಕಿ ನಾನು
ಹಾರುವ ಹಕ್ಕಿ ನಾನು
ನೆಲೆ ಇಲ್ಲದ ಪಯಣ
ನೆನಪಿನಲೆ ಒಂದಿಷ್ಟು
ನೋವಿನಲೆ ಇನ್ನೊಂದಿಷ್ಟು
ಜೊತೆಗೋಡಿ ಸಾಗಿದೆ ಪಯಣ
ಒಂಟಿ ಯಾನ
ಸಿಕ್ಕದ್ದು ಹೆಕ್ಕುತ್ತ
ನಡೆದಿದೆ ಜೀವನ
ಓಲೈಸುವ ಹೃದಯವಿಲ್ಲ
ಸ್ಪಂದಿಸುವ ಮನಸುಗಳು
ಇಲ್ಲ
ಬದುಕಿನ ಈ ಪರಿಯ
ಪಯಣ
ಒಮೊಮ್ಮೆ ಮೋಡಗಳ ಒಳಗೆ
ಒಂಟಿಯಾಗಿ ಕೆಳಗೊಡಿ
ಬಂದರೆ ಮತ್ತದೇ
ನೀರವತೆಯ ಮೌನ
ನೋವಿನ ಅಣು ಕ್ಷಣ ಕ್ಷಣ
ಜೊತೆ ಇಲ್ಲದ ಪಯಣ
ಗಾಳಿ ತೂರಿದತ್ತ ಸಾಗಿದೆ
ಶಕ್ತಿ ಮೀರಿ ಹಾರಿದೆ
ಇನ್ಯಾವ ಉರು
ಮತ್ಯಾವ ದೇಶ
ಗುರಿ ಇಲ್ಲದ ಪಯಣ
ಸಂಜು
ಧಾಮಿನಿಯ ಸಾವು
ಎಷ್ಟೊಂದು ಕೋಮಲೆ
ಎಂತಿದ್ದಳು ಅವಳು
ಹೆತ್ತವರ ಕುಸಮವಾಗಿ
ಬೆಳೆದವಳು
ತನ್ನ ಮನೆಯ ಆಸರೆಯಾಗಬೇಕೆಂಬ
ಅಶಾ ಕಿರಣ ಹೊತ್ತಿದವಳು
ಅಮಾನುಷ ಕಾಮುಕರ
ಬಲಿಪಶುವಾಗಿಹಳು
ಬಲಿಪಶುವಾಗಿಹಳು
ಕೊನೆ ಕ್ಷಣದಲ್ಲು ಅತ್ಮವಿಶವಾಸ
ಬಿಡದವಳು
ಬದುಕಬೇಕೆಂಬ ತನ್ನಾಸೆ ವ್ಯಕ್ತ
ಪಡಿಸಿದವಳು
ಕ್ಷಣ ಮಾತ್ರದೆ ಅಳಿದು ಹೋದಳು
ಕ್ಷಣ ಮಾತ್ರದೆ ಅಳಿದು ಹೋದಳು
ದೇಹವಿಂದು ನಿತ್ರಾಣವಾಗಿದೆ
ಕೇವಲ ನೀ ಹೆಸರಾಗಿ ಉಳಿದಿಹೇ
ಕೇವಲ ನೀ ಹೆಸರಾಗಿ ಉಳಿದಿಹೇ
ಹೇ ಭಾರತದ ಹೆಣ್ಣೇ
ಈಗೋ ನಾ ಯಾಚಿಸುತ್ತಿರುವೆ
ನಿನಗೆ ಕ್ಷಮೆ
ಎಲ್ಲ ಗಂಡು ಜಾತಿಯ
ಪರವಾಗಿ
ನಿನ್ನ ಕೊಂದವರ
ನಿರ್ನಾಮವಾಗಲಿ
ನಿನ್ನಾತ್ಮ ಸುಖಿಯಾಗಲಿ
ಶಾಂತಿ ದೊರಕಲಿ
ನೀನು ಸತ್ತದ್ದು ನಿನ್ನ ಸಾವಲ್ಲ
ಮಾನವತೆಯ ಸಾವು
ನೀನು ನಂಬಿದ
ಮನುಷ್ಯತ್ವದ ಸಾವು
ಸಂಜು
ಹೊಸ ವರುಷದ ಶುಭಾಶಯ ಇಂದು
ಹೊಸ ವರುಷದ ಶುಭಾಶಯ ಇಂದು
********************
ಹಳೆ ಬದುಕಿಕೊಂದು
ಹೊಸ ಅಧ್ಯಾಯದ ಪುಟ
ತೆರೆದಿದೆ
ಇಂದು
ಹೊಸ ಸಮಯಕ್ಕೆ
ಕಾಲಿಡುವ ಮುನ್ನ
ಹಳೆ ವರ್ಷದ
ಕೊನೆ ಪುಟದವರೆಗು
ನೆನಪುಗಳು
ನೋವುನಲಿವುಗಳು
ನೂರು
ಮರೆಯಲು ಆಗದು
ಆ ಹಿಂದಿನ ಬದುಕಿಗೆ
ಹೋಗಲು ಆಗದು
ಮುಂದೇನು
ಎಂಬ ಚಿಂತೆಯಲ್ಲಿ
ಹೊಸ ಸಮಯಕ್ಕೆ
ಕಾಲಿಡುವೆವು
ಇಂದು
ಬದುಕೇನು ಹೊಸೆತಲ್ಲ
ಹಳಸೆ
ಗೋಡೆಯ ಪಂಚಾಂಗ
ಬದಲಾದರು
ಬದುಕಿನ ಪಂಚಾಂಗ
ಬದಲಾಗದು
ಆದರು ಹೊಸ ವರುಷದ
ಶುಭಾಶಯ ಇಂದು
ಸಂಜು
ಕಡಲ ಯಾನ
ನೂರು ಭಾವ ಹೊತ್ತ
ಕಡಲ ಯಾನ ನನ್ನದು
ನಿಂತು ನಿಂತು
ತಿರುಗಿ ತಿರುಗಿ ನೋಡಿ
ಸಾಗುತಿಹುದು
ಅಲ್ಲಲ್ಲಿ ನೀನಿತ್ತ ನೆನಪುಗಳ
ನಿಲ್ದಾಣದಲ್ಲಿ
ಎಣಿಸಿ ನಡೆಯಲ್ಲೇ
ಕಣ್ಣ ಒರೆಸಿ ನಡೆಯಲ್ಲೇ
ಕಣ್ಣ ತುಂಬಾ ನಿನ್ನ ಬಿಂಬ
ಉಪ್ಪಿನ ಹನಿ ತಿಳಿಯಾಗಿಸದೆ
ಜಾತ್ರೆ ಮೇಳದಲ್ಲಿ ಮೌನ
ಯಾತ್ರೆ ಸಾಗಿದೆ
ತುಂತುರು ಮಳೆಯಂತೆ
ನಿನ್ನ ಪ್ರೇಮ ವರ್ಷಕ್ಕೆ
ಕಾದಿದೆ
ನಿಲ್ಲಲಿಲ್ಲ ನನ್ನ ಯಾನ
ಭಾವದ ಒತ್ತಡ
ಬೀಸಿದೆ ಪ್ರವಾಹ
ಮನದ ತುಂಬೆಲ್ಲ
ನಿನ್ನ ನೆನಪು ಮಾತ್ರ
ಹೇಗೆ ನಿಯಂತ್ರಿಸಲಿ
ಹೃದಯದ ಹೊಟ್ಟು
ನಿನಗೆ ಕೊಟ್ಟು
ನಿನ್ನ ನೆನಪೇ ಜೀವದ
ಶಕ್ತಿ ತುಂಬಿದೆ, ಪಯಣ
ಮುಂದೆ ಸಾಗಿದೆ
ಸಂಜು
Subscribe to:
Posts (Atom)