Saturday, May 28, 2011

Sanju: Heart touching

Sanju: Heart touching: "ನಾನು ಬಾಣಸವಾಡಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಾಲ; 1980ರ ದಶಕ. ಒಂದು ದಿನ ಅಜ್ಜಿಯೊಬ್ಬರು ಠಾಣೆಯೊಳಗೆ ನಿಧಾನವಾಗಿ ನಡೆಯುತ್ತಾ ಬಂದರು. ಕೈಯಲ್ಲಿ ಲೋಟವಿತ್ತು. ಅದ..."

Monday, May 16, 2011

Heart touching

ನಾನು ಬಾಣಸವಾಡಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಾಲ; 1980ರ ದಶಕ. ಒಂದು ದಿನ ಅಜ್ಜಿಯೊಬ್ಬರು ಠಾಣೆಯೊಳಗೆ ನಿಧಾನವಾಗಿ ನಡೆಯುತ್ತಾ ಬಂದರು. ಕೈಯಲ್ಲಿ ಲೋಟವಿತ್ತು. ಅದನ್ನು ಮೇಜಿನ ಮೇಲೆ ಇಟ್ಟವರೇ, ‘ಕುಡಿಯಪ್ಪಾ’ ಎಂದು ನಮ್ರ ದನಿಯಲ್ಲಿ ಕೇಳಿಕೊಂಡರು. ಆ ಲೋಟದಲ್ಲಿ ಕಾಫಿ ಇತ್ತು. ನನ್ನ ಮುಖವನ್ನೇ ದಿಟ್ಟಿಸುತ್ತಾ ನಿಂತ ಆ ಅಜ್ಜಿಗೆ ಕುಳಿತುಕೊಳ್ಳುವಂತೆ ಹೇಳಿದೆ. ನನಗೆ ಯಾಕೆ ಕಾಫಿ ಎಂದೂ ಪ್ರಶ್ನಿಸಿದೆ. ‘ನೀನು ನನ್ನ ಮೊಮ್ಮಗನ ತರಹ ಇದ್ದೀಯ... ಕುಡಿ ಕುಡಿ’ ಎಂದಷ್ಟೇ ಹೇಳಿದರು. ಪರಿಚಯವೇ ಇಲ್ಲದ ಒಬ್ಬರು ಹಾಗೆ ನಾವಿರುವಲ್ಲಿಗೇ ಬಂದು ಕಾಫಿ ಕೊಡುವುದೇ ಅಪರೂಪ. ಅಜ್ಜಿ ಅಷ್ಟೊಂದು ಕೇಳಿಕೊಂಡಿದ್ದರಿಂದ ಕುಡಿಯದೇ ನನಗೆ ವಿಧಿಯಿರಲಿಲ್ಲ. ನಾನು ಕಾಫಿ ಕುಡಿಯುವವರೆಗೆ ಕುರ್ಚಿ ಮೇಲೆ ಕುಳಿತು ಎಲೆಅಡಿಕೆ ಹಾಕಿಕೊಳ್ಳುತ್ತಿದ್ದ ಅಜ್ಜಿ ಸ್ವಲ್ಪ ಹೊತ್ತಿನ ನಂತರ ಲೋಟ ತೆಗೆದುಕೊಂಡು ಹೊರಟುಬಿಟ್ಟರು.

ಕೆಲವು ದಿನಗಳ ನಂತರ ಅದೇ ಅಜ್ಜಿ ಮತ್ತೆ ಬಂದರು. ಕೈಯಲ್ಲಿ ಹಾಗೆಯೇ ಕಾಫಿ ಲೋಟ. ಎಲ್ಲವೂ ಮೊದಲಿನಂತೆಯೇ. ಆದರೆ, ಈ ಸಲ ನಮ್ಮ ನಡುವೆ ಮಾತು ತುಸು ಮುಂದುವರಿಯಿತು. ಚಿಕ್ಕಬಾಣಸವಾಡಿಯಲ್ಲಿ (ಬಾಣಸವಾಡಿ  ಆಗ ಹಳ್ಳಿಯ ಸ್ವರೂಪದಲ್ಲೇ ಇತ್ತು) ವಾಸವಿದ್ದ ಆ ಅಜ್ಜಿಯ ಮೊಮ್ಮಗ ಹಾವು ಕಚ್ಚಿ ಮೃತಪಟ್ಟಿದ್ದ. ಅವನು ನನ್ನನ್ನೇ ಹೋಲುತ್ತಿದ್ದನಂತೆ. ಅದೊಂದೇ ಕಾರಣಕ್ಕೆ ಅಜ್ಜಿ ಆಗಾಗ ನೋಡಿಕೊಂಡು ಹೋಗುವುದಾಗಿ ವಿನಂತಿಸಿಕೊಂಡರು. ಯಾವುದೇ ಸ್ವಾರ್ಥವಿಲ್ಲದ ಇಳಿಜೀವವೊಂದು ಅಂಥ ಬೇಡಿಕೆ ಮುಂದಿಟ್ಟರೆ ನನ್ನಂಥ ಯುವಕ ಮಣಿಯದೆ ಇರಲು ಹೇಗೆ ಸಾಧ್ಯ?  ಆ ಅಜ್ಜಿ ಯಾವಾಗ ಬಂದರೂ ಒಳಗೆ ಬಿಡಬೇಕೆಂದು ಠಾಣೆಯಲ್ಲಿರುವ ಎಲ್ಲರಿಗೂ ಸೂಚಿಸಿದೆ. ಅಜ್ಜಿ ಆಗಾಗ ಮನೆಯಿಂದ ಏನಾದರೂ ತಿಂಡಿ ಕೂಡ ಮಾಡಿಕೊಂಡು ತರಲು ಪ್ರಾರಂಭಿಸಿದರು.

ಬಿಡಿಎ, ರೈಲ್ವೆ ಇಲಾಖೆ ಮೊದಲಾದವರು ಆಗ ವಿವಿಧ ಯೋಜನೆಗಳಿಗೆ ಜಮೀನುಗಳನ್ನು ವಶಪಡಿಸಿಕೊಂಡರು. ಆಗ ಅಜ್ಜಿಗೆ ಸೇರಿದ್ದ ಜಮೀನಿಗೂ ಬೆಲೆ ಸಿಕ್ಕಿತು. ಇದ್ದಕ್ಕಿದ್ದಂತೆ ಕೈತುಂಬಾ ಹಣ ಬಂತು. ಅದುವರೆಗೆ ಹತ್ತಿರ ಬರದಿದ್ದ ಅಜ್ಜಿಯ ನೆಂಟರಿಷ್ಟರೆಲ್ಲಾ ಅವರ ಬಳಿ ಸುಳಿದಾಡತೊಡಗಿದರು. ಬಂದ ಹಣವನ್ನು ಏನು ಮಾಡಬೇಕೆಂಬ ಯೋಚನೆ ಹೊತ್ತು ಅಜ್ಜಿ ನನ್ನ ಬಳಿಗೆ ಬಂದರು. ಯಾರ್ಯಾರಿಗೆ ಎಷ್ಟೆಷ್ಟು ಭಾಗ ಮಾಡಬೇಕು ಎಂಬುದನ್ನು ಕೇಳಿಕೊಂಡು ಅಷ್ಟನ್ನು ಹಂಚಿದ್ದಾಯಿತು. ಉಳಿಕೆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಗಳ ರೂಪದಲ್ಲಿಡುವಂತೆ ಸೂಚಿಸಿದೆ. ಅಜ್ಜಿಯ ಪಾಲಿಗೆ ಆಗ ನಾನೇ ಆರ್ಥಿಕ ಸಲಹೆಗಾರ.

ಬಂದ ಹಣಕ್ಕೆ ಸರಿಯಾದ ದಾರಿ ತೋರಿಸಿದ್ದರಿಂದ ಅಜ್ಜಿಗೆ ನೆಮ್ಮದಿ ಸಿಕ್ಕಿತು. ಅಲ್ಲಿಂದಾಚೆಗೆ ನನ್ನ ಮೇಲೆ ಅವರ ಮಮತೆಯ ಸುರಿಮಳೆ. ನಾನು ರಾತ್ರಿ ರೌಂಡ್ಸ್ ಹೋಗಿ ಠಾಣೆಗೆ ಬಂದರೆ ಇದ್ದಕ್ಕಿದ್ದಂತೆ ಬಂದು, ‘ಇಷ್ಟು ಹೊತ್ತಿನಲ್ಲೂ ಓಡಾಡಬೇಕೆ’ ಎಂದು ಕಾಳಜಿಯಿಂದ ಕೇಳುತ್ತಿದ್ದರು. ಆಗಾಗ ನಾನೂ ಸೇರಿದಂತೆ ನಮ್ಮ ಠಾಣೆಯ ಎಲ್ಲಾ ಪೊಲೀಸರಿಗೂ ದೃಷ್ಟಿ ತೆಗೆದು ನೀರು ಚೆಲ್ಲುತ್ತಿದ್ದರು. ಯಾವ ದುರುದ್ದೇಶವೂ ಅವರಿಗೆ ಇರಲಿಲ್ಲವಾದ್ದರಿಂದ ಪ್ರೀತಿ ಬೆರೆತಿದ್ದ ಅವರ ಯಾವ ನಡವಳಿಕೆಯನ್ನೂ ನಮ್ಮ ಠಾಣೆಯ ಸಿಬ್ಬಂದಿ ಪ್ರಶ್ನಿಸುತ್ತಿರಲಿಲ್ಲ. ಬೇಸರ ಕೂಡ ಪಟ್ಟುಕೊಳ್ಳುತ್ತಿರಲಿಲ್ಲ.

‘ನಂಗಾಗಿ ಇಷ್ಟೆಲ್ಲಾ ಮಾಡಿದೆ. ನನ್ನ ನೆನಪಾಗಿ ನಿನಗೆ ಏನಾದರೂ ಕೊಡಬೇಕಂತ ಆಸೆ ಆಗ್ತಿದೆ’ ಅಂತ ಅಜ್ಜಿ ಹೇಳಿದರು. ಹಾಗೆ ಏನಾದರೂ ಕೊಟ್ಟರೆ ಅದೇ ನಮಗೆ ಅಭ್ಯಾಸವಾಗಿ ಹೋಗುತ್ತೆ, ಬೇಡ ಎಂದೆ. ಅಜ್ಜಿ ಕೇಳಲಿಲ್ಲ. ಒಂದು ದಿನ ಚಿನ್ನದ ಕಪಾಲಿ ಉಂಗುರ ಹಿಡಿದುಕೊಂಡು ಬಂದರು. ‘ನನ್ನ ನೆನಪಿಗಾಗಿ ಇದನ್ನು ಹಾಕಿಕೊಳ್ಳಲೇಬೇಕು’ ಎಂದು ದುಂಬಾಲುಬಿದ್ದರು. ಅಷ್ಟು ದೊಡ್ಡ ಉಂಗುರವನ್ನು ನಾನು ಹಾಕಿಕೊಳ್ಳೋಲ್ಲ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಅಜ್ಜಿ ಚಿನ್ನದ ಕೆಲಸ ಮಾಡುವವನನ್ನು ಅಲ್ಲಿಗೇ ಕರೆಸಬೇಕೆ? ‘ನಿಂಗೆ ಹೆಂಗೆ ಬೇಕೋ ಅಂಥದ್ದೇ ಮಾಡಿಸಿಕೋ’ ಅಂತ ಪೇಚಿಗೆ ಸಿಲುಕಿಸಿದರು. ಎಷ್ಟೇ ಬೇಡವೆಂದರೂ ಜಗ್ಗಲಿಲ್ಲ. ಸ್ವಲ್ಪ ಖಾರವಾಗಿ ಮಾತನಾಡಿದ್ದೇ, ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕತೊಡಗಿದರು. ವಿಧಿಯಿಲ್ಲದೆ ಸುಮ್ಮನಾದೆ. ಚಿನ್ನದ ಕೆಲಸ ಮಾಡುವವನು ನನ್ನ ಹುಟ್ಟಿದ ತಾರೀಖು ಕೇಳಿಕೊಂಡು ಅದಕ್ಕೆ ಹೊಂದುವ ಕಲ್ಲನ್ನು ಹಾಕಿ ಒಂದು ಉಂಗುರ ಮಾಡಿಕೊಟ್ಟ. ಅಜ್ಜಿ ತಾವೇ ಆ ಉಂಗುರವನ್ನು ಬೆರಳಿಗೆ ತೊಡಿಸಿದರು. ‘ಇನ್ನು ಮುಂದೆ ಇದು ಯಾವಾಗಲೂ ನಿನ್ನ ಬೆರಳಲ್ಲಿ ಇರಬೇಕು’ ಎಂದು ಆಜ್ಞೆಯನ್ನೂ ಹೊರಡಿಸಿದರು. ಅಜ್ಜಿಯಲ್ಲಿ ಇದ್ದ ತಾಯಿ ಮನಸ್ಸು ನನ್ನ ಬಾಯನ್ನು ಕಟ್ಟಿಹಾಕಿತು.

ಇದ್ದಕ್ಕಿದ್ದಂತೆ ಅಜ್ಜಿ ಠಾಣೆಗೆ ಬರುವುದನ್ನು ನಿಲ್ಲಿಸಿದರು. ಅವರ ನೆಂಟರೊಬ್ಬರನ್ನು ಕರೆಸಿ ವಿಚಾರಿಸಿದೆ. ಅವರಿಗೆ ಗಂಟಲಿನ ಕ್ಯಾನ್ಸರ್ ಆಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾರೆ ಎಂದು ಗೊತ್ತಾಯಿತು. ನನ್ನ ಅಕ್ಕ ಡಾ.ಬಿ.ಕೆ.ಶಾಲಿನಿ ಆಗ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದರು. ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಅಡಿಷನಲ್ ಡೈರೆಕ್ಟರ್ ಆಗಿ ಕೆಲಸ ಮಾಡಿ ನಿವೃತ್ತರಾದವರು ನನ್ನ ಅಕ್ಕ. ನಾನು ಆಸ್ಪತ್ರೆಗೆ ಹೋಗಿ ಅಜ್ಜಿಯನ್ನು ಕಂಡೆ. ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ನನ್ನ ಅಕ್ಕನನ್ನು ಕೇಳಿಕೊಂಡೆ. ಕ್ಯಾನ್ಸರ್ ಕೊನೆಯ ಹಂತ ತಲುಪಿದ್ದರಿಂದ ಅವರನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಕ್ಕ ಹೇಳಿದಾಗ ನನಗೆ ದುಃಖವಾಯಿತು.

ಇನ್ನು ಅಜ್ಜಿ ಬದುಕುವುದು ಕಷ್ಟ ಎಂಬುದು ಸ್ಪಷ್ಟವಾಯಿತು. ನಾನು ವಾರ್ಡ್‌ಗೆ ಹೋದೆ. ಅಜ್ಜಿಗೆ ಮಾತೇ ಹೊರಡಲಿಲ್ಲ. ಹತ್ತಿರ ಹೋಗಿ ಕೂತೆ. ನನ್ನ ಎರಡೂ ಕೈಗಳನ್ನು ಎಳೆದುಕೊಂಡರು. ಬೆರಳುಗಳ ಮೇಲೆ ಕಣ್ಣಾಡಿಸಿದರು. ಅಂದು ತೊಡಿಸಿದ್ದ ಉಂಗುರ ಅಲ್ಲಿದೆಯೇ ಎಂಬುದನ್ನು ಆ ಸ್ಥಿತಿಯಲ್ಲೂ ಖಾತರಿಪಡಿಸಿಕೊಳ್ಳುವ ತವಕ ಅವರದ್ದು.

ಉಂಗುರ ಕಂಡು ಅವರ ಮುಖ ಅರಳಿತು. ಆ ಕೈಯನ್ನು ಎಳೆದುಕೊಂಡು ತಮ್ಮ ತಲೆಗೆ ಅದುಮಿ ಹಿಡಿದರು. ಒಳ್ಳೆಯದಾಗಲಿ ಎಂಬಂತೆ ನನಗೆ ಆಶೀರ್ವಾದ ಮಾಡಿದರು. ಒಂದಿನಿತೂ ಸ್ವಾರ್ಥವಿಲ್ಲದೆ ನನ್ನನ್ನು ಪ್ರೀತಿಸಿದ ಅಜ್ಜಿಯ ಕಣ್ಣಲ್ಲಿ ಆ ದಿನ ಕಂಡ ದಿವ್ಯವಾದ ಕಕ್ಕುಲತೆಯನ್ನು ನಾನು ಮರೆಯಲಾರೆ. ವಾರ್ಡ್‌ನಿಂದ ಹೊರಬಂದಾಗ ನನ್ನಲ್ಲೂ ಮೌನ ಆವರಿಸಿತ್ತು. ಮರುದಿನವೇ ಅಜ್ಜಿ ಹೋಗಿಬಿಟ್ಟರು ಎಂಬ ಸುದ್ದಿ ಕಿವಿಮೇಲೆ ಬಿತ್ತು. ಮುಂದೆ ಯಾರೂ ಆ ಅಜ್ಜಿಯಂತೆ ಠಾಣೆಗೆ ಇದ್ದಕ್ಕಿಂದ್ದಂತೆ ಕಾಫಿ ತಂದುಕೊಡಲೇ ಇಲ್ಲ.
*
ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಇಲಾಖೆಯ ಮಾಹಿತಿದಾರನೊಬ್ಬನಿಗೆ ಒಂದು ಕೆಲಸ ಕೊಡಿಸಿ ಎಂದು ಬಿ.ಬಿ.ಅಶೋಕ್ ಕುಮಾರ್ (ಈಗ ಅವರು ಎಸಿಪಿ ಆಗಿ ಕೆಲಸ ಮಾಡುತ್ತಿದ್ದಾರೆ) ನನ್ನನ್ನು ಕೇಳಿಕೊಂಡರು.

ಅಶೋಕನಗರ ಠಾಣೆಯ ವ್ಯಾಪ್ತಿಯಲ್ಲಿ ಹಲವಾರು ಬಾರ್ ಮತ್ತು ರೆಸ್ಟೋರೆಂಟ್‌ಗಳಿದ್ದವು. ಆ ಪೈಕಿ ಒಂದರಲ್ಲಿ ಅವನಿಗೆ ಕೆಲಸ ಕೊಡಿಸಿದೆ. ಇಬ್ಬರು ಹೆಣ್ಣು ಮಕ್ಕಳಿದ್ದ ಸಂಸಾರ ಅವನದ್ದು. ಕೆಲಸ ಸಿಕ್ಕಿದ್ದೇ ಖುಷಿಪಟ್ಟ. ನಿಯತ್ತಿನಿಂದ ಕೆಲಸ ಮಾಡಿಕೊಂಡಿದ್ದ. ರೌಡಿಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದ. ತಿಂಗಳಲ್ಲಿ ಒಮ್ಮೆ ಅವನು ನನ್ನನ್ನು ಕಾಣಲು ಬರುತ್ತಿದ್ದ. ಬಂದಾಗ ಚಾಕೊಲೇಟನ್ನೋ, ಸಿಹಿಯನ್ನೋ ತರುತ್ತಿದ್ದ. ‘ನಿಮಗೆ ಸಿಹಿ ಕೊಟ್ಟರೆ ನನಗೆ ಏನೋ ಸಮಾಧಾನ’ ಎನ್ನುತ್ತಿದ್ದ.

ಒಮ್ಮೆ ಅವನು ಬಂದಾಗ ಕೈಲಿ ಸಿಹಿ ಇರಲಿಲ್ಲ. ಸುಮ್ಮನೆ ನಿಂತು ಅಳತೊಡಗಿದ. ಸಮಾಧಾನಪಡಿಸಿ ಕೇಳಿದಾಗ ಗೊತ್ತಾಯಿತು- ಅವನ ಒಬ್ಬಳು ಮಗಳು ಮೂತ್ರಕೋಶದ ವೈಫಲ್ಯದಿಂದ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದಳು. ಬೇಸರವಾಯಿತು.

ಒಂದೂವರೆ ವರ್ಷದ ನಂತರ ಒಮ್ಮೆ ಫೋನ್ ಮಾಡಿ, ‘ನನ್ನ ಎರಡನೇ ಮಗಳೂ ಹೋಗಿಬಿಟ್ಟಳು. ತಾವು ಬರುವವರೆಗೆ ಹೆಣ ಎತ್ತುವುದಿಲ್ಲ’ ಎಂದ. ಮನೆಮುಂದೆ ಜನವೋ ಜನ. ಅವನ ಇನ್ನೊಬ್ಬ ಮಗಳೂ ಮೂತ್ರಕೋಶದ ತೊಂದರೆಯಿಂದಲೇ ಹೋಗಿಬಿಟ್ಟಿದ್ದಳು. ಆ ವ್ಯಕ್ತಿಯ ಹೆಂಡತಿಯ ದುಃಖ ಕಂಡು ನಾನು ಸ್ತಂಭೀಭೂತನಾದೆ.

ಮನೆಯ ಒಳಗಡೆ ಹೋದರೆ ಆಶ್ಚರ್ಯ. ನನ್ನ ಹಾಗೂ ಅಶೋಕ್‌ಕುಮಾರ್ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲಾ ಸುದ್ದಿಯನ್ನೂ ಕತ್ತರಿಸಿ ಅವನು ಕ್ಯಾಲೆಂಡರ್‌ನಂತೆ ಮನೆತುಂಬಾ ನೇತುಹಾಕಿಬಿಟ್ಟಿದ್ದ. ಇಂಥ ಜನರೂ ಇರುತ್ತಾರಾ ಎಂದು ನನಗನ್ನಿಸಿತು. ‘ನೀವು ಒಂದು ಕೆಲಸ ಕೊಡಿಸಿ ಬದುಕುವ ದಾರಿ ತೋರಿಸಿದಿರಿ. ಆದರೆ, ವಿಧಿ ಎರಡೂ ಮಕ್ಕಳನ್ನು ಕಿತ್ತುಕೊಂಡಿತು’ ಎಂದು ಅವನು ಬಿಕ್ಕಿದ. ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡ ಎಂದು ಅವನಿಗೆ ತಿಳಿಹೇಳಿದೆ.

ಕೆಲವು ತಿಂಗಳ ನಂತರ ಅವನು ಮತ್ತೆ ನನ್ನಲ್ಲಿಗೆ ಬಂದ. ಯಾವುದಾದರೂ ಅನಾಥಾಶ್ರಮ ಗೊತ್ತಿದ್ದರೆ ಒಂದು ಮಗುವನ್ನು ದತ್ತು ಕೊಡಿಸಿರೆಂದು ಕೇಳಿದ. ಪ್ರಭುಸ್ವಾಮಿ ಎಂಬ ನನ್ನ ‘ಬ್ಯಾಚ್‌ಮೇಟ್’ ಇದ್ದರು. ಅವರೀಗ ಡಿವೈಎಸ್ಪಿ ಆಗಿದ್ದಾರೆ.

ಅವರಿಗೆ ಅನಾಥಾಶ್ರಮಗಳ ಸಂಪರ್ಕವಿತ್ತು. ಒಂದು ಅನಾಥಾಶ್ರಮದಿಂದ ಕಾನೂನುಬದ್ಧವಾಗಿ ಹೆಣ್ಣು ಮಗುವನ್ನು ದತ್ತು ಕೊಡಿಸಿದರು. ಆ ಶುಭದಿನ ಕನ್ನಡ ರಾಜ್ಯೋತ್ಸವ. ಅವನು ನಾಮಕರಣಕ್ಕೂ ನನ್ನನ್ನು ಕರೆದ. ರಾಜ್ಯೋತ್ಸವದ ದಿನ ದತ್ತುಪಡೆದ ಆ ಮಗುವಿಗೆ ರಾಜೇಶ್ವರಿ ಎಂದು ಹೆಸರಿಟ್ಟ. ಈಗಲೂ ಪ್ರತಿ ನವೆಂಬರ್ 1ನೇ ತಾರೀಖು ಬಂದು, ಅವನು ಸಿಹಿ ಕೊಡುತ್ತಾನೆ. ಅವನ ಮಗಳ ಹುಟ್ಟುಹಬ್ಬದಲ್ಲಿ ಪಾಲುದಾರನೆಂಬ ಹೆಮ್ಮೆ ನನ್ನದು. ಆ ಹೆಣ್ಣುಮಗು ಈಗ ದೊಡ್ಡವಳಾಗಿದ್ದಾಳೆ.

ಚೆನ್ನಾಗಿ ಓದುತ್ತಿದ್ದಾಳೆ. ವಿಧಿ ಕೊಟ್ಟ ಏಟಿನಿಂದಾದ ದುಃಖ ಮರೆತು, ಬದುಕು ಕಟ್ಟಿಕೊಂಡ ಇಂಥವರನ್ನು ನೋಡಿದಾಗ, ನೆನೆದಾಗಲೆಲ್ಲಾ ನನ್ನಲ್ಲಿ ಜೀವನಪ್ರೀತಿಯ ಒರತೆ ಉಕ್ಕುತ್ತದೆ.

Police with Humanity cant belive Read this

ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ನಾನು ಕೆಲಸ ಮಾಡುತ್ತಿದ್ದ ಸಂದರ್ಭ. ಒಮ್ಮೆ ಅಲ್ಲಿಗೆ ಅಂಧ ದಂಪತಿ ಬಂದರು. ಅಂಧರು ಬಂದು ಹಣಕಾಸಿನ ಸಹಾಯ ಕೇಳುವುದು ನಮಗೆ ಹೊಸ ಅನುಭವವೇನೂ ಆಗಿರಲಿಲ್ಲ. ಅವರೂ ಒಂದಿಷ್ಟು ಹಣ ಕೇಳಲು ಬಂದಿರಬೇಕು ಎಂದು ನಾನಂದುಕೊಂಡೆ.

ಕೆಲವೇ ಕ್ಷಣಗಳಲ್ಲಿ ಅವರು, ‘ನಾವು ಹಣ ಕೇಳಲು ಬಂದಿಲ್ಲ. ನಾವು ಭಿಕ್ಷುಕರೂ ಅಲ್ಲ’ ಎಂದರು. ಮಾತಿನಿಂದ ಅವರು ನೇರವಾಗಿ ನನಗೆ ತಿವಿದಂತಾಯಿತು. ಯಾಕೆಂದರೆ, ನಾನು ಮನಸ್ಸಿನಲ್ಲಿ ಅವರು ಹಣ ಕೇಳಲೇ ಬಂದಿದ್ದಾರೆ ಎಂದುಕೊಂಡಿದ್ದು ಸತ್ಯವಾಗಿತ್ತು. ಅವರ ಒಳಗಿವಿಗೆ ನನ್ನ ಮನದ ಮಾತನ್ನು ಅಷ್ಟು ಸ್ಪಷ್ಟವಾಗಿ ಕೇಳಿತ್ತು. ಸ್ವಲ್ಪ ಹೊತ್ತು ನನಗೂ ಏನೂ ಮಾತನಾಡಲು ತೋಚಲಿಲ್ಲ. ಆಮೇಲೆ ಅವರೇ ತಾವು ಬಂದ ಉದ್ದೇಶ ಹೇಳಿಕೊಂಡರು.

ಅವರು ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರಿಗೂ ಕಣ್ಣಿರಲಿಲ್ಲ. ಅಂಧರಿಗೆ ಸಿಗುವ ಕೆಲಸ ಕೂಡ ಲಭಿಸಿರಲಿಲ್ಲ. ಭಿಕ್ಷೆ ಬೇಡಿ ಬದುಕುವುದು ಅವರಿಗೆ ಇಷ್ಟವಿರಲಿಲ್ಲ. ‘ಹಾಡು ಹೇಳುವುದು ಬಿಟ್ಟು ನಮಗೆ ಬೇರೇನೂ ಬರುವುದಿಲ್ಲ’ ಎಂದರು. ನಾವು ಒಂದು ಪಲ್ಲವಿ, ಚರಣ ಹಾಡುವಂತೆ ಕೇಳಿದೆವು. ಇಬ್ಬರೂ ತನ್ಮಯತೆಯಿಂದ ಹಾಡಿದರು. ಇಬ್ಬರ ಸಿರಿಕಂಠ. ಕಣ್ಣಿಲ್ಲದಿದ್ದರೂ ಗೀತೆಯ ಮೂಲಕವೇ ಜಗತ್ತನ್ನು ಕಾಣುವಷ್ಟು ಪ್ರಖರವಾಗಿದ್ದ ಹಾಡುಗಾರಿಕೆ.

ಹಣ ಬೇಡವೆಂದ ಅವರು ಬಂದದ್ದಾದರೂ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಉಳಿದಿತ್ತು. ಹಾಡು ಮುಗಿದ ನಂತರ ನಾನೇ ತಮಗೇನು ಸಹಾಯ ಬೇಕು ಎಂದು ಕೇಳಿದೆ.

‘ನಮಗೆ ಒಂದು ಹಾರ್ಮೋನಿಯಂ, ಕಂಜಿರಾ ಕೊಡಿಸಿ. ಅದನ್ನು ಬಳಸಿ ಹಳ್ಳಿಗಳಲ್ಲಿ ಹರಿಕಥೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ’ ಎಂದರು. ಠಾಣೆ ಯಲ್ಲಿದ್ದವರೆಲ್ಲಾ ಒಂದಿಷ್ಟು ಹಣ ಸೇರಿಸಿ ಅವರಿಗೆ ಹಾರ್ಮೋನಿಯಂ, ಕಂಜಿರಾ ಕೊಡಿಸಿದೆವು. 
***
ನಾನು ಕೋದಂಡರಾಮಪುರದ ಕಾರ್ಪೊರೇಷನ್ ಪ್ರೌಢಶಾಲೆಯಲ್ಲಿ ಓದಿದವನು. ಬಾಲ್ಯದಲ್ಲಿ ನಾನು, ಗೆಳೆಯರು ಶ್ರದ್ಧೆಯಿಂದ ಕಬಡ್ಡಿ ಆಡುತ್ತಿದ್ದೆವು. ಕ್ರಮೇಣ ಯಂಗ್‌ಸ್ಟರ್ಸ್‌ ಕಬಡ್ಡಿ ಕ್ಲಬ್ ರೂಪುಗೊಂಡಿತು. ನಾವೆಲ್ಲಾ ಆ ಕ್ಲಬ್‌ನ ಪರವಾಗಿಯೇ ಆಡುತ್ತಿದ್ದುದು. ಅನೇಕರಿಗೆ ಕೆಲಸ ಕೊಡಿಸಿದ ರಾಷ್ಟ್ರದ ಪ್ರತಿಷ್ಠಿತ ಕಬಡ್ಡಿ ಕ್ಲಬ್ ಅದು.

ಆಗ ನಮ್ಮ ಜೊತೆ ದೊರೆಸ್ವಾಮಿ ಎಂಬುವನು ಆಡುತ್ತಿದ್ದ. ನಮಗಿಂತ ದೊಡ್ಡ ಪ್ರಾಯದವ. ಗಟ್ಟಿಮುಟ್ಟಾಗಿದ್ದ. ಅಂಥವರಿದ್ದರೆ ಆಟವನ್ನು ಚೆನ್ನಾಗಿ ಕಲಿಯಬಹುದು. ಹಾಗಾಗಿ ಅವನನ್ನೂ ನಮ್ಮ ಜೊತೆ ಆಡಿಸುತ್ತಿದ್ದೆವು. ನಾವೆಲ್ಲಾ ಅವನನ್ನು ‘ಬಂಡಿ’ ಎಂದೇ ಕರೆಯುತ್ತಿದ್ದದ್ದು.

ನಾನು ಮುಂದೆ ಸಬ್ ಇನ್ಸ್‌ಪೆಕ್ಟರ್ ಆದೆ. ಅವನು ಹೆಸರಿಗೆ ತಕ್ಕಂತೆ ಬಂಡಿ ಗಾಡಿ ಓಡಿಸಿಕೊಂಡಿದ್ದ. ಸಿಮೆಂಟು, ಇಟ್ಟಿಗೆ, ಜಲ್ಲಿ ಮೊದಲಾದ ಸರಕು ಸಾಗಿಸಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ. ನಾನು ಮೋಟಾರ್ ಬೈಕ್‌ನಲ್ಲಿ ಓಡಾಡುತ್ತಿದ್ದೆ. ಎಲ್ಲಿ ಎದುರಿಗೆ ಸಿಕ್ಕರೂ ಅವನು ಕೈಯೆತ್ತಿ ‘ವಿಶ್’ ಮಾಡುತ್ತಿದ್ದ. ನಾನೂ ವಿಶ್ ಮಾಡುತ್ತಿದ್ದೆ.

ಬಿಡುವಿದ್ದಾಗ ನಮ್ಮ ನಡುವೆ ಒಂದೆರಡೂ ಮಾತುಗಳೂ ವಿನಿಮಯವಾಗುತ್ತಿದ್ದವು. ಹತ್ತು ವರ್ಷ ಹೀಗೇ ಕಳೆಯಿತು. ಆಮೇಲೆ ನನಗೆ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಸಿಕ್ಕಿತು. ಆಮೇಲೆ ಜೀಪಿನಲ್ಲಿ ಓಡಾಡತೊಡಗಿದೆ. ಆಗಲೂ ದೊರೆಸ್ವಾಮಿ ನನ್ನನ್ನು ‘ವಿಶ್’ ಮಾಡುವುದನ್ನು ಬಿಡಲಿಲ್ಲ.

ಕೆಲವು ದಿನಗಳ ನಂತರ ಒಮ್ಮೆ ಅವನು ನಮ್ಮ ಜೀಪು ಹಾದುಹೋದ ಸ್ಥಳದಿಂದ ತುಸು ದೂರದಲ್ಲೇ ನಿಂತಿದ್ದ. ನಾನು ‘ವಿಶ್’ ಮಾಡಿದರೂ ಸುಮ್ಮನಿದ್ದ. ಹೀಗೆಯೇ ಎರಡು ಮೂರು ಸಲ ಆಯಿತು. ಅವನು ನನಗೆ ಯಾಕೆ ‘ವಿಶ್’ ಮಾಡುತ್ತಿಲ್ಲ ಎಂಬ ಪ್ರಶ್ನೆ ಕಾಡತೊಡಗಿತು. ನನ್ನಿಂದ ಏನಾದರೂ ತಪ್ಪಾಯಿತೇ ಅಥವಾ ಯಾರಾದರೂ ವೃತ್ತಿ ಮಾತ್ಸರ್ಯದ ಕಾರಣಕ್ಕೆ ಅವನ ಕಿವಿ ಚುಚ್ಚಿದರೇ ಎಂಬ ಅನುಮಾನ ಶುರುವಾಯಿತು.

ನನಗೆ ಸುಮ್ಮನಿರಲು ಆಗಲಿಲ್ಲ. ದೊರೆಸ್ವಾಮಿಯನ್ನು ಬಲ್ಲ ಮತ್ತೊಬ್ಬ ಸ್ನೇಹಿತನನ್ನು ಕರೆಸಿದೆ. ಯಾಕೋ ಇತ್ತೀಚೆಗೆ ನನ್ನನ್ನು ಕಂಡರೂ ಅವನು ಸ್ಪಂದಿಸುತ್ತಿಲ್ಲವೆಂದು ಹೇಳಿದೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಅವನೇ ಹೇಳಲಿ, ಅವನನ್ನು ಕರೆದುಕೊಂಡು ಬನ್ನಿ ಎಂದೆ.

ದೊರೆಸ್ವಾಮಿ ಬಂದ. ಯಾಕಪ್ಪಾ, ಏನಾದರೂ ನನ್ನಿಂದ ತಪ್ಪಾಗಿದೆಯೇ? ಯಾಕೆ ಇತ್ತೀಚೆಗೆ ನೋಡಿದರೂ ‘ವಿಶ್’ ಮಾಡುತ್ತಿಲ್ಲ? ಎಂದು ನೇರವಾಗಿ ಕೇಳಿದೆ. ‘ಅಯ್ಯೋ ಹಂಗೆಲ್ಲಾ ಏನೂ ಇಲ್ಲ. ನಂಗೆ ಎರಡೂ ಕಣ್ಣು ಕಾಣ್ತಿಲ್ಲ...

ಇತ್ತೀಚೆಗೆ ಗಾಡಿ ಕೂಡ ಕಟ್ಟೋಕೆ ಆಗ್ತಿಲ್ಲ. ಎರಡೂ ಕಣ್ಣುಗಳಲ್ಲಿ ಪೊರೆ ಬೆಳೆದಿದೆ. ಕಣ್ಣಾಪರೇಷನ್ ಮಾಡಬೇಕು ಅಂದರು. ಅದಕ್ಕೆಲ್ಲಾ ಕಾಸಿಲ್ಲ. ಹಿಂಗೇ ಕಥೆ ಹಾಕ್ತಾ ಇದೀನಿ. ನೀನು ನನಗೆ ಕಾಣಲೇ ಇಲ್ಲ ಅಂದಮೇಲೆ ವಿಶ್ ಮಾಡುವುದು ಎಲ್ಲಿಂದ ಬಂತು. ಅದಕ್ಕೆಲ್ಲಾ ನೀನು ಬೇಜಾರು ಮಾಡ್ಕೋಬೇಡ...’ ದೊರೆಸ್ವಾಮಿ ಹೇಳುತ್ತಾ ಹೋದ.

ಇಂಥವನ ಬಗ್ಗೆ ತಪ್ಪು ಭಾವಿಸಿದೆನಲ್ಲಾ ಎಂದು ನಾನು ಪೇಚಾಡಿಕೊಂಡೆ. ಅವನಿಗೆ ಹೇಗಾದರೂ ಆಪರೇಷನ್ ಮಾಡಿಸಬೇಕು ಎಂದು ನನಗೆ ಅನ್ನಿಸಿತು.
ನನ್ನ ಗೆಳೆಯನೇ ಆದ ವೈದ್ಯನೊಬ್ಬನ ಮನೆ ಹತ್ತಿರವೇ ದೊರೆಸ್ವಾಮಿ ಹೆಚ್ಚು ಓಡಾಡಿಕೊಂಡಿರುತ್ತಿದ್ದ. ಆ ವೈದ್ಯನಿಗೆ ಫೋನ್ ಮಾಡಿದೆ. ದೊರೆಸ್ವಾಮಿಯ ಪರಿಸ್ಥಿತಿ ವಿವರಿಸಿ, ಹಣ ಪಡೆಯದೆ ಕಣ್ಣಾಪರೇಷನ್ ಮಾಡುವಂತೆ ಅವನಲ್ಲಿ ವಿನಂತಿಸಿಕೊಂಡೆ.
1993-94ರ ಕಾಲವದು. ಆಗ ಒಂದು ಕಣ್ಣಿನ ಪೊರೆ ತೆಗೆಯಲು 15-18 ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ಕನಿಷ್ಠ 8 ಸಾವಿರ ರೂಪಾಯಿ ಕೊಟ್ಟರಷ್ಟೇ ಆಪರೇಷನ್ ಮಾಡಲು ಸಾಧ್ಯ ಎಂದು ನನ್ನ ವೈದ್ಯ ಗೆಳೆಯ ಖಡಾ ಖಂಡಿತವಾಗಿ ಹೇಳಿಬಿಟ್ಟ. ಅದಕ್ಕಿಂತ ಹೆಚ್ಚು ರಿಯಾಯಿತಿ ಕೊಡಲು ಅವನು ಮನಸ್ಸು ಮಾಡಲಿಲ್ಲ.

ಗೆಳೆತನ, ಮಾನವೀಯತೆಯ ಕುರಿತು ಜಿಜ್ಞಾಸೆ ಮೂಡುವುದು ಇಂಥ ಸಂದರ್ಭಗಳಲ್ಲಿಯೇ.

ನನಗೆ ಗೊತ್ತಿರುವ ಪೊಲೀಸ್ ಅಧಿಕಾರಿಗಳನ್ನು ವಿನಂತಿಸಿಕೊಂಡೆ. ಗೆಳೆಯರನ್ನೂ ಕೇಳಿದೆ. ಎಲ್ಲರೂ ಕೈಲಾದಷ್ಟು ಸಹಾಯ ಮಾಡಿದರು. ನಾನೂ ಒಂದಿಷ್ಟು ಸೇರಿಸಿ, ಎಂಟು ಸಾವಿರ ರೂಪಾಯಿ ಹೊಂದಿಸಿದ್ದಾಯಿತು. ಅಂತೂಇಂತೂ ಒಂದು ಕಣ್ಣಾಪರೇಷನ್ ಮಾಡಿಸಿದ್ದಾಯಿತು. ವಾರದ ನಂತರ ದೊರೆಸ್ವಾಮಿ ನನ್ನ ಮನೆಗೆ ಬಂದ. ‘ನೀನೀಗ ಕಾಣ್ತಾ ಇದೀಯ. ಒಂದು ಕಣ್ಣು ಚೆನ್ನಾಗಿ ಕಾಣ್ತಿದೆ. ಅಷ್ಟೇ ಸಾಕು.

ಇನ್ನೊಂದು ಕಣ್ಣು ಹಾಗೇ ಇರಲಿ’ ಎಂದ. ನನ್ನ ಮನಸ್ಸು ಒಪ್ಪಲಿಲ್ಲ. ಕೆಲವು ತಿಂಗಳ ನಂತರ ನಾವು ಗೆಳೆಯರೆಲ್ಲಾ ಸೇರಿ ಆ ಕಣ್ಣಿನ ಆಪರೇಷನ್ ಕೂಡ ಮಾಡಿಸಿದೆವು. ಮುಂದೆ ಅವನು ಮೊದಲಿನಂತೆಯೇ ‘ವಿಶ್’ ಮಾಡುವುದು ಮುಂದುವರಿಯಿತು.
ಒಮ್ಮೆ ನಾನು ಸ್ಥಳೀಯ ಜನ ಒತ್ತಾಯಿಸಿದ್ದರಿಂದ ಗ್ರಾಮದೇವತೆ ಪೂಜೆಗೆ ಅತಿಥಿಯಾಗಿ ಹೋಗಿದ್ದೆ.  ಅಲ್ಲಿ ನೂಕುನುಗ್ಗಲು. ಎಲ್ಲರನ್ನೂ ಸೀಳಿಕೊಂಡು ಯಾರೋ ಬರುವುದು ಗೊತ್ತಾಯಿತು. ಜನ ಅವನನ್ನು ಬಾಯಿಗೆ ಬಂದಂತೆ ಬೈಯತೊಡಗಿದರು.

ಯಾರ ಮಾತನ್ನೂ ಲೆಕ್ಕಸದೆ ಅವನು ನನ್ನಲ್ಲಿಗೆ ಬಂದ. ಅವನು ಅದೇ ದೊರೆಸ್ವಾಮಿ. ‘ನಾನು ಬಂದಿದ್ದು ಗ್ರಾಮದೇವರನ್ನು ನೋಡೋದಕ್ಕಲ್ಲ. ನನಗೆ ಕಣ್ಣು ಕೊಟ್ಟ ದೇವರನ್ನು ನೋಡೋಕೆ’ ಅಂದುಬಿಟ್ಟ. ಅಲ್ಲಿದ್ದ ಅನೇಕರಿಗೆ ದೊರೆಸ್ವಾಮಿಗೆ ನಾವೆಲ್ಲಾ ಕಣ್ಣಾಪರೇಷನ್ ಮಾಡಿಸಿದ ಸಂಗತಿ ಗೊತ್ತಾಯಿತು. ‘ಮಾತೆತ್ತಿದರೆ ತರಾಟೆಗೆ ತೆಗೆದುಕೊಳ್ಳುವ ಪೊಲೀಸರು ಇಂಥ ಕೆಲಸವನ್ನೂ ಮಾಡ್ತಾರಾ’ ಎಂದು ಅಲ್ಲಿದ್ದ ಅನೇಕರು ಅಚ್ಚರಿಯಿಂದ ಕೇಳಿದರು.

ಇದು ನನ್ನೊಬ್ಬನ ಅನುಭವ. ಇಂಥ ಸಹಾಯವನ್ನು ಅನೇಕ ಪೊಲೀಸರು ಮಾಡಿದ್ದಾರೆಂಬುದನ್ನು ನಾನು ಕೇಳಿ ಬಲ್ಲೆ. ಆದರೆ, ಪೊಲೀಸರ ಈ ಮುಖ ಎಷ್ಟೋ ಜನರಿಗೆ ಗೊತ್ತಿಲ್ಲವೆಂಬುದೂ ಸತ್ಯ.

***
ನಾನು ವಿಲ್ಸನ್ ಗಾರ್ಡನ್‌ನಲ್ಲಿ ಕೆಲಸ ಮಾಡುವಾಗ ಕೆ.ಪಿ.ಝಡ್. ಹುಸೇನ್ ಎಂಬ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಅವರು ಜಾತ್ಯತೀತರು. ಸೇವಾ ಮನೋಭಾವ ಇದ್ದಂಥವರು. ಎಲ್ಲಿ ದೌರ್ಜನ್ಯ ನಡೆದರೂ ಧೈರ್ಯವಾಗಿ ಬಂದು ನಮ್ಮಂಥ ಪೊಲೀಸರಿಗೆ ತಿಳಿಸುತ್ತಿದ್ದರು. ಅವರಿದ್ದ ಬಡಾವಣೆಯಲ್ಲಿ ಮನೆ ಕಟ್ಟುವಾಗ ಕಾನೂನು ಸಮರವಾಯಿತು. ಅವರು ಮನೆ ಕಟ್ಟುತ್ತಿದ್ದ ಜಾಗದ ಎದುರಲ್ಲಿ ಮಸೀದಿ ಇತ್ತು. ಆಗ ಅಳತೆಯ ವಿಷಯದಲ್ಲಿ ಎದ್ದ ತಕರಾರು ಅದು. ಆ ಸಮಸ್ಯೆಯನ್ನು ಬಗೆಹರಿಸುವಂತೆ ನಾನೇ ಕಾರ್ಪೊ ರೇಷನ್‌ಗೆ ಲೆಟರ್ ಕೂಡ ಬರೆದುಕೊಟ್ಟೆ.

ಆಮೇಲೆ ನನಗೆ ಹೈಕೋರ್ಟ್‌ನ ಬೇಹುಗಾರಿಕಾ ವಿಭಾಗಕ್ಕೆ ವರ್ಗಾವಣೆಯಾಯಿತು. ಆದರೂ ಹುಸೇನ್ ಮನೆಯ ವಿವಾದ ಬಗೆಹರಿದಿರಲಿಲ್ಲ. ಅವರಿಗೆ ಇಬ್ಬರು ಬೆಳೆದ ಹೆಣ್ಣುಮಕ್ಕಳಿದ್ದರು. ಅವರನ್ನು ಕರೆದುಕೊಂಡು ಏನೋ ಕೆಲಸ ಮುಗಿಸಿಕೊಂಡು ವಿಲ್ಸನ್ ಗಾರ್ಡನ್ ಕಡೆಗೆ ತಮ್ಮ ಗೂಡ್ಸ್ ಗಾಡಿಯಲ್ಲಿ ಹುಸೇನ್ ಬರುತ್ತಿದ್ದರು.

ಮಸೀದಿಗೆ ಸಂಬಂಧಪಟ್ಟವರು ಗಾಡಿಯನ್ನು ಅಡ್ಡಗಟ್ಟಿ, ಹುಸೇನರನ್ನು ಅಲ್ಲಿಯೇ ಕೊಚ್ಚಿ ಹಾಕಿದರು. ಆ ಕೊಲೆಗೆ ಇಬ್ಬರೂ ಹೆಣ್ಣುಮಕ್ಕಳು ಸಾಕ್ಷಿಯಾದರು. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಸಜ್ಜನ ವ್ಯಕ್ತಿಯ ಕೊಲೆಯಲ್ಲಿ ಮುಗಿದದ್ದು ದುರಂತ.

ನ್ಯಾಯಾಲಯದಲ್ಲಿ ಆ ಪ್ರಕರಣದ ವಿಚಾರಣೆ ಶುರುವಾಯಿತು. ಕುಮ್ಮಕ್ಕು ಕೊಟ್ಟವರು, ಕೊಲೆ ಮಾಡಿದವರನ್ನು ಪೊಲೀಸರು ದಸ್ತಗಿರಿ ಮಾಡಿದ್ದರು. ಮಸೀದಿಯವರ ಪರವಾಗಿ ಇಡೀ ವ್ಯವಸ್ಥೆ ನಿಂತಿತು. ಆ ಹೆಣ್ಣುಮಕ್ಕಳು ಸಾಕ್ಷಿ ಹೇಳದಿದ್ದರೆ ಪ್ರಕರಣ ಅವರ ಕಡೆಗೆ ಆಗುವುದೆಂಬ ಖಾತರಿ ಇತ್ತು. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಮೇಲೆ ಒತ್ತಡ ಹಾಕ ತೊಡಗಿದರು.

ಆ ಹೆಣ್ಣುಮಕ್ಕಳು ಸಾಕ್ಷಿ ಹೇಳದಂತೆ ಮಾಡಬೇಕು ಎಂದು ತಾಕೀತು ಮಾಡಿದರು. ಒಂದು ವೇಳೆ ಆ ಮಕ್ಕಳು, ‘ನಮ್ಮ ಜಾಗದಲ್ಲಿ ನೀವೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ’ ಎಂದು ಕೇಳಿದರೆ ನನಗೆ ಉತ್ತರ ಕೊಡಲು ಸಾಧ್ಯವೇ ಇಲ್ಲ. ಹಾಗಾಗಿ ಅವರಿಗೆ ನಾನು ಹಾಗೆ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿಬಿಟ್ಟೆ. ಆ ಮಕ್ಕಳು ನನ್ನ ಮನೆಗೂ ಹುಡುಕಿಕೊಂಡು ಬಂದರು.

‘ಸಾಕ್ಷಿ ಹೇಳಬಾರದು ಎಂದು ನೀವೇ ನಮಗೆ ಹೇಳುತ್ತೀರಿ ಎಂದು ಅನೇಕರು ಮಾತಾಡಿಕೊಳ್ಳುತ್ತಿದ್ದಾರೆ. ನಿಜವೇ?’  ಎಂದು ಕೇಳಿದರು. ನಾನು ಕನಸು ಮನಸಲ್ಲೂ ಹಾಗೆ ಹೇಳಲಾರೆ ಎಂದಾಗ ಅವರಿಗೆ ನೆಮ್ಮದಿ. ‘ಸರ್... ಒಂದು ಕೋಟಿ ಕೊಟ್ಟರೂ ನಾವು ಸಾಕ್ಷಿ ಹೇಳದೇ ಇರುವುದಿಲ್ಲ’ ಎಂದು ಆ ಹೆಣ್ಣು ಮಕ್ಕಳು ದೃಢಸಂಕಲ್ಪದಿಂದ ಹೇಳಿದರು.

ಬಹುಶಃ ಇನ್ನೂ ಆ ಪ್ರಕರಣ ಮುಗಿದಿಲ್ಲವೆನ್ನಿಸುತ್ತೆ. ವ್ಯವಸ್ಥೆಯ ಎದುರು ಈಜುವ ಇಂಥ ಎಷ್ಟೋ ಹೆಣ್ಣುಮಕ್ಕಳಿಂದ ನಾನು ಆತ್ಮವಿಶ್ವಾಸದ ಪಾಠ ಕಲಿತಿದ್ದೇನೆ.

ಮುಂದಿನ ವಾರ: ರಾಜಕಾರಣಿಗಳ ತರ್ಲೆಗಳು

Saturday, May 14, 2011

where I am lacking

This is the term I am lacking
every one is to lack some where some time some thing, some personality, some advantage, some preferences, some one likes, some one dislikes, some food, some vitamin, some knowledge, some one guidance, some sports, some arts, lots of lacks even though the person pretend he is perfect

they dont know the meaning of perfectness
the 'Quality means the job done perfect at first time "

every one run behind the success thinking they are perfect but they forget all the lac kings they have
Money is every one's need forget about the money
Money doesn't give success without the knowledge
if u earn the money in any way u need to have the knowledge to spend this for eating food

the people doesn't want to know where they r lacking even though  they come to know about that
they don't have time to make correct they think " if i waste my time in this i will be missing my biggest opportunity in  front of me but after gaining that opportunity, this will come again in front of u  like a wall where u r laking then u might lose that opportunity in a sec.

my thought is just don't live to be lived like some one making lot of money making lot of property
just u learn all the things which s necessary to leave in the world
in my experience people have knowledge of whole system but they don't have language to express in front of the world some may miss use that
people who is know lot of language but they don't know the system they make above people as victims

this kind of people will have half knowledge "half knowledge, half confident is very much dangerous"

some day in their carrier or life they will burst

just know keep thinking thinking thinking where i am lacking.........................................