Wednesday, August 29, 2012

ಮಿಲನ


    ಮಿಲನ
 
ನಿನ್ನ ಸೇರುವ ಅದೃಷ್ಟ ಬಂತು
ಮನ ಅಮಲಿನಲ್ಲಿ ತೇಲಿತು
ಕುಪ್ಪಳಿಸಲು ಆಗಸಕ್ಕೆ ಜಿಗಿಯಲು
ಕಾಲಿಗಿದ್ದ ಸರಪಳಿಯ ನೆನಪಾಯಿತು
 
ದಿನಗಳ ಎಳೆದೆಳೆದು ತಂದಿದ್ದೆ
ಈ ಸುದಿನಕ್ಕೆ ನಿನ್ನ ಸೇರಲಿಕ್ಕೆ
ಮನ ಉಲ್ಲಾಸ ಪಡುವ ಆಸೆ
ಎಲ್ಲೋ ಭಯದ ಛಾಯೆ
ನನ್ನಾವರಿಸಿ ಸುಖ ಮರೆಸಿದೆ

ನಿನ್ನ ನೆನಪಿನಲ್ಲಿ ಹರಿದ ಕಣ್ಣೀರು
ಇಳಿದ ಒಂದೊಂದು ಹನಿಯಲ್ಲೂ
ನಿನ್ನ ಚಿತ್ರ ಕಾಣಿಸುತ್ತಿತ್ತು
ಎಷ್ಟೋ ಸಾರಿ ಬತ್ತಿದ್ದು ಉಂಟು
ಕಾಣದೆ ನಿನ್ನ ಚಿತ್ರಕ್ಕೆ ಮನ
ಪರಿತಪಿಸುತಿತ್ತು

ಇಂದು ನಿನ್ನ ಸೇರುವ ಅದೃಷ್ಟ ಬಂತು
ದುಃಖದಲ್ಲೋ ಸುಖದಲ್ಲೋ
ಕಣ್ಣು ಮನವೆರಡು ತೆವಗೊಂಡಿವೆ
ಭಯದಲ್ಲೋ ಆತುರದಲ್ಲೋ
ಹೃದಯ ನಡುಗುತ್ತಿದೆ

~ಸಂಜು

ಸೋನೆ ಮಳೆಯಾಗಿ ಬಾ


   ಸೋನೆ ಮಳೆಯಾಗಿ ಬಾ
ಸೋನೆಯ ಮಳೆಯಾಗಿ ನನ್ನ ಸ್ಪರ್ಶಿಸು
ವಿರಹಾಗ್ನಿಯ ಈ ಬೇಗೆಯ ತೀರಿಸು
ಮನ ವ್ಯಾಕುಲ ಅ ಒಂದು ಹನಿ ಹಿಡಿಯಲು
ನೀನು ಹಬೆಯಾಗಿ ಎಲ್ಲೋ ಕರಗಿ ಹೋದೆ

ಕನಸಿಗೆ ಬಂದರೆ ನಿನ್ನ ಅಂದದಿ ಸುಸಜ್ಜಿಸುವೆ
ಅಲ್ಲೂ ನಿನ್ನ ಸ್ಪರ್ಶಕ್ಕೆ ಆತುರಿಯಲು ಮಾಯವಾಗುವೆ
ಮಂಕಾಗಿ , ಬೇಸರದಿ , ಅಲೆದಾಡಿ ನಿನ್ನ ಹುಡುಕಲು
ಮೋಡದ ಮರೆಯಲ್ಲಿ ನೀ ಇಣುಕಿ ನಗುವೇ

ನೀ ಗುಲಾಬಿಯು ಯಾವ ಹೋ ತೋಟಕ್ಕೆ
ನೀನಿದ್ದರೆ ಸೊಗಸು ನನ್ನೆದೆಯ ಅಂಗಳಕ್ಕೆ
ಪ್ರೀತಿಯ ಹೊಳೆ ನೀನು ಯಾವ ಊರಿಗೆ
ದಾಹ ತೀರಿಸು ಹರಿದು ನನ್ನೀ ಬಾಳಿಗೆ

ಎಲ್ಲರೊಂದಿಗೆ ಹಂಚಿ ನಗು ನಗುತ ನಲಿವೆ
ಪ್ರೀತಿಯ ಭಾಗ್ಯಹೀನ ನಾನು ಕೊಡ
ನನ್ನದು ಹಸಿದ ಹೊಟ್ಟೆ ನೋಡ
ಎಲ್ಲರಿಗು ಕೊಟ್ಟು ನನ್ನೇಕೆ ಮರೆವೆ

~ಸಂಜು ~

ಏಕಾಂತ


   ಏಕಾಂತ
ಒಮ್ಮೆ ಕಣ್ಣೀರಾಗಿ
ಒಮ್ಮೆ ಸುಗಂಧವಾಗಿ
ಒಮ್ಮೆ ಒಂದು ಹಾಡಾಗಿ
ದಿನ ಸಂಜೆ ನನ್ನ ಬೇಟಿ
ಮಾಡಿದೆ ನಿನ್ನ ನೆನಪು
ಬೆಳಧಿಂಗಳು ಹುಟ್ಟಿದೆ
ನಿನ್ನ ಕಣ್ಣಿನಿಂದ
ಒಮ್ಮೆ ಅನಿಸುತ್ತದೆ
ಸುಮ ಕಂಪು
ಹರಡಿದ್ದೇ ನಿನ್ನಿಂದ
ನನ್ನ ನಿದ್ರೆಬಾರದ ರಾತ್ರಿಗಳಲ್ಲಿ
ನಿನ್ನ ಹುಡುಕುತ್ತಿರುವೆ
ನೀನು ಮಲಗಿದ್ದಿಯ
ನನ್ನ ಕಣ್ಣುಗಳಲ್ಲಿ ಒಂದು ಕನಸಾಗಿ
ಹೃದಯದ ಹಾಳೆಯ ಮೇಲೆ
ಇಳಿಯುವ ಶಾಯಿಯ ಸಿಹಿ ಭಾವದಂತೆ
ನನ್ನ ಅಧರದ ಮೇಲೆ ನಲಿಯುವೆ
ಹೊಸ ಭಾವ ಗೀತೆಯಂತೆ
ಕಾರ್ಗತ್ತಲು ಸೇಣಸಲಿಲ್ಲ
ನಿನ್ನ ಮುಖ ಕಾಂತಿಗೆ
ನನ್ನ ಆತ್ಮದಲ್ಲಿ ಹರಡಿದೆ
ಉಜ್ವಲ ಬೆಳಕಾಗಿ
~ಸಂಜು ~


Sunday, August 26, 2012

ಬಾಳ ಬೆಳಕು

ಬಾಳ ಬೆಳಕು

ನಿನ್ನ ಪ್ರೀತಿ ಬದುಕಿಗೆ ಪರಿಚಯ ಮಾಡಿಕೊಟ್ಟಿದೆ
ನನ್ನ ಬದುಕನ್ನು ಬಿರುಗಾಳಿಯಿಂದ ಕಾಪಾಡಿದೆ
ನೊಂದು ಬೆಂದು ಕೊನೆ ಹಾರಲೆತ್ನಿಸಿದ ದೀಪಕ್ಕೆ
ನಿನ್ನೊಲವ ಜೀವ ತೈಲ ನೀ ಸುರಿದೆ

 ಬದುಕಿನ ಹೊಸ ಅಧ್ಯಾಯ ನೀ ತೆರೆದೇ
ಕೆಲ ಪುಟಗಳ ನಿ ಬರೆದೆ
ಕೆಲವನ್ನು ನಾ ಬರೆದೆ
ಬದುಕಿನ ಸಾರ ನೀ ತಿಳಿಸಿದೆ
ಬದುಕುವ ಇಚ್ಚೆಯ ನೀ ಹುಟ್ಟಿಸಿದೆ

ಕಾರ್ಗತ್ತಲ ಕಡು ಕೂಪದಲ್ಲಿ ನಾನಿದ್ದೆ
ಮುಂಜಾವಿನ ಹೊಸ ಮಂಜಿನಂತೆ
ಹೊಂಗನಸನು ನೀ ತಂದೆ
ಪಾಳು ಬಿದ್ದ ಇ ಎದೆ ಮನೆಗೆ
ಸ್ವಚ್ಚಗೊಳಿಸಿ ಹಸಿರು ತೋರಣ ಕಟ್ಟಿದೆ

ನೀ ನನಗೆ ಏನಾದರು ನನ್ನ ಬಾಗ್ಯ
ನಾ ನಿನಗೆ ಏನಾದರು ನನ್ನ ಸೌಬಾಗ್ಯ
ಹೊಸ ಮನೆಯ ಕಟ್ಟುವ
ಹೊಸ ದೀಪ ಬೆಳಗುವ
ಕೊನೆತನಕ ಬಾಳುವೆ ನಿನಗಾಗಿ
ಶ್ರಮಪಟ್ಟು ಸೆಣೆಸುವೆ ನಿನ್ನ ಕುಶಿಗಾಗಿ

 ಸಂಜು

ನಿನ್ನ ಕಣ್ಣ ಭಾವ ಕಂಡೆ

ನಿನ್ನ ಕಣ್ಣ ಭಾವ ಕಂಡೆ

ನಿನ್ನ ಕಣ್ಣಿನಲ್ಲಿ ಒಂದು ಸಣ್ಣ ಮಿಸುಕಾಟ ಕಂಡೆ
ಮ೦ಕಾಗಿದ್ದ ನಿನ್ನ ಬಾಡಿದ ಮೋರೆ ಕಂಡೆ
ಕಣ್ಣ ಹನಿಯಲ್ಲಿ ನಿನ್ನ ಪ್ರೀತಿಯ ಸವಿ ಲೇಪ ಕಂಡೆ
ಕಾಣಕೊಡದೆ ನೀ ಪಟ್ಟ ಪೇಚಾಟ ಕಂಡೆ
ಬಟ್ಟಲುಗಣ್ಣ ತುಂಬಿದ ನಿನ್ನ ಹೃದಯದ ಕಂಬನಿ ಕಂಡೆ
ನೀ ಹೇಳದೆ ಇದ್ದ ಸಾವಿರ ಭಾವವ ಕಂಡೆ
ನೀ ಎನಗೆ ಕೊಡಲಿಚ್ಚಿಸದ ಅ ನೋವ ಕಂಡೆ
ನಿನ್ನ ರೆಪ್ಪೆಯಿಂದ ನನ್ನ ರೆಪ್ಪೆಗೆ ಇಳಿದ ಸಂಬಂಧ ಕಂಡೆ
ನಿನಗರಿಯದೆ ಎಲ್ಲ ಕುಡಿಯುವ ಅನುಭವ ಕಂಡೆ
ಎಲ್ಲ ಬದಿಗಿಟ್ಟು ನಿನ್ನ ಸ್ಪಂದಿಸಿದ ನನ್ನ ಹೃದಯ ಕಂಡೆ
ನೀ ಹೇಳಿ ಕೇಳುವುದಕ್ಕೂ ಮುಂಚೆ ಎಲ್ಲ ದುಃಖ ಮರೆಸಿ ನಿಂದೆ

ಸಂಜು

Saturday, August 25, 2012

ಗೆಳತಿ ಕಾದಿರುವೆ

ಗೆಳತಿ ಕಾದಿರುವೆ

ಹೇ ತಂಗಾಳಿಯೇ ಒಮ್ಮೆ ಅವಳ ಸೋಕಿ ಬಾ
ನನ್ನ ವಿರಹವ ಸ್ವಲ್ಪ ಸಾರಿ ಬಾ
ನಾ ಬರುತ್ತಿರುವೆ ಅವಳಿಗೆಂದೇ
ಸ್ವಲ್ಪ ನನಗಾಗಿ ಕಾಯಲು ಹೇಳಿ ಬಾ

 ತುಡಿಯುತ್ತಿದೆ ಮನ ಅವಳ ತಬ್ಬಿ ಹಿಡಿಯಲು
ನನ್ನ ಎದೆಯ ಪ್ರೀತಿ ಆಳ ಅವಳಿಗೆ ಸಾರಲು
ಮರೆತು ಹೋಗಿದ್ದೆ ನನ್ನೆ ನಾ ಕನ್ನಡಿಯಲ್ಲಿ ನೋಡಲು
ನನ್ನಾಸೆಯಿಂದ ಅವಳ ಸಿಂಗರಿಸುವ ಆಸೆ ಹೊಂದಲು

 ಬಣ್ಣ ಬಣ್ಣದ ಹೂವುಗಳಿಂದ ನಿನ್ನ ಸಿಂಗರಿಸುವ ಆಸೆ ಇದೆ
ಅವಳ ಕೇಶರಾಶಿಯೊಂದಿಗೆ ಸ್ವಲ್ಪ ಆಟವಾಡುವ ಮನಸ್ಸಿದೆ
ನನ್ನ ಪ್ರೀತಿಗೆ ಹುಚ್ಚೆದ್ದು ನನ್ನ ಬಿಟ್ಟು ಹೋಗಲಾರಳೆ
ಅವಳ ನೋವೆಲ್ಲ ತೆಗೆದು ಕುಶಿಯನ್ನು ಮಡಿಲ ತುಂಬುವೆ

 ಹೇ ತಂಗಾಳಿಯೇ ಒಮ್ಮೆ ಅವಳಿಗೆ ನನ್ನ ಓಲೆ ತಲುಪಿಸು
ನಾನು ಎಲ್ಲಿ ಇದ್ದರು ಅವಳಬಳಿಯಲ್ಲೇ ನನ್ನ ಮನಸ್ಸು
ನಮ್ಮ ನಡುವಿನ ಅಂತರ ಇನ್ನು ಕೆಲವೇ ದಿನಗಳು
ಒಮ್ಮೆ ನಿನ್ನ ನೋಡಿದರೆ ಸಾಕು ನನಗೆ ಸ್ವರ್ಗ ಆ ಕ್ಷಣಗಳು

 ಸಂಜು

ಆ ಸಣ್ಣ ಮಳೆ


   ಆ ಸಣ್ಣ ಮಳೆ

ನೀ ನಡೆವ ಹಾದಿಯಲಿ ಒಮ್ಮೆ ತುಂತುರು ಮಳೆ ಹನಿದರೆ
ಮಳೆಯಲ್ಲಿ ನೆನೆಯುತ್ತ ನೀ ಹರ್ಷಗೊಂಡರೆ
ಮಳೆಯ ಹನಿ ನಿನ್ನ ಕೇಶಾರಾಶಿಯಿಂದ ನಿನ್ನ ಕೆನ್ನೆಗೆ ಇಳಿದರೆ
ತಣ್ಣನೆಯ ಗಾಳಿ ನಿನ್ನ ಸೋಕಿ ಮುದಗೊಳಿಸಿದರೆ
ನನ್ನ ನೆನಪು ನಿನ್ನ ಮನದಲ್ಲಿ ಅರಳಿದರೆ
ಒಮ್ಮೆ ಕಣ್ಣು ಮುಚ್ಚಿ ನಿನ್ನ ಬಾಹುಗಳಲ್ಲಿ ಆ ಮಳೆಯ ಆಲಂಗಿಸು
ನನ್ನ ಬೆಚ್ಚನೆಯ ಸಿಹಿ ಮುತ್ತು ನಿನ್ನ ಸೋಕುವುದು
ಅದರ ಅನುಭೂತಿ ನನ್ನ ಇಲ್ಲಿ ಸ್ಪರ್ಸಿಸುವುದು

~ ಸಂಜು ~

ನಮ್ಮ ಪ್ರೀತಿ

ನಮ್ಮ ಪ್ರೀತಿ

 
ನಿನ್ನ ಸೇರಿದ ಸಮಯದಿಂದ
ನಿನ್ನ ಸಂಗ ನನ್ನ ಕಾಡಿದೆ
ನಿನ್ನ ಪ್ರೇಮಕ್ಕೆ ಶರಣಾಗಿರುವೆ
ಬೇರೆ ದಾರಿ ಇಲ್ಲದೆ
ನಿನ್ನ ಕಣ್ಣಲ್ಲಿ ಕಳೆದು ಹೋಗಿರುವೆ
ನನಗೆ ಅರಿವಿಲ್ಲದೆ
ಪ್ರೀತಿ ಎಂಬುದು ಮಾಯೆಯಾದರೆ
ಪ್ರೀತಿ ಕುರುಡು ಎಂದು ಲೋಖ ಸಾರಿದೆ
ಗತ್ಯಂತರ ನಾವು ದೊರ ಇದ್ದರು
ನನ್ನ ಮನವು ನಿನ್ನ ಸುತ್ತೆ ಸುತ್ತಿದೆ
ಲೋಖ ಮರೆವೆ ಎಲ್ಲ ಮರೆವೆ
ನಿನ್ನ ಸಂಗದ ಸ್ವರ್ಗದ ಅನುಭವಕ್ಕೆ
ನಿರ್ಭಯದಿ ಪ್ರೀತಿ ಮಾಡುವ
ನಮ್ಮ ಪ್ರೀತಿ ನಮ್ಮ ಹಕ್ಕೆ
ಯಾರು ಏನು ಅಂದರೇನು
ನಮ್ಮ ಬದುಕು ಮುಖ್ಯ ನಮಗೆ
ನಮ್ಮ ಸುಖವ ನಾವು ಹಂಚಿಕೊಂಡರೆ
ಸ್ವರ್ಗಕ್ಕೆ ನಮ್ಮ ಮೇಲೆ ಕಿಚ್ಚೆ
ಇನ್ನು ಲೋಖದ ಮಾತೇಕೆ
ನಮಗೆ ಅಂಕೆ ಶಂಕೆ

ಸಂಜು

Friday, August 24, 2012

ಅಪರಿಚಿತ ಬೇಟಿ

ಅಪರಿಚಿತ ಬೇಟಿ

ಎರಡು ದಿನದ ಅತಿಥಿಯಾಗಿ
ಹೋಗಿ ಬರುವೆ ಎಂದು ಹೋದಳು
ಏನೋ ಹೇಳಬೇಕಿತ್ತು ಅನಿಸಿದ್ದು
ಹೇಳದೆ ಮನದಲ್ಲಿ ಉಳಿಯಿತು
ಅವಳ ಯಾರೋ ನಾ ಯಾರೋ
ಆದರು ಕಣ್ಣಿನಲ್ಲೇ ಏನೋ ಹೇಳಿದ್ದಳು
ದೊರದಲ್ಲೇ ಏನೇನೋ ಸನ್ನೆ
ಆದರು ಮನದಲ್ಲಿ ಸಾವಿರ ಪ್ರೆಶ್ನೆ
ಹೋಗಬೇಕಿದ್ದ ದಾರಿ ದೊರ
ನಾನಿಂದು ಕಾಯುತ್ತಿರುವೆ ಅವಳ ಅಪಾರ
ಹೇಳದ ಕೇಳದ ನಿ ಯಾರೋ ಎಂದು
ಹೊರಟೆ ಹೋದೆ
ಅವಳ ಕಳುಹಿಸಿ ಕೊಟ್ಟ ಮೇಲು
ಏನೋ ಒಂದು ಕಳವಳ
ನಗು ನಗುತ್ತಲೇ ಬೈ ಎಂದು
ಹೋದೆ ನೀ ಏಕೆ ಸರಸರ
ಅವಳ ತಡೆದು ಹೇಳಬೇಕು
ಮನದ ಮಾತು ತಿಳಿಸಬೇಕು
ಅಂತ ಅನಿಸುವಾಗಲೇ
ಸಂಜೆ ಸೂರ್ಯ ಮುಳುಗಿದಂತೆ
ಮಾಯವಾದೆ
ಎಲ್ಲೇ ಇದ್ದರು ಸುಖವಾಗಿ ಇರು
ನನ್ನ ನೆನಪಾದರೆ ಬಂದು ಬಿಡು
ಗೆಳೆಯೇ ಗೆಳೆಯ ಅಂತ ಹೇಳುತ್ತಲ್ಲಿ
ನಮ್ಮ ಗೆಳತನವನ್ನು ಜೊತೆಯಲ್ಲೇ
ಯಾಕೆ ಹೊತ್ತು ಹೊಯಿದೆ

ಸಂಜು

Wednesday, August 22, 2012

ನಿನ್ನ ಕಾತರಿಕೆ

  ನಿನ್ನ ಕಾತರಿಕೆ
ನನ್ನ ದೇವತೆಯಾಗಿ ವರ ಪಡೆದಿದ್ದೇನೆ 
ನನ್ನ ಜಗತ್ತೇ ನಿನ್ನೊಂದಿಗೆ ಕಟ್ಟಿದ್ದೇನೆ
ಪ್ರತಿ ಸಮಯ ನಿನ್ನ ಕಾತರಿಕೆಯಲ್ಲೇ
ಪ್ರತಿ ನಿಮಿಷ ನಿನ್ನ ಕೇಳುವ ಆಸೆಯಲ್ಲೇ
ಹೇಗೆ ಇರಲು ಸದ್ಯ ನೀರ ಬಿಟ್ಟ ಮೀನು
ನಿನ್ನ ಬಿಟ್ಟು ನಾನು

ನಯನದಲ್ಲಿ ಓದಿದ ನೀ ಆಡದ ಮಾತು
ಎದೆಯಾಳದಲಿ ಇಳಿದು ಬರೆಸಿತು
ನೀನಾದೆಯ ನನ್ನ ಬದುಕಿಗೆ ಉದ್ದೇಶ
ತಿಳಿಸದೇ ಮಾಡಿದೆ ನನ್ನ ಪರವಶ
ನಿನ್ನ ನಗು ನಿನ್ನ ಶೈಲಿ ನಿನ್ನ ಚೆಂದ 
ಸೆಳೆದಿದೆ ನಿನ್ನೆಡೆಗೆ  ಎಲ್ಲರಿಂದ
ಹೇಗೆ ಇರಲು ಸದ್ಯ ಮರಕ್ಕೆ ಆಸರೆಯಾಗದೆ ಬಳ್ಳಿ
ನಿನ್ನಾಸರೆ ಇಲ್ಲದೆ ನನ್ನ ಬಾಳಿಗೆ ಎಲ್ಲಿದೆ  ಕಳಿ

ನಿನ್ನ ನಯನ ತುಂಬಲು ಮಾದಕ
ನಿನ್ನ ನೋಡದಿರೆ  ಎಲಿಲ್ಲದ ತವಕ 
ನೀ ಮಾತನಾಡದಿರೆ ಈ  ಜಗತ್ತೇ ನಿಶಬ್ದ
ನಿನ್ನ ಎದೆಯಲ್ಲಿ ನನಗೆ ಪ್ರೀತಿ ಕಾಣದಿರೆ
ನನ್ನ  ಬದುಕಿಗೇನು ಅರ್ಥ
ಎದೆಯಲ್ಲಿ ಬಚ್ಚಿಡದೆ ಎಲ್ಲವನ್ನು ಹೇಳು
ಏಕೆ ಹೀಗೆ ಇದ್ದಿಯೇ ಕೊಂಚ ಸಂಯಮ ತಾಳು
ನಿನ್ನ ಮೇಲೆ ನಿನಗೇಕೆ  ಇಷ್ಟು ಕೋಪ 
ಹೊಸಕದಿರು ನಮಿಬ್ಬರ ಪ್ರೇಮ ಅಪರೊಪ

ಸಂಜು

Tuesday, August 21, 2012

ಹೃದಯದ ಆಲಾಪ

ಹೃದಯದ ಆಲಾಪ
 

 ಕ್ಷಣ ಕ್ಷಣ ಹೃದಯದಲ್ಲಿ ನಿನ್ನ ಮಿಡಿತವಿತ್ತು
ಬದುಕು ಸುಂದರ ಕನಸು ಎಂದು ಸಾರಿತ್ತು

ಪ್ರತಿ ಸಂಜೆ ಕಣ್ಣಿನಲ್ಲಿ ನಿನ್ನ ನೆರಳ ಆಲೆ
...
ಪ್ರತಿ ರಾತ್ರಿ ನಿನ್ನ ನೆನಪಿನ ದಿಬ್ಬಣ ತರುವುದು

ನನ್ನ ಉಸಿರಿನಲ್ಲಿ ನಿನ್ನ ಪರಿಮಳ ತುಂಬುವುದು
ಸುಘಂದ ಬರಿತ ಪ್ರೇಮದ ಆಲೆ ಚುಂಬಿಸುವುದು
ನನ್ನ ಹೃದಯದ ಬಡಿತ ನಿನ್ನ ಗೀತೆ ಹಾಡುವುದು

ಎಲ್ಲೋ ಕನಸಲ್ಲಿ ಬಂದು ನೀನು
ನನ್ನ ಬಾಹುಗಳಲಿ ಬಂದಿಸು ಎಂದು ಹೇಳಿದಂತೆ ಇತ್ತು
ಈ ಕನಸಿಗೆ ಅರ್ಥ ಕೊಡಲು ಮನ ನಿನ್ನ ಬೇಡಿತ್ತು
ಈ ಸಂಬಂದಕ್ಕೆ ಅರ್ಥ ಕೊಡಲು ಮನ ನಿನ್ನ ಕೇಳಿತ್ತು

ಈ ಅರ್ಥಗಳ ಅರಿವಿಲ್ಲದೆ ಮನ ತುಡಿಯುತಿದ್ದೆ
ಕಾತರ ಭಯಗಳ ನಡುವೆ ನಿನ್ನ ಬೇಡಿದೆ

ನಿನ್ನ ಯೋಚನೆ ಅರಿವಿಗೆ ತಂದಿತ್ತು
ಈ ಹುಚ್ಚು ಪ್ರೀತಿಗೆ ಏನೆಂದು ಹೆಸರಿತ್ತು

ನನ್ನ ಬ್ರಮೆ ನನ್ನೊಳಗೆ ಪ್ರೇಮ ಪ್ರಲಾಪವಾಗಿದೆ
ಬ್ರಮೆಯೊಳಗೆ ಪ್ರೀತಿ ಬ್ರಮರ ಕಾಡುತಿದ್ದೆ

ಪ್ರೀತಿ ಹಸಿವಿನ ಅಕಾಲ ತಿಳಿದವರಿಗೆ ಗೊತ್ತು
ಪ್ರೀತಿ ಅಮೃತ ಹೊತ್ತ ಕಳಶಕ್ಕೆನು ಗೊತ್ತು
ಅದರ ಒಂದು ಹನಿ ನನ್ನ ದಾಹ ಹಿಂಗಿಸುತಿತ್ತು

ನಿನ್ನ ಪ್ರೀತಿ ಆಸೆಯಲ್ಲಿ ಬೆಂದ ಹೃದಯ ನನ್ನದು
ಆ ಸುಟ್ಟ ಗಾಯದ ಸವಿ ಅನುಭವವೇ ಒಂದು ತರಹದ ಕುಶಿ
ನೀನು ಹೀಗೆ ಸುಡುತ್ತಿರು ನಾನು ಬೂದಿ ಆಗುವತನಕ

ನಿನ್ನ ಹೆಸರಿನ ಸಾವು ಅಮೃತವ ಸೇರಿದಂತೆ ಆತ್ಮವು

~ ಸಂಜು ~
 

ಚೆಲುವೆ ಚೆಲುವೆ

ಚೆಲುವೆ ಚೆಲುವೆ
 

 ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ
ಐದೇ ನಿಮಿಷ ಐದೇ ನಿಮಿಷ ಕಂಡಾಗಲೇ
ನನ್ನಾಸೆ ಎದೆಯ ತಳ್ಳಿದೆ ಬೆಂಕಿಯಲ್ಲೇ
...
ನಾನೆಷ್ಟೋ ಬಣ್ಣದ ಕನಸುಗಳ ಕಂಡೆ
ನನ್ನ ನಿನ್ನ ಸೇರಿಸಲೆಂದೇ ಬಂದೆ
ಬಂದ ವೇಗದಲ್ಲಿ ಹೆದರಿ ನಿಂದೆ
ನೀನು ಹೆಜ್ಜೆ ಗುರುತು ಸಿಗದ ಕಡಲ ಮಿನ
ನನ್ನ ಬೇಟೆಗೆ ಸಿಗದ ಜಿಂಕೆಯೇ ಕಣ್ಣ
ನಿನ್ನ ಜಾಲಕ್ಕೆ ಬಿದ್ದ ಪ್ರೀತಿ ನಾನ
ಬಾ ಒಲವೆ ನನ್ನ ಒಲವೆ ನಿ ನೋಡು ಚೆಲುವೆ
ನನ್ನ ಪ್ರೀತಿ ನಿನಗೆಲ್ಲು ಸಿಗದ ಗಣಿಯೆ

ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ

ನಿನ್ನ ಕಣ್ಣುಗಳು ಹೇಳಿದ್ದು ಸುಳಲ್ಲ
ನಿ ನನ್ನ ಪ್ರೀತಿ ಮಾಡಿದ್ದು ಕನಸಲ್ಲ
ಅಡಿ ಅಡಿಗೂ ಮುಳ್ಳು ನನ್ನ ಎದೆ ಚುಚ್ಚಲು
ಸಾವಿರ ಪ್ರೀತಿ ಹೂವು ನನ್ನ ತಬ್ಬಿ ಬಾಚಲು
ಇ ಪ್ರಿತಿಯಂಬುದು ಕ್ಷಣ ಕ್ಷಣ ನನ್ನ ಕೊಂದಿದೆ
ನಿನ್ನ ಆಸೆ ಗೋಪುರ ನನ್ನ ಕಟ್ಟಿಹಾಕಿದೆ
ನಿನ್ನ ಗಿಂಜಿ ಕೇಳುವೆ ನನ್ನ ಕೊಂದು ಕೇಳುವೆ
ನಿನೆಷ್ಟೇ ಮರೆಮಾಚಿದರು ನಿನ್ನ ಕಣ್ಣು ಹೇಳದೆ ಬಿಡದು
ನನ್ನ ನಿನ್ನ ಸೇರಿಸದೆ ಇರದು
ಬಾ ಒಲವೆ ನನ್ನ ಒಲವೆ ನಿ ನೋಡು ಚೆಲುವೆ
ನನ್ನ ಪ್ರೀತಿ ನಿನಗೆಲ್ಲು ಸಿಗದ ಗಣಿಯೆ


ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ

ನೀನು ಸುಂದರ ಹುತೋಟದ ಚೆಲುವಿನ ಹೂವ
ನಾ ನಿನ್ನ ಅರಸಿ ಬಂದಿರುವ ದುಂಬಿಯ ಸಾವ
ಆದ ನೆನಸಿಕೊಂಡರೆ ಎದೆಯಲಿ ಮಿಡುಕಿದೆ ಜೀವ
ನಿನ್ನ ಪ್ರೀತಿ ಆಸರೆ ಬಯಸೀದೆ ತಪ್ಪ
ನಿನ್ನ ಆಸೆಯಲ್ಲಿ ನನ್ನ ನಾ ಕಳೆದು ಕೊಂಡದ್ದು ಬೆಪ್ಪ
ನಿ ಯಾರಿಗಾದರು ನಿನ್ನ ಪ್ರೀತಿ ತುಂಬಿಸಿ
ಹೃದಯವು ಕೊಡುವುದು ಸತ್ಯ ವಾದರೆ
ನನಗೆ ಒಮ್ಮೆ ಎಸೆದು ನೋಡು
ನಾ ಹೇಗೆ ಪುಜಿಸಿಟ್ಟು ಕಾಪಾಡುವೆ ನೋಡು
ಬಾ ಒಲವೆ ನನ್ನ ಒಲವೆ ನಿ ನೋಡು ಚೆಲುವೆ
ನನ್ನ ಪ್ರೀತಿ ನಿನಗೆಲ್ಲು ಸಿಗದ ಗಣಿಯೆ


ಚೆಲುವೆ ಚೆಲುವೆ ನನ್ನ ಒಲವೆ ನಿನ್ನಲಿ
ನಿನ್ನ ಚೆಲುವಿಗೆ ಆಳಿದೆ ಹೋದೆ ನಾನಿಲ್ಲಿ
ಐದೇ ನಿಮಿಷ ಐದೇ ನಿಮಿಷ ಕಂಡಾಗಲೇ
ನನ್ನಾಸೆ ಎದೆಯ ತಳ್ಳಿದೆ ಬೆಂಕಿಯಲ್ಲೇ
ನಾನೆಷ್ಟೋ ಬಣ್ಣದ ಕನಸುಗಳ ಕಂಡೆ
ನನ್ನ ನಿನ್ನ ಸೇರಿಸಲೆಂದೇ ಬಂದೆ
ಬಂದ ವೇಗದಲ್ಲಿ ಹೆದರಿ ನಿಂದೆ

~ ಸಂಜು ~

ನೀ ನಿಲ್ಲದೆ

ನೀ ನಿಲ್ಲದೆ
 

 ನೀ ನಿಲ್ಲದೆ ನೀ ನಿಲ್ಲದೆ
ಕುಶಿ ಇಲ್ಲ ಬದುಕಿಲ್ಲ
ನನ್ನ ಎದೆಗೆ ನೆಮ್ಮದಿ ಇಲ್ಲ
ನನ್ನ ಬದುಕು ನೀನೆ
...
ನೀನೆ ನನ್ನ ಉಪಾಸನೆ
ನೀನೆ ನನ್ನ ಆರಾಧನೆ

ಹೇಗೆ ನಿನಗೆ ಅರ್ಥೈಸಲಿ
ಇನ್ಯಾರಿಗೆ ಹೇಳಲಿ
ಇನ್ನ ಎಲ್ಲಿಗೆ ಹೋಗಲಿ
ಇನ್ಯಾವ ದೇವರಿಗೆ
ನನ್ನ ಪೂಜೆ ಅರ್ಪಿಸಲಿ

ನಿನ್ನ ಹಾಣೆ ನಿನ್ನ ಹಾಣೆ
ಓ ನನ್ನ ಒಲವೆ
ನಿನಗಾಗಿ ನಿನಗಾಗಿ
ನಾ ಹುಚ್ಚನಾದೆ
ಹೇಗೆ ಬದುಕಲಿ ನೀ ಹೇಳು
ಸಾವು ಕೂಡ ಅತ್ತಿರ ಸುಳಿಯುತ್ತಿಲ್ಲ
ಸಾವು ಕೂಡ ಅತ್ತಿರ ಸುಳಿಯುತ್ತಿಲ್ಲ
ನನ್ನ ಬದುಕು ನೀನೆ
ನೀನೆ ನನ್ನ ಉಪಾಸನೆ
ನೀನೆ ನನ್ನ ಆರಾಧನೆ

ಓ ನನ್ನ ದೇವರೇ
ನಿನ್ನ ಬಿಟ್ಟು ನಾ ಯಾರಿಗೆ ಕೆಳಲ್ಲಿ
ನಿನ್ನ ಬಿಟ್ಟು ನನಗೆ ಯಾರಿರುವರು
ನನ್ನಂತೆ ಪ್ರೀತಿ ಹುಟ್ಟಿಸು ಅವಳಲ್ಲಿ
ನನಗಾಗಿ ಕಂಬನಿ ತರಿಸು ಕಣ್ಣಲಿ
ಅವಳ ನೆನಪು ಇಷ್ಟು ಸತಾಯಿಸಿದೆ
ನನ್ನ ಬದುಕು ನೀನೆ
ನೀನೆ ನನ್ನ ಉಪಾಸನೆ
ನೀನೆ ನನ್ನ ಆರಾಧನೆ

ನೀ ನಿಲ್ಲದೆ ನೀ ನಿಲ್ಲದೆ
ಕುಶಿ ಇಲ್ಲ ಬದುಕಿಲ್ಲ
ನನ್ನ ಎದೆಗೆ ನೆಮ್ಮದಿ ಇಲ್ಲ

~ ಸಂಜು ~
 

ನಿನ್ನ ಹಕ್ಕು

ನಿನ್ನ ಹಕ್ಕು
 

 ಓ ಮನಸ್ಸೇ ನಿನಗೇಕೆ
ಅಂಜಿಕೆ ಶಂಕೆ
ನಿನ್ನಗಾಗೆ ಈ ಬೆಳ್ಳಂ ಬೆಳ್ಳಗೆ
ಶುಭ ಶುಭ ಅಂದಿದೆ
...
ಬೆಳಗಾಗೆ ನಿ ಎದ್ದು
ಏನೇನೋ ಚಿಂತಿಸುವೆ
ನಡೆದದ್ದೆಲ್ಲ ಒಳೆಯದಕ್ಕೆ
ಅಂತ ಸುಖಪಡು ಅದು ನಿನ್ನ ಹಕ್ಕೆ

ಕಳೆದದ್ದಕ್ಕೆ ಕೊರಗುತ್ತ
ಕೈಲಿರುವುದ ಬಿಡಬೇಡ
ನಾನು ನೀನು ತಂದದ್ದು ಏನು ಇಲ್ಲ
ಹೋಗುವಾಗ ಕೊಂಡೊಯುವುದು ಇಲ್ಲ
ಇರುವ ಬದುಕು ನಮ್ಮದು
ಅದರಲಿ ನೆಮ್ಮದಿ ಪಡೆಯುವುದು
ಆಗುವುದೆಲ್ಲ ಒಳೆಯದಕ್ಕೆ
ಅಂತ ಸುಖಪಡು ಅದು ನಿನ್ನ ಹಕ್ಕೆ

ಯಾರಿಗಾಗಿ ಈ ತಪ್ಪಿತಸ್ಥ ಭಾವನೆ
ನಿನ್ನ ಸುಖಕ್ಕೆ ಯಾರಿಗಿಲ್ಲ ಕಾಮನೆ
ನಿನ್ನ ಸುಖಕ್ಕೆ ನಿನ್ನೆ ಹಕ್ಕುದಾರಳು
ಇದಕ್ಕೆ ದುಖ ಕೊಟ್ಟು ಮಾಡದಿರು ವಂಚನೆ
ಪಡೆದದ್ದೆಲ್ಲ ಒಳೆಯದಕ್ಕೆ
ಅಂತ ಸುಖಪಡು ಅದು ನಿನ್ನ ಹಕ್ಕೆ

ಎಷ್ಟು ತ್ಯಾಗ ಮಾಡಿ ಬದುಕುವೆ
ಪ್ರೀತಿ ಬಿಟ್ಟೆ, ಆಸೆ ಬಿಟ್ಟೆ, ಬದುಕ ಕೊಟ್ಟೆ
ಇದ್ದ ಭಾವನೆಗಳು ಸತ್ತೆ ಹೋಯಿತು
ಅಸೆ ಕನಸುಗಳು ಸುಟ್ಟು ಬಸ್ಮವಾಯಿತು
ಇನ್ನು ತ್ಯಾಗ ಮಾಡಿ ಏನು ಗಳಿಸುವೆ
ಬದುಕೇ ಕಳೆದು ಹೋದಮೇಲೆ ಯಾರ ಕೇಳುವೆ
ಅಪ್ಪ ಅಮ್ಮ ಅಣ್ಣ ತಮ್ಮ
ಸ್ನೇಹ, ಪ್ರೀತಿ, ಮಮತೆ ಇವುಗಳಲ್ಲೇ ನಿನ್ನ ಬದುಕೇ
ಅಂತ ಸುಖಪಡು ಅದು ನಿನ್ನ ಹಕ್ಕೆ

ಎಣಿಸಿದರು ಬದುಕಿನಲ್ಲಿ ಕ್ಷಣಗಳ
ಪ್ರತಿ ಕ್ಷಣದಲ್ಲೂ ಹುಡುಕು ಇರುವ ಬದುಕ ಕಣಗಳ

~ ಸಂಜು ~

ಕಳೆದು ಹೋದ ದಿನಗಳು

ಕಳೆದು ಹೋದ ದಿನಗಳು
ಹಾಗೇನು ಇಲ್ಲ ನನ್ನ ಜೀವನ ಕೆಟ್ಟು ಹೋಗಿದೆ ಅಂತ
ಆದರೆ ನನ್ನ ಶಾಲಾ ಕಾಲೇಜಿನ ಜೀವನ ಬೇರೆಯೇ ಇತ್ತು

ನನಗೆ ನಗು ಬರುವುದಿಲ್ಲ ಅಂತ ಏನು ಇಲ್ಲ
ಸ್ನೇಹಿತರೊಂದಿಗೆ ನಕ್ಕಿ ನಲಿದ ನಗುವೇ ಬೇರೆ ಇತ್ತು

...
ಜೀವನದ ಒತ್ತಡಗಳಿಂದ ರಾತ್ರಿಗಳು ಕಳೆಯಲು ಆಗುತ್ತಿಲ್ಲ ಅಂತ ಏನು ಇಲ್ಲ
ಆದರೆ ಪರೀಕ್ಷೆಗೆಂದು ಇಡಿ ರಾತ್ರಿ ಕಳೆದ ರಾತ್ರಿಗಳ ಹಾಗೆ ಇಲ್ಲ

ಹಾಗೇನು ಇಲ್ಲ ಜೀವನದಲ್ಲಿ ಗಳಿಸಿದಕ್ಕೆ ಸಂತೋಷವಿಲ್ಲ
ಕೇವಲ ಉತಿರ್ಣನಾಗುವಷ್ಟು ಅಂಕ ತೆಗೆದು ಕುಶೀ ಪಟ್ಟಷ್ಟು ಇಲ್ಲ

ಹಾಗೇನು ಇಲ್ಲ ಈಗ ಜೀವನ ಸುಖವಾಗಿ ಇರಲಾಗಿತ್ತಿಲ್ಲ
ಆದರೆ ಸ್ನೇಹಿತರೊಂದಿಗೆ ಇದ್ದ ಸುಖ ಜೀವನದಂತೆ ಇಲ್ಲ

ಸಂಜು

ಓ ನನ್ನ ಗೆಳತಿ

ಓ ನನ್ನ ಗೆಳತಿ

 ನಿನ್ನ ಬದುಕಿಗೆ ಕಹಿ ರಸವಾದೆ
ನೀನಿತ್ತ ಒಲವಿಗೆ ಬರಿ ನೋವ ತಂದೆ
ನಾ ಏನು ಪಾಪ ಮಾಡಿದೆನೋ
ನಿನ್ನ ಒಲವ ಉಳಿಸಿಕೊಳ್ಳಲು ಅನರ್ಹನಾದೆ
ಅದಾವ ಗಳಿಗೆಯಲ್ಲಿ ನಾ ನಿನ್ನ ಬದುಕಿಗೆ ಬಂದೆ
ಬೇರೇನೂ ಕೊಡಲಿಲ್ಲ ಬರಿ ನೋವು ಸಂಕಟ ತಂದೆ
ಏನೇನೋ ಆಸೆ ಕೊಟ್ಟೆ ಏನೇನೋ ಕನಸ ಕೊಟ್ಟೆ
ಕೊನೆಗೆ ಬರಿ ನೋವಿನ ಕಡಲಾಗಿ ನಿನ್ನ ಮುಂದೆ ನಿಂದೆ
ಸಾದ್ಯವಾದರೆ ಕ್ಷಮೀಸಿ ಬಿಡು
ನಿನ್ನಿಂದ ತಿರಸ್ಕೃತ ಬದುಕು ಸಹಿಸಲಾರೆ
ಪ್ರತಿ ಕ್ಷಣ ನರಕ ಸುಡುಗಾಡು
ನಾ ಹೋಗುತ್ತಿರುವೆ ಗೆಳತಿ
ಮತ್ತೆ ಬಾರದ ಲೋಖಕ್ಕೆ
ನಿನ್ನ ಬದುಕಿನಿಂದ ದೂರ
ಮತ್ತೆಂದು ಬರಲಾರೆ
ನಿನ್ನಗೆ ದುಖ ತರಲಾರೆ
ಸುಖವಾಗಿ ಇರು
ನಿನ್ನ ಪ್ರೀತಿ ಹೊತ್ತೊಯುತ್ತಿರುವೆ
ಅದೊಂದೇ ನನಗೆ ಶ್ರೀ ರಕ್ಷೆ
ನಿನ್ನ ನೆನಪ ಎದೆಯಲ್ಲಿ ಬಿತ್ತಿ ಸಾಗುತ್ತಿರುವೆ
ಮುಂದಿನ ಬದುಕಿನ ಕ್ಷಣಗಳಿಗೆ
ನನ್ನನೆಂದು ದ್ವೇಷಿಸದೆ ನನ್ನ ಬೀಳ್ಕೊಡು
ನನಗಾಗಿ ಇನ್ನೆಂದು ಕಣ್ಣಿರ ತರಬೇಡ
ನನ್ನ ಕಳುಹು ಗೆಳತಿ ಸಾದ್ಯವಾದರೆ
ಕ್ಷಮಿಸಿಬಿಡು ಗೆಳತಿ

ನಿನ್ನ ಬದುಕಿನಿಂದ ಬಲು ದೂರ
ಸಾಗುತ್ತಿರುವ ನಿನ್ನ ಗೆಳೆಯ
ಸಂಜು
 

Tuesday, August 7, 2012

ನನ್ನದೇ ಕಥೆ ಇನ್ನು ಹೆಸರಿಟ್ಟಿಲ್ಲ



ಸಂಜೆ ರಂಗು ತಿಳಿಗೆಂಪು ಆಗಸದಲ್ಲಿ, ಕೆಮ್ಮಣ್ಣ ಓಕಳಿ ಮೈದಾನದಲ್ಲಿ ಗದ್ದಲವೋ ಗದ್ದಲ್ಲ ಮಕ್ಕಳು ಎಲ್ಲೆಡೆ ಆಟದಲ್ಲಿ ಕೇಕೆ, ಕ್ರೆಕೆಟ್, ಚುಚೆಂಡು, ಲಗೋರಿ , ಆಟಗಳಲ್ಲಿ ಮಕ್ಕಳು ಮಗ್ನ ಸಂಜೆ ೬.೩೦ ಆದದ್ದೆ ತಡ ಯಾರೋ ಒಬ್ಬ ಬೊಬ್ಬೆ ಹೊಡೆದ ಹುಚಪ್ಪಣ್ಣ ಬತ್ತಾವರೆ ಓಡ್ರೋ ಅಂತ ಕೆಲವೇ ಕ್ಷಣದಲ್ಲಿ ನಿಶಬ್ದ ಎಲ್ಲರು ಓಟ ಕಿತ್ತು ಓಡಿದವರೇ ಒಮ್ಮಲ್ಲೇ ಹಾರಾಡುತಿದ್ದ ಕೆಮ್ಮಣ್ಣು ಹಾಗೆ ನೆಲದಮೇಲೆ ನಿದ್ರೆಗೆ ಶರಣಾಗುತಿತ್ತು , ನಾನು ಕೂಡ ಎದ್ದು ಬಿದ್ದು ನನ್ನ ಕೊಣೆ ಸೇರಿದೆ ಪುಸ್ತಕ ಹಿಡಿದು ೩ ಒಂಸಾ ೩ ೩ ಟುಸಾ ಫೋರ್  ಅಂತ ಸುಮ್ಮನೆ ಗೊಣಗುತ್ತ ಕೂತೆ ಆಗಲೇ ನನಗಿಂತ ಮುಂಚೆ ನನ್ನ ತಂಗಿ ಓದಲು ಶುರು ಮಾಡಿದಳು ಅವಳಿಗೂ ನನಗೂ ಮೊದಲಿಂದಲೂ ಹಾವು ಮುಂಗುಸಿ ಅವಳ ಮೇಲೆ ನಾನು ಚಾಡಿ ಹೇಳೋದು ಅವಳು ನನ್ನ ಮೇಲೆ ಹೇಳೋದು ಸರ್ವೇ ಸಾಮಾನ್ಯ , ಆದರೆ ನಮ್ಮ ತಂದೆ ಅಂದರೆ ನಮಗಷ್ಟೇ ಅಲ್ಲ ಇಡಿ ಏರಿಯದಲ್ಲೇ ಎಲ್ಲರಿಗು ಭಯ ಗೌರವ ಅವರ ಅಫಿಸಿನ ಬಸ್ಸು ಬರುವೆ ವೇಳಗೆ ಇಡಿ ಮೈಧಾನ ನಿಶಬ್ಧ ಮತ್ತು ನಮ್ಮ ಮನೆಯ ಅಂಗಳದಲ್ಲಿ ಸುತ್ತ ಮುತ್ತಲಿನ ಹೆಂಗಸರ ಮೀಟಿಂಗ್ ಕೂಡ ಖುಲಾಸೆ

ನಮ್ಮದು ಮದ್ಯಮ ವರ್ಗದ ಕುಟುಂಬ ತಂದೆ ಸಾರ್ಕರಿ ನೌಕರರು ಭುಮಾಪನ ಇಲಾಖೆ ನಿಷ್ಠಾವಂತ ಅಧಿಕಾರಿ ಲಂಚ್ಚ ತೆಗೆದುಕೊಳ್ಳುವವರಿಗೆ ಸಿಂಹ ಸ್ವಪ್ನ ಅದ್ದುದರಿಂದ ಅವರು ವರ್ಗಾವಣೆ ಆಗದ ಉರಿಲ್ಲ ತುಂಬಾ ಬಡತನದಲ್ಲೇ ಬೆಳೆಸಿದರು ನಮ್ಮನು ನಾವು ಮೂರೂ ಜನ ಗಂಡು ಮಕ್ಕಳು ಒಬ್ಬಳೇ ತಂಗಿ ಅಮ್ಮ ಗೃಹಲಕ್ಷ್ಮಿ ಚಿಕ್ಕಂದಿನಿಂದಲೇ ಬಹಳ ಸಿಸ್ತಿನಿಂದ ಬೆಳೆದ ವಾತಾವರಣ

ಆದರು ನಮ್ಮ ಮೂವರಲ್ಲಿ ಯಾರಲ್ಲೂ ವಿಧ್ಯೆ ಅಷ್ಟಾಗಿ ಒಲಿಯಲಿಲ್ಲ ಅದೊಂದೇ ಕೊರತೆ ನಮ್ಮ ತಂದೆಗೆ ಇದದ್ದು ತಂಗಿ ನಮ್ಮೆಲರನ್ನು ಮೀರಿಸಿದವಳು ಆ ವಿಷಯದಲ್ಲಿ ಆದುದರಿಂದ ಅವಳು ಅಪ್ಪನಿಗೆ ಅಚ್ಚು ಮೆಚ್ಚು ನಾವೆಲ್ಲಾ ಸ್ವಲ್ಪ ದೂರದಲ್ಲೇ ನಿಂತು ನೋಡುತಿದ್ದೆವು ಅವರನ್ನ ಏನಾದರು ಕೇಳುವುದು ಎಲ್ಲ ನಮ್ಮ ಅಮ್ಮನ ಜವಾಬ್ಧಾರಿ



ಇಲ್ಲಿಗೆ ಮನೆಯ ಪಿಟಿಕೆ ಮುಗಿಸಿ ನನ್ನ ಕಥೆಗೆ ಬರುತ್ತೇನೆ ,

ನಾನೊಬ್ಬ ಸ್ನೇಹ ಜೀವಿ ಮತ್ತು ತುಂಬಾ ಭಾವುಕ ಚಿಕ್ಕಂದಿನಿಂದಲೇ ಎಡವುತ್ತಾ ಕುಂಟುತ್ತ ಸಾಗಿತ್ತು ನನ್ನ ವಿಧ್ಯಾಭ್ಯಾಸ ಆದರೆ ಎಲ್ಲಿಯೂ ಅನೂತ್ತಿರ್ಣನಾಗಿರಲಿಲ್ಲ ಅಂಕಗಳು ಮಾತ್ರ ೩೫ ರ ಮೇಲೆ ದಾಟುತಿರಲಿಲ್ಲ ಹೇಗೋ ಎಸ ಎಸ ಎಲ್ ಸಿ ಅಲ್ಲಿ ಅದೇನು ಜಾದು ನಡೆಯಿತೋ ಗೊತ್ತಿಲ್ಲ ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ಅದೊಂದೇ ಈಗಲೂ ನನಗೆ ಹೆಗ್ಗಳಿಕೆ

ಆಮೇಲೆ ಕಾಲೇಜು ವಿಜ್ಞಾನ ವಿಷಯದಲ್ಲಿ ಪಡೆದ ಕುರ್ಚಿ , ಅಪ್ಪನಿಗೆ ನನ್ನನು ವೈದ್ಯ ಓದಿಸಬೇಕೆಂಬ ಆಸೆ ಆದರೆ ನನ್ನ ಸ್ನೇಹಿತರು ನನಗೆಂದೆ ಕಾಯುತಿದ್ದರು ಕಾಲೇಜಿನ ಮುಖದ್ವಾರದಲ್ಲಿ , ಇಷ್ಟು ದಿನ ಮನೆಯಲ್ಲಿ ಸಿಸ್ತಿನಿಂದ ಬೆಳೆದವನಿಗೆ ಒಮ್ಮೆಲೇ ಸ್ವರ್ಗ ಸಿಕ್ಕಷ್ಟು ಕುಶಿ ಬಣ್ಣ ಬಣ್ಣದ ವಸ್ತ್ರಗಳಲಿ ಹುಡುಗಿಯರು ಹುಡುಗರು ಎಲ್ಲರು ಶ್ರೀಮಂತ ಕುಟುಂಬದವರೇ ದ್ವಿತೀಯ ದರ್ಜೆಯಲ್ಲಿ ಪಾಸು ಮಾಡಿದರು ನನೆನ್ನೋ ಮಹಾ ಕಡೆದು ಕಟ್ಟೆ ಹಾಕಿದ ಹಾಗೆ ಬೀಗಿದರೆ ಕೊನೆಗೆ ನನಗೆ ಸಿಕ್ಕ ಎಚ್ ವಿಭಾಗ ಅಲ್ಲಿ ಎಲ್ಲರು ೩೫ ರಿಂದ ೪೦ರ ಒಳಗಿನ ಶೇಕಡ ದವರೆ ಸ್ವಲ್ಪ ಸಿರಿವಂತರೆ ಅಗಂತ ಬಡ ವಿದ್ಯರ್ತಿಗಳ ಗುಂಪು ಇಲ್ಲವೆಂದಲ್ಲ ಇತ್ತು ಆದರೆ ಮನಸ್ಸು ಸಿರಿವಂತರ ಸಹವಾಸ ಬಯಸಿತು ಏಕೆಂದರೆ ಕಪ್ಪು ಬಿಳುಪಿಗೂ ರಂಗು ರಂಗಿಗು ಇದ್ದ ವ್ಯತ್ಯಾಸವದು ಆಯ್ಕೆ ನಿಶ್ಚಿತವಾಗಿತ್ತು

ಅವರ ಜೊತೆಗಿನ ಒಡನಾಟ ಅಷ್ಟೇನೂ ಕುಶಿ ಕೊಡುತ್ತಿರಲಿಲ್ಲ ಏಕೆಂದರೆ ಅವರ ಸಮಕ್ಕೆ ನನ್ನ ಕಿಸೆಯಲ್ಲಿ ಕಾಸು ಇರುತ್ತಿರಲಿಲ್ಲ ರಾತ್ರಿ ಅಪ್ಪ ಮಲಗಿದ ಮೇಲೆ ಅವರ ಪ್ಯಾಂಟಿನ ಕಿಸೆಯಲ್ಲಿ ಸಿಕ್ಕ ಚೆಲ್ಲರೆಗಳು ಸಾಕಾಗುತ್ತಿರಲಿಲ್ಲ ಇದಕ್ಕೆ ನನಗೂ ಅಮ್ಮನಿಗೂ ಯಾವಾಗಲು ಜಗಳ ಬಿಡಿ ಅದು ಬೇರೆ ವಿಷಯ ಅವರು ತಡಕುವು ಮೊದಲೇ ನಾನು ಕಾಲಿ ಮಾಡಿರುತಿದ್ದೆ , ಆ ಸಿಕ್ಕ ಚೆಲ್ಲರೆಯಲ್ಲಿ ಸಂಗಂ, ತ್ರಿಭುವನ್, ಸಂತೋಷ್, ಚಿತ್ರ ಮಂಧಿರಗಳಿಗೆ ಹೋಗಲಾಗುತಿರಲಿಲ್ಲ ಅವರೊಟ್ಟಿಗೆ ಅವರು ಮೆಜೆಸ್ಟಿಕ್ ಬಸ್ಸು ಅಥವಾ ಬೈಕು ಹೊಡಿಸಿಕೊಂಡು ಹೋದಮೇಲೆ ನಾನು ನವರಂಗ್ ಅಥವಾ ಪ್ರಸನ್ನ ಪ್ರಮೋದ್ ಇವುಗಳಿಗೆ ಗಾಂಧೀ ಕ್ಲಾಸ್ ಗೆ ಹೋಗಲು ಸಾಕಾಗುತ್ತಿತ್ತು

ಮುದುವರೆಯುವುದು ......