Friday, August 24, 2012

ಅಪರಿಚಿತ ಬೇಟಿ

ಅಪರಿಚಿತ ಬೇಟಿ

ಎರಡು ದಿನದ ಅತಿಥಿಯಾಗಿ
ಹೋಗಿ ಬರುವೆ ಎಂದು ಹೋದಳು
ಏನೋ ಹೇಳಬೇಕಿತ್ತು ಅನಿಸಿದ್ದು
ಹೇಳದೆ ಮನದಲ್ಲಿ ಉಳಿಯಿತು
ಅವಳ ಯಾರೋ ನಾ ಯಾರೋ
ಆದರು ಕಣ್ಣಿನಲ್ಲೇ ಏನೋ ಹೇಳಿದ್ದಳು
ದೊರದಲ್ಲೇ ಏನೇನೋ ಸನ್ನೆ
ಆದರು ಮನದಲ್ಲಿ ಸಾವಿರ ಪ್ರೆಶ್ನೆ
ಹೋಗಬೇಕಿದ್ದ ದಾರಿ ದೊರ
ನಾನಿಂದು ಕಾಯುತ್ತಿರುವೆ ಅವಳ ಅಪಾರ
ಹೇಳದ ಕೇಳದ ನಿ ಯಾರೋ ಎಂದು
ಹೊರಟೆ ಹೋದೆ
ಅವಳ ಕಳುಹಿಸಿ ಕೊಟ್ಟ ಮೇಲು
ಏನೋ ಒಂದು ಕಳವಳ
ನಗು ನಗುತ್ತಲೇ ಬೈ ಎಂದು
ಹೋದೆ ನೀ ಏಕೆ ಸರಸರ
ಅವಳ ತಡೆದು ಹೇಳಬೇಕು
ಮನದ ಮಾತು ತಿಳಿಸಬೇಕು
ಅಂತ ಅನಿಸುವಾಗಲೇ
ಸಂಜೆ ಸೂರ್ಯ ಮುಳುಗಿದಂತೆ
ಮಾಯವಾದೆ
ಎಲ್ಲೇ ಇದ್ದರು ಸುಖವಾಗಿ ಇರು
ನನ್ನ ನೆನಪಾದರೆ ಬಂದು ಬಿಡು
ಗೆಳೆಯೇ ಗೆಳೆಯ ಅಂತ ಹೇಳುತ್ತಲ್ಲಿ
ನಮ್ಮ ಗೆಳತನವನ್ನು ಜೊತೆಯಲ್ಲೇ
ಯಾಕೆ ಹೊತ್ತು ಹೊಯಿದೆ

ಸಂಜು

No comments:

Post a Comment