Tuesday, October 30, 2012

ಚಿಂತೆಯಾಯಿತು


ಚಿಂತೆಯಾಯಿತು

ನೋಡಲು ಕನ್ನಡಿಯಲ್ಲಿ ನನನ್ನೇ
ಸೋಜಿಗವಾಯಿತು !!
ಹುಡುಕಲು ನಾನು ನನನ್ನೇ
ಚಿಂತೆಗೀಡಾಯಿತು
ಯಾವಾಗಲು ಕಣ್ಣಲ್ಲಿ ನಿನ್ನ ಕಾಣಲು
ಸಂತೋಷವಾಯಿತು
ಹುಡುಕಲು ನಿನ್ನ ಕಣ್ಣಲಿ ನನನ್ನೇ
ನನ್ನ ಆಸೆ ಕಣ್ಣೀರಾಯಿತು
ಚಿಂತುಸಿತ್ತಿದೆ ಇದೆಲ್ಲ ನನ್ನದೇ
ಒಳ ಭಾವ
ನಿನ್ನ ಭಾವ ತಿಳಿಯಲು ಹೋಗಲು
ಉತ್ಸಾಹವಾಯಿತು
ನಾನಿಲ್ಲದಿರಲು ಅಲೆಲ್ಲು
ಮನ ಮರುಕಪಟ್ಟಿತು
ಕನಸಿನಲ್ಲಿ ಬಣ್ಣ ಬಣ್ಣದಿ ನೀನ್ನ ಕಾಣಲು
ಎಲ್ಲೋ ತೆಲಿದಂತಾಯಿತು !!
ಆದರಲ್ಲೂ ನಿನ್ನ ತಿರಸ್ಕಾರಕ್ಕೆ
ಬಣ್ಣ ಅಳಿಸಿ ಕತ್ತಲಾಯಿತು
ದಾರೀಲಿ ಅಲಲ್ಲಿ ನಿನ್ನ ಕಾಣಲು
ಮನ ಹಠ ಮಾಡಿತು !!
ಹೃದಯವ ಕೈಯಲ್ಲಿ ಹಿಡಿದು
ನಿನಗೆಂದು ತರಲು ಗಾಯವಾಯಿತು
ಕೈಯಲ್ಲಿ ಹಿಡಿದು

ನಿನಗೆಂದು ತರಲು ಗಾಯವಾಯಿತು

ಸಂಜು

ನಿನ್ನ ನೋಡುವ ಆಸೆ ಏಕೆ ಈ ಕಣ್ಣ ತುಂಬ

ನಿನ್ನ ನೋಡುವ ಆಸೆ ಏಕೆ ಈ ಕಣ್ಣ ತುಂಬ
 
ನಿನ್ನ ನೋಡುವ ಆಸೆ ಏಕೆ ಈ ಕಣ್ಣ ತುಂಬ
ಯಾಕೆ ಕಾಣುವುದಿಲ್ಲ ಬೇರೆ ಯಾರು
ನಿನ್ನ ಹಾಗೆ
ನೀನೆ ಹೇಳು ನಾ ಬಂದು ಕೇಳಲೇ ನಿನ್ನ
ನಿನ್ನ ನೋಡುವ ಆಸೆ ಏಕೆ ಈ ಕಣ್ಣ ತುಂಬ

ಸಿಗಬಹುದು ಸ್ನೇಹಿತರು ನಿನಗೆ ಹಲವಾರು
ಯಾರು ಪ್ರೀತಿಸುವುದಿಲ್ಲ ನಿನ್ನ ಕೇಳು ನನ್ನ ಹಾಗೆ
ಯಾರು ಬಾಳುವುದಿಲ್ಲ ನಿನಗಾಗಿ ಕೇಳು...ನನ್ನ ಹಾಗೆ
ನಿನ್ನ ನೋಡುವ ಆಸೆ ಏಕೆ ಈ ಕಣ್ಣ ತುಂಬ

ನೀನು ಸಿಕ್ಕಿದು ಒಂದು ಅನಿರೀಕ್ಷಿತವಾಗಿತ್ತು ಅಂದು
ಆದರೆ ನೀನು ನನಗೆ ಕಾಣಿಸಲಿಲ್ಲ ಹೊಸಬಳಂತೆ ಎಂದು
ಎಲ್ಲೋ ಕಡಿದು ಹೋಗಿದ್ದ ಸಂಬಂಧ ಮತ್ತೆ ಸೇರಿದ ಹಾಗೆ ಅನಿಸಿದ್ದು
ಕೇಳು ಈ ಹೃದಯ ತುಂಬ
ನಿನ್ನ ನೋಡುವ ಆಸೆ ಏಕೆ ಈ ಕಣ್ಣ ತುಂಬ

ಸಂಜು
 
 
 

Sunday, October 28, 2012

ಇಷ್ಟು ಹೇಳು ನನಗೆ ನನ್ನ ಬದುಕೇ


ಇಷ್ಟು ಹೇಳು ನನಗೆ ನನ್ನ ಬದುಕೇ

ಇಷ್ಟು ಹೇಳು ನನಗೆ ನನ್ನ ಬದುಕೇ
ಪ್ರೀತಿ ದಾರಿ ಹಿಡಿದ ಸಂಗಾತಿಗಳು
ಇಂದು ಅಪರಿಚಿತರು ಯಾಕೆ

ಇಷ್ಟು ಹೇಳು ನನಗೆ ನನ್ನ ಬದುಕೇ

ಇಷ್ಟು ಹೇಳು ನನಗೆ ನನ್ನ ಬದುಕೇ
ಹುವುಗಳಲ್ಲೇ ಯಾಕೆ ಬಾಡಿ ಬಿದ್ದಿವೆ
ಬೆಳಧಿಂಗಳ ಚಂದ್ರನು ಯಾಕೆ
ಮಂಕಾಗಿ ಹುಟ್ಟಿದೆ

ಇಷ್ಟು ಹೇಳು ನನಗೆ ನನ್ನ ಬದುಕೇ

ನೆನ್ನೆ ನನ್ನ ಬಾಹುಗಳಲ್ಲಿ ಇದ್ದವಳು
ತನ್ನ ಕಣ್ಣಿನಲ್ಲಿ ನನ್ನ ಬಿಂಬ ತೋರಿದವಳು
ಆ ಬೆಚ್ಚನೆಯ ಬಿಸಿ ಉಸಿರು
ಈಗ ನೆನಪಾಗಿ ಉಳಿದದ್ದು ಯಾಕೆ

ಇಷ್ಟು ಹೇಳು ನನಗೆ ನನ್ನ ಬದುಕೇ

ಇಬ್ಬರು ಕುಡಿ ಹಾಡಿದ ಧ್ವನಿ
ಇನ್ನು ಮಾಡುತ್ತಿದೆ ಮಾರ್ಧನಿ
ಈಗ ಅವಳ ಸ್ವರ ಕೇಳುತ್ತಿಲ್ಲ
ಒಂಟಿಯಾಗಿ ಚೀರಿದೆ
ಸುರಿಸುತ್ತ ಈ ಹೃದಯ ಕಂಬನಿ

ಇಷ್ಟು ಹೇಳು ನನಗೆ ನನ್ನ ಬದುಕೇ

ನಿನಗೆ ನಾನು ವಂಚಿಸಿಲ್ಲ
ನನಗೆ ನೀನು ವಂಚಿಸಿಲ್ಲ
ನಿನಗೆ ನನ್ನ ಮೇಲೆ ಪ್ರೀತಿ ಕಮ್ಮಿಯಾಗಿಲ್ಲ
ನನಗೆ ನಿನ್ನ ಮೇಲೆ ಪ್ರೀತಿ ಕಮ್ಮಿಯಾಗಿಲ್ಲ
ಆದರು ಈ ನಮ್ಮ ಭಾವನೆಗಳು ಯಾಕೆ ಮಲಗಿವೆ
ನಮ್ಮಿಬ್ಬರ ನಡುವೆ ಈ ಅಂತರದ ಹಾದಿ ಯಾಕೆ ಮೂಡಿದೆ

ಇಷ್ಟು ಹೇಳು ನನಗೆ ನನ್ನ ಬದುಕೇ
ಪ್ರೀತಿ ದಾರಿ ಹಿಡಿದ ಸಂಗಾತಿಗಳು
ಇಂದು ಅಪರಿಚಿತರು ಯಾಕೆ

ಇಷ್ಟು ಹೇಳು ನನಗೆ ನನ್ನ ಬದುಕೇ

ಸಂಜು

ಕವಲು ದಾರಿ


ಕವಲು ದಾರಿ

ಎಕಿಂತ ಬದುಕು ನನಗೆ ಒತ್ತಾಯವಾಯಿತು
ಏಕೆ ಹೀಗೆ ಬದುಕಿನ ಹಾದಿ ಕವಲೊಡೆಯಿತು
ಎಷ್ಟೊಂದು ಹತ್ತಿರವಿದ್ದ ನಮ್ಮ ಸಾಂಗತ್ಯ
ಇಂದು ದೊರ........ಹೇಗೆ .. ಸರಿಯಿತು

ಎಕಿಂತ ಬದುಕು ನನಗೆ ಒತ್ತಾಯವಾಯಿತು
ಏಕೆ ಹೀಗೆ ಬದುಕಿನ ಹಾದಿ ಕವಲೊಡೆಯಿತು ...೨

ಅನುಕೂಲಕ್ಕೆ ಏನು ಕೊರತೆ ಇಲ್ಲದಿದ್ದರು
ಈ ಬದುಕೇಕೆ ಬದುಕಾಗಿ ಉಳಿದಿಲ್ಲ
ಎಕಿಂತ ಬೇಕಿಲ್ಲದ ನಿರ್ಧಾರಗಳು
ನಮ್ಮ ಕಾಡುತಿದೆ ತಿಳಿದಿಲ್ಲ

ಎಕಿಂತ ಬದುಕು ನನಗೆ ಒತ್ತಾಯವಾಯಿತು
ಏಕೆ ಹೀಗೆ ಬದುಕಿನ ಹಾದಿ ಕವಲೊಡೆಯಿತು ...೨

ಪಡೆದೆ ಅಂದುಕೊಂಡಿದ್ದ ಪ್ರೀತಿ ಇಂದು
ನನ್ನ ತೋರೆದಿದೆ
ನಾ ನಿನಗಾಗಿ ಅತ್ತರೆ ಈ
ಹೃದಯ ನನಗಾಗಿ ಅಳುತಿದೆ

ಎಕಿಂತ ಬದುಕು ನನಗೆ ಒತ್ತಾಯವಾಯಿತು
ಏಕೆ ಹೀಗೆ ಬದುಕಿನ ಹಾದಿ ಕವಲೊಡೆಯಿತು ...೨
 
ಕಣ್ಣಿಗೆ ಇಂತ ಕನಸು ಹೇಗೆ ಬಿತ್ತು
ಕಣ್ಣ ಮುಂದೆಯೇ ಹೊಡೆದು ಚೂರಾಯಿತು
ಎಷ್ಟೊಂದು ಹತ್ತಿರವಿದ್ದ ನಮ್ಮ ಸಾಂಗತ್ಯ
ಇಂದು ದೊರ........ಹೇಗೆ .. ಸರಿಯಿತು

ಎಕಿಂತ ಬದುಕು ನನಗೆ ಒತ್ತಾಯವಾಯಿತು
ಏಕೆ ಹೀಗೆ ಬದುಕಿನ ಹಾದಿ ಕವಲೊಡೆಯಿತು
ಎಷ್ಟೊಂದು ಹತ್ತಿರವಿದ್ದ ನಮ್ಮ ಸಾಂಗತ್ಯ
ಇಂದು ದೊರ........ಹೇಗೆ .. ಸರಿಯಿತು ...೨

ಸಂಜು

ಪ್ರೀತಿಸದಿರು ಗೆಳತಿ


  ಪ್ರೀತಿಸದಿರು ಗೆಳತಿ
ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು
ನನ್ನ ಬದುಕಿನ ಭಾರಿ ಬಿರುಗಾಳಿಯಲ್ಲಿ
ಸಿಲುಕಿ ನಲುಗಿ ಹೋಗುವೆ ಸಾಕಿನ್ನು
 
ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು

ದುಃಖ ಹಾಗು ನೋವಿನ ನಗರದ
ನಿವಾಸಿ ನಾನು
ನಾನಾಗೆ ಇನ್ನು ಬದುಕಿರುವೆ
ಅಲ್ಲಿ ನಿ ಏನು ಪಡೆವೆ ಇನ್ನು ?

ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು

ಕನಸು ಹೇಗೆ ಕಟ್ಟಲಿ ನಾಳೆಯ
ಬುಗಿಲೆದ್ದಿದೆ ನನ್ನಲಿ ವಿಷಾದ
ನಿರುತ್ಸಾಹದ ಮನಸ್ಸಲ್ಲಿ
ನಿನ್ನ ಹೇಗೆ ಪ್ರೀತಿಸಲಿ

ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು

 ಏಕೆ ನನ್ನಿಂದ ನೀನು ಸಂಕಟ ಪಡುವೆ
ನನ್ನ ಲೋಕ ಸ್ಮಶಾನ ಮೌನ
ಆ ಮೌನದ ಸುಳಿಗೇಕೆ ಸಿಗುವೆ
ನಿನ್ನ ಪಯಣ ಸುಗಮವಾಗಿರಲು
ನನ್ನ ಜೋತೆಯಾಗಿಸಿ ಏಕೆ ಪಶ್ಚತಾಪಿಸುವೆ

ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು

ಏಕೆ ನನ್ನೊಬ್ಬನಲ್ಲಿ ನೀ ಹೀಗೆ ಬಂಧಿ
ಪ್ರೀತಿ ಹಂಬಲದ ಪ್ರೇಮಿಗಳು
ಬಹು ಮಂದಿ
ಹಾಡುವರು ಹೊಸ ಪ್ರೇಮ ಗೀತೆಗಳ
ನಿನ್ನ ಬದುಕಿಗೆ ಬುನಾದಿ

ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು

ಬುದುಕಿನ ಹಾದಿಯಲಿ ಹೊಸ ಕಥೆಯ
ಪುಟಗಳು ನೂರಾರು ಹುಟ್ಟುವವು
ಏಕೆ ಚಿಂತಿಸುವೆ ಹೀಗೆ ನೀ ದಿನವು
ನನ್ನ ಮರೆಯಲಾರೆ ಎಂದು

ಪ್ರೀತಿಸದಿರು ಗೆಳತಿ ನನನ್ನು
ಪಡೆಯಲಾರೆ ನನ್ನಿಂದ ಏನನ್ನು

~ಸಂಜು ~

Saturday, October 27, 2012

ನನ್ನ ಇರುವಿಕೆಯ ಅರ್ಥವೇನು ..?


  ನನ್ನ ಇರುವಿಕೆಯ ಅರ್ಥವೇನು ..?

ಪ್ರತಿ ಒಂದು ಮಾತಿನಲ್ಲೂ ಹೇಳುತ್ತಿದೆ
ನೀನು ವೃತ್ತಾಂತವೇನು
ನೀನೆ ಹೇಳು ಈ ವೈಖರಿ ಆ ಭಾವದ
ಒಳಗುಟ್ಟೇನು

ಹೂವಿನ ದಳದ ಮಧುರ ಸ್ಪರ್ಶದಂತೆಯು ಇಲ್ಲ
ಬೆಳಗಿನ ಇಬ್ಬನಿಯ ನಿರ್ಮಲತೆಯು ಅಲ್ಲ
ಹೋಲಿಕೆ ಇಲ್ಲದ ನಿನ್ನ ಮಾಧುರತೆಯಾ
ಆ ಕೋಮಲತೆ ಏನು

ಅಗ್ನಿ ಜ್ವಾಲೆಯ ರೋಶವಿಲ್ಲ
ಬೆಳಕಿನಂತೆ ಚಂಚಲತೆಯು ಇಲ್ಲ
ಆದರು ಸ್ಮ್ರಿತಿ ತಪ್ಪಿದೆ ಈ ಬಗೆಯ
ಮಾಯಾ ಮಾಟವೇನು

ನನ್ನ ಎದುರಿಯ ವಶದಲ್ಲಿದ್ದರೇನು
ಅವನ ಹುರುಡಿನ ಮಾತುಗಳಿದ್ದರೇನು
ನಿನ್ನ ಪ್ರೀತಿ ಪಕ್ವವಾಗಿರಲು
ನನಗಿನ್ನಾವ ಭಯವೇನು

ನಿನ್ನ ಕಾಣುವ ಹಂಬಲದೆ
ಇಡಿ ದೇಹ ರಕ್ತಕ್ಕೆ ಅಂಟಿದೆ
ನಿನ್ನ ಮನೆಯ ಬೇಲಿಯಾ
ಸಣ್ಣ ಗಾಯದ ನೋವೇನು

ನನ್ನ ಒಡಲ ಕಣ ಕಣದೇ ನೆತ್ತರ ಹರಿದರೇನು
ಅದರ ಇರುವಿಕೆಯ ಹೆಚ್ಚುಗಾರಿಕೆ ಏನು
ನಿನ್ನ ಪ್ರಿತಿಗಾಗಿ
ನನ್ನ ಕಣ್ಣಿನಲ್ಲಿ ಒಂದು ಹನಿ ಬಿಳದ ಮೇಲೆ
ಎಲ್ಲ ವ್ಯರ್ಥವೇನು

~ಸಂಜು ~

 

ನಿನ್ನ ಹಾದಿ


    ನಿನ್ನ ಹಾದಿ

ನಿನ್ನ ದಿಟ್ಟಿಸಿದ ಕಣ್ಣುಗಳು
ನನ್ನ ಚಿತ್ತ ನಿನ್ನ ಸೌಂದರ್ಯಕ್ಕೆ ಮರುಳು
ಇ ಚಿತ್ತದಿ ನೀನು ನನ್ನಿಂದ ದೊರವಾಗಿದ್ದು
ಅರಿಯದೆ ಹೋಯಿತು

ದಿನದ ಆರಂಬ ಕನ್ನಡಿಯಲಿ
ನಿನ್ನ ಕಾಣುವ ಆಸೆಯಲಿ
ಸಜ್ಜಾಗುತಿದ್ದೆ ಭಾರಿ ಭಾರಿ
ನನ್ನೆದೆಯ ಸೌಂದರ್ಯವನ್ನು
ಚೆಲ್ಲುತ್ತ ಸಾಗಿದೆ ನನ್ನ ಮುಗುಳುನಗೆಯಲ್ಲಿ

ಆರಾಧಿಸುತಿದ್ದೆ ನಿನ್ನ ದೇವತೆಯಾಗಿಸಿ
ಪ್ರತಿ ದಿನಕ್ಕೊಂದು ಪ್ರತಿಮೆ ಮಾಡಿಸಿ
ನನ್ನೆದೆಯಲಿ ಪ್ರತಿಷ್ಠಾಪಿಸಿ
ದೇವತೆಯಂತೆ ಮಾಯವಾದೆ
ನಿನ್ನೆಡೆಗೆ ಚೆಲ್ಲಿದ ಹೂವು ಬಾಡಿಸಿ

ಕೊನೆಯದಾಗಿ ಶ್ರಮಿಸಿದೆ
ಬರಲು ನಿನ್ನ ಮನೆಯ ಹಾದಿಗೆ
ನನ್ನ ಬದುಕಿನ ಕೊನೆಯ ಸ್ನಾನ
ಮುಗಿದೇ ಹೋಗಿತ್ತು ಮನೆ ಬಿಡುವಷ್ಟರಲ್ಲಿ

~ಸಂಜು~

ನಿನ್ನ ನೆನೆಯುತ ಕೂರಲು ಹೀಗೊಂದು ಭಾವ ನನ್ನ ಕೆಣಕಿತು


 ನಿನ್ನ ನೆನೆಯುತ ಕೂರಲು ಹೀಗೊಂದು ಭಾವ ನನ್ನ ಕೆಣಕಿತು

 ನಿನ್ನ ನೆನೆಯುತ ಕೂರಲು ಹೀಗೊಂದು ಭಾವ ನನ್ನ ಕೆಣಕಿತು
ಬದುಕೊಂದು ತಿಳಿ ಆಗಸದ ಬಿಸಿಲಾದರೆ
ನೀನೊಂದು ದಟ್ಟ ಹಸಿರು ತುಂಬಿದ ತಂಪಾದ ನೆರಳು
 
ಇಂದು ಮತ್ತೆ ನನ್ನ ಹೃದಯ ಒಂದು ಇಚ್ಚಿ ವ್ಯಕ್ತಪಡಿಸಿದೆ
ಇಂದು ಮತ್ತೆ ನನ್ನ ಹೃದಯಕ್ಕೆ ತಿಳಿ ಹೇಳಿ ಸಂಬಳಿಸಿದೆ

ಬದುಕೊಂದು ತಿಳಿ ಆಗಸದ ಬಿಸಿಲಾದರೆ
ನೀನೊಂದು ದಟ್ಟ ಹಸಿರು ತುಂಬಿದ ತಂಪಾದ ನೆರಳು

ನೀನು ನನ್ನಿಂದ ದೂರ ಆದರೆ ಮತ್ತೆ ಬರಲಾರದೆ ಹೋದರೆ
ಚಿಂತಿಸುತ್ತಾ ಕುರುವೆ, ಮತ್ತೆ ತಿಳಿ ಆಗಸವ ದಿಟ್ಟಿಸುತ್ತ
ನಾನೇನು ಕಳೆದು ಕೊಂಡೆ ಮತ್ತೆ ಏನು ಪಡೆದೆ

ಬದುಕೊಂದು ತಿಳಿ ಆಗಸದ ಬಿಸಿಲಾದರೆ
ನೀನೊಂದು ದಟ್ಟ ಹಸಿರು ತುಂಬಿದ ತಂಪಾದ ನೆರಳು

ನಿನ್ನ ನೆನೆಯುತ ಕೂರಲು ಹೀಗೊಂದು ಭಾವ ನನ್ನ ಕೆಣಕಿತು
ಬದುಕೊಂದು ತಿಳಿ ಆಗಸದ ಬಿಸಿಲಾದರೆ
ನೀನೊಂದು ದಟ್ಟ ಹಸಿರು ತುಂಬಿದ ತಂಪಾದ ನೆರಳು

~ಸಂಜು ~

Tuesday, October 23, 2012

ನಾಡ ಹಬ್ಬ ದಸರಾ ಹಬ್ಬ


ನಾಡ ಹಬ್ಬ ದಸರಾ ಹಬ್ಬ

 
ನಮಗೆಲ್ಲ ಸಡಗರದ ಹಬ
ದಸರಾ ಹಬ್ಬ ಸಂಭ್ರಮದ ಹಬ್ಬ
ವಿಜಯದಶಮಿ ಹಬ್ಬ
ಮುಕ್ಕೋಟಿ ದೇವಾನು ದೇವತೆಗಳ
ಶಕ್ತಿ ಪಡೆದ ನಮಮ್ಮ ತಾಯಿ
ಭುವನೇಶ್ವರಿಯಾ ಕೊಂಡಾಡುವ ಹಬ್ಬ
ಮಹಿಷಾಸುರನ ಸಂಹರಿಸಿ
ನಾಡಿಗೆ ಶಾಂತಿ ಸುಭಿಕ್ಷೆ
ಕಾಪಾಡಿದ ತಾಯಿಯ ಹಬ್ಬ
ನಾಡಿನ ಸಾಂಸ್ಕೃತಿಕ ಸಂಗೀತ ನಾಟಕ
ಕವಿ ಕಾವ್ಯಗಳ ರಸ ಧಾರೆ
ಡೊಳ್ಳು ಕರಡಿ ಕುಣಿತಗಳೊಂದಿಗೆ
ರಾಜ ಬೀದಿಗಳಲ್ಲಿ ವಿಜ್ರಂ ಭಿಸುವ ಹಬ್ಬ
ಮಲ್ಲಗಂಬ, ಮಲ್ಲರ ಯುದ್ದ
ನಾಡಿನ ವಿರಾಧಿ ವೀರರು
ತಮ್ಮ ಶಕ್ತಿ ಸಮರ್ಥ್ಯತೆ
ಪ್ರದರ್ಶಿಸುವ ಹಬ್ಬ
ಖಡ್ಗ, ಈಟಿ ಕಡಾಣಿಯಿಂದ
ಇಂದಿನ ತಾಂತ್ರಿಕ
ಉಪಕರಣಗಳ ಪೂಜಿಸುವ ಹಬ್ಬ
ಸಂಭ್ರಮದ ಸಡಗರದ ಹಬ್ಬ
ನಾಡ ದೇವಿಯ ಆಂಭಾರಿಯ
ಗಜರಾಜರ
ವೈಭವದ ಮೆರವಣಿಗೆಯ ಹಬ್ಬ
ದಸರಾ ಹಾಗು ವಿಜಯದಶಮಿ ಹಬ್ಬ

ಎಲ್ಲರಿಗು ಶುಭ ಕೋರುವ

ಸಂಜು