Monday, October 8, 2012

ಜೋಡಿ ಹಕ್ಕಿ ಹಾಡು


  ಜೋಡಿ ಹಕ್ಕಿ ಹಾಡು

ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ
 ಚಿಕ್ಕ ಪುಟ್ಟ ಆಸೆಯ ಪೋಣಿಸಿ
ಮನದ ಮನೆಯು ಸಿಂಗಾರ

ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ

ನೆಗೆದು ಕುಣಿದು ನಡೆಯುತ
ಹುರಿದುಂಬಿಸಿ ತಂದಿದೆ ಬೆಳಕು ಬಾಳಿಗೆ
ಕನ್ನಡಿಗೆ ಅಂಟಿಸಿ ಸವರುತ್ತ
ಹಣೆ ಬರಹದ ಪಟ್ಟಿ ಜೀವನ ಸಾಗಿದೆ

ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ

ನಿ ಅರ್ಧ ನಾ ಅರ್ಧ ಹಂಚಿಕೊಳ್ಳುವ
ನನ್ನ ಎದೆಯ ನೆಲವ
ಮನ ರಂಜಿಸುತ್ತ ತೋರುತ್ತ
ಹಂಚುವ ನಮ್ಮ ಈ ಸಿಹಿ ಒಲವ
 
ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ

ನಿನ್ನದು ಒಂದಿಷ್ಟು ಕನಸ ಬಣ್ಣ
ನನ್ನದು ಒಂದಿಷ್ಟು ಕನಸ ಬಣ್ಣ
ಹಚ್ಚುತ್ತ ಸಿಂಗರಿಸುವ ನಮ್ಮ ಬಾಳ ಬಾನ
ಪ್ರೀತಿ ಪ್ರೇಮ ಒಲವೆಲ್ಲ ನಮ್ಮ ಸ್ವಂತದ್ದೇ
ದಿನವು ಇಷ್ಟು ಇಷ್ಟೇ ನೆನ್ಚುತ್ತ ಬಾಳುವ

ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ

ಮನೆ ಇದು ನಾಲ್ಕು ಗೋಡೆಗಳ
ಆದರು ನಮ್ಮ ಮನಸ್ಸೆಲ್ಲ ತೆರೆದ ಆಗಸ
ನಮ್ಮಾಸೆ ಮೋಡಗಳ ರೆಕ್ಕೆಗಳಿಂದ
ನಮ್ಮ ಮನೆಯ ಬೀಸಣಿಗೆಯ ಸರಸ

ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ

ಈ ಮನೆಯ ಪ್ರೀತಿ ಆಡಂಬರದಿಂದ
ಪ್ರತಿ ಹಬ್ಬಕ್ಕೂ ಸಡಗರ
ನಮ್ಮಿಬ್ಬರ ಸರಸ ಸಲ್ಲಪಗಳಿಗೆ
ನೆರೆಹೊರೆಗು ಮುಜುಗರ

ಒಂದಿಷ್ಟು ಖುಷಿ ಒಂದಿಷ್ಟು ನಗು
ತರುತಿಹನು ಚಂದಿರ
ತಾರೆಯ ತುಣುಕನ್ನು ಸಜ್ಜಿಸಿ
ಕನಸೊಂದು ತಂದನು ಸುಂದರ
ಚಿಕ್ಕ ಪುಟ್ಟ ಆಸೆಯ ಪೋಣಿಸಿ
ಮನದ ಮನೆಯು ಸಿಂಗಾರ .....೨

~ಸಂಜು ~

No comments:

Post a Comment