Thursday, October 18, 2012

ಬಾ… ಜೀವ

ಬಾ… ಜೀವ

ಮರೆಯಾಲಾರೆ ಮಧುರ ಮೋಹದ ನೇಹ
ಬರೆಯಲಾರೆ ನಿನ್ನೊಲವಿನ ಪ್ರೇಮ ದಾಹ

ಸರಿದು ಹೋಗು ಮೇಘ ಚಂದಿರನ ಮೊಗದಿ
ಇರುವುದೊಂದೇ ಭರವಸೆ ಅವಳ ಕಾಣಲು
ಹಗಲು ಓಡಿಸಿ ಕಾಯುತ್ತಿರುವೆ ರಾತ್ರಿ ಸರದಿ

ತಂಪು ತಂಗಾಳಿ ಬೀಸದಿರು ತಣಿಸದಿರು
ನನ್ನೀ ಬೇಗೆ ಉರಿಯುತ್ತಿರುವ ಒಳ ಧಗೆ
ಎಲ್ಲ ನೋವು ಸಹಿಸಬಲ್ಲೆ ಅವಳು ನೆನಪಿನಲಿರಲು
ಬರುವುದಾದರೆ ಬಾ ಅವಳ ಸಿಹಿ ದನಿಯ ನಗೆಯ ಹೊತ್ತು
ತರುವುದಾದರೆ ತಾ ಅವಳ ಒಲವಿನ ಸಿಹಿ ಮುತ್ತು
ಕ್ಷಣ ಬಿಡದೆ ಆಲಂಗಿಸುವೆ ಮನದ ಬೇಗೆ ತಣಿಸುವೆ

ಚಂದಿರನಿಲ್ಲದ ಬಾನಿನಲ್ಲಿ ತಾರೆಗಳು ಖಾಲಿ
ತೊಟ್ಟಿಲ ತೂಗಿದ ಹಾಗೆ
ನೀನಿಲ್ಲದ ಬಾಳಿನಲ್ಲಿ ನನ್ನಾಸೆಗಳು ಗಾಳಿಗೆ
ಹಿಡಿದಿಹ ದೀಪದ ಹಾಗೆ
ಕ್ಷಣ ಬಿಡದೆ ಕಾಡುತಿದೆ ಈ ನೋವು
ಮರೆಯಲಾರೆ ಬಾ ಬೇಗ
ನಿನ್ನೊಲವಿನ ಸಿಹಿ ಕಾಣಿಕೆಯು
ನೆನಪಿನಲ್ಲಿರುವಾಗ
ತೊರೆಯಲಾರೆ ಈ ಜೀವ

ಸಂಜು

No comments:

Post a Comment